Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

ಹೂವು ಅರಳಲು  ಭಗವಾನ್‌ ಸೂರ್ಯದೇವರ ಬೆಳಕು ಬೇಕೇ  ಬೇಕು

Team Udayavani, Oct 31, 2024, 6:05 PM IST

Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

ದೀಪಾವಳಿ ಅಂದರೆ ಒಬ್ಬರಿಗೊಬ್ಬರು ಒಳ್ಳೆಯದನ್ನು ಹಂಚಿಕೊಳ್ಳುವ ಸುದಿನ. ಬದುಕಿನ ಒಳಗೂ-ಹೊರಗೂ ಬಣ್ಣದ ಬೆಳಕು ಹರಿಸಿ ಸಂತೋಷ, ಆತ್ಮವಿಶ್ವಾಸ ಹೆಚ್ಚಿಸುವ ಹೊಸತನದೆಡೆಗೆ ತುಡಿಯುವಂತೆ ಮಾಡುವ ಹಬ್ಬ. ಇಲ್ಲಿ ಬೆಳಕು ಬರೀ ಕಣ್ಣಿಗಲ್ಲ
ಮುಚ್ಚಿದ ಮನದ ಬಾಗಿಲೊಳಗೆ ಬೆಳಕಿನ ಕಿರಣಗಳು ಸೋಕಿ, ಹೊಸ ಬೆಳಕು ಚೆಲ್ಲಿ ಹಳೆಯ ನೋವು ಸಂಕಟಗಳನ್ನು ಕಿತ್ತು ಹಾಕಿ
ಸಂಭ್ರಮಕ್ಕೆ ಕಾರಣವಾಗುತ್ತದೆ. ಬೆಳಗುವ ಪ್ರತಿ ದೀಪದಲ್ಲಿ ನಾಳಿನ ಭರವಸೆಯ ಬೆಳಕಿದೆ. ಆದ್ದರಿಂದ ಪ್ರತಿಯೊಬ್ಬರ ಮನ ಮನದಲ್ಲೂ ಜ್ಞಾನವೆಂಬ ದೀಪ ನಿರಂತರವಾಗಿರಲಿ ಎಂಬುದೇ ದೀಪಾವಳಿ ಹಬ್ಬದ ಸಂದೇಶ.

ದೀಪ ತಾನುರಿದು ಎಲ್ಲರಿಗೂ ಬೆಳಕು ನೀಡುತ್ತದೆ. ಹಾಗೆ ನಾವೆಲ್ಲರೂ ಮಾನವೀಯತೆಯಿಂದ ಬದುಕಿ ನಮ್ಮ ಜೀವನವು ಸದಾ ದೀಪದಂತೆ ಬೆಳಗಲಿ.

ಬದುಕು ಬೆಳಗಿಸುವ ಹಣತೆ: ದೀಪಾವಳಿ ಭಾರತೀಯರ ಪಾಲಿನ ದೊಡ್ಡ ಹಬ್ಬಗಳಲ್ಲಿ ಒಂದು. “ಅವಳಿ’ ಎಂದರೆ ಮಾಲೆ, ಸಾಲು ಎಂದರ್ಥ. ಹಬ್ಬದ ದೃಷ್ಟಿಯಿಂದ ನೋಡಿದರೆ ದೀಪಾವಳಿ, ದೀಪಗಳ ಸಾಲಿನಂತೆ ಹಬ್ಬಗಳ ಸಾಲೂ ಹೌದು. ಭಾಗ್ಯ ತರುವ ಹಬ್ಬ ಈ ದೀಪಾವಳಿ. ರೈತರಿಗೂ ಕೂಡ ಬೆಳೆದು ಹಾಲುಗಾಳು ತುಂಬಿ ನಿಂತ ಪೈರು ಒಣಗಿ, ಕಾಳು ತರುವ ಸುಗ್ಗಿಯ ದಿನಗಳು ಹತ್ತಿರ ಬಂದವು ಎಂದು ಸೂಚನೆ ಕೊಡುವ ಸಮಯ ಇದು.

ದೀಪವು ಬೆಳಕಿನ ಸಂಕೇತ. ಬೆಳಕು ಜ್ಞಾನದ ಸಂಕೇತ. ಅಜ್ಞಾನದ ಕತ್ತಲನ್ನು ಹೊಡೆದೋಡಿಸಿ ಜ್ಞಾನವೆಂಬ ದೀಪ ಬೆಳಗಬೇಕಿದೆ. “ನಹಿ ಜ್ಞಾನೇನ ಸದೃಶಂ’ ಎಂಬುದು ನಮ್ಮ ಪುರಾತನ ವೇದವಾಕ್ಯ. ಇದರ ಅರ್ಥ”ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ’ ಎಂದು. ಸರ್ವಜ್ಞನು ಕೂಡ ಹೀಗೆ ಹೇಳುತ್ತಾನೆ: ವಿದ್ಯೆಯುಳ್ಳವನ ಮುಖ ಮುದ್ದು ಬರುವಂತಿಕ್ಕು ವಿದ್ಯೆಯಿಲ್ಲದನ ಬರಿಮುಖವು
ಹಾಳೂರ ಹದ್ದಿನಂತಿಕ್ಕು ಹೀಗೆ, ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕು

ಬೀರುವುದೇ ದೀಪಾವಳಿಯ ನಿಜವಾದ ಅರ್ಥ. ಮನೆಮನೆಯಲ್ಲೂ-ಮನಮನದಲ್ಲೂ ಜ್ಞಾನದ ದೀಪ ನಿರಂತರ ಬೆಳಗಲಿ ಎಂಬುದೇ ದೀಪಾವಳಿಯ ಸಂದೇಶ. ಹಬ್ಬಗಳೆಂದರೆ ಕೇವಲ ಆಚರಣೆಗಳಲ್ಲ. ಎಲ್ಲ ಹಬ್ಬಗಳಿಗೂ ಒಂದೊಂದು ಪ್ರಾಮುಖ್ಯತೆ
ಇದೆ.

ಆಧ್ಯಾತ್ಮಿಕತೆಯ ಮೆರುಗಿದೆ. ನಾವು ಆ ಅಲೌಕಿಕ ಅರ್ಥವನ್ನು ಗ್ರಹಿಸುವ ಗೋಜಿಗೆ ಹೋಗದೆ ಎಲ್ಲವನ್ನೂ ತೋರಿಕೆಯ ಹಮ್ಮಿಗಾಗಿ, ಕೇವಲ ನಮ್ಮ ಆಡಂಬರಕ್ಕಾಗಿ ಹಬ್ಬಗಳನ್ನು ಆಚರಿಸತೊಡಗಿದ್ದೇವೆ.

ದುಷ್ಟಶಕ್ತಿಯ ಸಂಹಾರವಾದ ದಿನ:
ಅಶ್ವಿ‌ನಿ ಮಾಸದ ತ್ರಯೋದಶಿಯಿಂದ ಆರಂಭಗೊಳ್ಳುವ ಈ ದೀಪಾವಳಿ ಕಾರ್ತಿಕದ ಪಂಚಮಿಯವರೆಗೆ ನಡೆಯುತ್ತದೆ. ನರಕ
ಚತುರ್ದಶಿಗೆ ವಿಶೇಷ ಹಿನ್ನೆಲೆಯಿದೆ.

ಇದು ದುಷ್ಟ ಶಕ್ತಿಯ ಸಂಹಾರವಾದ ದಿನ. ನರಕಾಸುರನ ವಧೆ ಮಾಡಿ, ಅವನು ಸೆರೆಯಲ್ಲಿರಿಸಿದ ಹದಿನಾರು ಸಾವಿರ ಸ್ತ್ರೀಯರನ್ನು ಬಿಡುಗಡೆಗೊಳಿಸಿ ಅವರನ್ನು ವಿಧವೆಯರಾಗಿಸದೆ, ಮರುಮದುವೆಯಾಗಿ ಬಾಳು ಕೊಟ್ಟು ಹಿಂದಿರುಗಿದ ಶ್ರೀ ಕೃಷ್ಣನಿಗೆ ಆರತಿಯೆತ್ತಿ ಸಂಭ್ರಮಿಸಿದ ದಿನವಿದು. ಅಮಾವಾಸ್ಯೆಯಂದು ವ್ಯಾಪಾರಸ್ಥರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆ ಆರಂಭಿಸುತ್ತಾರೆ. ಧನ ದೇವತೆ “ಲಕ್ಷಿ$¾à’ಯನ್ನು ಇದೇ ಸಮಯದಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ. ಮನೆ ಮನೆಗಳಲ್ಲಿ ಕೂಡ ಲಕ್ಷ್ಮೀ ದೇವಿಯ ಪೂಜೆ ನಡೆಯುತ್ತದೆ.

