Bagheera Movie : ʼಬಘೀರʼ ನೋಡಿ ಹಬ್ಬದ ಬಾಡೂಟ ಸವಿದ ಸಿನಿಮಂದಿ.. ಹೇಗಿದೆ ಸಿನಿಮಾ?

ʼಕೆಜಿಎಫ್‌ʼ,ʼ ಕಾಂತಾರʼದ ಬಳಿಕ ಮತ್ತೊಂದು ಮೆಗಾ ಹಿಟ್‌ ಆಗುತ್ತಾ ʼಬಘೀರʼ

Team Udayavani, Oct 31, 2024, 1:43 PM IST

Bagheera Movie : ʼಬಘೀರʼ ನೋಡಿ ಹಬ್ಬದ ಬಾಡೂಟ ಸವಿದ ಸಿನಿಮಂದಿ.. ಹೇಗಿದೆ ಸಿನಿಮಾ?

ಬೆಂಗಳೂರು: ರೋರಿಂಗ್‌ ಸ್ಟಾರ್‌ ಶ್ರೀಮುರುಳಿ (Sri Murali) ಅಭಿನಯಿಸಿರುವ “ಬಘೀರ”( Bagheera) ಗುರುವಾರ (ಅ.31ರಂದು) ತೆರೆ ಕಂಡಿದೆ.

ʼಉಗ್ರಂʼ, ʼಕೆಜಿಎಫ್‌ʼ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಸ್ಟಾರ್‌ ಡೈರೆಕ್ಟರ್‌ ಆಗಿ ನೇಮ್‌ – ಫೇಮ್‌ ಪಡೆದುಕೊಂಡಿರುವ ನಿರ್ದೇಶಕ ಪ್ರಶಾಂತ್‌ ನೀಲ್‌ (Prashanth Neel) ಅವರ ಕಥೆ ʼಬಘೀರʼಕ್ಕಿದೆ. ಕರುನಾಡು ಮಾತ್ರವಲ್ಲದೆ, ತಮಿಳುನಾಡು, ಆಂಧ್ರದಲ್ಲೂ ʼಬಘೀರʼನಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಸಿನಿಮಾದಲ್ಲಿ ಶ್ರೀಮರುಳಿ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಶೇಡ್‌ ನಲ್ಲಿ ವಿಲನ್‌ ನಂತೆ ಅಬ್ಬರಿಸಿದ್ದಾರೆ.

ಸಿನಿಮಾ ನೋಡಿದ ಪ್ರೇಕ್ಷಕರು ʼಎಕ್ಸ್‌ʼ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿದವರು ಏನಂತಾರೆ. ಸಿನಿಮಾಕ್ಕೆ ಎಷ್ಷು ಮಾರ್ಕ್ಸ್‌ ಕೊಟ್ಟಿದ್ದಾರೆ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ..

ʼಬಘೀರʼನ 1st ಹಾಫ್ ನಷ್ಟೇ, 2nd ಹಾಫ್‌ ಕೂಡ ಚೆನ್ನಾಗಿದೆ. ಶ್ರೀಮುರುಳಿ ಮತ್ತೊಂದು ಬ್ಲಾಕ್‌ ಬಸ್ಟರ್ ನೊಂದಿಗೆ ಬಂದಿದ್ದಾರೆ ಎಂದು ಒಬ್ಬರು ʼಎಕ್ಸ್‌ʼ ನಲ್ಲಿ ಬರೆದುಕೊಂಡಿದ್ದಾರೆ.

