Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು

ಕನ್ನಡದ ಎಲ್ಲ ಭಾಗದ ಭಾಷೆಗಳಲ್ಲೂ ಸಿನೆಮಾ ಬರಲಿ , ಪ್ರಯೋಗಗಳು ಹೆಚ್ಚಲಿ , ಪ್ರಾದೇಶಿಕ ಸಂಸ್ಕೃತಿಯಿಂದ ಚಂದನವನ ಅರಳಲಿ

Team Udayavani, Nov 1, 2024, 9:14 AM IST

3-raj-b-shetty-2

ಕನ್ನಡ ಚಿತ್ರರಂಗ ನಿರಂತರವಾಗಿ ಹಲವು ಸವಾಲುಗಳನ್ನು ಎದುರಿಸಿಕೊಂಡೇ ಬಂದಿದೆ. ಮೂಲಸೌಕರ್ಯದಿಂದ ಹಿಡಿದು ಭಾಷೆಯ ತನಕ ಎದುರಾದ ಹಲವು ಸವಾಲುಗಳನ್ನು ಮೆಟ್ಟಿ ನಿಂತ ಹೆಗ್ಗಳಿಕೆ ಚಂದನವನದ್ದು. ಕರ್ನಾಟಕ ಈಗ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಕನ್ನಡ ಭಾಷಾ ಶುದ್ಧತೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ಸಾಮಾನ್ಯವಾಗಿ ಕಾಲಕಾಲಕ್ಕೆ ಪ್ರೇಕ್ಷಕರ ಅಭಿರುಚಿ ಬದಲಾಗುತ್ತಿರುತ್ತದೆ. ಹಾಗೆ ಬದಲಾಗೆಲ್ಲ ಅದಕ್ಕೆ ಪೂರಕವಾಗಿ ಸಮಾಜ ವರ್ತಿಸುತ್ತದೆ. ಸಮಾಜದ ಪ್ರತಿಬಿಂಬವಾಗಿರುವ ಚಿತ್ರರಂಗ ಇದಕ್ಕೆ ಹೊರತಲ್ಲ. ಕಾಲ ಹಾಗೂ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಾಹಿತ್ಯಿಕ ಸಂಗೀತ ಬದಲಾಗುತ್ತದೆ. ಬದಲಾಗುತ್ತಲೇ ಇರುತ್ತದೆ. ಅದು ಸಹಜವೂ ಕೂಡ. ಕನ್ನಡ ಚಿತ್ರರಂಗದಲ್ಲೂ ಕೂಡ ಸಾಕಷ್ಟು ಬದಲಾವಣೆಗಳನ್ನು ನಾವು ಗಮನಿಸಿದ್ದೇವೆ.

ಕನ್ನಡ ಚಿತ್ರಗಳಲ್ಲಿ ಹಿಂದೆ ಇದ್ದ ಸಾಹಿತ್ಯಿಕ ಸಂಗೀತ ಮರೆಯಾಗುತ್ತಿದೆ ಎಂಬ ಮಾತುಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ನನ್ನ ಪ್ರಕಾರ ಅದು ಮರೆಯಾಗುತ್ತಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆಯಷ್ಟೇ. ಸಿನೆಮಾದಲ್ಲಿ ಯಾವುದೂ ಶಾಶ್ವತವಲ್ಲ. ಯಾವುದೋ ಒಂದು ಅಂಶ ಹೆಚ್ಚು ಜನಪ್ರಿಯವಾದ ಸಮಯದಲ್ಲಿ ಯಾರೋ ಬಂದು ಅದನ್ನು ಬದಲಿಸಿದರು. ಆ ಹೊತ್ತಿಗೆ ಆ ಬದಲಾವಣೆ ಪ್ರಸಿದ್ಧಿ ಪಡೆಯಿತು. ಹೀಗೆ ಬದಲಾವಣೆಗಳು ನಿರಂತರಗೊಂಡವು. ಸಾಹಿತ್ಯಿಕ ಸಂಗೀತ ಮಾಯ ವಾಗಿದೆ ಎಂಬುದನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಮೂಲ ಜನಪದವನ್ನು ಇಷ್ಟಪಟ್ಟ ಜನ, ಅದನ್ನೇ ಕೊಂಚ ಬದಲಾವಣೆ ಮಾಡಿ ಸಿನೆಮಾದಲ್ಲಿ ಬಳಸಿದಾಗ ಅದನ್ನೂ ಇಷ್ಟಪಟ್ಟರು. ಕಾಲ ಹಾಗೂ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಾಹಿತ್ಯಿಕ ಸಂಗೀತ ಬದಲಾಗುತ್ತದೆ. ಬದಲಾಗುತ್ತಲೇ ಇರುತ್ತದೆ. ಹಿಂದಿನ ಸಾಹಿತ್ಯಿಕ ಸಂಗೀತಕ್ಕೆ ನಿರೀಕ್ಷಿತ ಬೆಲೆ ಸಿಗದ ಕಾರಣ ಕೆಲವು ಜನ, ಬೇರೆ ಮಾಧ್ಯಮಕ್ಕೆ ವಾಲಿರಲೂಬಹುದು.