ಬಲಿಯನ್ನು ಮರೆಯುವುದುಂಟೆ?
ಬಲಿಯು ಒಂದು ದಿನದ ಮಟ್ಟಿಗೆ ಪಾತಾಳದಿಂದ ಭೂಲೋಕಕ್ಕೆ ಬಂದು ಪೂಜೆಗೊಳ್ಳುವ ದಿನವೇ ಬಲಿಪಾಡ್ಯಮಿ. ಭಾವಬಿದಿಗೆ ಅಥವಾ ಭಾವುಬೀಜ ಹಾಗೂ ಅಕ್ಕನ ತದಿಗೆ ಇವು ಸೋದರ ಸೋದರಿಯರ ಸಂಬಂಧಗಳನ್ನುಬೆಸೆಯುವ ಹಬ್ಬಗಳು. ಅಮ್ಮನ ಚೌತಿಯಂದು ಅಜ್ಜಿಯರ ಹಬ್ಬ. ಕೊನೆಯದಾಗಿ ಕಡೆಪಂಚಮಿ. ಇದು ಹಬ್ಬದ ಕೊನೆಯ ದಿನ. ದೀಪಾವಳಿ ಅಂದರೆ ಪಟಾಕಿ ಹೊಡೆಯುವುದು ಎಂದಷ್ಟೇ ಅರ್ಥವಲ್ಲ, ಇದು ದೀಪಗಳ ಹಬ್ಬ. ಬೆಳಕಿನ ಹಬ್ಬ. ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ ಇದೆ. ಮನೆ ಮನೆಗಳ ಬಾಗಿಲಲ್ಲಿ ಮಣ್ಣಿನ ಹಣತೆ ಹಚ್ಚಿ ಮನೆಮಂದಿಯೆಲ್ಲ ಸಂಭ್ರಮಿಸುವುದನ್ನು ನೋಡಿಯೇ ಆನಂದಿಸಬೇಕು.

ಹಬ್ಬಗಳಲ್ಲಿ ಬಹಳ ವಿಶಿಷ್ಟ ದೀಪಾವಳಿ:
ದೀಪಾವಳಿ ಹಬ್ಬ ನಮ್ಮ ಭಾರತೀಯ ಹಬ್ಬಗಳಲ್ಲಿ ಬಹಳ ವಿಶಿಷ್ಟವಾದುದು. ದೀಪಾವಳಿ ಹಬ್ಬವನ್ನು “ಹಬ್ಬಗಳ ರಾಜ’
ಎನ್ನುತ್ತಾರೆ. ದೀಪಾವಳಿ ಮಂಗಳಕರವಾದ ದೀಪಗಳ ಹಬ್ಬ. ಎಲ್ಲೆಲ್ಲೂ ದೀಪಗಳ ಸಾಲು ಹಾಗಾಗಿ ಬೆಳಕಿನ ಹಬ್ಬ ಎನ್ನುತ್ತಾರೆ.
ಪ್ರಗತಿಯ ಸಂಕೇತ ದೀಪ.

ಬೆಳಕು ಇಲ್ಲದೆ ಮಾನವನ ದಿನಚರಿಯೇ ಇಲ್ಲ. ನಾವು ಭಾರತೀಯರು ಅಗ್ನಿಯ ಆರಾಧಕರು. ಜೀವರಾಶಿಗಳಿಗೆ ಬೆಳಕು ಬೇಕು. ಉದಾಹರಣೆಗೆ ಹೂವು ಅರಳಲು  ಭಗವಾನ್‌ ಸೂರ್ಯದೇವರ ಬೆಳಕು ಬೇಕೇ  ಬೇಕು. ಬೆಳಕು ಜ್ಞಾನದ ಸಂಕೇತ ಕತ್ತಲು
ಅಜ್ಞಾನದ ಸಂಕೇತ. ಈ ದೀಪಾವಳಿಯಲ್ಲಿ ಮನೆ-ಮನೆಯಲ್ಲೂ ದೀಪ ಬೆಳಗಿಸಿ ಮಾನವನ ಅಜ್ಞಾನವೆಂಬ ಕತ್ತಲನ್ನು
ದೂರಮಾಡಿ ಸುಜ್ಞಾನವೆಂಬ ಬೆಳಕನ್ನು ಆಸ್ವಾದಿಸೋಣ.

