Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
Team Udayavani, Nov 2, 2024, 8:00 AM IST
ದೇಶದ ಪ್ರತೀ ನಾಗರಿಕರ ಬದುಕಿನ ಮೇಲೆ ರಾಜಕೀಯ ಕ್ಷೇತ್ರ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತದೆ. ನಾವಿಲ್ಲಿ ಕೈಗೊಳ್ಳುವ ಒಂದೇ ಒಂದು ನಿರ್ಣಯ ಜನರ ಬದುಕಿನಲ್ಲಿ ಮಹತ್ತರ ಬದಲಾವಣೆ ತರುತ್ತದೆ. ಆದ್ದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಹತ್ತಾರು ಬಾರಿ ಯೋಚಿಸಬೇಕು ಎಂಬುದನ್ನು ನನ್ನ ಈವರೆಗಿನ ರಾಜಕೀಯ ಅನುಭವದಲ್ಲಿ ಕಂಡುಕೊಂಡಿದ್ದೇನೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ, ದೇಶಾದ್ಯಂತ ವ್ಯಾಪಿಸಿಕೊಂಡಿರುವುದು ಜನಜೀವನ ಕೇಂದ್ರಿತ ದೃಷ್ಟಿಯಿಂದಲೇ ಹೊರತು, ಇದರ ಹಿಂದೆ ಬೇರಾವ ಕಾರಣವೂ ಇಲ್ಲ. ತೀರಾ ಬಡವನ ಬಗ್ಗೆ ಯೋಚಿಸಿ ಆತ ಅಥವಾ ಆಕೆಯನ್ನು ಬಡತನದಿಂದ ಹೇಗೆ ಮೇಲೆತ್ತ ಬಹುದೆಂದು ನಮ್ಮ ಪಕ್ಷ ಚಿಂತಿಸುತ್ತದೆ. ಆ ಚಿಂತನೆಯಿಂದಲೇ ಹುಟ್ಟಿಕೊಂಡ ಯೋಜನೆ ಯಾದ ಗ್ಯಾರಂಟಿಗಳು ರಾಜಕಾರಣದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ. ಈ ಯೋಜನೆ ಸುಖಾಸುಮ್ಮನೆ ಚುನಾವಣೆ ಗೆಲ್ಲಲು ತಂದ ತಂತ್ರವಲ್ಲ. ಇದು ಹತ್ತಾರು ಬಾರಿ ಯೋಚಿಸಿ, ಅಳೆದು ತೂಗಿ ಜಾರಿ ಮಾಡಿದ ಯೋಜನೆ.
ಎಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುಜೇìವಾಲ ಹಾಗೂ ನಾನು ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಕರ್ನಾಟಕದ ಆ ರೂವರೆ ಕೋಟಿ ಜನರಿಗೆ ಕಾಂಗ್ರೆಸ್ ಏನು ವಾಗ್ಧಾನ ನೀಡಿತ್ತೋ ಅದನ್ನು ಈಡೇರಿಸಿದ್ದೇವೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ, ಗ್ಯಾರಂಟಿ ಗಳನ್ನು ಜಾರಿ ಮಾಡಿದ ಅನಂತರ ಆರ್ಥಿಕ ನಷ್ಟ, ಆರ್ಥಿಕ ವ್ಯವಸ್ಥೆ ಯಲ್ಲಿ ಅಸಮತೋಲನ ಎಂದೆಲ್ಲ ಟೀಕೆಗಳು ಕೇಳಿ ಬಂದ ವು. ಈ ಟೀಕೆಗಳು ಇನ್ನೂ ನಿಂತಿಲ್ಲ. ಪ್ರತೀ ಕುಟುಂಬಕ್ಕೆ ತಿಂಗಳಿಗೆ ಕನಿಷ್ಠ 4,000 ರೂಪಾಯಿ ನೀಡುವ ಈ ಯೋಜನೆ, ಆರ್ಥಿಕತೆಯನ್ನು ವಿಭಿನ್ನ ಆಯಾಮದಿಂದ ಸುಧಾರಿಸುತ್ತದೆ ಎನ್ನುವುದನ್ನು ಟೀಕಾ ಕಾರರು ಇನ್ನೂ ಅರಿತುಕೊಂಡಿಲ್ಲ. ಇವೇ ಪ್ರತಿಪಕ್ಷಗಳು ಅಧಿಕಾರ ದಲ್ಲಿ¨ªಾಗ ಯೋಜನೆ ತರುವುದು, ಅದಕ್ಕೆ ಅನುದಾನ ನಿಗದಿಪ ಡಿಸುವುದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. ಆ ಯೋಜನೆ ಯಶಸ್ವಿ ಯಾಗಿದೆಯೇ, ಅದು ಜನಜೀವನದ ಮೇಲೆ ಪರಿಣಾಮ ಬೀರಿದೆಯೇ ಎಂಬ ಅಧ್ಯಯನ ಕೂಡ ನಡೆದಿಲ್ಲ. ಆದರೆ ಗ್ಯಾರಂ ಟಿಗಳು ಹಾಗಲ್ಲ. ಗ್ಯಾರಂಟಿಗಳು ಯಾವ ಮಟ್ಟಿಗೆ ಯಶಸ್ವಿಯಾಗಿದೆ ಎಂದರೆ, ಬಡ ವೃದ್ಧೆಯೊಬ್ಬರು ಗ್ಯಾರಂಟಿಯ ಹಣದಲ್ಲಿ ಇಡೀ ಹಳ್ಳಿಗೆ ಊಟ ಹಾಕಿಸುತ್ತಾರೆ. ನೂರಾರು ಕನಸು ಕಟ್ಟಿಕೊಂಡ ಮಹಿಳೆ ಗ್ಯಾರಂಟಿಯ ಹಣದಲ್ಲಿ ಫ್ರಿಜ್ ಖರೀದಿಸುತ್ತಾರೆ. ಉಚಿತ ಪ್ರಯಾಣಕ್ಕಾಗಿ ಬಸ್ ಹತ್ತುವ ವೃದ್ಧೆ ಬಸ್ಸಿನ ಬಾಗಿಲಿಗೆ ನಮಸ್ಕಾರ ಮಾಡುತ್ತಾರೆ. ಈ ಎಲ್ಲ ಘಟನೆಗಳು ಗ್ಯಾರಂಟಿಗಳ ಯಶಸ್ಸಿನ ಗಾಥೆಯನ್ನು ಸಾರುತ್ತವೆ.
ಹರಿದುಬಂದ ಆದಾಯ!
ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ ಎನ್ನುವವರು ಈ ಅಂಕಿ ಅಂಶ ನೋಡಬೇಕು. ರಾಜ್ಯ ಸರಕಾರ ಆದಾಯ ಸಂಗ್ರಹದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ. ಏಳು ತಿಂಗಳಲ್ಲಿ 1.03 ಲಕ್ಷ ಕೋಟಿ ರೂ. ಆದಾಯ ಸರಕಾರದ ಖಜಾನೆಗೆ ಹರಿದುಬಂದಿದೆ. ಈ ಆರ್ಥಿಕ ವರ್ಷದ ನಿಗದಿತ ಗುರಿಯ ಶೇ.53ರಷ್ಟು ಸಾಧನೆ ಈಗಲೇ ಪೂರ್ಣಗೊಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಸಾಧನೆಯ ಪ್ರಮಾಣ ಶೇ.11.2ರಷ್ಟು ಅಧಿಕವಾಗಿದೆ. ಅಂದರೆ ಗ್ಯಾರಂಟಿಗಳು ಜಾರಿಯಲ್ಲಿ¨ªಾಗಲೂ ಸರಕಾರದ ಆದಾಯ ಹೆಚ್ಚುತ್ತಲೇ ಇದೆ. 2024-25ರ ಮೊದಲ ತ್ತೈಮಾಸಿಕದಲ್ಲಿ 2.2 ಶತಕೋಟಿ ರೂ.ಗೂ ಅಧಿಕ ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಣೆಯಾಗಿದೆ. ಈ ವಿಷಯದಲ್ಲಿ ಕರ್ನಾಟಕ, ಗುಜರಾತ್ ರಾಜ್ಯವನ್ನೂ ಹಿಂದಿಕ್ಕಿದೆ.
ಇಷ್ಟೆಲ್ಲ ಇದ್ದರೂ “ಖಜಾನೆ ಖಾಲಿ’ ಎನ್ನುವ ಟೊಳ್ಳು ಆರೋಪ ಮಾತ್ರ ಮುಂದುವರಿದಿದೆ. ಹೀಗೆ ಬರುವ ಆದಾಯದ ಲಾಭವನ್ನು ಕಾಂಗ್ರೆಸ್ ಸರಕಾರ ನೇರವಾಗಿ ಜನರ ಕೈಗೆ ನೀಡುತ್ತಿರುವುದೇ ಈ ಆರೋಪಗಳಿಗೆ ಕಾರಣವಾಗಿರಬಹುದೇನೋ ಗೊತ್ತಿಲ್ಲ. ಅಂತೂ ನಮ್ಮ ಸರಕಾರ ಜನರಿಗೆ ಆರ್ಥಿಕ ಶಕ್ತಿ ನೀಡುತ್ತಿರುವುದರಿಂದ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ಇದು ಮುಖ್ಯವಾಗಿ ಬಡ ಹಾಗೂ ಕೆಳ ಮಧ್ಯಮ ವರ್ಗದ ಜನರ ಜೇಬು ತುಂಬುತ್ತಿದೆ.
