Nishad Yusuf; ಕಂಗುವ ಖ್ಯಾತಿಯ ಸಂಕಲನಕಾರ 43 ರ ಹರೆಯದಲ್ಲೇ ವಿಧಿವಶ
ತನ್ನದೇ ಆದ ಛಾಪು ಮೂಡಿಸಿದ್ದ ಸಂಕಲನಕಾರ... ಪೊಲೀಸ್ ಅಧಿಕಾರಿಗಳ ತನಿಖೆ
Team Udayavani, Oct 30, 2024, 11:28 AM IST
ಕೊಚ್ಚಿ:ಕಾಲಿವುಡ್, ಮಾಲಿವುಡ್ ಸಿನಿಮಾ ರಂಗದ ಜನಪ್ರಿಯ ಎಡಿಟರ್ ನಿಶಾದ್ ಯೂಸುಫ್ ಬುಧವಾರ(ಅ30)ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ವರದಿಗಳ ಪ್ರಕಾರ, ಅವರ ದೇಹವು ಕೊಚ್ಚಿಯ ಪನಂಪಲ್ಲಿ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಸುಕಿನ 2 ಗಂಟೆಗೆ ಪತ್ತೆಯಾಗಿದೆ. ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅವರಿಗೆ 43 ವರ್ಷ ವಯಸ್ಸಾಗಿತ್ತು.
ನಿಶಾದ್ ಯೂಸುಫ್ ಅವರ ಹಠಾತ್ ನಿಧನವನ್ನು ದಿ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (FEFKA) ನಿರ್ದೇಶಕರ ಒಕ್ಕೂಟವು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ದೃಢಪಡಿಸಿದೆ. “ಬದಲಾಗುತ್ತಿರುವ ಮಲಯಾಳಂ ಚಿತ್ರರಂಗದ ಸಮಕಾಲೀನ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಚಲನಚಿತ್ರ ಸಂಪಾದಕ ನಿಶಾದ್ ಯೂಸುಫ್ ಅವರ ಅನಿರೀಕ್ಷಿತ ನಿಧನವನ್ನು ಚಲನಚಿತ್ರ ಜಗತ್ತು ಶೀಘ್ರವಾಗಿ ಸ್ವೀಕರಿಸಲು ಸಾಧ್ಯವಿಲ್ಲ” ಎಂದು ಸಂತಾಪ ಸೂಚಿಸಿದೆ.
ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ನಿಶಾದ್ ಯೂಸುಫ್ ಹರಿಪ್ಪಾಡ್ ಮೂಲದವರು. ಸಂಕಲನಕಾರರಾಗಿ ಅವರ ಕೆಲವು ಗಮನಾರ್ಹ ಚಲನಚಿತ್ರಗಳು ತಲ್ಲುಮಾಲಾ, ಉಂಡ, ಒನ್, ಸೌದಿ ವೆಲ್ಲಕ್ಕ ಮತ್ತು ಆಡಿಯೋಸ್ ಅಮಿಗೋಸ್ ಮೊದಲಾದವು. ಮುಂಬರುವ ಸೂರ್ಯ ಮತ್ತು ನಿರ್ದೇಶಕ ಸಿರುತೈ ಶಿವ ಅವರ ಬಿಗ್ ಬಜೆಟ್ ಚಿತ್ರ, ‘ಕಂಗುವ’ ನವೆಂಬರ್ 14 ರಂದು ಅದ್ಧೂರಿ ಬಿಡುಗಡೆಗೆ ಸಿದ್ಧವಾಗಿದೆ. ಮಮ್ಮುಟ್ಟಿಯ ಬಾಜೂಕಾ ಕೂಡ ಬಿಡುಗಡೆಯಾಗಬೇಕಿದೆ.
2022 ರಲ್ಲಿ, ನಿಶಾದ್ ಯೂಸುಫ್ ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರ ‘ತಲ್ಲುಮಾಲಾದಲ್ಲಿನ ಅವರ ಅತ್ಯುತ್ತಮ ಕೆಲಸಕ್ಕಾಗಿ ಅತ್ಯುತ್ತಮ ಸಂಪಾದಕ ಕೇರಳ ರಾಜ್ಯ ಪ್ರಶಸ್ತಿಯನ್ನು ಪಡೆಡಿದ್ದರು. ನಿಶಾದ್ ಯೂಸುಫ್ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SSMB 29: ಮಹೇಶ್ ಬಾಬು- ರಾಜಮೌಳಿ ಸಿನಿಮಾಕ್ಕೆ 1000 ಕೋಟಿ ಬಜೆಟ್? ಶೂಟಿಂಗ್ ಯಾವಾಗ ಶುರು?
Bellary: ಕನ್ನಡಿಗರಿಗೆ, ಯಶ್ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ
Nayanthara: ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್ ಸ್ಟಾರ್?
ಶೋಭಿತಾ ಜತೆ ಮದುವೆ ಹಿನ್ನೆಲೆ ಮಾಜಿ ಪತ್ನಿ ಜತೆಗಿನ ಕೊನೆಯ ಫೋಟೋ ಡಿಲೀಟ್ ಮಾಡಿದ ನಾಗಚೈತನ್ಯ
Allu Arjun: ʼಪುಷ್ಪ-2ʼಗಾಗಿ ಇದುವರೆಗೆ ಯಾರು ಕೇಳದ್ದಷ್ಟು ಸಂಭಾವನೆ ಕೇಳಿದ ಅಲ್ಲು ಅರ್ಜುನ್?
MUST WATCH
ಹೊಸ ಸೇರ್ಪಡೆ
ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ
UV Fusion: ಪ್ರಕೃತಿ ಅವಶ್ಯ ಮನುಜನಿಗೆ
Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.