B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..
ಬಿಜೆಪಿಯವರಿಗೆ ಮತ ನೀಡಿದರೆ ಮಾತ್ರ ಮುಸಲ್ಮಾನರು ಒಳ್ಳೆಯವರು...
Team Udayavani, Oct 30, 2024, 11:49 AM IST
ಹುಬ್ಬಳ್ಳಿ: ನಾನೊಬ್ಬ ಮೊದಲು ಭಾರತೀಯ. ನಂತರ ರಾಜಕಾರಣಿ. ನನಗೆ ಎಲ್ಲಾ ಜನಾಂಗದವರು ಬೇಕು. ಯಾವುದೇ ಕಾರಣಕ್ಕೂಜಾತಿ ರಾಜಕಾರಣ ಮಾಡುತ್ತಿಲ್ಲ. ರಾಜಕೀಯಕ್ಕೆ ಬಂದ ಮೇಲೆ ಅದನ್ನೆಲ್ಲ ಬಿಡಬೇಕು. ಇಲ್ಲವೇ ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ವಕ್ಫ್ ಸಚಿವ ಜಮೀರ ಅಹ್ಮದ ಖಾನ್(B.Z. Zameer Ahmed Khan) ಬುಧವಾರ(ಅ30)ಟಾಂಗ್ ನೀಡಿದ್ದಾರೆ.
‘ಭಾರತದಲ್ಲಿರುವ ಮುಸ್ಲಿಮರು ಹಿಂದೂಗಳೇ,ಜಮೀರ್ ಅಹ್ಮದ್ ಕೋಮು ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕೆಂಬ’ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಜಮೀರ ಅಹ್ಮದ್ ಖಾನ್ ಪ್ರತಿಕ್ರಿಯಿಸಿದರು.
‘ಜೋಶಿಯವರು ಹಿಂದೂ ಮುಸ್ಲಿಂ ಬಿಟ್ಟರೆ ಏನೂ ಮಾತನಾಡಲ್ಲ. ಮುಸಲ್ಮಾನರು ಮತ ನೀಡಲ್ಲ ಅಂತ ಬಿಜೆಪಿಯವರು ಅವರನ್ನು ದ್ವೇಷ ಮಾಡುತ್ತಿದ್ದಾರೆ. ಒಂದು ವೇಳೆ ಮತ ಕೊಟ್ಟರೆ ಮುಸಲ್ಮಾನರು ಒಳ್ಳೆಯವರು. ನಾನು ಯಾವತ್ತು ಕೋಮುದ್ವೇಷ ಹರಡಿಸುವಂತಹ ಕೆಲಸ ಮಾಡಿಲ್ಲ. ನಾನು ಶುದ್ದ ಹಿಂದೂಸ್ಥಾನಿ ಭಾರತೀಯ. 24ಕ್ಯಾರೆಟ್ ಗೋಲ್ಡ್. ನನ್ನನ್ನು ಹೇಗೆ ಕಿತ್ತು ಹಾಕುತ್ತಾರೆ’ ಎಂದು ಪ್ರಶ್ನಿಸಿದರು.
ವಿಜಯಪುರದಲ್ಲಿ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ ‘ಬಿಜೆಪಿಯವರು ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ. ನಾನು ವಕ್ಫ ಸಚಿವನಾಗಿ ಹೇಳುತ್ತೇನೆ ಯಾವ ರೈತರಿಗೂ ತೊಂದರೆ ಆಗಲ್ಲ. ಮಹಾರಾಷ್ಟ್ರ ಇತರೆಡೆ ಚುನಾವಣೆ ಇರುವುದಕ್ಕಾಗಿ ಬಿಜೆಪಿಯವರು ಹೀಗೆಲ್ಲಾ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
Darshan; ಜಾಮೀನು ಸಿಕ್ಕ ಬೆನ್ನಲ್ಲೇ ಬಳ್ಳಾರಿ ಜೈಲಿನತ್ತ ಅಭಿಮಾನಿಗಳು:ಲಾಠಿ ಬೀಸಿದ ಪೊಲೀಸರು
Waqf; ಬಿಜೆಪಿ ಸರಕಾರದ ಅವಧಿಯಲ್ಲಿ ನೋಟಿಸ್ ನೀಡಿದ್ದರೂ ತಪ್ಪು: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ
UV Fusion: ಪ್ರಕೃತಿ ಅವಶ್ಯ ಮನುಜನಿಗೆ
Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.