ಈ ಹಬ್ಬಕ್ಕಿದೆ ಪೌರಾಣಿಕ ಹಿನ್ನೆಲೆ:
ರಾಕ್ಷಸಿಗುಣ ಹೊಂದಿದ್ದ ನರಕಾಸುರ ಹದಿನಾರು ಸಾವಿರ ಕನ್ಯೆಯರನ್ನು ಬಂಧನದಲ್ಲಿರಿಸಿ ಜನತೆಗೆ ನಾನಾ  ಉಪಟಳ ನೀಡುತ್ತಿದ್ದ. ಈತ ಮೂಲತಃ ಮಹಾವಿಷ್ಣುವಿನ ಅವತಾರದಲ್ಲಿ ಭೂದೇವಿಯ ಪುತ್ರನಾಗಿ ಜನಿಸಿದ್ದು ಆತ ತಪಸ್ಸು ಮಾಡಿ ತನ್ನ ಮರಣ ತನ್ನ ತಾಯಿಯಿಂದಲೇ ಬರಲಿ ಎಂಬ  ವಿಚಿತ್ರ ವರ ಪಡೆದಿದ್ದ. ತಾನಾಗಿಯೇ ತನ್ನ ನೀಚ ನಡವಳಿಕೆಯಿಂದ ಸಾವನ್ನು
ಆಹ್ವಾನಿಸಿಕೊಂಡಿದ್ದ. ಭೂದೇವಿ ಮಹಾವಿಷ್ಣುವಿನ ಪತ್ನಿಯಾಗಿದ್ದು, ಕೃಷ್ಣಾವತಾರದಲ್ಲಿ ಭೂದೇವಿ ಸ್ವರೂಪಿಯಾದ ಸತ್ಯಭಾಮೆಯೊಡಗೂಡಿ ಶ್ರೀಕೃಷ್ಣ ನರಕಾಸುರನನ್ನು ವಧಿಸಿದ.

ಸಾಯುವಾಗ ಜ್ಞಾನೋದಯವಾಗಿ ಭಗವಂತನಲ್ಲಿ ಲೋಕದ ಜನತೆ ವರುಷಕ್ಕೊಮ್ಮೆ ನನ್ನನ್ನು ಸ್ಮರಿಸುವಂತಾಗಲಿ ದೇವಾ ಎಂದು ಪ್ರಾರ್ಥಿಸಿದ. ಅಂತೆಯೇ ನರಕಾಸುರನ ನೆನಪಿಗಾಗಿ ನರಕ ಚತುದರ್ಶಿ ಭೂಲೋಕದಲ್ಲಿ ಆಚರಿಸುವಂತಾಯಿತು. ಮನೋ ದೈಹಿಕ ಕಶ್ಮಲಕೊಳೆ ಚಿತ್ತವಿಕಾರ ದುಷ್ಟ ಕಾಮನೆಗಳ ನಿವಾರಣೆಗಾಗಿ ಈ ಎಣ್ಣೆ ಸ್ನಾನ(ಅಭ್ಯಂಗ ಸ್ನಾನ) ಮಾಡುವುದಾಗಿದೆ.

ಮಾರನೇ ದಿನ ಅಮಾವಾಸ್ಯೆ ಮಹಾಲಕ್ಷ್ಮೀಯ ಅನುಗ್ರಹಕ್ಕಾಗಿ ಪೂಜೆ ಮಾಡುವುದಾಗಿದೆ.ಇನ್ನು ಬಲಿ ಪಾಡ್ಯಮಿ ಈ ದಿನ ಮೂವತ್ಮೂರು ಕೋಟಿ ದೇವತೆಗಳ ಆವಾಸ ಸ್ಥಾನವಾಗಿರುವ ಗೋಮಾತೆ ಪೂಜಿಸುವುದು. ಗೋ ಮಾತೆಗೆ ವಂದಿಸಿ ಅವುಗಳನ್ನು ಸ್ನಾನ ಮಾಡಿಸಿ ಅರಶಿನ ಕುಂಕುಮ ಹಣೆಗೆ ಲೇಪಿಸಿ ಗೋವಿನ ಮೈಮೇಲೆ ರಂಗೋಲಿ ಬಿಡಿಸಿ ಗೋವಿಗೆ ಹೂವಿನ ಹಾರ ಹಾಕಿ ತಿನ್ನಲು ಅರಳು ಬೆಲ್ಲ, ಅಕ್ಕಿ, ಬಾಳೆಹಣ್ಣು ನೀಡಿ ಗೋ ಮಾತೆಗೆ ನಲವತ್ತೆಂಟು ಸುತ್ತು ಪ್ರದಕ್ಷಿಣೆ ಮಾಡಿ ವಂದಿಸಿ ಗೋ ಮಾತಾ ಅನುಗ್ರಹ ಪಡೆಯುವುದಾಗಿದೆ.

