Israel ಬಯಸಿದರೆ ಕದನ ವಿರಾಮ: ಹಮಾಸ್ ನಾಯಕ
ಮೊದಲ ಬಾರಿಗೆ ಯುದ್ಧ ನಿಲ್ಲಿಸುವ ಬಗ್ಗೆ ಮಾತು
Team Udayavani, Nov 1, 2024, 12:07 PM IST
ಇಸ್ರೇಲ್ ಸಂಪುಟದಲ್ಲೂ ಕಾಳಗ ಸ್ಥಗಿತ ಬಗ್ಗೆ ಚರ್ಚೆ?
ಟೆಲ್‌ಅವೀವ್: ಲೆಬನಾನ್, ಗಾಜಾ ದಲ್ಲಿ ಹಮಾಸ್ ಹಾಗೂ ಹೆಜ್ಬುಲ್ಲಾ ಉಗ್ರರ ವಿರುದ್ಧ ಇಸ್ರೇಲ್ ಸಮರ ಸಾರಿ ರುವಂತೆಯೇ ‘ನಮ್ಮ ಷರತ್ತುಗಳಿಗೆ ಒಪ್ಪಿದರೆ ಇಸ್ರೇಲ್ ಜತೆಗೆ ಕದನ ವಿರಾಮಕ್ಕೆ ಸಿದ್ಧ’ ಎಂಬ ಸಂದೇಶವನ್ನು ಹಮಾಸ್ ಉಗ್ರ ಸಂಘಟನೆಯ ಹೊಸ ಮುಖ್ಯಸ್ಥ ನೈಮ್ ಕಾಸಿಮ್ ಘೋಷಿಸಿದ್ದಾನೆ. ಕಳೆದ ತಿಂಗಳು ಇಸ್ರೇಲ್ ದಾಳಿಯಿಂದ ಹಮಾಸ್ ಬಾಸ್ ಹಸನ್ ನಸ್ರಲ್ಲಾ ಅಸುನೀಗಿದ ಬಳಿಕ ಕಾಸಿಮ್‌ನ ನೇಮಕವಾಗಿತ್ತು.
‘ಇಸ್ರೇಲ್ ಯೋಧರು ದಾಳಿ ನಿಲ್ಲಿಸಿ ದರೆ ಮಾತ್ರ ಕದನ ವಿರಾಮ. ಈ ಪ್ರಸ್ತಾವ ವನ್ನು ಇಸ್ರೇಲ್ ಒಪ್ಪಿಕೊಂಡರೆ ನಾವು ಸಹಮತ ಸೂಚಿಸುತ್ತೇವೆ. ಆದರೆ ನಾವೇ ಯುದ್ಧ ನಿಲ್ಲಿಸುವ ಬಗ್ಗೆ ಪ್ರಸ್ತಾವ ಮಾಡುವುದಿಲ್ಲ’ ಎಂದು ಹೇಳಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ರೇಲ್ ಸರಕಾರದ ಸಚಿವರೊಬ್ಬರು ಸಂಭಾವ್ಯ ಕದನ ವಿರಾಮದ ಬಗ್ಗೆ ಪರಾಮರ್ಶೆ ನಡೆಯುತ್ತಿದೆ ಎಂದಿದ್ದಾರೆ. ಲೆಬನಾನ್ ಪಿಎಂ ನಜೀಬ್ ಮಿಕಾಟಿಯೂ ಕದನ ವಿರಾಮದ ಸುಳಿವು ನೀಡಿದ್ದಾರೆ. ಇದೇ ವೇಳೆ, ನಮ್ಮ ದಾಳಿಯ ಬೆದರಿಕೆ ಇಂದಾ ಗಿಯೇ ಇಸ್ರೇಲ್ ಪ್ರಧಾನಿ ನೆತನ್ಯಾಹು ತಮ್ಮ ಪುತ್ರನ ವಿವಾಹವನ್ನು ಮುಂದೂ ಡಿದ್ದಾರೆ ಎಂದು ಉಗ್ರ ಕಾಸಿಮ್ ಲೇವಡಿ ಮಾಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…
Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ
Mangaluru: ಇಂದು ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ
Mangaluru: ಕರಾವಳಿ ಕೆಥೋಲಿಕರಿಂದ ಮೃತರು, ಸಂತ ಭಕ್ತರ ವಿಶಿಷ್ಟ ಸ್ಮರಣೆ
Mangaluru: ತುಳು ವಿಕ್ಷನರಿ, ವಿಕಿಸೋರ್ಸ್ ಲೈವ್ ಆರಂಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.