![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 1, 2024, 9:14 AM IST
ಹೊಸದಿಲ್ಲಿ: ಕಳೆದ 2 ವಾರಗಳಲ್ಲಿ ಭಾರತದ 400ಕ್ಕೂ ಅಧಿಕ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದು, ಈ ಕುರಿತ ತನಿಖೆಗೆ ಕೇಂದ್ರ ಸರಕಾರ ಈಗ ಅಮೆರಿಕ ಸರಕಾರ ಹಾಗೂ ಇಂಟರ್‌ಪೋಲ್‌ನ ಸಹಾಯ ಕೋರಿದೆ. ವಿಶೇಷವಾಗಿ ಅಮೆರಿಕದಲ್ಲಿರುವ ಖಲಿಸ್ಥಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ನೇತೃತ್ವದ ಸಿಖ್ ಫಾರ್ ಜಸ್ಟಿಸ್ ಜತೆಗೆ ಬೆದರಿಕೆ ಒಡ್ಡಿದವರು ಸಂಪರ್ಕ ಹೊಂದಿದ್ದರೇ ಎಂಬ ಮಾಹಿತಿ ಕಲೆಹಾಕಲು ಮುಂದಾಗಿದೆ.
ನ.1ರಿಂದ 19ರವರೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಭಾರತೀಯ ಸಿಕ್ಖ್ರಿಗೆ ಉಗ್ರ ಪನ್ನು ಕರೆ ನೀಡಿರುವಂತೆಯೇ ಕೇಂದ್ರ ಸರಕಾರದ ಈ ಕ್ರಮ ಮಹತ್ವ ಪಡೆದಿದೆ. ಭಾರತದ ಮನವಿಗೆ ಸ್ಪಂದಿಸಿರುವ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ) ಭಾರತಕ್ಕೆ ನೆರವು ನೀಡಲು ಮುಂದಾಗಿದೆ. ವಿಮಾನಗಳಿಗೆ ಬೆದರಿಕೆ ಒಡ್ಡಲು ದುಷ್ಕರ್ಮಿಗಳು ವಿಪಿಎನ್ ನೆಟ್‌ವರ್ಕ್ ಬಳಸಿದ್ದಾರೆ. ತನಿಖೆಯಲ್ಲಿ ಬ್ರಿಟನ್ ಮತ್ತು ಜರ್ಮನಿಯ ಕೆಲವು ಪ್ರದೇಶಗಳಿಂದ ಬೆದರಿಕೆ ಕರೆ ಮತ್ತು ಇ-ಮೇಲ್ ಬಂದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆ 2 ರಾಷ್ಟ್ರಗಳಿಂದ ತನಿಖೆಗೆ ಪೂರಕವಾದ ಮಾಹಿತಿ ಪಡೆಯುವುದಾಗಿ ಇಂಟರ್‌ಪೋಲ್ ಭರವಸೆ ನೀಡಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.