Kasaragod ಅಪರಾಧ ಸುದ್ದಿಗಳು
Team Udayavani, Oct 31, 2024, 8:15 PM IST
ನೇಣು ಬಿಗಿದು ಯುವಕ ಆತ್ಮಹತ್ಯೆ
ಕಾಸರಗೋಡು: ಉದಿನೂರು ವಡಕ್ಕೇಪುರ ನಿವಾಸಿ ಕೆ.ರಾಜೀವನ್(45) ಹಿತ್ತಿಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಬಾವಿಗೆ ಬಿದ್ದು ಯುವಕನ ಸಾವು
ಕಾಸರಗೋಡು: ಕೂಡ್ಲು ಪಾರೆಕಟ್ಟೆ ನಿವಾಸಿ ದಿ|ರಾಮ ಪಾಟಾಳಿ ಅವರ ಪುತ್ರ ಉದಯ ಕುಮಾರ್(42) ಮನೆ ಸಮೀಪದ ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ನಡೆದಿದೆ. ಈ ಹಿಂದೆ ಕೊಲ್ಲಿಯಲ್ಲಿ ಉದ್ಯೋಗದಲ್ಲಿದ್ದ ಅವರು ಊರಿಗೆ ಮರಳಿ ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದರು.
ವಾನರ ದಾಳಿ : ಮದ್ರಸಾ ಅಧ್ಯಾಪಕ, ವಿದ್ಯಾರ್ಥಿಗೆ ಗಾಯ
ಕುಂಬಳೆ: ಇಲ್ಲಿನ ಸಿಎಚ್‌ಸಿ ರಸ್ತೆಯಲ್ಲಿರುವ ತ್ವಾಹ ಮಸೀದಿಯಲ್ಲಿ ಕಾರ್ಯಾಚರಿಸುವ ಮದ್ರಸಾ ಪರಿಸರದಲ್ಲಿ ವಾನರವೊಂದು ದಾಳಿ ಮಾಡಿದ್ದು, ಮದ್ರಸಾ ಅಧ್ಯಾಪಕ ಪವಾಸ್ ದಾರಿಮಿಯ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಮೀಪದ ರಸ್ತೆಯಲ್ಲಿ ಸೈಕಲ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ.
ಮರಳು ಸಂಗ್ರಹ : 7 ದೋಣಿ ನಾಶ
ಕಾಸರಗೋಡು: ಮೊಗ್ರಾಲ್‌ಪುತ್ತೂರು ಹೊಳೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ 7 ದೋಣಿಗಳನ್ನು ವಶಪಡಿಸಿಕೊಂಡ ಕುಂಬಳೆ ಪೊಲೀಸರು ಜೆಪಿಸಿ ಬಳಸಿ ಈ ಏಳು ದೋಣಿಗಳನ್ನು ನಾಶಗೊಳಿಸಿದರು. ಮರಳು ಸಾಗಾಟ ಬಗ್ಗೆ ದೂರು ಲಭಿಸಿತ್ತು. ಅದರಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Golden Jubilee: ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 1ಲಕ್ಷ ರೂ.ಗೆ ಏರಿಕೆ: ಸಚಿವ ತಂಗಡಗಿ
Rain Alert: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನ.1ರಂದು ಭಾರೀ ಮಳೆ ಸಾಧ್ಯತೆ
Thokottu: ಮೊಹಮ್ಮದ್ ಸೈಫ್ವಾನ್ ಕೊಲೆ ಆರೋಪಿಗಳು ಖುಲಾಸೆ
TPG Passes Away: ಬಿಪಿಎಲ್ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್ ನಂಬಿಯಾರ್ ನಿಧನ
Mangaluru: ವೆನ್ಲಾಕ್‌ಗೆ ಬಂದಿದ್ದ ಯುವತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.