Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

ಅಂತರಂಗದ ಬದುಕಿಗೆ ಅಗತ್ಯವಾದ ಭಕ್ತಿಯೂ ಆಗಿರಬಹುದು

Team Udayavani, Oct 31, 2024, 5:44 PM IST

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

ಬೆಳಕು ಎಲ್ಲವನ್ನೂ ತೆರೆದು ಕಾಣಿಸುತ್ತದೆ. ತನ್ನನ್ನೂ ತಾನು ಬೆಳಗಿಸಿಕೊಳ್ಳುತ್ತದೆ. ಬೆಳಕನ್ನು ನೋಡಲು ಬೇರೆ ಬೆಳಕು ಬೇಡ.
ಆದ್ದರಿಂದ ಸಕಲ ಜೀವಿಗಳಿಗೂ ಬೆಳಕೆಂದರೆ ಎಲ್ಲಿಲ್ಲದ ಆಸೆ. ಬೆಂಕಿ ಕಂಡರೆ ಹೆದರುವ ಪ್ರಾಣಿಗಳಿಗೂ ಬೆಳಕಿನ ಗೆಳೆತನ ಇದ್ದೇ ಇದೆ. ಗೂಬೆಗೆ ಹಗಲು ಶತ್ರು; ರಾತ್ರಿ ಮಿತ್ರ. ರಾತ್ರಿಯ  ಕತ್ತಲಿನಲ್ಲೂ ಅದು ತನ್ನ ಕಣ್ಣಿನ ಬೆಳಕಿನ ಮೂಲಕವೇ ಜಗತ್ತು ನೋಡುತ್ತದೆ. ಹೊರಗಿನ ಬೆಳಕಿಗೆ ಆಕರ ಸೂರ್ಯ, ಚಂದ್ರ ಮತ್ತು ಅಗ್ನಿ. ಇವುಗಳನ್ನು “ತೇಜಸ್ತ್ರಯೀ’ ಎಂದು ಹಿರಿಯರು
ಗುರುತಿಸಿದರು, ಹೊಗಳಿದರು.

ಬೆಳಕೆಂದರೆ ಪ್ರಾಣಿಗಳಿಗೂ ಹಿಗ್ಗು. ಕತ್ತಲೆ ಎಂದರೆ ಕುಗ್ಗು; ಭಯ. ರಾತ್ರಿ ಕಳೆದು ಚುಮು ಚುಮು ಬೆಳಕು ಮೆಲ್ಲ ಮೆಲ್ಲನೆ ಜಗದಗಲಕ್ಕೆ ಹರಡುವ ಅರುಣೋದಯದ ಹೊತ್ತಿಗೆ ಅವು ಎಚ್ಚೆತ್ತುಕೊಳ್ಳುತ್ತವೆ. ಕೋಳಿ ಕೂಗಿ ಊರನ್ನು ಎಬ್ಬಿಸುತ್ತದೆ. ಹಕ್ಕಿಗಳು ಉಲಿದು ಮರಿಗಳನ್ನು ಏಳಿಸುತ್ತವೆ. ಕಾಗೆಗಳು ಕಾಕಾ ಎಂದು ಉದಯಕಾಲದ ಕರ್ತವ್ಯಗಳನ್ನು ಎಚ್ಚರಿಸುತ್ತವೆ. ಗುಬ್ಬಿಗಳು ಚಿಲಿಪಿಲಿ ಸದ್ದು ಮಾಡುತ್ತ ಗೂಡಿನಿಂದ ಹೊರಕ್ಕೆ ಹಾರುತ್ತವೆ. ನಾಯಿ, ನರಿ, ಕಾಡು ಪ್ರಾಣಿಗಳು ಜಾಗೃತವಾಗಿ ಆಹಾರದ ಹುಡುಕಾಟಕ್ಕೆ ಅಣಿಯಾಗುವ ಸಮಯವಿದು. ಗಿಳಿ, ಕೋಗಿಲೆ, ಪಾರಿವಾಳ, ನವಿಲು ಮೊದಲಾದ ಹಕ್ಕಿಗಳು ಮುಂಬೆಳಗಿನ
ಬೆಳಕನ್ನು ಹಾಡುತ್ತಲೇ ಸ್ವಾಗತಿಸುತ್ತವೆ.

