IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್‌ ಲಿಸ್ಟ್


Team Udayavani, Oct 31, 2024, 6:46 PM IST

IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್‌ ಲಿಸ್ಟ್

ಮುಂಬಯಿ: ಐಪಿಎಲ್ 2025 (IPL 2025) ರ ರಿಟೆನ್ಶನ್ ಗಡುವು ಕೊನೆಗೊಂಡಿದೆ. ಆಯಾ ತಂಡಗಳು ತಮ್ಮಲ್ಲಿ ಯಾರನ್ನು ಉಳಿಸಬೇಕು, ಯಾರನ್ನು ಬಿಡಬೇಕೆನ್ನುವ ಪಟ್ಟಿಯನ್ನು ರಿಲೀಸ್‌ ಮಾಡಿದೆ.

ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ರಿಲೀಸ್‌ ಮಾಡಬೇಕು, ಯಾವ ಆಟಗಾರರನ್ನು ರಿಟೈನ್‌ ಮಾಡಿದೆ ಎನ್ನುವ ಪಟ್ಟಿ ಇಲ್ಲಿದೆ..

ಆರ್‌ ಸಿಬಿ (RCB):  ಆರ್‌ ಸಿಬಿ ತಂಡದಲ್ಲಿ ಸ್ಟಾರ್‌ ಪ್ಲೇಯರ್ಸ್‌ಗಳನ್ನು ಕೈಬಿಡಲಾಗಿದೆ. ಇಲ್ಲಿದೆ ಪಟ್ಟಿ..  ಮುಖ್ಯವಾಗಿ ಕಪ್ತಾನನಾಗಿದ್ದ ಫಾಫ್ ಡು ಪ್ಲೆಸ್ಸಿಸ್ ಅವರನ್ನು ರಿಲೀಸ್‌ ಮಾಡಲಾಗಿದೆ. ಮೂರು ಮಂದಿಯನ್ನಷ್ಟೇ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ರಿಟೈನ್‌ ಆದ ಆಟಗಾರರು:  ವಿರಾಟ್‌ ಕೊಹ್ಲಿ(21 ಕೋಟಿ ರೂ.), ರಜತ್‌ ಪಟೇದರ್(11‌ ಕೋಟಿ ರೂ.), ಯಶ್‌ ದಯಾಳ್ (5ಕೋಟಿ ರೂ) ಅವರನ್ನು ತಂಡ ರಿಟೈನ್‌ ಮಾಡಿಕೊಂಡಿದೆ.

ಕೈಬಿಟ್ಟ ಪ್ರಮುಖ ಆಟಗಾರರು..

ಫಾಫ್ ಡು ಪ್ಲೆಸ್ಸಿಸ್, ಸಿರಾಜ್‌, ಗ್ರೀನ್‌, ಮ್ಯಾಕ್ಸ್‌ ವೆಲ್‌, ವಿಲ್‌ ಜ್ಯಾಕ್ಸ್‌, ಅಲ್ಜಾರಿ ಜೋಸೆಫ್, ಟಾಮ್ ಕರ್ರಾನ್, ಲಾಕ್ ಫರ್ಗುಸನ್, ರೀಸ್ ಟೋಪ್ಲಿ ಸೇರಿದಂತೆ ಅನುಜ್ ರಾವತ್, ಸೌರವ್ ಚೌಹಾಣ್, ಮನೋಜ್ ಭಾಂಡಗೆ, ಮಹಿಪಾಲ್ ಲೊಮ್ರೋರ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮಯಾಂಕ್ ದಾಗರ್, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ವಿಜಯ್ ಕುಮಾರ್ ವೈಶಾಕ್ ಅವರನ್ನು ಪ್ರಮುಖವಾಗಿ ಕೈಬಿಡಲಾಗಿದೆ.

ಕೈಯಲ್ಲಿ ಉಳಿದಿರುವ ದುಡ್ಡು: 83 ಕೋಟಿ ರೂ.

