Waqf Notice: ಮತ್ತೆ ನಾಲ್ಕು ಜಿಲ್ಲೆಗಳ 1,765 ಆಸ್ತಿಗಳ ಮೇಲೆ ವಕ್ಫ್ ಮೊಹರು
Team Udayavani, Oct 31, 2024, 6:55 AM IST
ಹುಬ್ಬಳ್ಳಿ: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅವಾಂತರ ಮುಂದುವರಿದಿದ್ದು, ಮತ್ತೆ 4 ಜಿಲ್ಲೆಗಳ 1765 ಆಸ್ತಿಗಳ ಮೇಲೆ ವಕ್ಫ್ ಮೊಹರು ಬಿದ್ದಿದೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ 365, ಶಿಗ್ಗಾಂವಿ ತಾಲೂಕಿನಲ್ಲಿ 226, ಹಾನಗಲ್ಲ 350, ಹಾವೇರಿ 276, ರಾಣಿಬೆನ್ನೂರು 148, ಹಿರೇಕೆರೂರು 172, ಬ್ಯಾಡಗಿ 112 ಸೇರಿದಂತೆ ಒಟ್ಟು 1649 ಆಸ್ತಿಗಳ ಖಾತೆ ಬದಲಾವಣೆ ಮಾಡುವಂತೆ ವಕ್ಫ್ ಅಧಿಕಾರಿಗಳು ಕೋರಿದ್ದಾರೆ. ಕಂದಾಯ ದಾಖಲೆಗಳಲ್ಲಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅ. 24ರಂದು ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ.
ಇನ್ನೊಂದೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ರೈತರಾದ ಅಪ್ಪಾಸಿಂಗ್, ಭೀಮಸಿಂಗ್, ಸಂತೋಷ ಮತ್ತು ಉಮೇಶ ರಜಪೂತ ಅವರ 5 ಎಕರೆ 30 ಗುಂಟೆ ಜಮೀನಿನಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದೆ. ಎರಡು ದಿನದ ಹಿಂದೆ ಪಹಣಿ ತೆಗೆಸಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಕ್ಫ್ ಹೆಸರು ಯಾವಾಗ ಸೇರಿದೆ ಎನ್ನುವುದು ರೈತರಿಗೆ ಗೊತ್ತೇ ಇಲ್ಲ.
111 ರೈತರಿಗೂ ವಕ್ಫ್ ನೋಟಿಸ್
ಬಾಗಲಕೋಟೆ ಜಿಲ್ಲೆ ತೇರದಾಳ ಭಾಗದ ರೈತರಿಗೂ ವಕ್ಫ್ ಬೋರ್ಡ್‌ನಿಂದ ನೋಟಿಸ್ ಬಂದಿವೆ. ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಯ 420 ಎಕರೆ ಭೂಮಿಗೆ ಸಂಬಂಧಿಸಿದಂತೆ 111 ರೈತರಿಗೆ ಕಳೆದ 2017, 2018, 2024ರಲ್ಲಿ ಬೆಂಗಳೂರಿನ ವಕ್ಫ್ ಬೋರ್ಡ್‌ನಿಂದ ನೋಟಿಸ್ ಬಂದಿದೆ. ಕೊಪ್ಪಳದಲ್ಲೂ ನಾಲ್ವರ ಆಸ್ತಿ ಮೇಲೂ ವಕ್ಫ್ ಆಸ್ತಿ ನಮೂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ನಟ ದರ್ಶನ್‌ಗೆ ಜಾಮೀನು ಕೊಟ್ಟು ಹೈಕೋರ್ಟ್ ವಿಧಿಸಿರುವ ಷರತ್ತುಗಳೇನು?
Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
Congress Gurantee: ಮಹಿಳೆಯರಿಂದಲೇ ಉಚಿತ ಪ್ರಯಾಣಕ್ಕೆ ವಿರೋಧ: ಡಿಸಿಎಂ ಡಿ.ಕೆ.ಶಿವಕುಮಾರ್
Golden Jubilee: ಕರ್ನಾಟಕ ನಾಮಕರಣಕ್ಕೆ 50 ವರ್ಷ: 100 ಸಾಧಕರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ
Earth Science: ಅರಣ್ಯ ಉತ್ಪನ್ನದಿಂದ ಕಬ್ಬಿಣ ಅದಿರು ಹೊರಕ್ಕೆ: ಸಿಎಂ ಸಿದ್ದರಾಮಯ್ಯ ಸೂಚನೆ
MUST WATCH
ಹೊಸ ಸೇರ್ಪಡೆ
Vineeth Kumar: ನ.1 ರಂದು “90 ಎಮ್ ಎಲ್” ತುಳು ಸಿನಿಮಾಕ್ಕೆ ಮುಹೂರ್ತ
ಉದಯವಾಣಿ “ಚಿಣ್ಣರ ಬಣ್ಣ 2024′: ನ.2-3ರಂದು ಎರಡನೇ ಹಂತದ ಸ್ಪರ್ಧೆ
Udayavani ರೇಷ್ಮೆ ಜತೆ ದೀಪಾವಳಿ ಸ್ಪರ್ಧೆ: ನೀವೂ ಪಾಲ್ಗೊಳ್ಳಿ
2 ದಿನದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆ
ಈ ದೀಪಾವಳಿ ಎಲ್ಲರ ಜೀವನದಲ್ಲೂ ಸಂತೋಷ ಸಮೃದ್ಧಿ ತರಲಿ… ದೇಶದ ಜನತೆಗೆ ಪ್ರಧಾನಿ ಶುಭಾಶಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.