UV Fusion: ಎತ್ತ ಕಡೆ ಸಾಗುತ್ತಿದೆ ಈಗಿನ ಯುವ ಜನತೆ ?


Team Udayavani, Oct 30, 2024, 3:57 PM IST

13

ಸ್ವಾಮಿ ವಿವೇಕಾನಂದರು ಒಮ್ಮೆ ಒಂದು ಮಾತನ್ನು ಹೇಳಿದ್ದರು,” ಕಷ್ಟಗಳನ್ನು ಎದುರಿಸಿದಷ್ಟು ನೀನು ಬಲಶಾಲಿಯಾಗುವೆ. ಆದ್ದರಿಂದ ಕಷ್ಟಗಳು ಬಂದಾಗ ಅಂಜಬೇಡ ಅದನ್ನು ಧೈರ್ಯದಿಂದ ಎದುರಿಸು “. ಈ ಮಾತನ್ನು ಈಗಿನ ಯುವಜನತೆ ತಮ್ಮ ಜೀವನದಲ್ಲಿ ತುರ್ತಾಗಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ನಿರ್ಮಾಣವಾಗುತ್ತಿದೆ ಎಂದೆನಿಸುತ್ತಿದೆ. ಏಕೆಂದರೆ ಇತ್ತೀಚಿಗೆ ಹಲವು ಯುವಕ ಯುವತಿಯರು ಮತ್ತು ಪ್ರೌಢಾವಸ್ಥೆಗೆ ಬಂದ ಮಕ್ಕಳಲ್ಲಿ ಆತ್ಮಹತ್ಯೆಯ ಪ್ರಮಾಣ ಜಾಸ್ತಿಯಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ತಮ್ಮ ಅಮೂಲ್ಯವಾದ ಜೀವನವನ್ನೇ ಬಲಿಕೊಡುತ್ತಿದ್ದಾರೆ.

ಆತ್ಮಹತ್ಯೆಗೆ ಪ್ರಮುಖ ಕಾರಣ ಯುವಜನತೆಯರ ದುರ್ಬಲ ಮನಃಸ್ಥಿತಿ. ತಂದೆ ತಾಯಿಯರು ಅವರ ಒಳಿತಿಗಾಗಿ ಸ್ವಲ್ಪ ಬುದ್ಧಿ ಮಾತು ಹೇಳಿದರೆ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರೀತಿ, ಪ್ರೇಮ, ಸಾಲ, ನಿರುದ್ಯೋಗ, ಕೌಟುಂಬಿಕ ಒತ್ತಡ ಮತ್ತು ಇತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ಯುವಜನರು ಸಮಸ್ಯೆಯನ್ನು ಸೂಕ್ತವಾಗಿ, ಧೈರ್ಯವಾಗಿ, ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳಲು ಮೊದಲು ಕಲಿಯಬೇಕು.

ಇತ್ತೀಚೆಗೆ ಹಲವಾರು ಯುವ ಜನರು ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವುದು ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಮೊಬೈಲ್‌. ಹೆಚ್ಚಿನ ಯುವಜನತೆ ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾರೆ. ಕೆಲವರು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುತ್ತಿದ್ದರೆ ಇನ್ನು ಕೆಲವರು ಆನ್‌ಲೈನ್‌ ಗೈಮಿಂಗ್‌ನಲ್ಲಿ ಕಾಲ ಕಳೆಯುತ್ತಾರೆ. ಈ ಮೂಲಕ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಯುವಜನರಲ್ಲಿ ಖನ್ನತೆ, ಕೋಪ, ಹೇಳಿಕೊಳ್ಳಲಾಗದ ಕೆಲವು ಮಾನಸಿಕ ನೋವು, ಜೀವನೋತ್ಸಾಹ ಕಳೆಗುಂದಲೂ ಈ ಮೊಬೈಲ್‌ ಕಾರಣವಾಗಿದೆ. ಮೊಬೈಲ್‌ ಇಲ್ಲದೆ ಬಾಳಲಾಗದು ಎಂಬ ಸ್ಥಿತಿಗೆ ಕೆಲವರು ಬಂದಿದ್ದಾರೆ. ಆದ್ದರಿಂದ ಅವರ ಪೋಷಕರು ಇದರ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ.