ಗೋಸಂವರ್ಧನ ದಿನವನ್ನಾಗಿ ಆಚರಣೆ:
ದೀಪಾವಳಿಯ ಬಲಿಪಾಡ್ಯಮಿಯನ್ನು ಗೋಸಂವರ್ಧನ ದಿನವನ್ನಾಗಿ ಆಚರಿಸುತ್ತಾರೆ. ಇದಕ್ಕೊಂದು ಪೌರಾಣಿಕ ಹಿನ್ನೆಲೆಯಿದೆ. ಶ್ರೀ ಕೃಷ್ಣ ಬೃಂದಾವನಕ್ಕೆ ಬರುವ ಮೊದಲು ಜನರೆಲ್ಲರೂ ದೇವೇಂದ್ರನನ್ನು ಪೂಜಿಸುತ್ತಿದ್ದರು.

ಭಗವಾನ್‌ ಶ್ರೀ ಕೃಷ್ಣನು ಇಂದ್ರನ ಪೂಜೆ ನಿಲ್ಲಿಸುವುದರೊಂದಿಗೆ ಬೃಂದಾವನದಲ್ಲಿ ವಿಶೇಷವಾದ ಬಹಳ ದೊಡ್ಡದಾದ
ಗೋವರ್ಧನ ಪರ್ವತದಿಂದ ಸಕಲ ಐಶ್ವರ್ಯ ಪಡೆಯುತ್ತಿರುವ ಜನರು ಇಂದ್ರನನ್ನು ಪೂಜಿಸುವ ಅಗತ್ಯವಿಲ್ಲ ಎಂದು ಶ್ರೀ ಕೃಷ್ಣ ಗೋವರ್ಧನಗಿರಿಯನ್ನು ಪೂಜಿಸುವ ವ್ಯವಸ್ಥೆ ಮಾಡಿದ. ಇಂದ್ರ ಕ್ರೋಧಗೊಂಡು ಒಂದೇ ಸಮನೆ ಭಾರಿ ಮಳೆ ಸುರಿಸಿ ಜಲಪ್ರಳಯ ಉಂಟು ಮಾಡಿದ. ಜನರೆಲ್ಲರೂ ಹಾಗೂ ಗೋವುಗಳೆಲ್ಲವೂ ಎಲ್ಲೆಂದರಲ್ಲಿ ಓಡತೊಡಗಿ ರಕ್ಷಣೆಗೆ ಭಗವಂತನಾದ ಶ್ರೀ ಕೃಷ್ಣನನ್ನು ಪ್ರಾರ್ಥಿಸಿದರು.