ಭಾಷಾ ಶುದ್ಧತೆಯ ಸಮಸ್ಯೆ

ನನ್ನ ಪ್ರಕಾರ ಸಿನೆಮಾ ಮನರಂಜನೆ ಮಾತ್ರವಲ್ಲ, ಒಂದು ಸಂಸ್ಕೃತಿಯ ಪ್ರತಿಬಿಂಬ, ಕಲೆಯ ಭಾಗ. ಅಷ್ಟೇ ಅಲ್ಲ, ಸಿನೆಮಾ ವ್ಯಾಪಾರವೂ ಕೂಡ. ಸಾಮಾನ್ಯವಾಗಿ, ಸಿನೆಮಾದ ಯಾವುದೋ ಅಂಶ ಯಶಸ್ಸು ಕಂಡಾಗ, ಎಲ್ಲರೂ ಅದನ್ನೇ ಅನುಕರಿಸಲು ಮುಂದಾಗುತ್ತಾರೆ. ಟಪ್ಪಾಂಗುಚಿ ಹಾಡು, ನೃತ್ಯಗಳೇ ಹೆಚ್ಚಾಗಿದೆ ಎಂಬ ಮಾತನ್ನೂ ನಾವು ಕೇಳಿದ್ದೇವೆ. ಒಂದು ಸಿನೆಮಾದಲ್ಲಿ ಅದು ಪ್ರಸಿದ್ಧಿಯಾಗಿದೆ ಎಂದಾಕ್ಷಣ ಉಳಿದ ಸಿನೆಮಾಗಳಲ್ಲೂ ಅದು ಯಶಸ್ಸಾಗುತ್ತದೆ ಎಂಬುದು ಸಹಜ ನಂಬಿಕೆ. ಈ ಕಾರಣಕ್ಕಾಗಿ ಟಪ್ಪಾಂಗುಚಿ ಹೆಚ್ಚು ಪ್ರಾಮುಖ್ಯ ಪಡೆಯುತ್ತದೆ. ಈ ಹೋಲಿಕೆಯಿಂದ ಬಹಳಷ್ಟು ಜನ ಅದು ನಮ್ಮ ಸುತ್ತಮುತ್ತಲೇ ಇರುವ ಸಂಸ್ಕೃತಿ ಎಂದು ಭಾವಿಸುತ್ತಾರೆ. ಇಲ್ಲಿ ಭಾಷಾ ಶುದ್ಧತೆಗಿಂತ ಸಂಸ್ಕಾರ, ಸಂಸ್ಕೃತಿಯ ಶುದ್ಧತೆ ಮಹತ್ವದ್ದು.

