Waqf ವಿವಾದ ಹಿನ್ನೆಲೆ ಭೂದಾಖಲೆ ಪರಿಶೀಲನೆಗೆ ವಿಎಚ್‌ಪಿ ಮನವಿ
Team Udayavani, Nov 1, 2024, 2:46 PM IST
ಮಂಗಳೂರು: ರಾಜ್ಯದ ವಿಜಯಪುರ ಸಹಿತ ಹಲವು ಜಿಲ್ಲೆಗಳಲ್ಲಿ ರೈತರ ಭೂಮಿ, ಮಠ, ಆಶ್ರಮಗಳ ಜಮೀನು ವಕ್ಫ್ ಆಸ್ತಿಯೆಂದು ಪಹಣಿ(ಆರ್‌ಟಿಸಿ)ಯಲ್ಲಿ ನಮೂದಾದ ಬಗ್ಗೆ ವರದಿಗಳು ಕೇಳಿ ಬರುತ್ತಿದ್ದು, ಎಲ್ಲರೂ ತಮ್ಮ ಭೂ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.
ವಕ್ಫ್ಬೋರ್ಡ್ ಮತ್ತು ವಕ್ಫ್ ಕಾನೂನು ಮುಖಾಂತರ ದೇಶದಲ್ಲಿ ಲಕ್ಷಾಂತರ ಎಕ್ರೆ ಭೂಮಿಯನ್ನು ಕಬಳಿಕೆ ಮಾಡುವ ಹುನ್ನಾರ ನಡೆಯುತ್ತಿದೆ. ಒಂದು ವೇಳೆ ದಾಖಲೆಗಳಲ್ಲಿ ಬದಲಾವಣೆಯಾಗಿದ್ದರೆ ಕೂಡಲೇ ಜಿಲ್ಲಾಡಳಿತ ಅಥವಾ ವಿಶ್ವಹಿಂದೂ ಪರಿಷತ್ ಗಮನಕ್ಕೆ ತರಬೇಕು. ಭೂಮಿ ಕಬಳಿಕೆಯ ಈ ಷಡ್ಯಂತ್ರದ ವಿರುದ್ಧ ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ. ಈಗಾಗಲೇ ಕಬಳಿಕೆಯಾದ ಭೂಮಿಯನ್ನು ವಾಪಸು ಪಡೆಯಲು ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ
Deepawali; ಸರಣಿ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.