Surathkal: ಕೆರೆ ಕಾಮಗಾರಿಯ ವೇಳೆ ಬಿದ್ದು ಕಾರ್ಮಿಕ ಮೃತ್ಯು
Team Udayavani, Oct 30, 2024, 10:52 PM IST
ಸುರತ್ಕಲ್: ಕುಳಾಯಿಯಲ್ಲಿ ಕೆರೆಯ ಬಳಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಕೌಶಲ್ಯ ಕಾರ್ಮಿಕನೊಬ್ಬ ಆಯñಪ್ಪಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಅ.30ರಂದು ಮಧ್ಯಾಹ್ನ ನಡೆದಿದೆ.
ಎಕ್ಕಾರು ದುರ್ಗಾ ನಗರದ ಸ್ವಸ್ಥಿಕ್(21) ಮೃತಪಟ್ಟವರು.ಬುಧವಾರ ಇಬ್ಬರು ಕೆಲಸ ಮಾಡುತ್ತಿದ್ದು ಇನ್ನೋರ್ವ ಶೌಚಕ್ಕೆ ಹೋಗಿದ್ದ ಸಂದರ್ಭ ಸ್ವಸ್ಥಿಕ್ ಬಿದ್ದಿದ್ದು ,ಎಷ್ಟು ಹುಡುಕಾಡಿದರೂ ಕಂಡು ಬರದ ಕಾರಣ ಕೆರೆಯಲ್ಲಿ ಜಾಲಾಡಿದಾಗ ಮೃತ ಸ್ಥಿತಿಯಲ್ಲಿ ದೇಹ ಮೇಲೆದ್ದು ಬಂದಿದೆ. ಇತ್ತೀಚೆಗೆ ಮಳೆ ಹಾಗೂ ಕಾಮಗಾರಿ ನಡೆದುದರಿಂದ ಕೆರೆಯಾಳದಲ್ಲಿ ಕೆಸರು ನೀರು ಇದ್ದ ಕಾರಣ ಕಾಲು ಸಿಲುಕಿ ಮೇಲೆ ಬರಲಾಗದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಬೇಬಿ ವಿಶ್ವನಾಥ್ ದಂಪತಿಗಳ ಮೂವರು ಪುತ್ರರ ಪೈಕಿ ಸ್ವಸ್ಥಿಕ ಎರಡನೆಯವರು. ಅವಿವಾಹಿತರಾದ ಇವರು ಎಲೆಕ್ಟ್ರಿಷಿಯನ್ ವೃತ್ತ ಮಾಡುತ್ತಿದ್ದರು.ದೀಪಾವಳಿಯ ಸಂದರ್ಭವೇ ಅವಘಡ ನಡೆದಿದ್ದು ಮನೆ ಮಂದಿಯನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.