India-China Border: ಉಭಯ ಸೇನಾ ವಾಪಸಾತಿ ಬೆನ್ನಲ್ಲೇ ಎಲ್‌ಎಸಿಯಲ್ಲಿ ಗಸ್ತು ಪುನಾರಂಭ
ದೀಪಾವಳಿ ನಿಮಿತ್ತ ಭಾರತ-ಚೀನ ಯೋಧರ ನಡುವೆ ಸಿಹಿ ವಿನಿಮಯ
Team Udayavani, Nov 1, 2024, 7:15 AM IST
ಹೊಸದಿಲ್ಲಿ: ಭಾರತ ಮತ್ತು ಚೀನ ಸೇನೆಗಳ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಗುರುವಾರ ಲಡಾಖ್‌ನ ಡೆಮ್ಚಾಕ್ ಮತ್ತು ಡೆಪ್ಸಾಂಗ್‌ನಲ್ಲಿ ಗಸ್ತು ಪುನಾರಂಭಗೊಂಡಿದೆ. ಈ ಮೂಲಕ 2020ರ ಗಾಲ್ವಾನ್ ಸಂಘರ್ಷದ ಮೂಲಕ ಉಭಯ ದೇಶಗಳ ನಡುವೆ ಆರಂಭವಾಗಿದ್ದ 4 ವರ್ಷಗಳ ವೈಮನಸ್ಸು ಕೊನೆಗೊಂಡಂತಾಗಿದೆ.
ಡೆಪ್ಸಾಂಗ್‌ನಲ್ಲಿ 5 ಮತ್ತು ಡೆಮ್ಚಾಕ್‌ನಲ್ಲಿ 2 ಗಸ್ತು ಕೇಂದ್ರಗಳು ಇದ್ದು, ಈಗ ಇಲ್ಲಿ ಗಸ್ತು ಪ್ರಕ್ರಿಯೆ ಆರಂಭವಾಗಿದೆ. 2020ರ ಗಾಲ್ವಾನ್ ಘರ್ಷಣೆ ಬಳಿಕ ಚೀನ ಸೈನಿಕರು ಭಾರತೀಯ ಯೋಧರ ಗಸ್ತು ಪ್ರಕ್ರಿಯೆಗೆ ತಡೆಯೊಡ್ಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕೂಡ ಚೀನದ ಗಸ್ತಿಗೆ ತಡೆ ಉಂಟುಮಾಡಿದ್ದರು. ಹೀಗಾಗಿ, ಎಲ್‌ಎಸಿಯ ವಿವಾದಿತ ಪ್ರದೇಶದಲ್ಲಿ ಗಸ್ತು ಸಂಪೂರ್ಣ ಸ್ಥಗಿತಗೊಂಡಿತ್ತು.
ಸಿಹಿ ವಿನಿಮಯ:
ಎರಡೂ ಕಡೆಯ ಸೈನಿಕರು ವಾಪಸಾಗಿರುವುದನ್ನು ಉಭಯ ದೇಶಗಳು ದೃಢಪಡಿಸಿಕೊಂಡ ಬಳಿಕ ಗುರುವಾರ ದೀಪಾವಳಿ ಹಬ್ಬದ ಅಂಗವಾಗಿ ಪೂರ್ವ ಲಡಾಖ್ ಸೇರಿದಂತೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯ ಹಲವು ಗಡಿ ಕೇಂದ್ರಗಳಲ್ಲಿ ಭಾರತ-ಚೀನ ಯೋಧರು ಸಿಹಿ ವಿನಿಮಿಯ ಮಾಡಿಕೊಂಡಿದ್ದಾರೆ. ಲಡಾಖ್‌ನ ಚುಶುಲ್- ಮೋಲ್ಡೋ, ದೌಲತ್ ಬೇಗ್ ಓಲ್ಡಿ ಗಡಿ, ಅರುಣಾಚಲದ ಬಮ್ ಲಾ ಮತ್ತು ವಾಚಾ, ಸಿಕ್ಕಿಂನ ನಾಥುಲಾ ಸೇರಿದಂತೆ ಒಟ್ಟು 5 ಪ್ರದೇಶಗಳಲ್ಲಿ ಸಿಹಿ ವಿನಿಮಯ ಮಾಡಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TTD ಹೊಸ ಮಂಡಳಿ: ಕರ್ನಾಟಕ ಮೂಲದ ನಿವೃತ್ತ ಸಿಜೆಐ ದತ್ತುಗೆ ಸ್ಥಾನ
New Delhi: ರಷ್ಯಾಗೆ ನೆರವು ಆರೋಪ; 19 ಭಾರತೀಯ ಸಂಸ್ಥೆಗಳಿಗೆ ಅಮೆರಿಕದಿಂದ ನಿರ್ಬಂಧ
Fadnavis: ಶೀಘ್ರವೇ ಮತ್ತಷ್ಟು ಕಾಂಗ್ರೆಸಿಗರು ಬಿಜೆಪಿ ಸೇರ್ಪಡೆ
TTD: ತಿರುಪತಿಯಲ್ಲಿ ಕೆಲಸ ಮಾಡುವವರೆಲ್ಲ ಹಿಂದೂ ಆಗಿರಬೇಕು
Seoul: ಉತ್ತರ ಕೊರಿಯಾದಿಂದ ಖಂಡಾಂತರ ಕ್ಷಿಪಣಿ ಪರೀಕ್ಷೆ, ರಷ್ಯಾ ನೆರವಿನ ಶಂಕೆ
MUST WATCH
ಹೊಸ ಸೇರ್ಪಡೆ
TTD ಹೊಸ ಮಂಡಳಿ: ಕರ್ನಾಟಕ ಮೂಲದ ನಿವೃತ್ತ ಸಿಜೆಐ ದತ್ತುಗೆ ಸ್ಥಾನ
New Delhi: ರಷ್ಯಾಗೆ ನೆರವು ಆರೋಪ; 19 ಭಾರತೀಯ ಸಂಸ್ಥೆಗಳಿಗೆ ಅಮೆರಿಕದಿಂದ ನಿರ್ಬಂಧ
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
MI: ಸೂರ್ಯ, ಹಾರ್ದಿಕ್ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್: ರೋಹಿತ್ ಹೇಳಿದ್ದೇನು?
Fadnavis: ಶೀಘ್ರವೇ ಮತ್ತಷ್ಟು ಕಾಂಗ್ರೆಸಿಗರು ಬಿಜೆಪಿ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.