ಗುಜರಾತ್‌ ಟೈಟನ್ಸ್:‌ ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ. ಅವರು ಮೆಗಾ ಹರಾಜಿಗೆ ಹೋಗಲಿದ್ದಾರೆ.

ರಿಟೈನ್‌ ಆದ ಆಟಗಾರರು:  ರಶೀದ್‌ ಖಾನ್(18‌ ಕೋಟಿ ರೂ.) , ಶುಭಮನ್‌ ಗಿಲ್‌ (16.5 ಕೋಟಿ ರೂ.), ಸಾಯಿ ಸುದರ್ಶನ್‌ (8.5 ಕೋಟಿ ರೂ.), ರಾಹುಲ್‌ ತೇವಾಟಿಯ(4 ಕೋಟಿ ರೂ.) ಶಾರುಖ್‌ ಖಾನ್‌ (4 ಕೋಟಿ ರೂ.)

ಕೈಬಿಟ್ಟ ಪ್ರಮುಖ ಆಟಗಾರರು..ಉಮೇಶ್ ಯಾದವ್, ಅಭಿನವ್ ಮನೋಹರ್, ವಿಜಯ್ ಶಂಕರ್, ಜಯಂತ್ ಯಾದವ್, ವೃದ್ಧಿಮಾನ್ ಸಹಾ, ದರ್ಶನ್ ನಲ್ಕಂಡೆ, ಆರ್ ಸಾಯಿ ಕಿಶೋರ್, ಮೋಹಿತ್ ಶರ್ಮಾ, ಸಂದೀಪ್ ವಾರಿಯರ್, ಬಿಆರ್ ಶರತ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಮಾನವ್ ಸುತಾರ್, ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವಾಡೆಮ್ಸನ್ ಲಿಟಲ್, ನೂರ್ ಅಹ್ಮದ್, ಅಜ್ಮತುಲ್ಲಾ ಒಮರ್ಜಾಯ್, ಸ್ಪೆನ್ಸರ್ ಜಾನ್ಸನ್ ಅವರುಗಳನ್ನು ರಿಲೀಸ್‌ ಮಾಡಲಾಗಿದೆ.

ಕೈಯಲ್ಲಿ ಉಳಿದಿರುವ ದುಡ್ಡು: 69 ಕೋಟಿ ರೂ.

ಪಂಜಾಬ್‌ ಕಿಂಗ್ಸ್..‌ ಪಂಜಾಬ್‌ ಕಿಂಗ್ಸ್‌ ಅತೀ ಹೆಚ್ಚು ಆಟಗಾರರನ್ನು ರಿಲೀಸ್‌ ಮಾಡಿದೆ. ಕೇವಲ ಇಬ್ಬರನ್ನು ಮಾತ್ರ ರಿಟೈನ್‌ ಮಾಡಿಕೊಂಡಿದೆ.

ರಿಟೈನ್‌ ಆದ ಆಟಗಾರರು:  ಶಶಾಂಕ್‌ ಸಿಂಗ್(5.5‌ ಕೋಟಿ ರೂ) ಪ್ರಭುಸಿಮ್ರನ್(4 ಕೋಟಿ ರೂ)

ಕೈಬಿಟ್ಟ ಪ್ರಮುಖ ಆಟಗಾರರು.. ಅರ್ಷದೀಪ್ ಸಿಂಗ್, ರಿಷಿ ಧವನ್, ಹರ್ಷಲ್ ಪಟೇಲ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಜಿತೇಶ್ ಶರ್ಮಾ, ಅಥರ್ವ ಟೈಡೆ, ಶಿವಂ ಸಿಂಗ್, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ವಿಶ್ವನಾಥ್ ಪ್ರತಾಪ್ ಸಿಂಗ್, ಪ್ರಿನ್ಸ್ ಚೌಧರಿ, ತನಯ್ ತ್ಯಾಗರಾಜನ್, ಅಶುತೋಷ್ ಶರ್ಮಾ, ಜಾನಿ ಕಾ ಲಿವಿಂಗ್‌ಸ್ಟೋನ್, ಲಿವಿಂಗ್‌ಸ್ಟೋನ್, ರಬಾಡ, ನಾಥನ್ ಎಲ್ಲಿಸ್, ಸ್ಯಾಮ್ ಕರ್ರಾನ್, ಸಿಕಂದರ್ ರಜಾ, ಕ್ರಿಸ್ ವೋಕ್ಸ್, ರಿಲೀ ರೊಸ್ಸೌ  ಅವರನ್ನು ಕೈಬಿಡಲಾಗಿದೆ.

