Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ
Team Udayavani, Nov 1, 2024, 11:07 PM IST
ಮಣಿಪಾಲ: ಐ.ಟಿ. ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ 7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್ ಸರ ತೆಗೆದುಕೊಂಡು ಹೋಗಿ ಮೋಸ ಮಾಡಿರುವ ಘಟನೆ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಳ್ಳಿ ಗ್ರಾಮದ ನಿವಾಸಿ ಪೆರಂಪಳ್ಳಿ ರಸ್ತೆಯ ಜ್ಯೂಲಿಯಟ್ ಅವರು 4 ತಿಂಗಳಿನಿಂದ ಪೆರಂಪಳ್ಳಿಯ ಸುನೀತಾ ಅವರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಕೆಲಸದಾಕೆ ಬಳಿ ಮನೆಯ ಯಜಮಾನಿ ತನ್ನ ಮತ್ತು ಗಂಡನ ನಡುವೆ ಇದ್ದ ಮನಸ್ತಾಪದ ಬಗ್ಗೆ ಹೇಳಿಕೊಂಡಿದ್ದರು. ಸುನೀತಾ ಅವರು ಜೂಲಿಯೆಟ್‌ಗೆ ಗಂಡನಿಗೆ ವಿಚ್ಛೇದನ ಕೊಡುವಂತೆ ಸಲಹೆ ನೀಡಿದ್ದರು. ಬೇಸರಗೊಂಡ ಜ್ಯೂಲಿಯೆಟ್ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದರು. ತಾಯಿಯನ್ನು ಮನೆಗೆ ಬರಲು ಹೇಳಿ ಅ. 10ರಂದು ತಾಯಿಯಲ್ಲಿ ಬಟ್ಟೆಬರೆ ಹಾಗೂ ಸ್ವಲ್ಪ ಚಿನ್ನ ಹಾಗೂ ಗಂಡನ ಮನೆಯ ಲಾಕರ್‌ನಲ್ಲಿ ಇರಿಸಿದ್ದ 10 ಲಕ್ಷ ರೂಪಾಯಿಯಲ್ಲಿ 1 ಲಕ್ಷ ರೂ. ಹಣವನ್ನು ನೀಡಿದ್ದರು.
ಅ. 29ರಂದು ಬೆಳಗ್ಗೆ 10.30ಕ್ಕೆ ಗಂಟೆಗೆ ಜ್ಯೂಲಿಯೆಟ್ ಮನೆಯಲ್ಲಿದ್ದಾಗಲೇ ಸುನೀತಾ ಅವರು ಸ್ಟ್ಯಾನಿ ಅವರೊಂದಿಗೆ ಮನೆಗೆ ಬಂದು ಐ.ಟಿ. ಅಧಿಕಾರಿಗಳು ಬಂದಿದ್ದಾರೆ. ನಿಮ್ಮ ಮನೆಗೆ ರೈಡ್ ಮಾಡುತ್ತಾರೆ. ಲಾಕರ್‌ನಲ್ಲಿ ಇದ್ದ ಹಣ ಹಾಗೂ ಒಡವೆಯನ್ನು ತೆಗೆಯಬೇಕು ಎಂದು ಹೇಳಿ ಲಾಕರ್ ಕೀ ತೆಗೆದುಕೊಂಡು ಲಾಕರ್ ಓಪನ್ ಮಾಡಿ ಅದರಲ್ಲಿ ಇದ್ದ ಹಣದಲ್ಲಿ 1.50 ಲಕ್ಷ ರೂ.ಗಳನ್ನು ಜ್ಯೂಲಿಯೆಟ್ ಅವರ ಬ್ಯಾಗ್ ಗೆ ಹಾಕಿ ಉಳಿದ 7 ಲಕ್ಷ 50 ಸಾವಿರ ರೂ. ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್ ನೆಕ್ಲೆಸ್ ಅವಳ ಚೀಲದಲ್ಲಿ ಹಾಕಿಕೊಂಡು ನನ್ನಲ್ಲಿ ಇರಲಿ ಆನಂತರ ಕೊಡುತ್ತೇನೆ ಎಂದು ಹೇಳಿದ್ದರು. ಐ.ಟಿ.ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ ಸುನೀತಾ ಹಾಗೂ ಸ್ಟಾನಿ7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್ ಸರವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Trading: ಆನ್ಲೈನ್ ಲಿಂಕ್ ಅಪ್ಲಿಕೇಶನ್ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
Padubidri: ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್ ಢಿಕ್ಕಿ… ಮಹಿಳೆಗೆ ಗಾಯ
Indrali ರೈಲ್ವೇ ನಿಲ್ದಾಣಕ್ಕೆ ಶೆಲ್ಟರ್ ಅಳವಡಿಕೆ
Deepavali ಹಿರಿಯರ ನೆನಪಿನ ಬೆಳಕು; ನರಕ ಚತುರ್ದಶಿಗೂ ಮೊದಲೇ ನಡೆಯುತ್ತದೆ ಸೈತಿನಕ್ಲೆನ ಪರ್ಬ
Udupi: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.