Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ

ಮನೆ, ದೇವಸ್ಥಾನಗಳಲ್ಲಿ ಮಣ್ಣಿನ ಹಣತೆ ಬೆಳಗಿಸಿ ಸಂಭ್ರಮಿಸಿದ ಜನ; ಅಂಗಡಿಗಳು, ಅಪಾರ್ಟ್‌ಮೆಂಟ್‌ಗಳು, ಹಲವು ರಸ್ತೆಗಳಲ್ಲಿ ಆಕರ್ಷಕ ದೀಪಾಲಂಕಾರ

Team Udayavani, Nov 1, 2024, 12:42 PM IST

11-bng

ಬೆಂಗಳೂರು: ರಾಜಧಾನಿಯಲ್ಲಿ ಬೆಳಕಿನ ಹಬ್ಬವಾದ ದೀಪಾವಳಿ ಸಂಭ್ರಮ-ಸಡಗರ ಮೇಳೈಸಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಗುರುವಾರ ಪಟಾಕಿ ಸಿಡಿಸಿ ದೀಪಾವಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದ ದೃಶ್ಯಗಳ ಕಂಡು ಬಂದವು.

ಜಯನಗರ, ಜೆ.ಪಿ.ನಗರ, ವಿಜಯನಗರ, ರಾಜಾಜಿನಗರ, ಬಸವನಗುಡಿ, ಮಾರತ್ತಹಳ್ಳಿ, ಸರ್ಜಾಪುರ ರಸ್ತೆ, ಹೆಬ್ಟಾಳ, ಕೆಂಗೇರಿ, ರಾಜರಾಜೇಶ್ವರಿ ನಗರ, ವಿಲ್ಸನ್‌ ಗಾರ್ಡನ್‌, ಕಮರ್ಷಿಲ್‌ ಸ್ಟ್ರೀಟ್‌, ಶಾಂತಿನಗರ, ವಿಜಯನಗರ, ಯಲಹಂಕ, ಯಶವಂತಪುರ ಸೇರಿದಂತೆ ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಪುಟಾಣಿಗಳಿಂದ ಹಿಡಿದು ಹಿರಿಯರು ಕೂಡ ಹೊಸ ಬಟ್ಟೆ ತೊಟ್ಟು ಹಸಿರು ಪಟಾಕಿ ಸಿಡಿಸಿ ಖುಷಿ ಪಟ್ಟರು.

ಹಲವು ಅಪಾರ್ಟ್‌ಮೆಂಟ್‌ಗಳು, ಅಂಗಡಿಗಳು, ಹೋಟೆಲ್‌ಗ‌ಳು ಮತ್ತು ವಿವಿಧ ಬಡಾವಣೆಗಳು, ಬೀದಿಗಳು ಬಣ್ಣ ಬಣ್ಣ ವಿದ್ಯುತ್‌ ಅಲಂಕೃತ ದೀಪಗಳಿಂದ ಕಂಗೊಳಿಸಿದವು.

ಗುರುವಾರ ರಾತ್ರಿ 8 ಗಂಟೆ ಕಳೆಯುತ್ತಿದ್ದಂತೆ ಬೆಂಗಳೂರಿನಾದ್ಯಂತ ವಿವಿಧ ಬಗೆಯ ಪಟಾಕಿಗಳು ಆಗಸದತ್ತ ಚಿಮ್ಮಿ ಕಣ್ಮನಸೂರೆಗೊಳ್ಳುವಂತೆ ಮಾಡಿತ್ತು. ಹೂವಿನ ಆಕಾರದ ಪ್ಲವರ್‌ಪಾಟ್‌ ಪಟಾಕಿಗಳು ಆಕರ್ಷಕವಾಗಿದ್ದವು. ಮನೆ ಮುಂದಿನ ಬಹುತೇಕ ರಸ್ತೆಗಳಲ್ಲಿ ಪಟಾಕಿಗಳದ್ದೇ ಸದ್ದು ಕೇಳಿ ಬರುತ್ತಿತ್ತು. ಸೇರಿ ಬೆಂಗಳೂರಿನ ಗಲ್ಲಿ ರಸ್ತೆಗಳಲ್ಲಿ ಪಟಾಕಿ ತ್ಯಾಜ್ಯಗಳೇ ತುಂಬಿದ್ದವು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹೆಚ್ಚಿನ ಕುಟುಂಬಸ್ಥರು ಕೈಯಲ್ಲಿ ಸುರ್‌ ಸುರ್‌ ಬತ್ತಿ ಹಿಡಿದು ಹರ್ಷಗೊಂಡರೆ, ಯುವಕರು ಮಾಲೆ ಪಟಾಕಿ, ಲಕ್ಷ್ಮಿ ಪಟಾಕಿ, ಆಕಾಶದತ್ತ ರಾಕೇಟ್‌ ಸಿಡಿಸಿ ಸಂಭ್ರಮಿಸಿದರು. ತಡರಾತ್ರಿವರೆಗೂ ಪಟಾಕಿಗಳದ್ದೇ ಸದ್ದು ಕೇಳಿ ಬರುತ್ತಿದ್ದವು.

ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಕರ್ನಾಟಕ ರಾಜ್ಯೋ ತ್ಸವ ಮತ್ತು ದೀಪಾವಳಿ ಹಿನ್ನೆಲೆಯಲ್ಲಿ ಇಡೀ ಬೀದಿ ಯನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ಚಿತ್ತಾರದೊಂದಿಗೆ ಇಡೀ ಕಮರ್ಷಿಯಲ್‌ ಸ್ಟ್ರೀಟ್‌ ಪ್ರದೇಶ ಝಗಮಗಿಸುತ್ತಿತ್ತು. ರಾತ್ರಿ 8 ಗಂಟೆಯಾಗುತ್ತಿದ್ದಂತೆ ಬೀದಿಗಳಲ್ಲಿ ಕಾಣಿಸಿಕೊಂಡು ಪಟಾಕಿ ಪ್ರಿಯರು ಆಕಾಶದೆತ್ತರ ಹಸಿರು ಬಣ್ಣಗಳ ಪಟಾಕಿ ಸಿಡಿಸಿ ಹಬ್ಬಕ್ಕೆ ಮತ್ತಷ್ಟು ಕಳೆತಂದರು. ಪುಟಾಣಿ ಮಕ್ಕಳು ಸುರ್‌ ಸುರ್‌ ಬತ್ತಿ ಹಚ್ಚಿ ಖುಷಿ ಪಟ್ಟರು.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಳೆದೆರಡು ದಿನ ಗಳಿಂದಲೂ ಜನಜಂಗುಳಿಯಿದೆ. ಹಬ್ಬಕ್ಕಾಗಿ ಪೂಜಾ ಸಾಮಗ್ರಿಗಳು, ಜವಳಿ, ಹೂವು, ಹಣ್ಣು, ಪಟಾಕಿ ವ್ಯಾಪಾರದ ಭರಾಟೆ ಜೋರಾಗಿದೆ. ನಗರದ ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತ ಅವೆನ್ಯೂ ರೋಡ್‌ ಸೇರಿದಂತೆ ಚಿಕ್ಕಪೇಟೆವರೆಗೂ ಸಂಚಾರ ದಟ್ಟಣೆ ವಿಪರೀತವಾಗಿತ್ತು. ಬನಶಂಕರಿ ಮಾರುಕಟ್ಟೆ, ಗಾಂಧಿ ಬಜಾರ್‌, ಯಶವಂತಪುರ, ಬಸವನಗುಡಿ, ಮಲ್ಲೇಶ್ವರ, ಕೆ.ಆರ್‌. ಪುರ ಸೇರಿದಂತೆ ರಾಜಧಾನಿಯ ಹಲವು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ನಿಯಮ ಉಲ್ಲಂಘಿಸಿದರೆ ಪೊಲೀಸರಿಗೆ ಮಾಹಿತಿ ನೀಡಿ:

ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದೆ. ನಿಗದಿತ ಅವಧಿ ಬಿಟ್ಟು ಸಮಯ ಮೀರಿ ಪಟಾಕಿ ಸಿಡಿಸಿದವರ ವಿರುದ್ಧ ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘನೆ ಆರೋಪದಡಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಈ ಕುರಿತು ಸಾರ್ವಜನಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬಹುದು.

ಜನನಿಬಿಡ ಪ್ರದೇಶಗಳಲ್ಲಿ ಮುಖ್ಯ ರಸ್ತೆಗಳಲ್ಲಿ ಹಾಗೂ ವಾಹನಗಳನ್ನು ಪಾರ್ಕಿಂಗ್‌ ಮಾಡಿರುವ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು. ತೆರೆದ ಮೈದಾನಗಳಲ್ಲಿ, ಜನಜಂಗುಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮ ಅನುಸರಿಸಿಕೊಂಡು ಹಚ್ಚಬೇಕು. ಪಟಾಕಿ ಸಿಡಿಸುವಾಗ ಮೂಕ ಪ್ರಾಣಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಪಟಾಕಿ ಸಿಡಿಸುವ ವೇಳೆ ಯಾವುದಾದರೂ ಅವಘಡ ಸಂಭವಿಸಿದಲ್ಲಿ ತಕ್ಷಣವೇ 112 ಹಾಗೂ 108ಕ್ಕೆ ಸಂಪರ್ಕಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ನೂಕು ನುಗ್ಗಲಿನಲ್ಲಿ ಕೈಗೆ ಸಿಕ್ಕ ಪಟಾಕಿ ಖರೀದಿ