ಗೋರಕ್ಷಕ ಶ್ರೀಕೃಷ್ಣ: ಶ್ರೀ ಕೃಷ್ಣ ಗೋವರ್ಧನಗಿರಿಯನ್ನು ತನ್ನ ಕಿರುಬೆರಳಿನಿಂದ ಎತ್ತಿ ಹಿಡಿದು ಸಮಸ್ತ ಗೋವುಗಳನ್ನು, ಜನರನ್ನು ರಕ್ಷಿಸಿದ. ಇಂದ್ರ  ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ. ಶ್ರೀ ಕೃಷ್ಣ ಗೋವರ್ಧನ ಪರ್ವತ ಎತ್ತಿ ಗೋಕುಲ
ರಕ್ಷಿಸಿದ ನೆನಪಿಗೆ ಗೋಶಾಲೆಗಳನ್ನು ತೊಳೆದು, ಗೋವುಗಳಿಗೆ ಸ್ನಾನ ಮಾಡಿಸಿ, ಗೋವುಗಳ ಮೈಮೇಲೆ ರಂಗೋಲಿ ಬಿಡಿಸಿ ಕೊರಳಿಗೆ ಹೂವಿನ ಮಾಲೆ ಹಾಕಿ, ಗೋವುಗಳಿಗೆ ಅಕ್ಕಿ, ಬಾಳೆಹಣ್ಣು, ಬೆಲ್ಲ ಮುಂತಾದ ತಿನಿಸು ನೀಡಿ ಗೋಗ್ರಾಸ ನೀಡಿ ಪೂಜಿಸಿ ನಮಸ್ಕರಿಸುವುದು ಸಂಪ್ರದಾಯವಾಗಿ ಈ ದೀಪಾವಳಿಯ ಪಾಡ್ಯದಂದು ಗೋಸಂವರ್ಧನ ದಿನವಾಗಿ ಗೋಪೂಜೆ ಎಂಬುದಾಗಿ ಲೋಕಾದ್ಯಂತ ಭಗವದ್‌ ಭಕ್ತರು ಭಕ್ತಿ-ಶ್ರದ್ಧೆಯಿಂದ ಆಚರಿಸುವಂತಾಯಿತು.

ಗೋವಿಗಿಂತ ಪೂಜ್ಯತಮ ಪ್ರಾಣಿ ಇನ್ನೊಂದಿಲ್ಲ: ಪ್ರಾಣಿಗಳಲ್ಲಿ ಗೋವಿಗಿಂತ ಪೂಜ್ಯತಮ ಪ್ರಾಣಿ ಇನ್ನೊಂದಿಲ್ಲ. ಗೋವುಗಳನ್ನು ಗೋಮಾತೆ ಎಂದೇ ಕರೆಯುತ್ತಾರೆ. ಸರ್ವ ದೇವಾಃ ಸ್ಥಿತಾ ದೇಹೇ ಗೋಮಾತೆಯ ಶಿಖೆ ಇಂದ ನಖದವರೆಗೆ ದೇವತೆಗಳು ವಾಸಿಸುತ್ತವೆ. ಗಾವೋ ವಿಶ್ವಸ್ಯ ಮಾತರಃ ಎಂದರೆ ಸಮಗ್ರ ಪ್ರಪಂಚಕ್ಕೆ ಗೋವುಗಳು ಮಾತೃ ಸ್ವರೂಪಿಗಳು
ಎಂಬುದಾಗಿ. ಗೋಮಾತೆಯ ನಾಲ್ಕು ಕಾಲುಗಳನ್ನು ನಾಲ್ಕು ವೇದಗಳು  ಬುದಾಗಿ ಪುರಾಣಗಳಲ್ಲಿ ತಿಳಿಸಲಾಗಿದೆ. ಗೋಮಾತೆಯ ಅಮೃತಸದೃಶವಾದ ಹಾಲನ್ನು ಜಾತಿ-ಮತ-ಪಂಥ-ಹೆಣ್ಣು-ಗಂಡುಗಳೆಂಬ ಬೇದವಿಲ್ಲದೆ ಸ್ವೀಕರಿಸಿ ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತೇವೆ.

ದೀಪಾವಳಿ ಬಂತೆಂದರೆ ಸಡಗರ

ದೀಪಾವಳಿಯ ಹಿಂದಿನ ದಿನ ನೀರು ತುಂಬಿಸುವ ಸಂಪ್ರದಾಯ ಆಚರಿಸಲಾಗುತ್ತದೆ. ನೀರು ತುಂಬಿ ಸುವ ಹಂಡೆಯನ್ನು ಶುದ್ಧ ಮಾಡಿ ಸೌತೆ ಬಿಳಲು(ಬಳ್ಳಿ)ನಿಂದ ಹಾರ ಮಾಡಿ ಹಾಕಿ ಹೂವುಗಳಿಂದ ಸಿಂಗರಿಸಿ ಹಂಡೆಗೆ ರಂಗೋಲಿ ಚಿತ್ತಾರ ಬಿಡಿಸಿ ಅಲಂಕರಿಸಿ ಕುಂಕುಮ ಅರಶಿನ ಅಣಿಗೊಳಿಸಿ ಕೊಂಡು ಮನೆಯ ಯಜಮಾನಿ ಬಾವಿಯಿಂದ ನೀರು ತರುವಾಗ ದೇವರ ನಾಮ ಸ್ಮರಿಸುತ್ತ ಹಂಡೆಗೆ ನೀರು ಹಾಕಬೇಕು.

