New Policy: ಜಾನಪದ ಕ್ರೀಡೆ ಕಂಬಳಕ್ಕೆ ಅಂತಿಮ ನಿಯಮಾವಳಿ ಸಿದ್ಧ
ಶಿಸ್ತು, ಸಮಯ ಪಾಲನೆಗೆ ವಿಶೇಷ ಆದ್ಯತೆ, ಹಲವು ಬದಲಾವಣೆಗೆ ಸಮಿತಿ ಒಪ್ಪಿಗೆ
Team Udayavani, Nov 1, 2024, 7:40 AM IST
ಮಂಗಳೂರು: ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಋತು ಆರಂಭಗೊಳ್ಳುತ್ತಿದೆ. ಈ ಬಾರಿ ಸಮಯ ಪಾಲನೆಗೆ ಆದ್ಯತೆ ನೀಡಲು ನಿಯಮಾವಳಿ ಸೂತ್ರ ಅನುಷ್ಠಾನಕ್ಕೆ ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿದೆ.
ಇಲ್ಲಿಯವರೆಗೆ ಒಂದು ವಿಭಾಗದ ಕೋಣಗಳು ಕರೆಗೆ ಇಳಿಯಲು ಸುದೀರ್ಘ ಸಮಯ ತಗಲುತ್ತಿತ್ತು. ಇನ್ನು ಮುಂದೆ 30 ನಿಮಿಷಗಳೊಳಗೆ ಇದನ್ನು ಮುಕ್ತಾಯಗೊಳಿಸಬೇಕು. ಕರೆಗೆ ಇಳಿದ ಕೋಣಗಳನ್ನು ನಿಗದಿತ ಸಮಯದ ಒಳಗೆ ಬಿಡಬೇಕು. ಗಂತಿನಲ್ಲಿ ವಿನಾಕಾರಣ ಕಾಲ ಹರಣ ಮಾಡುವಂತಿಲ್ಲ. ಜೂನಿಯರ್ 2 ನಿಮಿಷ ಹಾಗೂ ಸೀನಿಯರ್ 5 ನಿಮಿಷಗಳ ಒಳಗೆ ಕರೆಗೆ ಬಾರದಿದ್ದಲ್ಲಿ ಇದ್ದ ಕೋಣಗಳಿಗೆ ವಾಕ್ ಓವರ್ ನೀಡಲಾಗುವುದು.
ಒಬ್ಬನಿಗೆ ಗರಿಷ್ಠ ನಾಲ್ಕು ಅವಕಾಶ
ಒಬ್ಬ ಓಟಗಾರ ಒಂದು ವಿಭಾಗದಲ್ಲಿ ಒಂದು ಜತೆ ಕೋಣಗಳನ್ನು ಓಡಿಸಿದಲ್ಲಿ 4 ವಿಭಾಗಗಳಲ್ಲಿ ಭಾಗವಹಿಸಲು ಮಾತ್ರ ಅವಕಾಶ. ಒಂದು ವಿಭಾಗದಲ್ಲಿ “ಎ’, “ಬಿ’ (ಒಂದೇ ಯಜಮಾನರ) ಕೋಣಗಳನ್ನು ಓಡಿಸಿದ್ದಲ್ಲಿ 3 ವಿಭಾಗಕ್ಕೆ ಸೀಮಿತಗೊಳಿಸಲಾಗುತ್ತದೆ. “ಎ’, “ಬಿ’, “ಸಿ’ ಮೂರು ಕೋಣಗಳನ್ನು ಓಡಿಸಿದ್ದಲ್ಲಿ ಮತ್ತೆ ಒಂದು ಜತೆ ಕೋಣ ಓಡಿಸಲು ಅವಕಾಶವಿರಲಿದೆ. ಕೋಣ ಬಿಡುವವರೂ ಒಂದು ವಿಭಾಗದಲ್ಲಿ ಒಂದು ಜತೆ ಬಿಡಬೇಕು. ಗರಿಷ್ಠ 4 ಜತೆ ಮಾತ್ರ (“ಎ’, “ಬಿ’ ಅವಕಾಶ) ಇರುತ್ತದೆ. ಪ್ರತಿಯೊಂದು ವಿಭಾಗದ ಸ್ಪರ್ಧೆಗಳು ಮುಗಿದ 10 ನಿಮಿಷಗಳಲ್ಲಿ ಮುಂದಿನ ಸ್ಪರ್ಧೆಗೆ ಚೀಟಿ ಹಾಕಬೇಕು. ಆ ಹೊತ್ತಿನಲ್ಲೇ ಯಾವ ಹೊತ್ತಿಗೆ ಸ್ಪರ್ಧೆ ಎಂಬುದನ್ನು ತಿಳಿಸಬೇಕು.
ಶೇಡಿಂಗ್ ಬಿಗಿ
ಹಿಂದಿನ ಕಂಬಳದ ಬಹುಮಾನ ವಿಜೇತ ಜೋಡಿ ಕೋಣಕ್ಕೆ ಯಾವುದೇ ಹೆಸರಿನಲ್ಲಿ ಓಡಿಸಿದರೂ “ಶೇಡಿಂಗ್’ (ಅದೇ ರೀತಿಯ ಸ್ಪರ್ಧೆ ಈ ಬಾರಿ ಸಿಗದಂತೆ ಮಾಡುವ ಕ್ರಮ) ಇರುತ್ತದೆ. ಒಂದು ಕೋಣ ಹಿಂದಿನ ಕಂಬಳದ ಯಜಮಾನನ ಹೆಸರು ಇದ್ದರೆ ಶೇಡಿಂಗ್ ನೀಡಬೇಕು. ಒಂದು ಕೋಣ ಇದ್ದು, ಬೇರೆಯವರ ಹೆಸರಿನಲ್ಲಿ ಓಡಿಸಿದರೆ ಶೇಡಿಂಗ್ ನೀಡುವುದಿಲ್ಲ.
