Siddapura: ಹಳ್ಳಿಹೊಳೆ ಜಾಗಕ್ಕೆ ಅಕ್ರಮವಾಗಿ ಪ್ರವೇಶಿ ಬೆದರಿಕೆ; ಕಳವು
Team Udayavani, Oct 31, 2024, 9:20 PM IST
ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ಕೊಳೆಕೋಡು ಎನ್ನುವಲ್ಲಿರುವ ತಮ್ಮ ಜಾಗಕ್ಕೆ ಸ್ಥಳೀಯರಾದ ಸುಷ್ಮಾ, ಗ್ರೀಷ್ಮಾ, ವಿಜಯೇಂದ್ರ, ಸುಮಾ ಅವರು ಅಕ್ರಮವಾಗಿ ಪ್ರವೇಶಿಸುವ ಮೂಲಕ ಕೆಲಸಗಾರನ್ನು ಬೆದರಿಸಿ, ಕೆಲವೊಂದು ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಲಕ್ಷ್ಮೀನಾರಾಯಣ ಅವರು ಪೊಲೀಸರಿಗೆ ದೂರು ನೀಡಿದರು.
ಆರೋಪಿಗಳು ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೆಲಸಗಾರ ಎಚ್. ಕೃಷ್ಣಯ್ಯ ಅವರನ್ನು ಬೆದರಿಸಿದ್ದಾರೆ. ಫಾರಂ ಹೌಸ್ನಲ್ಲಿದ್ದ ಅಡಿಕೆ, ಸಿಸಿ ಕೆಮರಾ, ಇನ್ವರ್ಟರ್, ತೋಟದಲ್ಲಿರುವ 50 ಸ್ಟ್ರಿಂಕ್ಲರ್, ಪಂಪ್ಸೆಟ್ ಕಳವು ಮಾಡಿಕೊಂಡು ಹೋಗಿದ್ದಾರೆ. ತೋಟಕ್ಕೆ ಅಳವಡಿಸಿದ್ದ ಕಬ್ಬಿಣದ ಗೇಟು ಕಿತ್ತು ಎಸೆದಿದ್ದಾರೆ. ಅಗಳನ್ನು ತೋಡಿ ಮುಳ್ಳುತಂತಿ ಬೇಲಿಯನ್ನು ನಿರ್ಮಿಸಿದ್ದಾರೆ ಎಂದು ಲಕ್ಷ್ಮೀನಾರಾಯಣ ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Golden Jubilee: ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 1ಲಕ್ಷ ರೂ.ಗೆ ಏರಿಕೆ: ಸಚಿವ ತಂಗಡಗಿ
Rain Alert: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನ.1ರಂದು ಭಾರೀ ಮಳೆ ಸಾಧ್ಯತೆ
Thokottu: ಮೊಹಮ್ಮದ್ ಸೈಫ್ವಾನ್ ಕೊಲೆ ಆರೋಪಿಗಳು ಖುಲಾಸೆ
TPG Passes Away: ಬಿಪಿಎಲ್ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್ ನಂಬಿಯಾರ್ ನಿಧನ
Mangaluru: ವೆನ್ಲಾಕ್ಗೆ ಬಂದಿದ್ದ ಯುವತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.