Kinnigoli: ಏಳಿಂಜೆಯ ಮುಸ್ಲಿಂ ಹುಡುಗನ ದೀಪಾವಳಿ ಪ್ರೇಮ

17 ಸಾಂಪ್ರದಾಯಿಕ ಗೂಡುದೀಪ ತಯಾರಿಸಿ ಗೆಳೆಯರಿಗೆ ಹಂಚಿದ ಎಂಜಿನಿಯರಿಂಗ್‌ ವಿದ್ಯಾರ್ಥಿ

Team Udayavani, Oct 31, 2024, 1:20 PM IST

2(2)

ಕಿನ್ನಿಗೋಳಿ: ಅಂತಿಮ ವರ್ಷದ ಎಂಜಿನಿಯರಿಂಗ್‌ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿಯೊಬ್ಬರು ದೀಪಾವಳಿ ಮತ್ತು ಗೂಡುದೀಪದ ಮೇಲೆ ತೋರುತ್ತಿರುವ ಪ್ರೀತಿ ಗಮನ ಸೆಳೆಯುತ್ತಿದೆ. ಬಾಗಲಕೋಟೆ ಮೂಲದ ವಿದ್ಯಾರ್ಥಿ ಅಶ್ಫಾಕ್‌ ಅಹಮದ್‌ ಎಂಬವರು ಈ ಬಾರಿ ದೀಪಾವಳಿಗೆ ಒಟ್ಟು 17 ಸಾಂಪ್ರದಾಯಿಕ ಗೂಡುದೀಪಗಳನ್ನು ರಚಿಸಿದ್ದಾರೆ.

ಅಶ್ಫಾಕ್‌ ಬಾಗಲಕೋಟೆಯವರಾದರೂ ಈಗ ವಾಸವಾಗಿರುವುದು ಮಂಗಳೂರು ತಾಲೂಕಿನ ಏಳಿಂಜೆ ಗ್ರಾಮದ ಕೋಂಜಲಗುತ್ತುವಿನಲ್ಲಿ. ಇಲ್ಲಿನ ಕೌಶಲ್ಯ ಶೆಟ್ಟಿ ಎಂಬವರು ಅಶ್ಫಾಕ್‌ನನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಪೋಷಿಸುತ್ತಿದ್ದು, ಆತನ ವ್ಯಾಸಂಗ ಖರ್ಚು ವೆಚ್ಚಗಳನ್ನೂ ನೋಡಿಕೊಳ್ಳುತ್ತಿದ್ದಾರೆ. ಈ ವಿದ್ಯಮಾನ ಕೋಮುಸೌಹಾರ್ದತೆಗೆ ಸಾಕ್ಷಿಯಾಗಿರುವ ಜತೆಗೆ ಯುವಕನೂ ಇಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಬಹುಮುಖ ವ್ಯಕ್ತಿತ್ವದ ಗ್ರಾಮೀಣ ಪ್ರತಿಭೆ: ಅಶ್ಫಾಕ್‌ ಕಳೆದ ಹಲವಾರು ವರ್ಷಗಳಿಂದ ಸಾಂಪ್ರದಾಯಿಕ ಗೂಡುದೀಪ ತಯಾರಿಸುತ್ತಿದ್ದಾರೆ. ಕಳೆದ ತಿಂಗಳು ರಜೆಯ ಸಮಯದಲ್ಲಿ ರಾತ್ರಿ ಹಗಲು ಕುಳಿತು 17 ಸಾಂಪ್ರದಾಯಿಕ, ದೊಡ್ಡಗಾತ್ರದ ಗೂಡು ದೀಪ ರಚಿಸಿದ್ದಾರೆ. ಆದರೆ, ಯಾವುದೇ ಗೂಡುದೀಪಗಳನ್ನು ಮಾರಾಟ ಮಾಡದೆ ತನ್ನ ಮಿತ್ರರಿಗೆ ಹಂಚಿ ಖುಷಿಪಟ್ಟಿದ್ದಾರೆ.

