Actor Yash: ಮಗನ ಬರ್ತ್ ಡೇಗೆ ಯಶ್ ʼಟಗರುʼ ಡ್ಯಾನ್ಸ್.. ವಿಡಿಯೋ ಸಖತ್ ವೈರಲ್
Team Udayavani, Oct 31, 2024, 11:46 AM IST
ಬೆಂಗಳೂರು: ಚಂದನವನದ ಮುದ್ದಾದ ಜೋಡಿ ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ರಾಧಿಕಾ ಪಂಡಿತ್ (Radhika Pandit) ತಮ್ಮ ಮಗನ 5ನೇ ವರ್ಷದ ಹುಟ್ಟುಹಬ್ಬವನ್ನು ಜೋರಾಗಿಯೇ ಸಂಭ್ರಮಿಸಿದ್ದಾರೆ.
ಯಶ್ – ರಾಧಿಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರತಿವರ್ಷ ತಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ಎಷ್ಟೇ ಬ್ಯುಸಿಯಿದ್ದರೂ ಬಿಡುವು ಮಾಡಿಕೊಂಡು ಯಶ್ – ರಾಧಿಕಾ ಕುಟುಂಬದ ಆತ್ಮೀಯರ ಜತೆ ಸಮಯ ಕಳೆಯುತ್ತಾರೆ.
ಬುಧವಾರ (ಅ.30ರಂದು) ಮಗ ಯಥರ್ವ್ನ (Yatharva) ಹುಟ್ಟುಹಬ್ಬವನ್ನು ದಂಪತಿ ಅದ್ಧೂರಿಯಾಗಿಯೇ ಆಚರಿಸಿಕೊಂಡಿದ್ದಾರೆ. ಕುಟುಂಬದ ಆತ್ಮೀಯರು ಹಾಗೂ ಆಪ್ತ ಗೆಳೆಯರ ಸಮ್ಮುಖದಲ್ಲಿ ಮಗನ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಈ ವೇಳೆ ಯಶ್ ಮಗನ ಬರ್ತ್ ಡೇಗೆ ಸಖತ್ ಆಗಿಯೇ ಸ್ಟೆಪ್ ಹಾಕಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ʼಟಗರು ಬಂತು ಟಗರುʼ ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಸಖತ್ ಎನರ್ಜಿಯಿಂದ ಪಕ್ಕಾ ಡ್ಯಾನ್ಸರ್ ನಂತೆ ಸ್ಟೆಪ್ ಹಾಕಿದ್ದಾರೆ. ರಾಧಿಕಾ ಅವರು ಮಗನನ್ನು ಎತ್ತಿಕೊಂಡು ನಿಂತಲೇ ಡ್ಯಾನ್ಸ್‌ಗೆ ಹೆಜ್ಜೆ ಸೇರಿಸಿದ್ದಾರೆ.
Rocking Star @TheNameIsYash bringing all the energy, dancing to Century Star @NimmaShivanna ‘s hit “Tagaru Bantu Tagaru” at Yatharv’s birthday party.
ಅಲ್ಲಿ ನೋಡು ರಾಕಿಂಗ್ ಸ್ಟಾರ್ ಇಲ್ಲಿ ನೋಡು ರಾಕಿಂಗ್ ಸ್ಟಾರ್ 🎉💥😍#YashBoss #Shivanna pic.twitter.com/fyMlRIkvj1— U (@UppuHuliKara_) October 31, 2024
ಯಶ್ ಡ್ಯಾನ್ಸ್ ವಿಡಿಯೋ ನೋಡಿ ಅವರ ಅಭಿಮಾನಿಗಳು ʼಸಿಂಪಲ್ ಮ್ಯಾನ್ʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಥೇಟು ಅಪ್ಪು ಅವರ ಡ್ಯಾನ್ಸ್ ನೋಡಿದಾಗೆ ಆಯಿತು ಎಂದು ಕಮೆಂಟ್ ಮಾಡಿದ್ದಾರೆ.
ಸದ್ಯ ಯಶ್ ʼಟಾಕ್ಸಿಕ್ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ragini prajwal: ಸೆನ್ಸಾರ್ ಪಾಸಾದ ಶ್ಯಾನುಭೋಗರ ಮಗಳು
Bagheera Movie : ʼಬಘೀರʼ ನೋಡಿ ಹಬ್ಬದ ಬಾಡೂಟ ಸವಿದ ಸಿನಿಮಂದಿ.. ಹೇಗಿದೆ ಸಿನಿಮಾ?
Sri Murali: ಇಂದಿನಿಂದ ಬಘೀರ ಬೇಟೆ ಶುರು
Jai Hanuman: ತೆಲುಗು ನಿರ್ದೇಶಕನ ಸಿನಿಮಾದಲ್ಲಿ ʼಹನುಮಾನ್ʼ ಆದ ಕನ್ನಡದ ರಿಷಬ್ ಶೆಟ್ಟಿ
Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್
MUST WATCH
ಹೊಸ ಸೇರ್ಪಡೆ
Bengaluru: ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಐ ಗಂಗಾಧರ್
Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ
Bengaluru: ರೈಲಲ್ಲಿ ಬಿಟ್ಟು ಹೋಗಿದ್ದ 5 ಲಕ್ಷ ಚಿನ್ನ ಪ್ರಯಾಣಿಕನಿಗೆ ಹಸ್ತಾಂತರ
Bengaluru: ಬಸ್ ಕಂಡಕ್ಟರ್, ಡ್ರೈವರ್‌ಗೆ ತೀವ್ರ ಹಲ್ಲೆ: ಇಬ್ಬರು ಆರೋಪಿಗಳ ಬಂಧನ
Deepavali Celebration: ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.