Bolar ಶಾಲೆ ಮಕ್ಕಳಿಂದ ಪರಿಸರ ಸ್ನೇಹಿ ಗೂಡುದೀಪ
ವಿದ್ಯಾರ್ಥಿಗಳಲ್ಲಿ ಹುದುಗಿರುವ ಕಲೆ ಪ್ರದರ್ಶನಕ್ಕೆ ವೇದಿಕೆ
Team Udayavani, Oct 31, 2024, 1:58 PM IST
ಬೋಳಾರ: ದೀಪಗಳ ಹಬ್ಬಕ್ಕೆ ನಾಡು ರಂಗೇರುತ್ತಿದೆ. ಎಲ್ಲೆಲ್ಲೂ ದೀಪಾವಾಳಿಯ ತಯಾರಿ ಗೂಡು ದೀಪ, ವಿದ್ಯುತ್ ದೀಪ ಹಾಗೂ ಇನ್ನಿತರ ಅಲಂಕಾರಕ್ಕೆ ಬಳಸುವ ವಸ್ತುಗಳ ಖರೀದಿ ಹಾಗೂ ಮಾರಾಟ ಜೋರಾಗಿದೆ. ಬಗೆಬಗೆಯ ಗೂಡುದೀಪಗಳು ಗ್ರಾಹಕರನ್ನು ಸೆಳೆಯು ತ್ತಿದ್ದರೆ, ಬೋಳಾರ ಸರಕಾರಿ ಶಾಲೆಯ ಸಹ ಶಿಕ್ಷಕಿ ಸುಜಾತಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಾವೇ ಗೂಡುದೀಪಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಬಣ್ಣ ಬಣ್ಣದ ಕಾಗದಗಳನ್ನು ಬಳಸಿ ಕೊಂಡಿರುವ ವಿದ್ಯಾರ್ಥಿಗಳು ಅವುಗಳಿಂದ ಗೂಡುದೀಪಗಳನ್ನು ತಯಾರಿಸಿದ್ದಾರೆ. ಪ್ರತಿ ವರ್ಷ ತರಹೆವಾರು ಗೂಡುದೀಪ ತಯಾರಿಸುವುದನ್ನು ರೂಢಿಸಿಕೊಂಡಿದ್ದಾರೆ. ಅಧ್ಯಾಪಕರ ಸಹಕಾರ ಹಾಗೂ ಮಾರ್ಗ ದರ್ಶನದಿಂದ ವಿದ್ಯಾರ್ಥಿಗಳಲ್ಲಿ ಹುದು ಗಿರುವ ಕಲೆಗೆ ವೇದಿಕೆ ದೊರೆತಂತಾಗಿದೆ.
ವಿದ್ಯಾರ್ಥಿಗಳು ಶಾಲೆಯಲ್ಲಿ ತಯಾರಿ ಸುವ ಗೂಡುದೀಪಗಳು ಪರಿಸರ ಸ್ನೇಹಿಯಾಗಿವೆ. ಬಣ್ಣದ ಕಾಗದ, ಡ್ರಾಯಿಂಗ್ ಶೀಟ್, ಚಾರ್ಟ್ ಬಳಸಿ ಗೂಡುದೀಪ ತಯಾರಿಸುತ್ತಾರೆ. ಇದರಿಂದ ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿಯಾಗದು. ಹಬ್ಬ ಮುಗಿದ ಬಳಿಕ ಗೂಡುದೀಪಗಳ ವಿಲೇವಾರಿ ಕೂಡ ಸುಲಭ. ಎಲ್ಲೆಂದರಲ್ಲಿ ಎಸೆದು ಪರಿಸರಕ್ಕೆ ಮಾರಕವಾಗುವುದು ತಪ್ಪಲಿದೆ.
ನೋ ಬ್ಯಾಗ್ ಡೇ/ಕಸದಿಂದ ರಸ ತಯಾರಿ
ಸರಕಾರದ ಸೂಚನೆಯಂತೆ ತಿಂಗಳಲ್ಲಿ ಒಂದು ಶನಿವಾರ ನೋ ಬ್ಯಾಗ್ ಡೇ ಆಚರಿಸಲಾಗುತ್ತದೆ. ಅದೇ ದಿನ ಗೂಡು ದೀಪಗಳನ್ನು ತಯಾರಿಸಲಾಗಿದೆ. ಅಲ್ಲದೆ ವಾರದಲ್ಲಿ 3 ದಿನ ಸಾಮಾಜಿಕ ಉಪಯುಕ್ತ ಉತ್ಪಾದನ ಕಾರ್ಯ ನಡೆಸಲಾಗುತ್ತದೆ. ಅಂದು ಕಸದಿಂದ ರಸ ತಯಾರಿ, ಬಿಸಾಕುವ ವಸ್ತುಗಳಿಂದ ವಿವಿಧ ಅಲಂಕಾರಿಕೆಗಳನ್ನು ವಿದ್ಯಾರ್ಥಿಗಳು ನಡೆಸುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕಿ ಮಾಲತಿ ತಿಳಿಸಿದ್ದಾರೆ.
