Amaran: ಮೇಜರ್ ಮುಕುಂದ್ ಆಗಿ ತೆರೆ ಮೇಲೆ ಜೀವಿಸಿದ ಶಿವಕಾರ್ತಿಕೇಯನ್: ಹೇಗಿದೆ ಸಿನಿಮಾ?
Team Udayavani, Oct 31, 2024, 4:42 PM IST
ಚೆನ್ನೈ: ಕಾಲಿವುಡ್‌ನಲ್ಲಿ ಈ ವಾರ ಬಹುನಿರೀಕ್ಷಿತ ಸಿನಿಮಾ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ʼಅಮರನ್ʼ (Amaran) ಸಿನಿಮಾ ಗುರುವಾರ (ಅ.31ರಂದು) ರಿಲೀಸ್ ಆಗಿದೆ.
ಶಿವಕಾರ್ತಿಕೇಯನ್ (Sivakarthikeyan) ಮತ್ತು ಸಾಯಿ ಪಲ್ಲವಿ (Sai Pallavi) ಮುಖ್ಯ ಭೂಮಿಕೆಯ ʼಅಮರನ್ʼ ಸಿನಿಮಾ ನೋಡಿ ಕೆಲ ಪ್ರೇಕ್ಷಕರು ಕಣ್ಣೀರಿಟ್ಟಿದ್ದಾರೆ. ನೈಜ ಕಥೆಯನ್ನು ಮನಮುಟ್ಟುವಂತೆ ನಿರ್ದೇಶಕರು ತೆರೆಮೇಲೆ ತಂದಿದ್ದಾರೆ.
ಮೇಜರ್ ಮುಕುಂದ್ ವರದರಾಜನ್ ಅವರ ಸಾಹಸಗಾಥೆಯನ್ನು ಒಳಗೊಂಡಿರುವ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಯೋಧನಾಗಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ನೋಡಿದ ಪ್ರೇಕ್ಷಕರು ಏನು ಹೇಳಿದ್ದಾರೆ ಎನ್ನುವುದನ್ನು ʼಎಕ್ಸ್ʼ ರಿವ್ಯೂ ಮೂಲಕ ನೋಡಿಕೊಂಡು ಬರೋಣ ಬನ್ನಿ..
ಇದನ್ನೂ ಓದಿ: Bagheera Movie : ʼಬಘೀರʼ ನೋಡಿ ಹಬ್ಬದ ಬಾಡೂಟ ಸವಿದ ಸಿನಿಮಂದಿ.. ಹೇಗಿದೆ ಸಿನಿಮಾ?
ಇದು ಮೇಜರ್ ಮುಕುಂದ್ ಅವರಿಗೆ ಸಲ್ಲುವ “ಪರಿಪೂರ್ಣ ಗೌರವ”. ಶಿವಕಾರ್ತಿಕೇಯನ್ ತನ್ನ ಪಾತ್ರಕ್ಕೆ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ. ಸಾಯಿಪಲ್ಲವಿ ಇಂಧೂ ಆಗಿ ಇಷ್ಟವಾಗುತ್ತಾರೆ. ರೊಮ್ಯಾಂಟಿಕ್ ದೃಶ್ಯಗಳು ಇಷ್ಟವಾಗುತ್ತದೆ. ಮೊದಲಾರ್ಥ ಡಿಸೆಂಟ್ ಆಗಿದೆ. ದ್ವಿತೀಯಾರ್ಧ ಭಾವನಾತ್ಮಕವಾಗಿ ಮೂಡಿಬಂದಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಸಿನಿಮಾದ ಕೆಲ ದೃಶ್ಯಗಳು ರೋಮಂಚನವಾಗಿಸುತ್ತದೆ. ಶಿವಕಾರ್ತಿಕೇಯನ್, ಸಾಯಿಪಲ್ಲವಿ ಅಭಿನಯ ಇಷ್ಟವಾಗುತ್ತದೆ ಎಂದು 5ರಲ್ಲಿ 4 ಸ್ಟಾರ್‌ಗಳನ್ನು ನೀಡಿದ್ದಾರೆ.
ಪ್ರತಿ ಸೆಕೆಂಡ್ ಸಾಯಿ ಪಲ್ಲವಿ ಆನ್‌ಸ್ಕ್ರೀನ್ ತುಂಬಾ ಚೆನ್ನಾಗಿ ಕಾಣುತ್ತಾರೆ. ನನ್ನ ಹೃದಯ ಅವಳಿಗಾಗಿ ಹಂಬಲಿಸಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.
#Amaran review
Content rating 5/5
Commercial rating 4/5Extremely emotional movie!
Felt super moved.Few dips and pacing issues in the second half but the super emotional climax makes you forget everything!
