Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ

Team Udayavani, Oct 30, 2024, 7:21 PM IST

Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ

ಗದಗ: ಪುರಾತತ್ವ ಹಾಗೂ ಪ್ರವಾಸೋದ್ಯಮ ಜಂಟಿ ಇಲಾಖೆ ನೇತೃತ್ವದಲ್ಲಿ ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.

ರಾಜ್ಯ ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರಿರುವ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ರಾಜ್ಯ ಸರಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನವನ್ನು ಮೂಲಸ್ವರೂಪಕ್ಕೆ ತರುವ ಉದ್ದೇಶದಿಂದ ಕೃತಕವಾಗಿ ನಿರ್ಮಿಸಿದ ಗೋಡೆಗಳನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ತೆರವುಗೊಳಿಸಲಾಯಿತು.

ಮೂಲದೇವಸ್ಥಾನದ ಹೊರಭಾಗದಲ್ಲಿ ಕೃತಕವಾಗಿ ನಿರ್ಮಿಸಿದ ಗೋಡೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಪಾರುಪತ್ಯದಾರರು, ಪರಿಚಾರಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ವೀರನಾರಾಯಣ ದೇವಸ್ಥಾನದ ವಂಶಪಾರಂಪರ್ಯ ಪಾರುಪತ್ಯ ಪರಿಚಾರಕರು ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಸಂಬಂಧಿಸಿದಂತೆ ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ನೋಟೀಸ್ ನೀಡದೆ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಈಗಲೇ ನಿಲ್ಲಿಸಿ, ನಾವೂ ನ್ಯಾಯಾಲಯದ ಮೂಲಕ ಪ್ರಕರಣದ ಇತ್ಯರ್ಥಪಡಿಸುತ್ತೇವೆ. ಕೂಡಲೇ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಅಡೆತಡೆ ಉಂಟು ಮಾಡಿದರು.

ಇದರ ಮಧ್ಯೆ ಸ್ಥಳದಲ್ಲಿದ್ದ ದೇವಸ್ಥಾನದ ಕೆಲ ಭಕ್ತರು ದೇವಸ್ಥಾನ ಪುನರುತ್ಥಾನಕ್ಕೆ ಸಂಬಂಧಿಸಿದಂತೆ ನಿಮ್ಮ ಕಾರ್ಯಕ್ಕೆ ನಮ್ಮ ತಕರಾರಿಲ್ಲ. ಆದರೆ, ಮುಂದಿನ ಮೂರು ದಿನಗಳ ಕಾಲ ನರಕ ಚತುರ್ದಶಿ, ಅಮವಾಸ್ಯೆ, ಬಲಿಪಾಡ್ಯೆ ಇರುವುದರಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವುದರಿಂದ ಭಾನುವಾರ ಕಾರ್ಯಾಚರಣೆ ಆರಂಭಿಸುವಂತೆ ಮನವಿ ಮಾಡಿದರು.

ಆದರೆ, ದೇವಸ್ಥಾನದ ಅನುವಂಶಿಕ ಪಾರುಪತ್ಯದಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಅಧಿಕಾರಿಗಳು ಗೊಂದಲಕ್ಕೀಡಾದರು. ಇದೇ ಸಮಯಕ್ಕೆ ಸ್ಥಳಕ್ಕಾಗಮಿಸಿದ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಚರ್ಚಿಸಿ ಪೊಲೀಸರ ಸುಪರ್ದಿಯಲ್ಲಿ ತೆರವು ಕಾರ್ಯಾಚರಣೆ ಮುಂದುವರಿಸಿದರು.

ಇದಕ್ಕೂ ಮುನ್ನ ವೀರನಾರಾಯಣ ದೇವಸ್ಥಾನದ ಪ್ರವೇಶ ದ್ವಾರದ ಮಂಟಪದ 10 ಕಂಬಗಳ ಪೈಕಿ 2 ಕಂಬಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಾಸನ, ಕಂಬದ ಇನ್ನೊಂದು ಬದಿಯಲ್ಲಿ ಎರಡು ಅಪ್ರಕಟಿತ ಶಾಸನಗಳು ಹಾಗೂ ಇನ್ನೊಂದು ಕಂಬದಲ್ಲಿ ಶಿಲ್ಪಿಯ ಹೆಸರಿರುವ ಶಾಸನ ಪತ್ತೆಯಾಗಿದೆ. ಶಾಸನದಲ್ಲಿ ತ್ರಿಪುರುಷ ವಿಷ್ಣು ದೇವಾಲಯಲ್ಲೆ ಸುವರ್ಣ ನಾಣ್ಯಗಳು ಹಾಗೂ ಭೂದಾನದ ಉಲ್ಲೇಖಗಳಿರುವುದು ಲಭ್ಯವಾಗಿದೆ.