ಉದಾಹರಣೆಗೆ; ಸಿನೆಮಾದಲ್ಲಿ ಒಂದು ಕಾನ್ವೆಂಟ್‌ ಶಾಲೆಯ ಸಂಸ್ಕೃತಿ ತೋರಿಸಬೇಕಾದರೆ, ಅಲ್ಲಿನ ಭಾಷೆಗೆ ಅನುಗುಣವಾಗಿ ತೋರಿಸಬೇಕು. ಕನ್ನಡ ಸಿನೆಮಾ ಎಂಬ ಮಾತ್ರಕ್ಕೆ, ಅಲ್ಲಿ ಸೂಕ್ತವಲ್ಲದ ಭಾಷೆ ಎಳೆದು ತಂದಾಗ ಅದು ಅಭಾಸವೆನಿಸುತ್ತದೆ. ಇನ್ನು ಸರಳವಾಗಿ ಹೇಳುವುದಾದರೆ, ಒಂದು ಮೀನಿನ ಮಾರುಕಟ್ಟೆಯ ದೃಶ್ಯ ಎಂದಾಗ, ಅಲ್ಲಿನ ಭಾಷೆ, ಸಂಸ್ಕೃತಿಯನ್ನು ಸರಿಯಾಗಿ ಬಿಂಬಿಸಬೇಕು. ಹಾಗೇ ಮಾಡಿದಾಗ ಮಾತ್ರ ಅದರ ನಿಖರತೆ ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರಸ್ತುತ ಕಾಲಮಾನದ ಸಿನೆಮಾಗಳು ಟಪ್ಪಾಂಗುಚಿ ಭಾಷೆಯ ಅಂಶಗಳನ್ನು ಬೇಡುತ್ತವೆ. ಏಕೆಂದರೆ ಅದು ಜನರಿಗೆ ಆಪ್ತವಾಗಿದೆ. ಭಾಷಾ ಶುದ್ಧತೆ ಮಾಯವಾಗುತ್ತಿರುವುದು ಸಿನೆಮಾದಲ್ಲಿ ಅಲ್ಲ, ಬದುಕಿನಲ್ಲಿ. ಬದುಕಿನಲ್ಲಿ ಮಾಯವಾದ ಕಾರಣ ಕಲೆಯಲ್ಲೂ ಭಾಷಾ ಶುದ್ಧತೆ ಕಡಿಮೆಯಾಗಿದೆ. ಕಲೆ ಬದುಕನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಭಾಷಾ ಅಶುದ್ಧತೆ ಅಲ್ಲಲ್ಲಿ ಕಾಣುವುದು ಸಹಜ.

ಸಾಹಿತ್ಯ ಕೃತಿಗಳ ಪ್ರಯೋಗವಾಗಬೇಕು

ಕನ್ನಡ ಚಿತ್ರರಂಗ ಪ್ರಸ್ತುತ ಕಾಲಘಟ್ಟದಲ್ಲಿ ತನ್ನ ಅಸ್ಮಿತೆ ಉಳಿಸಿಕೊಳ್ಳುವುದಕ್ಕಾಗಿ ಹೋರಾಡುತ್ತಿದೆ. ಸ್ಯಾಟಲೈಟ್‌, ಒಟಿಟಿ, ಚಿತ್ರಮಂದಿರಗಳಲ್ಲಿ ಸಿನೆಮಾಗಳೇ ಬರುತ್ತಿಲ್ಲ. ಉಸಿರುಗಟ್ಟಿದ ವಾತಾವರಣ ಇದ್ದಾಗ ಪ್ರಯೋಗಗಳು ಕಡಿಮೆಯಾಗುತ್ತವೆ. ಕಾಲಕ್ರಮೇಣ ಎಲ್ಲವೂ ಬದಲಾಗುತ್ತದೆ, ಪ್ರಯೋಗಗಳಿಗೂ ಹೊಸ ಆಯಾಮ ಸಿಗುತ್ತದೆ. ಇದು ಎಲ್ಲ ಚಿತ್ರರಂಗದಲ್ಲೂ ಸಹಜ. ನಮ್ಮ ಚಿತ್ರರಂಗ ಉತ್ಕೃಷ್ಟ ಸ್ಥಿತಿಯಲ್ಲಿದ್ದಾಗ ಒಳ್ಳೆಯ ಸಾಹಿತ್ಯಿಕ ಕೃತಿಗಳನ್ನು ಚಿತ್ರರೂಪಕ್ಕೆ ತಂದಿದ್ದೇವೆ.