ಮನುಷ್ಯರ ಬಾಳಾಟಕ್ಕೆ ಬೆಳಕೇ ಸರ್ವಸ್ವ.ರಾತ್ರಿಯ ಕತ್ತಲನ್ನು ಓಡಿಸಲು ಅವರು ದೀಪಬೆಳಗಿಸುತ್ತಾರೆ. ವಿದ್ಯುದ್ದೀಪಗಳನ್ನು ಉರಿಸಿ ರಾತ್ರಿಯನ್ನೇ ಹಗಲಾಗಿಸುವಷ್ಟು ನಾಗರಿಕ ವಿಜ್ಞಾನ ಬೆಳೆದಿದೆಯಷ್ಟೇ. ಬೆಳಕಿಗೆ ಹಬ್ಬದ ಹರ್ಷವನ್ನು ತರುವ ಶಕ್ತಿ
ಇದೆ. ಬೆಳಕಿನ ಹಬ್ಬವೇ ಬಂದರೆ…! ದೀಪಾವಳಿ ಬೆಳಕಿನ ಹಬ್ಬ. ದೀಪಗಳ ಸಾಲನ್ನು ಹಚ್ಚಿ ಮನೆ ಮನಗಳನ್ನು ಬೆಳಗಿಸುವ
ಹಬ್ಬ. ದಕ್ಷಿಣಾಯನದಲ್ಲಿ ರಾತ್ರಿ ಹೆಚ್ಚು; ಹಗಲು ಕಡಿಮೆ. ಕತ್ತಲೆಯ ಮಬ್ಬು ಸಂಜೆಯಾಗುವ ಮೊದಲೇ ಆವರಿಸುತ್ತದೆ.

ಸೂರ್ಯಾಸ್ತವೂ ಬೇಗ ಆಗುತ್ತದೆ. ಸೂರ್ಯೋದಯ ನಿಧಾನವಾಗುತ್ತದೆ. ಬೆಳಗಾದರೂ ಬೆಳಕು ಹರಿದಾಡಲ್ಲ. ಮಂಜು, ಇಬ್ಬನಿಗಳು ದಟ್ಟವಾಗಿ ಹರಡಿಕೊಳ್ಳುತ್ತವೆ. ಕತ್ತಲೆಯ ಜತೆ ಚಳಿಯೂ ಅಮರಿಕೊಳ್ಳುತ್ತದೆ. ಆಗ ಎಲ್ಲರಿಗೂ ಬೆಳಕಿನ ಹಿಗ್ಗು ಬೇಕು. ಬೆಚ್ಚನೆಯ ರಗ್ಗು ಬೇಕು. ಬೇಕೆನ್ನುವ ಹೊತ್ತಿಗೆ ದೀಪಾವಳಿ ಬಂದೇ ಬಿಟ್ಟಿತು.