ಪ್ರೋತ್ಸಾಹ ಮುಖ್ಯ
11 ವರ್ಷಗಳ ಹಿಂದೆ ಬೋಳಾರ ಶಾಲೆಗೆ ಶಿಕ್ಷಕಿ ಯಾಗಿ ಸೇರ್ಪಡೆಗೊಂಡು ನಿರಂತರವಾಗಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿ ಕೊಂಡು ಬರುತ್ತಿದ್ದೇನೆ. ಮುಖ್ಯ ಶಿಕ್ಷಕಿ ಹಾಗೂ ಇತರ ಶಿಕ್ಷಕರ ಸಹಕಾರದೊಂದಿಗೆ ಗೂಡು ದೀಪ ತಯಾರಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಪಠ್ಯ ವಿಚಾರಗಳೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿಗಳ ಆಸಕ್ತಿಯ ವಿಚಾರ ಬೆಳಕಿಗೆ ಬರಲಿದೆ.
-ಸುಜಾತಾ ಏಕನಾಥ್, ಸಹಶಿಕ್ಷಕಿ
ಗೂಡು ದೀಪಕ್ಕೆ 35 ರೂಪಾಯಿ!
ಅಂಗಡಿಗಳಲ್ಲಿ ಭಿನ್ನ ವಿಭಿನ್ನವಾಗಿ ಗೂಡುದೀಪಗಳನ್ನು ಮಾರಾಟ ಮಾಡಲಾಗು ತ್ತಿದೆ. ಅವುಗಳ ಮೌಲ್ಯ ವಿಭಿನ್ನವಾಗಿರುತ್ತದೆ. ಆದರೆ ವಿದ್ಯಾರ್ಥಿಗಳು ತಯಾರಿಸುವ ಗೂಡು ದೀಪ ಗಳ ಮೌಲ್ಯವೂ ಕಡಿಮೆಯೆ. 1 ಗೂಡು ದೀಪ ತಯಾರಿಗೆ ತಗಲುವ ಖರ್ಚು ಕೇವಲ 35 ರೂ. ಅಲ್ಲದೆ ತಾವೇ ತಯಾರಿಸಿರುವ ಗೂಡು ದೀಪ ಎನ್ನುವ ಖುಷಿಯು ಕೂಡ ವಿದ್ಯಾರ್ಥಿಗಳಿಗೆ ಸಿಗುತ್ತದೆ.
30 ಗೂಡು ದೀಪಗಳು ತಯಾರಿ
ಬೋಳಾರ ಸರಕಾರಿ ಶಾಲೆಯಲ್ಲಿ ಒಟ್ಟು 70 ಮಕ್ಕಳಿದ್ದು ಈ ಪೈಕಿ 5, 6, 7ನೇ ತರಗತಿಯ ವಿದ್ಯಾರ್ಥಿಗಳು ಗೂಡು ದೀಪ ತಯಾರಿಸಿದ್ದಾರೆ. ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಸಹಕಾರದೊಂದಿಗೆ ಗೂಡು ದೀಪಗಳನ್ನು ತಯಾರಿಸಿದ್ದು ಒಟ್ಟು 30 ಗೂಡು ದೀಪಗಳನ್ನು ಶಾಲೆಯಲ್ಲಿ ಅಲಂಕಾರಿಕೆಯಾಗಿ ಬಳಸಲಾಗಿದೆ. ಉಳಿದಂತೆ ಮನೆಯ ಬಳಕೆಗಾಗಿ ಮನೆಯಲ್ಲೇ ವಿದ್ಯಾರ್ಥಿಗಳು ತಯಾರಿಸುತ್ತಿದ್ದು, ವಿದ್ಯಾರ್ಥಿಗಳು, ಪೋಷಕರಲ್ಲೂ ಪರಿಸರ ಜಾಗೃತಿ ಮೂಡಿಸುವ ಕೆಲಸವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.