ಅಲ್ಲದೇ, ಹೊಯ್ಸಳ ಇತಿಹಾಸದಲ್ಲಿ ಪ್ರಖ್ಯಾತನಾಗಿದ್ದ ವಿಷ್ಣುವರ್ಧನನ ಕಾಲದಲ್ಲಿ ಅಂದರೆ 1102-1142ರ ಕಾಲದಲ್ಲಿ ತನ್ನ ರಾಜಕೀಯ ಸಾಧನೆಗಳ ಸ್ಮರಣಾರ್ಥವಾಗಿ ಕಟ್ಟಿಸಿದ ಐದು ವಿಜಯ ನಾರಾಯಣ ದೇವಾಲಯಗಳಲ್ಲಿ ಇದು ಎಂದು ಪ್ರತೀತಿ ಇದ್ದುದರಿಂದ ಹಾಗೂ ಕುಮಾರವ್ಯಾಸನು ಇದೇ ದೇವಸ್ಥಾನದ ಮಹಾಮಂಟಪದ ಕಮಲ ಬೋದಿಗೆಯುಳ್ಳ ಕಂಬಕ್ಕೆ ಒರಗಿಕೊಂಡು ಗದುಗಿನ ಭಾರತ ಕಾವ್ಯ ಬರೆದಿದ್ದನು ಎಂಬ ಇತಿಹಾಸ ಹೊಂದಿದ್ದು, ರಾಜ್ಯ ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರಿಸಲಾಗಿದ್ದು, 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಾರಂಭ ಮಾಡಲಾಗಿದೆ.

ವೀರನಾರಾಯಣ ದೇವಸ್ಥಾನದ ಕುರಿತಾಗಿ ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವ ಸಂದರ್ಭದಲ್ಲಿ ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಪುನರುತ್ಥಾನದ ಹೆಸರಿನಲ್ಲಿ ದೇವಸ್ಥಾನದ ಮೂಲಕ ಕುಮಾರವ್ಯಾಸ ಮಂಟಪದ ಸುತ್ತಲಿನ ಗೋಡೆಗಳನ್ನು ತೆರವುಗೊಳಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡದೇ, ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದನ್ನು ನಾವು ಖಂಡಿಸುವುದರ ಜೊತೆಗೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ.
-ಸಮೀರ ಗುಡಿ, ದೇವಸ್ಥಾನದ ಅನುವಂಶಿಕ ಪಾರುಪತ್ಯದಾರರು, ಪರಿಚಾರಕರು.

ರಾಜ್ಯ ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿ ಗದುಗಿನ ಇತಿಹಾಸ ಪ್ರಸಿದ್ಧಿ ಹೊಂದಿರುವ ವೀರನಾರಾಯಣ ದೇವಸ್ಥಾನ ಸೇರಿದ್ದರಿಂದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪುನರುತ್ಥಾನ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಮೂಲಸ್ವರೂಪಕ್ಕೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಮೂಲಸ್ವರೂಪವನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಆಡಳಿತಾತ್ಮಕವಾಗಿ ಅನುಮೋದನೆ ನೀಡಿರುವುದರಿಂದ ಕೆಲಸ ಆರಂಭಿಸಲಾಗಿದೆ.
-ಕೊಟ್ರೇಶ ವಿಭೂತಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು

ಟಾಪ್ ನ್ಯೂಸ್

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ

Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ

Hamas: ಸಿನ್ವರ್‌ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್‌ ಯತ್ನ?

Hamas: ಸಿನ್ವರ್‌ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್‌ ಯತ್ನ?

Hanunma–manasa

BBK11: ಮಾನಸ ಭಾರೀ ಸೌಂಡ್ ಮಾತ್ರ, ಬಳಿಕ ಠುಸ್ ಬಾಂ*ಬ್ ಎಂದ ಹನುಮಂತು!

Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!

Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!

YS Vijayamma: ಶರ್ಮಿಳಾಗೆ ಅನ್ಯಾಯ ಆಗಿದೆ… ಜಗನ್‌ ವಿರುದ್ಧ ತಾಯಿ ಬಹಿರಂಗ ಪತ್ರ

YS Vijayamma: ಶರ್ಮಿಳಾಗೆ ಅನ್ಯಾಯ ಆಗಿದೆ… ಜಗನ್‌ ವಿರುದ್ಧ ತಾಯಿ ಬಹಿರಂಗ ಪತ್ರ

Delhi: ಆಯುಷ್ಮಾನ್‌ ಭಾರತಕ್ಕಿಂತ ದೆಹಲಿ ಮಾದರಿ ಉತ್ತಮ: ಪ್ರಧಾನಿಗೆ ಕೇಜ್ರಿ ತಿರುಗೇಟು

Delhi: ಆಯುಷ್ಮಾನ್‌ ಭಾರತಕ್ಕಿಂತ ದೆಹಲಿ ಮಾದರಿ ಉತ್ತಮ: ಪ್ರಧಾನಿಗೆ ಕೇಜ್ರಿ ತಿರುಗೇಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು

Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Tejasvi-surya

Waqf Property:ಜಂಟಿ ಸಂಸದೀಯ ಸಮಿತಿ ಕರ್ನಾಟಕದ ರೈತರ ಸಮಸ್ಯೆಗಳ ಆಲಿಸಲಿ: ತೇಜಸ್ವಿ ಸೂರ್ಯ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ

Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ

Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ

Hamas: ಸಿನ್ವರ್‌ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್‌ ಯತ್ನ?

Hamas: ಸಿನ್ವರ್‌ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್‌ ಯತ್ನ?

Hanunma–manasa

BBK11: ಮಾನಸ ಭಾರೀ ಸೌಂಡ್ ಮಾತ್ರ, ಬಳಿಕ ಠುಸ್ ಬಾಂ*ಬ್ ಎಂದ ಹನುಮಂತು!

Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!

Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.