ಅದರಿಂದ ನಾಡಿನಲ್ಲಷ್ಟೇ ಅಲ್ಲ, ಇಡೀ ಭಾರತದಲ್ಲಿ ಹೆಸರು ಮಾಡಿ, ಒಂದಿಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದೇವೆ. ಈಗಿರುವ ಸಮಸ್ಯೆ ಹೆಚ್ಚು ಸಿನೆಮಾಗಳು ನಿರ್ಮಾಣವಾಗುತ್ತಿಲ್ಲ. ಹಿಂದೆ ಬಂದ ಸಾಹಿತ್ಯಿಕ ಸಿನೆಮಾಗಳಿಗೆ ವಾಣಿಜ್ಯ ದೃಷ್ಟಿಯಿಂದ ದೊರೆತ ಸ್ಪಂದನೆ ಕಡಿಮೆ. ಹೀಗಿರುವಾಗ ನಿರ್ಮಾಪಕರು ಮತ್ತೆ ಆ ರೀತಿಯ ಸಿನೆಮಾ ಮಾಡುವ ಧೈರ್ಯ ತಾಳುವುದಿಲ್ಲ. ಯಾವುದೇ ಪ್ರಯೋಗ ಮಾಡದೇ ಈಗಿರುವುದನ್ನೇ ಉಳಿಸಿಕೊಳ್ಳುವ ಭರದಲ್ಲಿದ್ದೇವೆ. ಇದು ಚಿತ್ರರಂಗದ ಬೆಳವಣಿಗೆಗೆ ವಿರುದ್ಧ ಮತ್ತು ಏಕತಾನತೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಬದಲಾಗುತ್ತದೆ ಎಂಬ ನಂಬಿಕೆ ನನ್ನದು.

ನಮ್ಮ ಭಾಷೆ ಎಂದೆನಿಸಬೇಕು

ಕನ್ನಡ ಎಲ್ಲ ಭಾಷಾ ಶೈಲಿಯಲ್ಲೂ ಸಿನೆಮಾ ಬರಬೇಕು. ಇದು ಖುಷಿಯ ವಿಚಾರ. ಉತ್ತರ ಕರ್ನಾಟಕದ ಯಾವುದೋ ಮೂಲೆಯಲ್ಲಿರುವವರಿಗೆ ಸಿನೆಮಾ ಎಂದರೆ ಬೆಂಗಳೂರಿನ ಭಾಷೆ ಎಂಬ ಭಾವನೆ ಬರುತ್ತದೆ. ಇದರಿಂದ ಅವರ ಸುತ್ತಮುತ್ತಲಿನ ಕಥೆ, ಅದರ ಗಾಢತೆ, ಆಪ್ತತೆ, ಗೋಚರಿಸುವುದಿಲ್ಲ. ಸಿನೆಮಾ ಎಂದಾಗ ಅಲ್ಲಿನವರ ಮನಸ್ಸು ಬೆಂಗಳೂರು ಕಡೆ ಹೋಗುತ್ತದೆ. ಅದೇ ದಿಕ್ಕಿನಲ್ಲಿ ಯೋಚನೆ ಮಾಡುತ್ತಾರೆ. ಸಿನೆಮಾಗಳಲ್ಲಿ ಭಾಷೆಯ ಶೈಲಿ ಒಪ್ಪಿಗೆಯಾಗದಿದ್ದಾಗ, ಆ ಭಾಷಿಗರಿಗೆ ಅಸುರಕ್ಷತೆ ಭಾವ ಉಂಟಾಗುತ್ತದೆ. ಸಿನೆಮಾ ಒಂದು ಪ್ರಸಿದ್ಧ ಮಾಧ್ಯಮ. ಅಲ್ಲಿನ ಭಾಷೆ ಎಲ್ಲರಿಗೂ ಸುಲಭವಾಗಿ ತಲುಪುತ್ತದೆ. ಆಗ ಇದು ನಮ್ಮ ಭಾಷೆ, ಇದೇ ಸರಿ ಎಂದೆನಿಸುತ್ತದೆ. ಮೊದಲು ಸಿನೆಮಾಗಳಲ್ಲಿ ಮಂಗ ಳೂರು ಕನ್ನಡವನ್ನು ಕೇವಲ ಕಾಮಿಡಿಗಾಗಿ ಬಳಸುತ್ತಿದ್ದರು. ಈಗ ಅದೇ ಭಾಷಾ ಶೈಲಿಯ ಸಿನೆಮಾ ಬರುತ್ತಿರುವಾಗ ಎಲ್ಲರಿಗೂ ಮಂಗಳೂರು ಕನ್ನಡ ಇಷ್ಟವಾಗುತ್ತಿದೆ. ಈ ಮನ್ನಣೆ ಎಲ್ಲ ಭಾಷಾ ಶೈಲಿಗೂ ಸಿಗಬೇಕು.