ಕೈಯಲ್ಲಿ ಉಳಿದಿರುವ ದುಡ್ಡು: 110.5 ಕೋಟಿ ರೂ.

ಡೆಲ್ಲಿ ಕ್ಯಾಪಿಟಲ್ಸ್:‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರಮುಖ ಆಟಗಾರ ರಿಷಭ್‌ ಪಂತ್‌ ಅವರನ್ನೇ ರಿಲೀಸ್‌ ಮಾಡಿದೆ. ಆ ಮೂಲಕ ಹೊಸ ಕಪ್ತಾನನತ್ತ ಮುಖ ಮಾಡಿದೆ.

ರಿಟೈನ್‌ ಆದ ಆಟಗಾರರು:  ಅಕ್ಷರ್‌ ಪಟೇಲ್(16.5‌ ಕೋಟಿ ರೂ.), ಕುಲ್‌ ದೀಪ್‌ ಯಾದವ್‌ (13.25 ಕೋಟಿ ರೂ.), ಟ್ರಿಸ್ಟಾನ್ ಸ್ಟಬ್ಸ್(10 ಕೋಟಿ ರೂ.) ಅಭಿಷೇಕ್‌ ಪೋರೆಲ್(4‌ ಕೋಟಿ) ಅವರನ್ನು ರಿಟೈನ್‌ ಮಾಡಿಕೊಂಡಿದೆ.

ಕೈಬಿಟ್ಟ ಪ್ರಮುಖ ಆಟಗಾರರು.. ರಿಷಬ್ ಪಂತ್ , ಡೇವಿಡ್‌ ವಾರ್ನರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರನ್ನು ಪ್ರಮುಖವಾಗಿ ರಿಲೀಸ್‌ ಮಾಡಲಾಗಿದೆ.

ಕೈಯಲ್ಲಿ ಉಳಿದಿರುವ ದುಡ್ಡು: 73 ಕೋಟಿ ರೂ.

ಮುಂಬೈ ಇಂಡಿಯನ್ಸ್:‌ ಮುಂಬೈ ಇಂಡಿಯನ್ಸ್ ಸ್ಟಾರ್‌ ಪ್ಲೇಯರ್ಸ್‌ ಗಳನ್ನು ರಿಟೈನ್‌ ಮಾಡಿಕೊಂಡಿದೆ.

ರಿಟೈನ್‌ ಆದ ಆಟಗಾರರು: ರೋಹಿತ್‌ ಶರ್ಮಾ(16.30 ಕೋಟಿ ರೂ.) ಜಸ್ಪ್ರೀತ್‌ ಬೂಮ್ರಾ(18 ಕೋಟಿ ರೂ.) ,ಹಾರ್ದಿಕ್‌ ಪಾಂಡ್ಯ(16.35 ಕೋಟಿ ರೂ.), ಸೂರ್ಯ ಕುಮಾರ್‌ ಯಾದವ್(16.35‌ ಕೋಟಿ ರೂ.), ತಿಲಕ್‌ ವರ್ಮಾ(8 ಕೋಟಿ ರೂ.)

ಕೈಬಿಟ್ಟ ಪ್ರಮುಖ ಆಟಗಾರರು..

ಇಶಾನ್ ಕಿಶನ್, ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಹಾರ್ವಿಕ್ ದೇಸಾಯಿ, ವಿಷ್ಣು ವಿನೋದ್, ನಮನ್ ಧೀರ್, ಶಿವಾಲಿಕ್ ಶರ್ಮಾ, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ನುವಾನ್ ತುಷಾರ, ಲ್ಯೂಕ್ ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ದಿಲ್ಶನ್ ಮಧುಶಂಕ, ಮೊಹಮ್ಮದ್‌ ನಬಿ

ಕೈಯಲ್ಲಿ ಉಳಿದಿರುವ ದುಡ್ಡು:  45 ಕೋಟಿ ರೂ.