ಬೆಳಕು ಯಾವುದು? ಎಲ್ಲವನ್ನೂ ಬೆಳಗಿಸುವ ನಿಜವಾದ ಬೆಳಕು ಯಾವುದು?-ಉಪನಿಷತ್‌ ಕೇಳುವ ಪ್ರಶ್ನೆ ಇದು. ಸೂರ್ಯನ ಬೆಳಕು ಬೆಳಕಲ್ಲ. ಅದನ್ನು ಕಾಣುವ ಕಣ್ಣು ಬೆಳಕು. ಕಣ್ಣೆಂಬ ಬೆಳಕೇ ಇಲ್ಲದಿದ್ದರೆ ಸೂರ್ಯ ಬೆಳಗಿದರೂ ಕಾಣುವುದೆಂತು? ಕಣ್ಣಿಲ್ಲದವನಿಗೆ ಹಗಲೂ ಒಂದೇ, ರಾತ್ರಿಯೂ ಒಂದೇ. ಆಲೋಚಿಸಿದರೆ ಕಣ್ಣೂ ಬೆಳಕಲ್ಲ. ಅದನ್ನು ಪ್ರೇರಿಸುವ ಮನಸ್ಸೇ
ಬೆಳಕು. ಮನಸ್ಸು ವ್ಯಗ್ರವಾಗಿರುವಾಗ ಕಣ್ಣುಗಳು ತೆರೆದೇ ಇದ್ದರೂ ಏನೂ ಕಾಣಿಸಲ್ಲ. ಸೂಕ್ಷ್ಮವಾಗಿ ನೋಡಿದರೆ ಮನಸ್ಸು ಬೆಳಕಲ್ಲ.

ಅದು ಜಡ. ತಾನು ತನಗಾಗಿ ಏನನ್ನೂ ನೋಡಲಾರದು, ತಿಳಿಯಲಾರದು. ಅದು ಕನ್ನಡಿಯಂತೆ. ಬಿಂಬ-ಬೆಳಕುಗಳ ಆಟಕ್ಕೆ
ಮೈಕೊಡುವ ಆಟಿಕೆಯಂತೆ. ನಿಜವಾದ ಬೆಳಕು ಮನಸ್ಸನ್ನು ಪ್ರಚೋದಿಸುವ ಆತ್ಮಚೇತನ. ಚೇತನ ಸ್ವಯಂಪ್ರಕಾಶ. ತಾನು, ತನಗಾಗಿ, ತನ್ನಿಂದಲೇ ಬೆಳಗುವ ಸ್ವಯಂಜ್ಯೋತಿ.

ಅವನ ಸಂಬಂಧದಿಂದ ಮನಸ್ಸೂ ಬೆಳಕಾಯಿತು. ಅದರ ಸಂಯೋಗದಿಂದ ಕಣ್ಣೂ ಬೆಳಕಾಯಿತು. ಅದರ ಕಾರಣದಿಂದ
ಸೂರ್ಯನ ತೇಜಸ್ಸೂ ಬೆಳಕಾಯಿತು. ದೀಪ ಒಂದು ಮೊತ್ತದ ಹೆಸರು. ಪಾತ್ರ, ಬತ್ತಿ, ಎಣ್ಣೆ, ಉರಿ ಎಲ್ಲವನ್ನೂ ಸೇರಿಸಿಯೇ ದೀಪ ಎಂದು ಕರೆಯುತ್ತೇವೆ. ನಿಜವನ್ನು ಯೋಚಿಸಿದರೆ ಪಾತ್ರ, ಎಣ್ಣೆ, ಬತ್ತಿಗಳು ದೀಪವಲ್ಲ. ಅವು ಉರಿಯನ್ನು ಉಳಿಸುವ-ಉರಿಸುವ
ಉಪಕರಣಗಳು. ಉರಿ ಒಂದೇ ದೀಪ.

ಭಾರತೀಯ ಮಹರ್ಷಿಗಳು ದೀಪ ಬೆಳಗಿಸುವ ಪರಿಯಲ್ಲಿ ಜೀವನ ವಿಕಾಸ ಕ್ರಮ ಕಂಡರು. ನೆನಪಿಸಿಕೊಂಡರು. ಅದನ್ನೇ ಹಬ್ಬದ
ಆಚರಣೆಯಲ್ಲಿ ಅಳವಡಿಸಿದರು. ಪ್ರಣತಿ ಎಂದರೆ ನಮಸ್ಕಾರ. ಪ್ರಣತಿ ಎಂದರೆ ಹಣತೆ. ಪ್ರಣತಿ ಶಬ್ದದ ತದ್ಭವ ಹಣತೆ. ನಮನದ ವಿನ್ಯಾಸ ಅಂಜಲಿಮುದ್ರೆ.