ಖಂಡಿತ ʼಬಘೀರʼ ವರ್ಷದ ದೊಡ್ಡ ಬ್ಲಾಕ್‌ ಬಸ್ಟರ್‌ ಸಿನಿಮಾವಾಗುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ನನಗೆ ಸಿನಿಮಾದ ಮೊದಲ ಹಾಫ್‌ ಇಷ್ಟ ಆಯಿತು. 2nd ಹಾಫ್‌ ಜಾಸ್ತಿಯೇ ಇಷ್ಟ ಆಗುತ್ತದೆ. ಕೊನೆಯ 20 ನಿಮಿಷ ಥ್ರಿಲ್ ಕೊಡುತ್ತದೆ. ಕೆಜಿಎಫ್‌ ನೋಡುವಾಗಿನ ಫೀಲ್‌ ʼಬಘೀರʼ ನೋಡುವಾಗ ಬರುತ್ತದೆ ಎಂದು ಹಿಂದಿ ವರ್ಷನ್‌ ನೋಡಿದ ಮತ್ತೊಬ್ಬರು ಸಿನಿಮಾ ನೋಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಬ್ಲಾಕ್‌ ಬಸ್ಟರ್‌ 1st ಹಾಫ್‌,  ಛಾಯಗ್ರಹಣ ಹಾಗೂ ಬಿಜಿಎಂ ಬೆಂಕಿ ಆಗಿದೆ. ಡಾ.ಸೂರಿ ಪೈಸಾ ವಸೂಲ್‌ ಮೂವಿ ಮಾಡಿದ್ದಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಶ್ರೀಮುರುಳಿ ವೇದಾಂತ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಕೆರಿಯರ್‌ನ ಬೆಸ್ಟ್‌ ಮೂವಿ. ಅಜನೀಶ್‌ ಅವರ ಬಿಜಿಎಂ ಬೇರೆ ಲೆವೆಲ್‌ಗಿದೆ. ಸೂರಿ ಅವರ ಡೈರೆಕ್ಷನ್‌ ಟಾಪ್‌ ಆಗಿದೆ. ಸಿನಿಮಾ ಎಂಗೇಜಿಂಗ್‌ ಆಗಿದೆ ಎಂದು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.

ಈತ ಇಂಡಿಯನ್‌ ಬ್ಯಾಟ್‌ ಮ್ಯಾನ್‌. ಫೈಟ್‌ ಸೀನ್ಸ್‌ ಗಳು ಚಿಂದಿಯಾಗಿದೆ. ಜೈ ʼಬಘೀರʼ ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಕಂಬ್ಯಾಕ್‌ ಅಂದ್ರೆ ಹೀಗೆ ಇರಬೇಕೆಂದು ಒಬ್ಬರು ಮುರುಳಿ ಅವರಿಗೆ ಜೈಕಾರ ಹಾಕಿ ಅಭಿಪ್ರಾಯವನ್ನು ಬರೆದುಕೊಂಡಿದ್ದಾರೆ.

ಫಸ್ಟ್‌ ಹಾಫ್‌ ನೋಡಿ ಸಖತ್‌ ಎಂಜಾಯ್‌ ಮಾಡಿದೆ. ಪ್ರಶಾಂತ್‌ ನೀಲ್‌ ಅವರ ಕಥೆ ಸೂಪರ್‌ ಆಗಿದೆ. ಮೈಯೆಲ್ಲ ರೋಮಾಂಚನವಾಗುತ್ತದೆ. ಡೈಲಾಗ್ಸ್‌, ಬಿಜಿಎಂ ನಿಜವಾಗಲೂ ಇದೊಂದು ಮಾಸ್‌ ಮನರಂಜನೆ ನೀಡುವ ಸಿನಿಮಾ. ಕೆಜಿಎಫ್‌, ಕಾಂತಾರ ಆದ್ಮೇಲೆ ಮೈನವಿರೇಳಿಸುವ ಕಥೆ ಇದರಲ್ಲಿದೆ ಎಂದು ಪ್ರೇಕ್ಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ʼಬಘೀರʼನ ನೋಡಿದವರು ಸಿನಿಮಾದ ಬಗ್ಗೆ ಪಾಸಿಟಿವ್‌ ರೆಸ್ಪಾನ್ಸ್‌ ನೀಡುತ್ತಿದ್ದಾರೆ.

ಹೊಂಬಾಳೆ ಫಿಲಂಸ್‌ ಲಾಂಛನದಲ್ಲಿ ವಿಜಯ ಕಿರಗಂದೂರ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತವಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ, ಸುಧಾರಾಣಿ, ಪ್ರಮೋದ ಶೆಟ್ಟಿ, ಗರುಡ ರಾಮ್‌, ಪ್ರಕಾಶ್‌ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ.

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.