Digitalization: ಭೂಸೇವೆ ಸಂಪೂರ್ಣ ಡಿಜಿಟಲೀಕರಣ: ಉಜಾರು ಉಳುವಾರು ದೇಶದಲ್ಲೇ ಪ್ರಥಮ
ಗ್ರಾಮದ ದಾಖಲೆ ಪತ್ರಗಳು, ಮಾಹಿತಿಗಳು, ಕಂದಾಯ ಸೇವೆಗಳು ಸ್ಮಾರ್ಟ್
Team Udayavani, Oct 31, 2024, 7:15 AM IST
ಕುಂಬಳೆ: ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲೆ, ಮಾಹಿತಿ, ಸೇವೆಗಳು ಡಿಜಿಟಲ್ ವ್ಯವಸ್ಥೆಗೆ ಒಳಪಟ್ಟಿರುವ ದೇಶದ ಮೊದಲ ಗ್ರಾಮವಾಗಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಜಾರು ಉಳುವಾರು ಗ್ರಾಮ ಗುರುತಿಸಿಕೊಂಡಿದೆ.
ಡಿಜಿಟಲ್ ವ್ಯವಸ್ಥೆಯಲ್ಲಿ ಭೂಮಿಗೆ ಸಂಬಂಧಿಸಿದ ಎಲ್ಲ ಮಾಹಿತಿ, ದಾಖಲೆ ಹಾಗೂ ಸೇವೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಒದಗಿಸುವ ಗುರಿಯೊಂದಿಗೆ ಸಮಗ್ರ ಭೂ ದಾಖಲೆಗಳನ್ನು ಜಾಲತಾಣ ವ್ಯವಸ್ಥೆಗೆ ಒಳಪಡಿಸುವ ಮೂಲಕ “ಎಂಡೆ ಭೂಮಿ’ (ನನ್ನ ಭೂಮಿ, ಮೈ ಲ್ಯಾಂಡ್) ಸಂಯೋಜಿತ ವೆಬ್ ಪೋರ್ಟಲ್ ಆನ್‌ಲೈನ್ ಸೇವೆಯನ್ನು ಕಾಸರಗೋಡು ಜಿಲ್ಲಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿದೆ. “ಮೈ ಲ್ಯಾಂಡ್’ ಅಥವಾ “ನನ್ನ ಭೂಮಿ’ ಸಂಯೋಜಿತ ಪೋರ್ಟಲ್ ಭೂಮಿ ಯೋಜನೆ ಭಾಗವಾಗಿ ಉಜಾರು ಉಳುವಾರು ಗ್ರಾಮದಲ್ಲಿ ದಾಖಲೆ ಪತ್ರಗಳು, ಮಾಹಿತಿಗಳು ಹಾಗೂ ಎಲ್ಲ ಕಂದಾಯ ಸೇವೆಗಳು ಸ್ಮಾರ್ಟ್ ಆಗಿದ್ದು, ಈ ಗ್ರಾಮಸ್ಥರಿಗೆ ಭೂಮಿಗೆ ಸಂಬಂಧಪಟ್ಟ ಎಲ್ಲ ವ್ಯವಸ್ಥೆಗಳು ಸುಲಭದಲ್ಲಿ ದೊರಕಲಿವೆ.
ಉಜಾರು ಉಳುವಾರು ದೇಶದ ಪ್ರಥಮ ಡಿಜಿಟಲ್ ಗ್ರಾಮ
ಮಂಜೇಶ್ವರ ತಾಲೂಕಿನ ಉಜಾರು ಉಳುವಾರು ಗ್ರಾಮದಲ್ಲಿ ಈ ಯೋಜನೆ ಪೂರ್ಣರೂಪವಾಗಿ ಕಾರ್ಯಗತಗೊಂಡಿದೆ. ಈ ಗ್ರಾಮ ದೇಶದಲ್ಲೇ ಮೊದಲ ಡಿಜಿಟಲ್ ಭೂಮಿಯಾಗಿ ಗುರುತಿಸಲ್ಪಟ್ಟಿರುವುದು ಕಾಸರಗೋಡು ಜಿಲ್ಲೆಗೆ ಹೆಮ್ಮೆಯಾಗಿದೆ. ಇದರೊಂದಿಗೆ ಪ್ರಥಮ ಹಂತದಲ್ಲಿ ಡಿಜಿಟಲ್ ಸಮೀಕ್ಷೆ ಪೂರ್ಣಗೊಳಿಸಿದ ಕೇರಳದ 200 ಗ್ರಾಮಗಳಲ್ಲಿ ಡಿಜಿಟಲ್ ಸೇವೆಯು ಮೈ ಲ್ಯಾಂಡ್ ಪೋರ್ಟಲ್ ಮೂಲಕ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ajekar: ನೀರೆಯ ಭತ್ತದ ಗದ್ದೆಯಲ್ಲಿ ಬಾವಿ ಹೋಲುವ ಗುಹೆ ಪತ್ತೆ
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
Bagheera Movie : ʼಬಘೀರʼ ನೋಡಿ ಹಬ್ಬದ ಬಾಡೂಟ ಸವಿದ ಸಿನಿಮಂದಿ.. ಹೇಗಿದೆ ಸಿನಿಮಾ?
Kollur: ಕಿರುಸೇತುವೆ ಸಂಪೂರ್ಣ ಕೆಸರುಮಯ; ರಸ್ತೆ ತುಂಬಾ ಹೊಂಡಗುಂಡಿ
Udupi: ಪಟಾಕಿ ಸಿಡಿಸಿ, ಆದರೆ ಎಚ್ಚರ ವಹಿಸಿ; ಇಲಾಖೆಯಿಂದ ಜಿಲ್ಲಾದ್ಯಂತ ಅಗತ್ಯಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.