Sai Pallavi’s subtle climax act is peak acting!#SK becomes a 355…
— Nishant Rajarajan (@Srinishant23) October 31, 2024
ಅಮರನ್ ಭಾರತೀಯ ಸೇನೆಯ ಕುರಿತಾದ ಸಾಮಾನ್ಯ ಚಲನಚಿತ್ರವಲ್ಲ; ಇದು ಅನೇಕ ಭಾವನೆಗಳನ್ನು ಹೊಂದಿರುವ ಸಿನಿಮಾವಾಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ʼಅಮರನ್ʼ ನಿಸ್ಸಂದೇಹವಾಗಿ ಇತ್ತೀಚೆಗೆ ತೆರೆಗೆ ಬಂದ ಅತ್ಯುತ್ತಮ ಬಯೋಪಿಕ್ ಚಲನಚಿತ್ರಗಳಲ್ಲಿ ಒಂದಾಗಿದೆ. ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಸಾಧಾರಣವಾದ ಅಭಿನಯವನ್ನು ಮಾಡಿದ್ದಾರೆ. ಅವರ ಪಾತ್ರಗಳನ್ನು ಮರೆಯಲಾಗದಂತೆ ಮಾಡಿದ್ದಾರೆ. ತೆರೆಯ ಮೇಲಿನ ಅವರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಇದು ಅತ್ಯಂತ ಭಾವನಾತ್ಮಕ ಸಿನಿಮಾವಾಗಿದೆ. ದ್ವಿತೀಯಾರ್ಧದಲ್ಲಿ ಕೆಲ ದೃಶ್ಯಗಳು ಸ್ಲೋ ಆಗಿದ್ದರೂ ಸೂಪರ್ ಎಮೋಷನಲ್ ಕ್ಲೈಮ್ಯಾಕ್ಸ್ ಎಲ್ಲವನ್ನೂ ಮರೆತುಬಿಡುವಂತೆ ಮಾಡುತ್ತದೆ. ಶಿವಕಾರ್ತೀಕೇಯನ್ ಅದ್ಭುತ ನಟನೆಂದು ಮತ್ತೊಮೆ ಸಾಬೀತು ಮಾಡಿದ್ದಾರೆ. ಅವರು ನಿಮ್ಮನ್ನು ನಗಿಸುತ್ತಾರೆ. ಭಾವುಕರಾಗಿಸುತ್ತಾರೆ. ದೇಶಭಕ್ತಿಯನ್ನು ಅನುಭವಿಸುತ್ತಾನೆ. ಅವನು ನಿಮ್ಮನ್ನು ನಗುವಂತೆ ಮಾಡುತ್ತಾನೆ, ಅಳುತ್ತಾನೆ, ಭಾವುಕನಾಗುತ್ತಾನೆ ಮತ್ತು ದೇಶಭಕ್ತಿಯನ್ನು ಅನುಭವಿಸುತ್ತಾನೆ. ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಫ್ಯಾಮಿಲಿ ಅಡಿಯನ್ಸ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ಮೇಲೆ ಆವಲಂಬಿತವಾಗಿದೆ. ಇದೊಂದು ಕಂಟೆಂಟ್ ಇರುವ ಸಖತ್ ಸಿನಿಮಾವೆಂದು 5ಕ್ಕೆ5 ರೇಟಿಂಗ್ ಕೊಟ್ಟು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.
SK mass, GV mass 🔥🔥 career best film for SK, best film in 2024 🔥🔥🔥 Sai pallavi dhan aalu, SK – Sai pallavi morattu chemistry 🥰🥰🥰
Family scenes, emotions, everything worked very well, too gooddd.
SK aale maari poyi nikkuraan, morattu sambavam 👏🏼💪🏼
— T H A N G A M (@thangamOG2) October 31, 2024
ಇದು ಶಿವಕಾರ್ತಿಕೇಯನ್ ಅವ ಕೆರಿಯರ್ ನ ಬೆಸ್ಟ್ ಸಿನಿಮಾ. ಸಾಯಿ ಪಲ್ಲವಿ ಮನಗೆದ್ದಿದ್ದಾರೆ. ಫ್ಯಾಮಿಲಿ ಸೆಂಟಿಮೆಂಟ್, ಎಮೋಷನ್ಸ್ ಎಲ್ಲವೂ ಸಿನಿಮಾದಲ್ಲಿ ಸರಿಯಾಗಿ ಬೆರೆತಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ʼಅಮರನ್ʼ ಕಾಲಿವುಡ್‌ನಲ್ಲಿ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.
ರಾಜಕುಮಾರ್ ಪೆರಿಯಸಾಮಿ ನಿರ್ದೇಶನದ ಸಿನಿಮಾದಲ್ಲಿ ಸಾಯಿ ಪಲ್ಲವಿ, ಭುವನ್ ಅರೋರಾ, ರಾಹುಲ್ ಬೋಸ್ ಮುಂತಾದವರು ನಟಿಸಿದ್ದಾರೆ.
#Amaran – A Perfect tribute to Major Mukund. SK’s transformation & Perf Super. Sai Pallavi as Indu is Awesome. Romance scenes r beautiful. GVP’s BGM, Prodn Values, Visuals r strength. Familiar Scenes & Length r on d downside. Neat 1st Hlf & Decent 2nd with Emotional Climax. GOOD!
— Christopher Kanagaraj (@Chrissuccess) October 31, 2024
ʼಅಮರನ್ʼ ಶಿವ ಆರೂರ್ ಮತ್ತು ರಾಹುಲ್ ಸಿಂಗ್ ಅವರ ʼಇಂಡಿಯಾಸ್ ಮೋಸ್ಟ್ ಫಿಯರ್ ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿʼ ಕೃತಿಯ ರೂಪಾಂತರವಾಗಿದೆ. ಇದು ಮೇಜರ್ ವರದರಾಜನ್ ಅವರ ಶೌರ್ಯದ ಕಥೆಯನ್ನೊಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagheera Movie : ʼಬಘೀರʼ ನೋಡಿ ಹಬ್ಬದ ಬಾಡೂಟ ಸವಿದ ಸಿನಿಮಂದಿ.. ಹೇಗಿದೆ ಸಿನಿಮಾ?
OTT Release: ರಜಿನಿಕಾಂತ್ ʼವೆಟ್ಟೈಯನ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Jai Hanuman: ತೆಲುಗು ನಿರ್ದೇಶಕನ ಸಿನಿಮಾದಲ್ಲಿ ʼಹನುಮಾನ್ʼ ಆದ ಕನ್ನಡದ ರಿಷಬ್ ಶೆಟ್ಟಿ
Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ
Nishad Yusuf; ಕಂಗುವ ಖ್ಯಾತಿಯ ಸಂಕಲನಕಾರ 43 ರ ಹರೆಯದಲ್ಲೇ ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.