ಅರೆಮುಗಿದ ಎರಡು ಹಸ್ತಗಳನ್ನು ಅಕ್ಕಪಕ್ಕದಲ್ಲಿ ಜೋಡಿಸಿದರೆ ಅಂಜಲಿ ಮುದ್ರೆ ಸಿದ್ಧವಾಗುತ್ತದೆ. ಎರಡೂ ಕೈಗಳ ಹತ್ತು
ಬೆರಳುಗಳನ್ನು ಸೇರಿಸದೆ ಅಂಜಲಿಮುದ್ರೆ ಹುಟ್ಟಲಾರದು. ಹಣತೆಯ ಆಕೃತಿ ಅಂಜಲಿ ಮುದ್ರೆಯ ವಿನ್ಯಾಸದಲ್ಲಿಯೇ ಇರುತ್ತದೆ,
ಇರಬೇಕು. ಹತ್ತು ಬೆರಳಗಳು ಪಂಚ ಜ್ಞಾನೇಂದ್ರಿಯಗಳ, ಪಂಚಕರ್ಮೇಂದ್ರಿಯಗಳ ಪ್ರತೀಕಗಳು. ಅವು ಕಣ್ಣು, ಕಿವಿ, ಮೂಗು,
ನಾಲಗೆ, ಚರ್ಮ, ವಾಕ್‌, ಪಾಣಿ (ಕೈ), ಪಾದ (ಕಾಲು), ಪಾಯು (ಗುದ), ಉಪಸ್ಥ (ಜನನೇಂದ್ರಿಯ)ಗಳನ್ನು ಪ್ರತಿನಿಧಿಸುತ್ತವೆ. ಜೀವಿಯ ಬಾಳಾಟಕ್ಕೆ ಇವು ಅಗತ್ಯ, ಅನಿವಾರ್ಯ. ಇವುಗಳನ್ನು ವಶದಲ್ಲಿಟ್ಟುಕೊಂಡು ಒಂದುಗೂಡಿಸುವ ಇಂದ್ರಿಯ ಮನಸ್ಸು. ಅದುವೆ ಹಣತೆಯ ಮುಖದಲ್ಲಿರುವ ನಾಲಗೆ.

ಅಲ್ಲಿ ಹೊರಮುಖವಾಗಿ ಚಾಚಿಕೊಂಡಿರುವ (ಬತ್ತಿ)ವರ್ತಿ ಅಂದರೆ ಮನೋವೃತ್ತಿ. ಅದು ಮನುಷ್ಯನ ನಡವಳಿಗೆ-ವರ್ತನೆ. ಅದನ್ನು ಒದ್ದೆಯಾಗಿಸಿ ಜ್ಯೋತಿ ಉರಿಯಲು  ಸಹಕರಿಸುವ ಎಣ್ಣೆ ಶ್ರದ್ಧೆ. ಅದು ಬಹಿರಂಗದ ಬದುಕಿಗೆ ಬೇಕಾದ ವಿಷಯಾಸಕ್ತಿಯೂ, ಅಂತರಂಗದ ಬದುಕಿಗೆ ಅಗತ್ಯವಾದ ಭಕ್ತಿಯೂ ಆಗಿರಬಹುದು. ವರ್ತಿಯ ತುದಿಯಲ್ಲಿ ಉರಿಯುವ ಜ್ವಾಲೆ ಜೀವ ಜ್ಯೋತಿ. ಅದು ಉರಿದು-ಬೆಳಗಿ ಪರಂಜ್ಯೋತಿ ಎಂಬ ಪರಮಾತ್ಮನಲ್ಲಿ ಒಂದಾಗುವುದೇ ಜೀವನದ ಗುರಿ, ಜೀವಮಾನದ ಲಕ್ಷ್ಯ.