ಮನೆಯ ಯಜಮಾನ ಶಂಖ ಉದುತ್ತ, ಮಕ್ಕಳು ಜಾಗಟೆ ಬಾರಿಸಿ ಗಂಗಾ ಮಾತೆಯನ್ನು ಆಹ್ವಾನಿಸುವುದು ವಿಶೇಷ  ಸಂಪ್ರದಾಯವಾಗಿದೆ. ಮಾರನೇ ದಿನ ಬ್ರಾಹ್ಮಿà ಮುಹೂರ್ತದಲ್ಲಿ ಎಣ್ಣೆ ಸ್ನಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು (ಅಭ್ಯಂಗ ಸ್ನಾನ)ಮನೆಯ ಯಜಮಾನಿ ದೇವರಕೋಣೆಯಲ್ಲಿ ರಂಗೋಲಿ ಬಿಡಿಸಿ ದೇವರ ಮುಂದೆ ಮಣೆ ಹಾಕಿ ರಂಗೋಲಿ ಬಿಡಿಸಿ ಯಜಮಾನರನ್ನು ಕುಳ್ಳಿರಿಸಿ ಎಣ್ಣೆಯನ್ನು ಗರಿಕೆ ಕುಡಿಯಿಂದ ಭೂಮಿತಾಯಿಗೆ ಸ್ಪರ್ಶಿಸಿ (ನೆಲ)ಯಜಮಾನರ ಹಣೆಗೆ ಹಾಗೂ ಭುಜಕ್ಕೆ ಸ್ಪರ್ಶಿಸಿ (ಮೂರು ಬಾರಿ) ನಂತರ ಮೈಗೆಲ್ಲ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದು. ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಹೊಸ ಬಟ್ಟೆ ಧರಿಸಿ ಬಗೆ ಬಗೆಯ ತಿನಿಸುಗಳನ್ನು ದೇವರಿಗೆ ಅರ್ಪಿಸಿ ಬಂಧು ಮಿತ್ರರೊಡನೆ ಸಂಭ್ರಮದ ಹಬ್ಬ ಆಚರಿಸುವುದಾಗಿದೆ.

ಟಾಪ್ ನ್ಯೂಸ್

MNG-1

Mangaluru: ಬಸ್‌ಗಾಗಿ ತೆರಳುವಾಗ ಟೆಂಪೋ ಹರಿದು ವ್ಯಕ್ತಿ ಸ್ಥಳದಲ್ಲೇ ಮೃತ್ಯು!

IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್‌ ಲಿಸ್ಟ್

IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್‌ ಲಿಸ್ಟ್

kumaraswamy

Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ

Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

Deepavali: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ; ರಾತ್ರಿ ಪೂರ್ತಿ ಸಂಭ್ರಮ, ಬೆಳಗ್ಗೆ ದಹನ!

Deepavali: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ; ರಾತ್ರಿ ಪೂರ್ತಿ ಸಂಭ್ರಮ, ಬೆಳಗ್ಗೆ ದಹನ!

Air-bus-295

Military Aircraft Unit: ಗುಜರಾತಲ್ಲಿ ತಯಾರಾಗಲಿದೆ ದೇಸಿ ಏರ್‌ಬಸ್‌

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

MUST WATCH

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

ಹೊಸ ಸೇರ್ಪಡೆ

4

Puttur: ಅಮ್ಚಿನಡ್ಕದಲ್ಲಿ ಮತ್ತೆ ಕಾಡಾನೆ ಹಾವಳಿ

accident2

Belthangady: ಟ್ಯಾಂಕರ್‌ ಪಲ್ಟಿ; ಪ್ರಾಣಾಪಾಯದಿಂದ ಪಾರು

accident

Padubidri: ಪಾದಯಾತ್ರಿಗಳಿಗೆ ಬೈಕ್‌ ಢಿಕ್ಕಿ; ಗಾಯ

death

Kasaragod: ಅಯೋಧ್ಯೆಯಿಂದ ಶಬರಿಮಲೆ ತೀರ್ಥಾಟನೆ ದಾರಿ ಮಧ್ಯೆ ಕೂಡ್ಲು ನಿವಾಸಿಯ ಸಾವು

Untitled-1

Kasaragod ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.