ಆ್ಯಪ್ ಅಪ್‌ಡೇಟ್
ಕಿರಿಯ ವಿಭಾಗದಲ್ಲಿ ಅತಿ ಹೆಚ್ಚು ಕೋಣಗಳು ಇರುವುದರಿಂದ ಈ ವ್ಯವಸ್ಥೆಗೆ “ಆ್ಯಪ್’ ಬಳಸಿ ಸಾಲು ನಿರ್ಣಯಿಸಲಾ ಗುತ್ತದೆ. ಅನುಕೂಲಕ್ಕಾಗಿ ಕರೆಗೆ ಇಳಿಯುವ ಸಂದರ್ಭ ಮಂಜೊಟ್ಟಿಯಲ್ಲೇ ಹೆಸರು ನೋಂದಣಿ ಮಾಡಿಸಬೇಕು. ಎಲ್‌ಇಡಿ ಟೈಮರ್ ಸ್ಟಾರ್ಟಿಂಗ್‌ನಲ್ಲಿ ಅಳವಡಿಸಿ ಕೋಣಗಳ ಸಮಯ ಪಾಲನೆಗೆ ಸೈರನ್ ವ್ಯವಸ್ಥೆ ಜಾರಿಗೆ ಬರಲಿದೆ.
* ಸಾಂಪ್ರದಾಯಿಕ ಆಚರಣೆಯ ಕಂಬಳ ಬೆಳಗ್ಗೆ 10.45ಕ್ಕೆ ಪ್ರಾರಂಭ, ಮರುದಿನ ಬೆಳಗ್ಗೆ 10.45ಕ್ಕೆ ಮಕ್ತಾಯ
* ಇತರ ಕಂಬಳ ಬೆಳಗ್ಗೆ 9ಕ್ಕೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 9ಕ್ಕೆ ಮುಕ್ತಾಯ
ಸ್ಪರ್ಧೆಗೆ ನಿಗದಿತ ಸಮಯ ಪಾಲನೆ
ಹಗ್ಗ ಹಿರಿಯ: 10 ನಿಮಿಷ
ಹಗ್ಗ ಕಿರಿಯ: 7 ನಿಮಿಷ
ನೇಗಿಲು ಹಿರಿಯ: 8 ನಿಮಿಷ
ನೇಗಿಲು ಕಿರಿಯ: 6 ನಿಮಿಷ
ಅಡ್ಡ ಹಲಗೆ: 10 ನಿಮಿಷ
ತೀರ್ಪುಗಾರರಿಗೆ ಪ್ರತ್ಯೇಕ ನಿಯಮ
ಕಂಬಳ ಪ್ರಾರಂಭದ 30 ನಿಮಿಷ ಮೊದಲು ಗಂತಿನ ತೀರ್ಪು ಗಾರರು 2 ಜನ, ಮಂಜೊಟ್ಟಿ ತೀರ್ಪುಗಾರರು 3 ಜನ, 1 ಬರವಣಿಗೆದಾರರು ಹಾಜರಿರಬೇಕು. ರೊಟೇಶನ್ ಪದ್ಧತಿಯಂತೆ ಈ ತೀರ್ಪುಗಾರರು ಕಾರ್ಯನಿರ್ವಹಿಸಬೇಕು. ಬೆಳಗ್ಗೆ 8.30ರಿಂದ 12ರ ವರೆಗೆ ಈ ತೀರ್ಪುಗಾರರರಿಗೆ ಕೆಲಸ. ಅನಂತರ 2 ಗಂಟೆಗೊಬ್ಬರಂತೆ ಕಾರ್ಯನಿರ್ವಹಿಸಬೇಕು. ಮಂಜೊಟ್ಟಿ ತೀರ್ಪುಗಾರರು ಸೆನ್ಸಾರ್ ಲೈಟ್ ಹಾಗೂ ಟೈಮಿಂಗ್ಸ್ ನೋಡಿ ತೀರ್ಪು ನೀಡಬೇಕು. ಆಗ ಕೇವಲ ಲೈಟ್ ಮಾತ್ರ ಪರಿಗಣಿಸಬಾರದು. ಅಗತ್ಯ ಬಿದ್ದಲ್ಲಿ ಥರ್ಡ್ ಅಂಪಾಯರ್ ನಿರ್ಧಾರ ಪಡೆದುಕೊಳ್ಳಬೇಕು.
“ಕಂಬಳದ ವಿಷಯದಲ್ಲಿ ಪ್ರತಿ ಯೊಬ್ಬರಿಗೂ ಅವರವರದ್ದೇ ಆದ ಅಭಿಪ್ರಾಯ ಇದೆ. ಆದರೂ, ವ್ಯವಸ್ಥೆಯ ದೃಷ್ಟಿಯಿಂದ ಸತ್ಯ ಹಾಗೂ ವಾಸ್ತವವನ್ನು ಹುಡುಕಿ ಅದನ್ನು ಅಳವಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಈ ಬಾರಿಯಿಂದ ಕೆಲವು ನಿಯಮಗಳನ್ನು ಜಾರಿಗೆ ತರಲಾಗುವುದು.”
– ಡಾ| ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.