Kollur: ಕಿರುಸೇತುವೆ ಸಂಪೂರ್ಣ ಕೆಸರುಮಯ; ರಸ್ತೆ ತುಂಬಾ ಹೊಂಡಗುಂಡಿ

ಅಪೂರ್ಣ ಕಾಮಗಾರಿಯಿಂದ ಸಂಚಾರ ಸಂಕಷ್ಟ; ಆಗಾಗ ವಾಹನ ದಟ್ಟಣೆ

Team Udayavani, Oct 31, 2024, 1:36 PM IST

4

ಕೊಲ್ಲೂರು: ಇಲ್ಲಿನ ಸ್ವಾಗತ ಗೋಪುರ ಮಾರ್ಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಸಾಗುವ ರಾ. ಹೆದ್ದಾರಿಯ ಮುಖ್ಯ ರಸ್ತೆಯ ಬಳಿ ನಿರ್ಮಿಸಲಾದ ನೂತನ ಕಿರುಸೇತುವೆ ಹೊಂಡದಿಂದ ಕೂಡಿದ್ದು, ಆ ವ್ಯಾಪ್ತಿಯಲ್ಲಿ ಡಾಮರು ಕಾಮಗಾರಿ ನಡೆಸದಿರು ವುದು ಸುಗಮ ವಾಹನ ಸಂಚಾರಕ್ಕೆ ತೊಡಕಾಗಿದೆ.

ಕೆಸರುಮಯ ಮಾರ್ಗ
ಸೇತುವೆ ನಿರ್ಮಾಣ ಹಂತದಲ್ಲಿ ಅಲ್ಲಿನ ಪರಿಸರದ ಮಣ್ಣನ್ನು ಅಗೆದು ಮುಖ್ಯರಸ್ತೆಯ ಅಂಚಿಗೆ ಎಸೆದಿರುವುದು ಸುರಿಯುತ್ತಿರುವ ಮಳೆಯ ಈ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಕೆಸರು ಮಯವಾಗಿ ದ್ವಿಚಕ್ರ ವಾಹನ ಸಹಿತ ಇತರ ವಾಹನದಲ್ಲಿ ಸಂಚರಿಸುವವರು ಪ್ರಯಾಸದ ಪ್ರಯಾಣದಲ್ಲಿ ಸಾಗಬೇಕಾಗಿದೆ.

ಆಮೆಗತಿ ಡಾಮರು ಕಾಮಗಾರಿ
ಸ್ವಾಗತ ಗೋಪುರದ ಬಳಿಯ ಮಾಸ್ತಿಕಟ್ಟೆಯಿಂದ ದಳಿವರೆಗಿನ ಮುಖ್ಯ ರಸ್ತೆಯ ಡಾಮರು ಕಾಮಗಾರಿ ನಾನಾ ವಿಘ್ನಗಳ ನಡುವೆ ಅಂತೂ ಪೂರ್ಣಗೊಂಡಿದೆ. ಆದರೆ ಹಳೆಯ ಸೇತುವೆಯನ್ನು ತೆರವುಗೊಳಿಸಿ ಆರಂಭಗೊಂಡಿದ್ದ ಕಿರುಸೇತುವೆ ನಿರ್ಮಾಣ ಕಾಮಗಾರಿಗೆ ದೀರ್ಘ‌ಕಾಲದ ಅವ  ಬೇಕಾಯಿತು. ಅರಣ್ಯ ಇಲಾಖೆ ಕಾನೂನು ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಯಿತು. ಕಂದಾಯ, ಅರಣ್ಯ ಇಲಾಖೆ ಹಾಗೂ ಸರಕಾರದ ನಡುವಿನ ಒಡಂಬಡಿಕೆಯಿಂದ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಯಿತು. ಸೇತುವೆ ನಿರ್ಮಾಣ ಕಾಮಗಾರಿ ವಿಳಂಬ ನೀತಿ ಬಗ್ಗೆ ಸುದಿನದಲ್ಲಿ ವರದಿ ಮಾಡಿದ ನಂತರ ಕಾಮಗಾರಿ ಆಮೆನಡಿಗೆಯಲ್ಲಿ ಕೊನೆಗೊಂಡಿತು. ಆದರೆ ಡಾಮರು ಕಾಣದ ಸೇತುವೆ ಸಹಿತ ಪರಿಸರ ಪ್ರತಿದಿನ ಕೊಲ್ಲೂರು ದೇಗುಲಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸುಗಮ ವಾಹನ ಸಂಚಾರಕ್ಕೆ ಎದುರಾಗಿದ್ದ ಹೊಂಡಮಯ ರಸ್ತೆಯ ಅಡ್ಡಿಆತಂಕ ಕೊನೆಗೂ ಅಂತ್ಯಗೊಂಡಿತು ಎನ್ನುವಷ್ಟರಲ್ಲಿ ಇದೀಗ ಸೇತುವೆಯ ಮೇಲ್ಗಡೆಯ ಹೊಂಡ ಡಾಮರಿಲ್ಲದ ಹೊಂಡಮಯ ಪರಿಸರ ರಸ್ತೆಯಾಯಿತು. ವಾಹನ ಸಂಚಾರಕ್ಕೆ ಬಹಳಷ್ಟು ಕಿರಿಕಿರಿ ಉಂಟುಮಾಡುತ್ತಿದೆ. ಇದಕ್ಕೊಂದು ತುರ್ತು ಪರಿಹಾರ ಕಂಡು ಕೊಳ್ಳಬೇಕಾಗಿರುವುದರಿಂದ ಇಲಾಖೆ ಹಾಗು ಗುತ್ತಿಗೆದಾರರು ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.