ಚೆನ್ನೈ ಸೂಪರ್‌ ಕಿಂಗ್ಸ್:‌

ಚೆನ್ನೈ ಸೂಪರ್‌ ಕಿಂಗ್ಸ್‌ 5 ಮಂದಿ ಆಟಗಾರರನ್ನು ರಿಟೈನ್‌ ಮಾಡಿಕೊಂಡಿದೆ. ಇದರಲ್ಲಿ ಎಂಎಸ್‌ ಧೋನಿ ಅವರು ಸೇರಿದ್ದಾರೆ. ಇನ್ನುಳಿದಂತೆ ಕಾನ್ವೆ, ಮಿಚೆಲ್‌ ನಂತಹ ಆಟಗಾರರನ್ನು ಕೈಬಿಡಲಾಗಿದೆ.

ರಿಟೈನ್‌ ಆದ ಆಟಗಾರರು: ರುತ್‌ ರಾಜ್‌ ಗಾಯಕ್ವಾಡ್(18‌ ಕೋಟಿ ರೂ), ಮತೀಶಾ ಪತಿರಾಣ(13 ಕೋಟಿ ರೈ), ರವೀಂದ್ರ ಜಡೇಜಾ(18 ಕೋಟಿ ರೂ.), ಎಂಎಸ್‌ ಧೋನಿ(4 ಕೋಟಿ ರೂ.)

ಕೈಬಿಟ್ಟ ಪ್ರಮುಖ ಆಟಗಾರರು.. ಡೇವಿನ್‌ ಕಾನ್ವೆ, ಡೇರಿಲ್‌ ಮಿಚೆಲ್‌, ರಚಿನ್‌ ರವೀಂದ್ರ, ಮುಸ್ತಫಿಜುರ್ ರೆಹಮಾನ್, ಅಜಿಂಕ್ಯ ರಹಾನೆ, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ ಅವರನ್ನು ರಿಲೀಸ್‌ ಮಾಡಲಾಗಿದೆ.

ಕೈಯಲ್ಲಿ ಉಳಿದಿರುವ ದುಡ್ಡು: 55 ಕೋಟಿ ರೂ.

ರಾಜಸ್ಥಾನ್‌ ರಾಯಲ್ಸ್:‌ ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಜಾಸ್‌ ಬಟ್ಲರ್‌ ಅವರನ್ನು ರಿಲೀಸ್‌ ಮಾಡಲಾಗಿದೆ.

ರಿಟೈನ್‌ ಆದ ಆಟಗಾರರು: ಸಂಜು ಸ್ಯಾಮ್ಸನ್(18 ಕೋಟಿ ರೂ.), ಯಶಸ್ವಿ ಜೈಸ್ವಾಲ್(18 ಕೋಟಿ ರೂ.) ರಿಯಾನ್ ಪರಾಗ್(14 ಕೋಟಿ ರೂ.),  ಧ್ರುವ್‌ ಜುರೆಲ್(14‌ ಕೋಟಿ ರೂ.), ಶಿಮ್ರಾನ್ ಹೆಟ್ಮೆಯರ್(11 ಕೋಟಿ ರೂ.), ಸಂದೀಪ್ ಶರ್ಮಾ(4 ಕೋಟಿ ರೂ.)

ಕೈಬಿಟ್ಟ ಪ್ರಮುಖ ಆಟಗಾರರು..  ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ನವದೀಪ್ ಸೈನಿ, ಕುಲದೀಪ್ ಸೇನ್, ಕುನಾಲ್ ರಾಥೋಡ್, ಅವೇಶ್ ಖಾನ್, ತನುಷ್ ಕೋಟ್ಯಾನ್, ಶುಭಂ ದುಬೆ, ಅಬಿದ್ ಮುಷ್ತಾಕ್, ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್, ಡೊನೊವನ್ ಫೆರೇರಾ, ರೋವ್‌ಮನ್ ಪೊವೆಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಕೇವ್‌ಹವ್ ಬರ್ಗರ್, ನಾಂದ್ರೆ ಬರ್ಗರ್ ಅವರನ್ನು  ಕೈಬಿಡಲಾಗಿದೆ.