ನಮ್ಮ “ರೂಪಾಂತರ’ ಸಿನೆಮಾದ ಒಂದು ಕಥೆಗೆ ಉತ್ತರ ಕರ್ನಾಟಕ ಭಾಷೆಯನ್ನೇ ಬಳಸಿದ್ದೆವು. ಅದಕ್ಕೆ ಪ್ರಶಂಸೆ ವ್ಯಕ್ತವಾಯಿತು. ಪ್ರತಿ ಭಾಷೆ, ಶೈಲಿಗೆ ಅದರದ್ದೇ ಆತ್ಮ ಇರುತ್ತದೆ. ಅದು ಆ ಭಾಷಿಕರಿಗೆ ಬಹು ಆಪ್ತತೆ ನೀಡುತ್ತದೆ. ಕಥೆಗಾರರು, ಚಿತ್ರ ನಿರ್ದೇಶಕರು ಇಂಥದ್ದೇ ಭಾಷಾ ಶೈಲಿ, ಸಂಸ್ಕೃತಿಯಲ್ಲಿ ಕಥೆ ರಚಿಸಬೇಕು ಮತ್ತದು ವಾಣಿಜ್ಯ ದೃಷ್ಟಿಯಿಂದಲೂ ಯಶಸ್ವಿಯಾಗಬೇಕು. ಅಂದಾಗ ಇನ್ನಷ್ಟು ಹೊಸ ಪ್ರಯತ್ನಗಳಿಗೆ ಅದು ದಾರಿ ಮಾಡಿಕೊಡುತ್ತದೆ. ಸದ್ಯ ಕನ್ನಡ ಚಿತ್ರರಂಗದ ಕೇಂದ್ರ ಬೆಂಗಳೂರು. ಸ್ಥಳೀಯ ಭಾಷಾ ಶೈಲಿ, ಸಂಸ್ಕೃತಿಯಲ್ಲೇ ಸಿನೆಮಾ ಬಂದಾಗ, ಚಿತ್ರರಂಗ ವಿಕೇಂದ್ರಿಕರಣವಾಗುತ್ತದೆ. ಆಗ, ನಮ್ಮ ಕರ್ನಾಟಕ, ನಮ್ಮ ಸಂಸ್ಕೃತಿ ಎಷ್ಟು ವಿಶಾಲವಾಗಿದೆ ಎಂದೆನಿಸುತ್ತದೆ. ಸಿನೆಮಾ ಮಾಡುವುದಷ್ಟೇ ಅಲ್ಲ, ಅದು ವಾಣಿಜ್ಯ ದೃಷ್ಟಿಯಿಂದ ಯಶಸ್ಸಾಗಬೇಕು. ಅಂದಾಗ ಅದಕ್ಕೊಂದು ಬೆಲೆ.

ಒಳ್ಳೆಯ ಕಾಲ ಬರಲಿದೆ

ಚಿತ್ರರಂಗದ ಸುಧಾರಣೆ ದೃಷ್ಟಿಯಿಂದ, ವೈಯಕ್ತಿಕವಾಗಿ ನಾನು ಒಳ್ಳೆಯ ಸಿನೆಮಾಗಳ ನಿರ್ಮಾಣ, ನಟನೆ, ನಿರ್ದೇಶನದಲ್ಲಿ ತೊಡಗಿಕೊಳ್ಳುತ್ತೇನೆ. ಮೊದಲಿಗಿಂತಲೂ ಚಿತ್ರ ಬರಹಗಾರರಿಗೆ ಈಗ ಹೆಚ್ಚಿನ ಗೌರವ, ಪ್ರಚಾರ ಸಿಗುತ್ತಿದೆ. ಇವರು ನಮ್ಮ ಸಿನೆಮಾ ಬರಹಗಾರರು ಎಂದು ಎಲ್ಲರು ಹೇಳಿಕೊಳ್ಳುತ್ತಿದ್ದಾರೆ. “ಕಾಟೇರ’ ಸಿನೆಮಾದ ಜಡೇಶ್‌, “ರಕ್ಕಸಪುರದೋಳ್‌’ ಹಾಗೂ “ಕೆಡಿ’ ಸಿನೆಮಾದಲ್ಲಿ ಕ್ರಾಂತಿಕುಮಾರ್‌, “ಭೀಮ’ದಲ್ಲಿ ಮಾಸ್ತಿ ಹೀಗೆ ಅನೇಕ ಬರಹಗಾರರು, ಸಂಭಾಷಣೆಕಾರರು ಈಗ ಮುನ್ನೆಲೆಗೆ ಬರುತ್ತಿದ್ದಾರೆ. ಹೇಗೆ ಚಿ. ಉದಯಶಂಕರ್‌ ಅವರು ಸಿನೆಮಾ ಬರೆದು ಅದನ್ನು ಯಶಸ್ವಿಗೊಳಿಸುತ್ತಿದ್ದರೋ, ಅದೇ ರೀತಿ 4-5 ಬರಹಗಾರರು ಗಟ್ಟಿಯಾಗಿ ನೆಲೆಯೂರಿದಾಗ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬದಲಾಗುತ್ತದೆ ಎಂಬುದು ನನ್ನ ಭಾವನೆ. ಮುಂದಿನ ದಿನಗಳಲ್ಲಿ ಇವರಿಗೆ ಇನ್ನಷ್ಟು ಗೌರವ ಸಿಗುತ್ತದೆ. ಒಳ್ಳೆಯ ಸಿನೆಮಾಗಳನ್ನು ಕನ್ನಡ ಚಿತ್ರರಂಗ ಕೊಡುತ್ತದೆ.