ಮೊಬೈಲ್‌ ನೋಡುವ ಸಮಯವನ್ನು ಕಡಿಮೆಗೊಳಿಸಿ ಕುಟುಂಬದ ಸದಸ್ಯರೊಡನೆ ಕಾಲ ಕಳೆಯಬಹುದು. ನೆರೆಹೊರೆ ಮನೆಯವರೊಂದಿಗೆ, ಗೆಳೆಯರೊಂದಿಗೆ, ಮಕ್ಕಳೊಂದಿಗೆ ಕಾಲ ಕಳೆಯಬಹುದು. ಆಗ ಅವರೊಂದಿಗಿನ ನಮ್ಮ ಬಾಂಧವ್ಯ ಬಲಗೊಳ್ಳುತ್ತದೆ. ಇದಲ್ಲದೆ ಪುಸ್ತಕಗಳನ್ನು ಓದುವುದು, ಗಿಡಗಳನ್ನು ನೆಡುವುದು, ಊರಿನ ಕೆಲವು ದೇವಸ್ಥಾನ, ಸಂಘ, ಸಂಸ್ಥೆಗಳ ಕಾರ್ಯಗಳಲ್ಲಿ ಭಾಗವಹಿಸಿ ಸಮಯವನ್ನು ಇನ್ನೂ ಸದ್ವಿ ನಿಯೋಗಪಡಿಸಿಕೊಳ್ಳಬಹುದು.

ಬೀಡಿ,ಸಿಗರೇಟು, ಮದ್ಯಪಾನ, ಗಾಂಜಾ ಇನ್ನಿತರೆ ಆರೋಗ್ಯಕ್ಕೆ ಹಾನಿಕಾರಕವಾದ ಮಾದಕ ವಸ್ತುಗಳ ಬಳಕೆ ಕೂಡ ಯುವಜನತೆಯರಲ್ಲಿ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ಗೆಳೆಯರೆಲ್ಲ ಸೇರಿ ಪಾರ್ಟಿ ಎಂಬ ನೆಪದಲ್ಲಿ ಮಾದಕ ವಸ್ತುಗಳನ್ನು ಸೇವಿಸುತ್ತಾರೆ. ಆರಂಭದಲ್ಲಿ ಇದು ಅವರಿಗೆ ಸುಖ ಕೊಟ್ಟರೂ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಅರಿತುಕೊಳ್ಳಬೇಕಾಗಿದೆ. ದುಃಖಗಳನ್ನು ಕಳೆಯಲು ಎಂಬ ಕಾರಣಕ್ಕೆ ಈ ಚಟಗಳನ್ನು ಆರಂಭಿಸುತ್ತಾರೆ. ಆದರೆ ಈ ದುಃಖವನ್ನು ಕಳೆಯಲು ಇತರೆ ಉತ್ತಮ ದಾರಿಗಳಿವೆ.

ಇತ್ತೀಚೆಗೆ ಕೆಲವು ಯುವಜನರು ಹಿರಿಯರಿಗೆ, ಮಹಿಳೆಯರಿಗೆ, ವೃದ್ಧರಿಗೆ, ಪಂಡಿತರಿಗೆ ಗೌರವ ಕೊಡುವ ಗುಣ ತುಂಬಾ ಕಡಿಮೆಯಾಗುತ್ತಿದೆ. ಹಾಗೂ ಇತರೆ ಉತ್ತಮ ಗುಣ, ನಡತೆ, ಸಂಸ್ಕಾರಗಳು, ಸುಸ್ಥಿರ ಅಭ್ಯಾಸಗಳು ಕೂಡ ಕುಂಠಿತಗೊಳ್ಳುತ್ತಿವೆ. ಯುವಜನರೇ ಈ ದೇಶದ ಆಸ್ತಿ. ಆದ್ದರಿಂದ ಯುವಜನರು ಉತ್ತಮ ಗುಣನಡತೆ, ಸಂಸ್ಕಾರ, ಕೌಶಲ್ಯಗಳನ್ನು ಬೆಳೆಸಿಕೊಂಡು ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತು ಉತ್ತಮ ಸಮಾಜಮುಖೀ ಕಾರ್ಯಗಳನ್ನು ಮಾಡಬೇಕು. ಮಾದಕ ವಸ್ತುಗಳ ಬಲೆಗೆ ಬೀಳದೆ ಸುಭದ್ರ, ಉತ್ತಮ ದೇಶ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕಾದ ಅಗತ್ಯವಿದೆ.

- ವರುಣ ಕೃಷ್ಣ ಬಿ.

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.