ಕೈಯಲ್ಲಿ ಉಳಿದಿರುವ ದುಡ್ಡು: 83 ಕೋಟಿ ರೂ.

ಲಕ್ನೋ ಸೂಪರ್‌ ಜೈಂಟ್ಸ್: ಲಕ್ನೋ ತಂಡದಲ್ಲಿ ಓರ್ವ ವಿದೇಶಿ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

ರಿಟೈನ್‌ ಆದ ಆಟಗಾರರು: ನಿಕೋಲಸ್ ಪೂರನ್(21 ಕೋಟಿ ರೂ.), ಮಯಾಂಕ್ ಯಾದವ್(11 ಕೋಟಿ ರೂ), ರವಿ ಬಿಷ್ಣೋಯ್(11 ಕೋಟಿ ರೂ.), ಮೊಹ್ಸಿನ್ ಖಾನ್(4 ಕೋಟಿ ರೂ.), ಆಯುಷ್ ಬದೋನಿ (4 ಕೋಟಿ ರೂ.)

ಕೈಬಿಟ್ಟ ಪ್ರಮುಖ ಆಟಗಾರರು..  ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಯುಧ್ವಿರ್ ಸಿಂಗ್ ಚರಕ್, ಅರ್ಷದ್ ಖಾನ್, ನವೀನ್-ಉಲ್-ಹಕ್, ದೇವದತ್ ಪಡಿಕ್ಕಲ್, ಪ್ರೇರಕ್ ಮಂಕಡ್, ಮಣಿಮಾರನ್ ಸಿದ್ಧಾರ್ಥ್, ಕೃಷ್ಣಪ್ಪ ಗೌತಮ್, ಆಶ್ಟನ್ ಟರ್ನರ್, ಅಮಿತ್ ಮಿಶ್ರಾ, ಆರ್ಸ್, ಕೆ.ಎಲ್. ಕೈಲ್ ಮೇಯರ್ಸ್, ಮ್ಯಾಟ್ ಹೆನ್ರಿ, ಶಮರ್ ಜೋಸೆಫ್, ಯಶ್ ಠಾಕೂರ್

ಕೈಯಲ್ಲಿ ಉಳಿದಿರುವು ದುಡ್ಡು: 69 ಕೋಟಿ ರೂ.

ಸನ್ ರೈಸರ್ಸ್ ಹೈದರಾಬಾದ್:  ಬಿಗ್‌ ಹಿಟ್ಟರ್‌ ಗಳನ್ನು ಹೈದರಬಾದ್‌ ರಿಟೈನ್‌ ಮಾಡಿಕೊಂಡಿದೆ.

ರಿಟೈನ್‌ ಆದ ಆಟಗಾರರು: ಹೆನ್ರಿಚ್ ಕ್ಲಾಸೆನ್(23 ಕೋಟಿ ರೂ., ಪ್ಯಾಟ್ ಕಮ್ಮಿನ್ಸ್(18 ಕೋಟಿ ರೂ), ಟ್ರಾವಿಸ್ ಹೆಡ್(14 ಕೋಟಿ ರೂ.), ಅಭಿಷೇಕ್ ಶರ್ಮಾ(14 ಕೋಟಿ ರೂ. ಮತ್ತು ನಿತೀಶ್ ಕುಮಾರ್ ರೆಡ್ಡಿ(6 ಕೋಟಿ ರೂ.)