ಆಗಬೇಕಾದ್ದೇನು?

1. ಪ್ರಯೋಗಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದಾಗ ಏಕತಾನತೆ ನಿವಾರಿಸಬಹುದು

2. ಕನ್ನಡ ಎಲ್ಲ ಭಾಷಾ ಶೈಲಿಯಲ್ಲೂ ಸಿನೆಮಾ ಬರಬೇಕು.

3. ಚಿತ್ರರಂಗ ಬೆಂಗಳೂರಿಗೆ ಸೀಮಿತವಾಗದೆ ವಿಕೇಂದ್ರಿಕರಣವಾಗಬೇಕು

4. ಸಿನೆಮಾ ಬರಹಗಾರರಿಗೆಮತ್ತಷ್ಟು ಮನ್ನಣೆ ಸಿಗಬೇಕು

5. ಸಾಹಿತ್ಯ ಕೃತಿಗಳ ಪ್ರಯೋಗ ಹೆಚ್ಚಾಗಬೇಕು

-ರಾಜ್‌.ಬಿ.ಶೆಟ್ಟಿ

ನಟ, ನಿರ್ದೇಶಕ

ಟಾಪ್ ನ್ಯೂಸ್

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

1-104

Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!

fadnavis

Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

1-raga

UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Old age is not a Burden: ಹಿರಿಯರು ಎಂದಿಗೂ, ಯಾರಿಗೂ ಹೊರೆಯಲ್ಲ

Old age is not a Burden: ಹಿರಿಯರು ಎಂದಿಗೂ, ಯಾರಿಗೂ ಹೊರೆಯಲ್ಲ

Map1

Google ಮ್ಯಾಪ್‌ ಏಕೆ ದಾರಿ ತಪ್ಪುತ್ತದೆ? ಗೂಗಲ್‌ ಮ್ಯಾಪ್‌ ಹೇಗೆ ಹುಟ್ಟಿಕೊಂಡಿತು…

Sports

Sports ವಿದ್ಯಾರ್ಥಿಗಳಿಗೆ ಉತ್ತೇಜನ: ಮೂಲಸೌಕರ್ಯಕ್ಕೂ ಸಿಗಲಿ ಆದ್ಯತೆ

Pan card

PAN Card ಹೊಸ ಫೀಚರ್ಸ್‌, ಹೆಚ್ಚು ಸುರಕ್ಷಿತ

4-BSNL

BSNL: ಗತವೈಭವದತ್ತ ಬಿಎಸ್‌ಎನ್‌ಎಲ್‌?

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

5

Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

4

Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು

1-ckm

Thirthahalli: ಡಿ.7 ರಂದು 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ, ಜಾತ್ರ ಮಹೋತ್ಸವ

3

Gundlupete: ಟಿಪ್ಪರ್ ಹರಿದು ಕೇರಳ ಮೂಲದ ಬೈಕ್ ಸವಾರನ‌ ಕಾಲು ನಜ್ಜುಗುಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.