ಹೈನುಗಾರಿಕೆಯಲ್ಲೂ ತೊಡಗಿಸಿ ಕೊಂಡಿರುವ ಅಶ್ಫಾಕ್‌ ದನ ಸಾಕಣೆಯಲ್ಲಿ ಎತ್ತಿದ ಕೈ. ತನ್ನ ಶೈಕ್ಷಣಿಕ ಒತ್ತಡಗಳ ನಡುವೆಯೂ ದನಗಳ ಹಾಲು ಕರೆದು ಡೇರಿಗೆ ಮುಟ್ಟಿಸುತ್ತಾರೆ. ಕೋಳಿ ಸಾಕಣೆ, ಕೃಷಿ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲ. ತುಂಬ ರುಚಿಕರವಾಗಿ ಅಡುಗೆ ಕೂಡಾ ಮಾಡುತ್ತಾರೆ.

ಅಪಾರ ಆಸಕ್ತಿ
ಹಿಂದಿನಿಂದಲೂ ಹಿಂದೂ ಹಬ್ಬಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ಮಕ್ಕಳ ಸಹಕಾರದಿಂದ ಸಾಂಪ್ರದಾಯಿಕ ಗೂಡುದೀಪ ತಯಾರಿಯಲ್ಲಿ ತೊಡಗಿದೆ. ಕೌಶಲ್ಯ ಶೆಟ್ಟಿಯವರ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು.-ಅಶ್ಫಾಕ್‌, ಎಂಜಿನಿಯರಿಂಗ್‌ ವಿದ್ಯಾರ್ಥಿ

-ರಘುನಾಥ ಕಾಮತ್‌ ಕೆಂಚನಕೆರೆ

ಟಾಪ್ ನ್ಯೂಸ್

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ

Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ

Amaran: ಮೇಜರ್ ಮುಕುಂದ್ ಆಗಿ ತೆರೆ ಮೇಲೆ ಜೀವಿಸಿದ ಶಿವಕಾರ್ತಿಕೇಯನ್: ಹೇಗಿದೆ ಸಿನಿಮಾ?

Amaran: ಮೇಜರ್ ಮುಕುಂದ್ ಆಗಿ ತೆರೆ ಮೇಲೆ ಜೀವಿಸಿದ ಶಿವಕಾರ್ತಿಕೇಯನ್: ಹೇಗಿದೆ ಸಿನಿಮಾ?

Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು

Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

Deepavali Celebration: ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

Deepavali Celebration: ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6(1)

Bolar ಶಾಲೆ ಮಕ್ಕಳಿಂದ ಪರಿಸರ ಸ್ನೇಹಿ ಗೂಡುದೀಪ

Untitled-1

Pilikula ನಿರ್ಸಗಧಾಮ: ಎರಡು ಎಲೆಕ್ಟ್ರಿಕ್‌ ವಾಹನಗಳು ಬೆಂಕಿಗಾಹುತಿ 

man-a

Surathkal: ಕೆರೆ ಕಾಮಗಾರಿಯ ವೇಳೆ ಬಿದ್ದು ಕಾರ್ಮಿಕ ಮೃತ್ಯು

Untitled-1

Surathkal: ಮಹಿಳಾ ಸೆಕ್ಯುರಿಟಿ ಗಾರ್ಡ್‌ ನಾಪತ್ತೆ

12

Nileshwara ಪಟಾಕಿ ಅವಘಡ ಮಂಗಳೂರಿನ ಆಸ್ಪತ್ರೆಯಲ್ಲಿ ಮೂವರ ಸ್ಥಿತಿ ಗಂಭೀರ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ

Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ

Amaran: ಮೇಜರ್ ಮುಕುಂದ್ ಆಗಿ ತೆರೆ ಮೇಲೆ ಜೀವಿಸಿದ ಶಿವಕಾರ್ತಿಕೇಯನ್: ಹೇಗಿದೆ ಸಿನಿಮಾ?

Amaran: ಮೇಜರ್ ಮುಕುಂದ್ ಆಗಿ ತೆರೆ ಮೇಲೆ ಜೀವಿಸಿದ ಶಿವಕಾರ್ತಿಕೇಯನ್: ಹೇಗಿದೆ ಸಿನಿಮಾ?

Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು

Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.