ಕೈಬಿಟ್ಟ ಪ್ರಮುಖ ಆಟಗಾರರು..  ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್, ಅನ್ಮೋಲ್ಪ್ರೀತ್ ಸಿಂಗ್, ಶಹಬಾಜ್ ಅಹ್ಮದ್, ಉಪೇಂದ್ರ ಯಾದವ್, ಸನ್ವಿರ್ ಸಿಂಗ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್, ಆಕಾಶ್ ಸಿಂಗ್, ಝಾತಾವೇದ್ ಸುಬ್ರಹ್ಮಣ್ಯನ್, ಐಡೆನ್ ಮಾರ್ಕ್ರಾಮ್ , ಫಜಲ್ಹಕ್ ಫಾರೂಕಿ, ಮಾರ್ಕೊ ಜಾನ್ಸೆನ್, ವನಿಂದು ಹಸರಂಗ, ವಿಜಯಕಾಂತ್ ವ್ಯಾಸಕಾಂತ್ ಅವರನ್ನು ಕೈಬಿಡಲಾಗಿದೆ.

ಕೈಯಲ್ಲಿ ಉಳಿದಿರುವ ದುಡ್ಡು: 45  ಕೋಟಿ ರೂ.

ಕೆಕೆಆರ್:‌‌ ಹಾಲಿ ಚಾಂಪಿಯನ್ಸ್‌ ಕೆಕೆಆರ್ ಬಿಗ್ ಪ್ಲೇಯರ್ಸ್‌ ಗಳನ್ನು ರಿಟೈನ್‌ ಮಾಡಿಕೊಂಡಿದೆ. ಇನ್ನುತಂಡದ ಪ್ರಮುಖ ಆಟಗಾರನನ್ನು ರಿಲೀಸ್‌ ಮಾಡಿದೆ.

ರಿಟೈನ್‌ ಆದ ಆಟಗಾರರು:

ಸುನಿಲ್ ನರೈನ್(12 ಕೋಟಿ ರೂ.), ರಿಂಕು ಸಿಂಗ್(13 ಕೋಟಿ ರೂ.), ಆಂಡ್ರೆ ರಸೆಲ್(12 ಕೋಟಿ ರೂ.), ವರುಣ್ ಚಕ್ರವರ್ತಿ(12 ಕೋಟಿ ರೂ), ಹರ್ಷಿತ್ ರಾಣಾ(4 ಕೋಟಿ ರೂ.) ಮತ್ತು ರಮಣ್ ದೀಪ್ ಸಿಂಗ್(4 ಕೋಟಿ ರೂ.)

ಕೈಬಿಟ್ಟ ಪ್ರಮುಖ ಆಟಗಾರರು.. ಶ್ರೇಯಸ್ ಅಯ್ಯರ್‌, ಅಯ್ಯರ್, ಜೇಸನ್ ರಾಯ್, ಆಂಗ್‌ಕ್ರಿಶ್ ರಘುವಂಶಿ, ಶೆರ್ಫೇನ್ ರುದರ್‌ಫೋರ್ಡ್, ಮನೀಶ್ ಪಾಂಡೆ, ಆಂಡ್ರೆ ರಸೆಲ್, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ಅನುಕೂಲ್ ರಾಯ್, ರಮಣದೀಪ್ ಸಿಂಗ್, ವೈಭವ್ ಅರೋರಾ, ಚೇತನ್ ಸಕರಿಯಾ, ಸುಯಶ್ ಶರ್ಮಾ, ಮಿಚೆಲ್ ಹುಬ್ಸ್‌ಸನ್, ಸಕಿ ಹುಬ್ಸ್‌ಸನ್, ಗುಸ್ ಅಟ್‌ಕಿನ್‌ಸನ್ ರೆಹಮಾನ್, ಕೆಎಸ್ ಭರತ್, ರಹಮಾನುಲ್ಲಾ ಗುರ್ಬಾಜ್.

ಕೈಯಲ್ಲಿ ಉಳಿದಿರುವ ದುಡ್ಡು: 51 ಕೋಟಿ ರೂ.

ನವೆಂಬರ್‌ ತಿಂಗಳಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.