ನಗರದಾದ್ಯಂತ 68 ಮೈದಾನಗಳಲ್ಲಿ ತಲೆ ಎತ್ತಿರುವ 315 ಪಟಾಕಿ ಮಳಿಗೆಗಳಲ್ಲೂ ಗ್ರಾಹಕರ ನೂಕು-ನುಗ್ಗಲು ಗುರುವಾರ ಹೆಚ್ಚಾಗಿತ್ತು. ಪಟಾಕಿ ಬಾಕ್ಸ್‌ನಲ್ಲಿ ಅಳವಡಿಸಿರುವ ಕ್ಯೂಆರ್‌ ಕೋಡ್‌ ಗಳನ್ನು ಸ್ಕ್ಯಾನ್‌ ಮಾಡಿ ಅದು ಗ್ರೀನ್‌ ಪಟಾಕಿಯೇ ಎಂಬುದನ್ನು ಪರಿಶೀಲಿಸುವಷ್ಟು ತಾಳ್ಮೆ ಗ್ರಾಹಕರಿಗೆ ಇರಲಿಲ್ಲ. ಪ್ರತಿ ಮೈದಾನಗಳಲ್ಲೂ ಪಟಾಕಿ ಖರೀದಿಸಲು ಕುಟುಂಬ ಸಮೇತರಾಗಿ ಬಂದಿದ್ದ ಸಾವಿರಾರು ಜನರ ನಡುವೆ ಕೈಗೆ ಸಿಕ್ಕ ಪಟಾಕಿ ಖರೀದಿಸಿ ತೆರಳುತ್ತಿರುವ ದೃಶ್ಯ ಕಂಡು ಬಂತು. ಇದನ್ನು ಮೊದಲೇ ಅರಿತಿದ್ದ ಪಟಾಕಿ ವ್ಯಾಪಾರಿಗಳು ನಿಷೇದಿತ ಪಟಾಕಿಗಳ ಬಾಕ್ಸ್‌ಗಳಿಗೆ ಗ್ರೀನ್‌ ಪಟಾಕಿ ಲೇಬಲ್‌ ಅಂಟಿಸಿ ಮಾರಾಟ ಮಾಡುತ್ತಿರುವ ಆರೋಪವೂ ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಇನ್ನು ಪರಿಸರ ಅಧಿಕಾರಿಗಳು ಹಾಗೂ ಖಾಕಿ ಕಣ್ತಪ್ಪಿಸಿ 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿಗಳ ಮಾರಾಟವೂ ಸದ್ದಿಲ್ಲದೇ ನಡೆಯುತ್ತಿದೆ ಎನ್ನಲಾಗುತ್ತಿದೆ. ಇಂದು ಲಕ್ಷ್ಮೀ ಪೂಜೆ ಅಂಗಡಿ ಹಾಗೂ ಮನೆಗಳಲ್ಲಿ ಶುಕ್ರವಾರ ಅಮಾವಾಸ್ಯೆ ಹಾಗೂ ಲಕ್ಷ್ಮೀ ಪೂಜೆ ಅಂಗವಾಗಿ ವಿಶೇಷ ಪೂಜೆಗಳು ನಡೆಯಲಿವೆ. ಅಂಗಡಿಗಳನ್ನು ಅಲಂಕರಿಸಿ ಲಕ್ಷ್ಮೀದೇವಿ ದೇವಿ ಪ್ರತಿಷ್ಠಾಪಿಸಿ ಅದ್ಧೂರಿ ಪೂಜೆಗಳು ನಡೆಯಲಿವೆ. ಜೊತೆಗೆ ವಾಹನ, ಯಂತ್ರೋಪಕರಣ, ಸಲಕರಣೆಗಳ ಪೂಜೆಗಳು ಜರುಗಲಿವೆ. ಶನಿವಾರ ಗೋಪೂಜೆ ಸೇರಿ ಇತರೆ ಆಚರಣೆಗಳು ನಡೆಯಲಿವೆ. ಹಬ್ಬದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ವಿದ್ಯು ದೀಪಾಲಂಕಾರ ಮಾಡಲಾಗಿದ್ದು, ಮನೆ, ದೇವಸ್ಥಾನಗಳನ್ನು ಆಕಾಶಬುಟ್ಟಿ, ಹಣತೆಗಳ ಸಾಲು ಬೆಳಗಿದವು.

 

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.