ಬೆಳಕು ಭೌತಿಕವಾದ ತೇಜಸ್ಸಲ್ಲ. ಅದು ಅಂತರಂಗದ ಅರಿವು. ಆದುದರಿಂದ ದೀಪ ಮಾಯೆಯಲ್ಲ; ಮಾಯೆಯನ್ನು ದಾಟುವ
ಅನುಭವ. ಮಾಯಾದೀಪ ಅಪೇಕ್ಷಿತವಾದ ವಸ್ತುಗಳನ್ನು ಕೊಡಬಹುದು. ಆದರೆ ಅರಿವಿನ ದೀಪ ಅಪೇಕ್ಷೆಯ ಮಾಯೆಯನ್ನೇ
ಕತ್ತರಿಸಬಲ್ಲುದು. ಇಂದ್ರಿಯಗಳು ಸೊಕ್ಕದಂತೆ ಅವುಗಳನ್ನು ಪಳಗಿಸಬೇಕು; ಬಗ್ಗಿಸಬೇಕು. ಅದಕ್ಕೆ ಸಾಧನ ಪ್ರಣತಿ-ಹಣತೆ. ಪ್ರಣತಿ
ದೀಪ ಜೀವೋತ್ಕರ್ಷದ ಪರಿಷ್ಕೃತ ವಿಧಾನ. ಇದೇ ಮಹರ್ಷಿಗಳು ಪಡಿಮೂಡಿಸಿದ ದೀಪದರ್ಶನ. ದೀಪಾವಳಿ ದೀಪದರ್ಶನದ
ಮಹಾಪರ್ವ.

ಟಾಪ್ ನ್ಯೂಸ್

shivakumar

Guarantee: ಶಕ್ತಿ ಯೋಜನೆ ಸೇರಿ ಯಾವುದೇ ಗ್ಯಾರಂಟಿಗಳನ್ನೂ ನಿಲ್ಲಿಸಲ್ಲ: ಡಿ.ಕೆ.ಶಿವಕುಮಾರ್‌

MNG-1

Mangaluru: ಬಸ್‌ಗಾಗಿ ತೆರಳುವಾಗ ಟೆಂಪೋ ಹರಿದು ವ್ಯಕ್ತಿ ಸ್ಥಳದಲ್ಲೇ ಮೃತ್ಯು!

IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್‌ ಲಿಸ್ಟ್

IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್‌ ಲಿಸ್ಟ್

kumaraswamy

Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ

Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!

Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ

Deepavali: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ; ರಾತ್ರಿ ಪೂರ್ತಿ ಸಂಭ್ರಮ, ಬೆಳಗ್ಗೆ ದಹನ!

Deepavali: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ; ರಾತ್ರಿ ಪೂರ್ತಿ ಸಂಭ್ರಮ, ಬೆಳಗ್ಗೆ ದಹನ!

Air-bus-295

Military Aircraft Unit: ಗುಜರಾತಲ್ಲಿ ತಯಾರಾಗಲಿದೆ ದೇಸಿ ಏರ್‌ಬಸ್‌

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

MUST WATCH

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

ಹೊಸ ಸೇರ್ಪಡೆ

Untitled-1

Mangaluru: ವೆನ್ಲಾಕ್‌ಗೆ ಬಂದಿದ್ದ ಯುವತಿ ನಾಪತ್ತೆ

4

Siddapura: ಹಳ್ಳಿಹೊಳೆ ಜಾಗಕ್ಕೆ ಅಕ್ರಮವಾಗಿ ಪ್ರವೇಶಿ ಬೆದರಿಕೆ; ಕಳವು

11

Udupi: ನ್ಯಾಯವಾದಿಗೆ ಜೀವಬೆದರಿಕೆ; ದೂರು ದಾಖಲು

courts

Kundapura: ಜಿಂಕೆ ಮಾಂಸ ಸಾಗಾಟ; ನ್ಯಾಯಾಂಗ ಬಂಧನ

dw

Panambur: ಕೂಳೂರು ನದಿಯಲ್ಲಿ ಅಪರಿಚಿತ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.