ಟಾಪ್ ನ್ಯೂಸ್

TPG-Namb

TPG Passes Away: ಬಿಪಿಎಲ್‌ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್‌ ನಂಬಿಯಾರ್‌ ನಿಧನ

shivakumar

Guarantee: ಶಕ್ತಿ ಯೋಜನೆ ಸೇರಿ ಯಾವುದೇ ಗ್ಯಾರಂಟಿಗಳನ್ನೂ ನಿಲ್ಲಿಸಲ್ಲ: ಡಿ.ಕೆ.ಶಿವಕುಮಾರ್‌

MNG-1

Mangaluru: ಬಸ್‌ಗಾಗಿ ತೆರಳುವಾಗ ಟೆಂಪೋ ಹರಿದು ವ್ಯಕ್ತಿ ಸ್ಥಳದಲ್ಲೇ ಮೃತ್ಯು!

IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್‌ ಲಿಸ್ಟ್

IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್‌ ಲಿಸ್ಟ್

kumaraswamy

Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ

Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು ವನಿತಾ ತಂಡದ ಪಾಲಾದ ಇಂಗ್ಲೆಂಡ್‌ ಆಲ್‌ ರೌಂಡರ್‌ ವ್ಯಾಟ್

WPL: ಬೆಂಗಳೂರು ವನಿತಾ ತಂಡದ ಪಾಲಾದ ಇಂಗ್ಲೆಂಡ್‌ ಆಲ್‌ ರೌಂಡರ್‌ ವ್ಯಾಟ್

Leadership rift: Pant’s decision to quit Delhi franchise

IPL: ನಾಯಕತ್ವ ವಿಚಾರದಲ್ಲಿ ಬಿರುಕು: ಡೆಲ್ಲಿ ಫ್ರಾಂಚೈಸಿ ತೊರೆಯಲು ಪಂತ್‌ ನಿರ್ಧಾರ

Test Cricket: ದಕ್ಷಿಣ ಆಫ್ರಿಕಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್‌

Test Cricket: ದಕ್ಷಿಣ ಆಫ್ರಿಕಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್‌

Pro Kabaddi League: ಗುಜರಾತ್‌ ಜೈಂಟ್ಸ್‌ ಮಣಿಸಿದ ತಮಿಳ್‌ ತಲೈವಾಸ್‌

Pro Kabaddi League: ಗುಜರಾತ್‌ ಜೈಂಟ್ಸ್‌ ಮಣಿಸಿದ ತಮಿಳ್‌ ತಲೈವಾಸ್‌

IPL Retentions: ಗುಜರಾತ್‌ನಲ್ಲಿ ಪ್ರಮುಖರ ಉಳಿಕೆಗಾಗಿ ವೇತನ ಕಡಿತಕ್ಕೆ ಒಪ್ಪಿದ ಗಿಲ್‌ ?

IPL Retentions: ಗುಜರಾತ್‌ನಲ್ಲಿ ಪ್ರಮುಖರ ಉಳಿಕೆಗಾಗಿ ವೇತನ ಕಡಿತಕ್ಕೆ ಒಪ್ಪಿದ ಗಿಲ್‌ ?

MUST WATCH

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

ಹೊಸ ಸೇರ್ಪಡೆ

Court-1

Thokottu: ಮೊಹಮ್ಮದ್‌ ಸೈಫ್ವಾನ್‌ ಕೊಲೆ ಆರೋಪಿಗಳು ಖುಲಾಸೆ

TPG-Namb

TPG Passes Away: ಬಿಪಿಎಲ್‌ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್‌ ನಂಬಿಯಾರ್‌ ನಿಧನ

Untitled-1

Mangaluru: ವೆನ್ಲಾಕ್‌ಗೆ ಬಂದಿದ್ದ ಯುವತಿ ನಾಪತ್ತೆ

4

Siddapura: ಹಳ್ಳಿಹೊಳೆ ಜಾಗಕ್ಕೆ ಅಕ್ರಮವಾಗಿ ಪ್ರವೇಶಿ ಬೆದರಿಕೆ; ಕಳವು

11

Udupi: ನ್ಯಾಯವಾದಿಗೆ ಜೀವಬೆದರಿಕೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.