ಮಳೆಯಿಂದ ತೊಡಕು
ಕಿರುಸೇತುವೆ ಬಳಿ ಡಾಮರು ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು. ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತೊಡಕಾಗಿದೆ.
-ಇಲಾಖೆ ಅಧಿಕಾರಿಗಳು

ಸವಾರರಿಗೆ ಸಂಕಷ್ಟ
ವಾಹನ ಸಂಚಾರಕ್ಕೆ ತೊಡಕಾಗಿರುವ ಇಲ್ಲಿನ ಸೇತುವೆ ಬಳಿಯ ಕಾಮಗಾರಿ ಅಪೂರ್ಣಗೊಂಡಿರುವುದು ಸಾವಿರಾರು ನಿತ್ಯಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದೆ. ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾದೀತು.
-ರಮೇಶ ಗಾಣಿಗ ಕೊಲ್ಲೂರು, ತಾ.ಪಂ. ಮಾಜಿ ಸದಸ್ಯರು

2 ತಾಸು ಟ್ರಾಫಿಕ್‌ ಜಾಮ್‌
ಅ.27ರಂದು ಕೆಸರುಮಯ ಮುಖ್ಯ ರಸ್ತೆಯ ಹೊಂಡದಲ್ಲಿ ಬಸ್‌ ಸಂಚರಿಸಲಾಗದೇ ಜಾಮ್‌ ಆದ ಹಿನ್ನೆಲೆಯಲ್ಲಿ 2 ಗಂಟೆಗೂ ಮಿಕ್ಕಿ ಕಾಲ ಟ್ರಾಫಿಕ್‌ ಜಾಮ್‌ ಆಗಿ ಭಕ್ತರು ಪರದಾಡಿದರು. ಬೆಂಗಳೂರು, ಕೇರಳ ಹಾಗು ತಮಿಳುನಾಡಿನಿಂದ ಆಗಮಿಸಿದ ಭಕ್ತರಿಗೆ ಸಾಗಬೇಕಾದ ಸಮಯದ ವಿಳಂಬದಿಂದಾಗಿ ಮುಂಗಡ ಕಾಯ್ದಿರಿಸಿದ ರೈಲುಗಳಲ್ಲಿ ಸಾಗಲಾಗದೇ ಪರದಾಡಿ ದರು.ಅನೇಕರು ದುಸ್ಥಿತಿಯಲ್ಲಿರುವ ಸಂಚಾರ ಮಾರ್ಗವಾಗಿ ನಡೆದುಕೊಂಡು ಇನ್ನೊಂದು ಭಾಗದ ಟ್ಯಾಕ್ಸಿಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಒಟ್ಟಾರೆ ದಿನವಿಡೀ ವಾಹನ ಸಂಚಾರಕ್ಕೆ ಎದುರಾದ ಗೊಂದಲಮಯ ವ್ಯವಸ್ಥೆಯಿಂದಾಗಿ ಅನೇಕ ಭಕ್ತರು ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.

-ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.