ದೀರ್ಘಕಾಲದ ಯೋಜನೆ
ಗ್ಯಾರಂಟಿಗಳು ಬದುಕಿನ ಮೇಲೆ ಬೀರುವ ಸಕಾರಾತ್ಮಕ ಪರಿಣಾಮ ಜನರಿಗೆ ಅರಿವಾಗಿದೆ. ಇದನ್ನು ಮೆಚ್ಚಿಕೊಂಡಿರುವ ಜನರು 2028 ರಲ್ಲೂ ಕಾಂಗ್ರೆಸ್‌ಗೆ ಬಹುಮತ ನೀಡಿ ಗೆಲ್ಲಿಸುವುದು ಖಚಿತ. ಆದ್ದರಿಂದ ಗ್ಯಾರಂಟಿಗಳು ಕೇವಲ ಐದು ವರ್ಷವಲ್ಲ, ಅನಂತರದ ಹತ್ತು ವರ್ಷ ಕೂಡ ಮುಂದುವರಿಯಲಿದೆ. ಬಿಜೆಪಿ ಈ ಬಗ್ಗೆ ಆತಂಕಕ್ಕೀಡಾಗಿರುವುದರಿಂದಲೇ ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ಇದನ್ನು ನಕಲು ಮಾಡಲು ಯತ್ನಿಸಿತ್ತು. ವಿಪಕ್ಷಗಳ ಉದ್ದೇಶ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವುದೇ ಹೊರತು, ಆರ್ಥಿಕತೆಯ ಮೇಲಿನ ಪ್ರೀತಿಯಲ್ಲ. ಇನ್ನೂ ತಮಾಷೆಯ ಸಂಗತಿ ಎಂದರೆ, ವಿಪಕ್ಷಗಳು ಸುರಿಸುತ್ತಿರುವ ಟೀಕೆಗಳ ಮಳೆಯಿಂದಲೇ ಗ್ಯಾರಂಟಿಗಳಿಗೆ ಉತ್ತಮ ಪ್ರಚಾರ ದೊರೆಯುತ್ತಿದೆ. ಟೀಕೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿ, ಯೋಜನೆ ಮುಂದುವರಿಸುವತ್ತ ಕಾಂಗ್ರೆಸ್ ಗಮನ ಕೇಂದ್ರೀಕರಿಸಲಿದೆ.
ಮಹಿಳೆಯರಿಗೆ ಶಕ್ತಿ
ರಾಜ್ಯ ರಾಜಕಾರಣದಲ್ಲಿ ಹಲವಾರು ವರ್ಷಗಳಿಂದ ಮಹಿಳಾ ಸಶಕ್ತೀಕರಣದ ಬಗ್ಗೆ ಮಾತು ಕೇಳಿಬರುತ್ತಿದೆ. ಆದರೆ ಇದನ್ನು ಯಥಾವತ್ತಾಗಿ ಅನುಷ್ಠಾನ ಮಾಡುವಷ್ಟು ಮನಸ್ಸನ್ನು ಯಾರೂ ಮಾಡಿಲ್ಲ. ಗ್ಯಾರಂಟಿಗಳು ಆ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿವೆ. ಒಂದು ಕುಟುಂಬದ ಆಧಾರವಾದ ಮಹಿಳೆಗೆ ನೇರವಾಗಿ ಹಣ ನೀಡಿದರೆ ಆ ಇಡೀ ಕುಟುಂಬ ಪ್ರಗತಿಯತ್ತ ನಡೆಯುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಸರಕಾರ, ಮಹಿಳೆಯರಿಗೆ ಆರ್ಥಿಕ ಸಶಕ್ತೀಕರಣದ ಶಕ್ತಿ ಕಲ್ಪಿಸಿದೆ.
ಉಚಿತ ಬಸ್ ಪ್ರಯಾಣದ “ಶಕ್ತಿ ’ ಯೋಜನೆಯ ಲಾಭ ಮಹಿಳೆಯರಿಗೆ ಯಶಸ್ವಿಯಾಗಿ ಸಿಕ್ಕಿದೆ. ಕಾಂಗ್ರೆಸ್‌ನ ಮಹಿಳಾ ಕೇಂದ್ರಿತ ಅಭಿವೃದ್ಧಿಯನ್ನು ಮೆಚ್ಚಿದ ಮಹಿಳೆಯರು ಪಕ್ಷಕ್ಕೆ ಮತ ಹಾಕಿದ್ದಾರೆ. ಮುಂದೆಯೂ ಮಹಿಳೆಯರು ಕಾಂಗ್ರೆಸ್ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಾರೆ. ಇದು ವಿಪಕ್ಷಗಳಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿಬಿಟ್ಟಿದೆ. ಆದ್ದರಿಂದ ಯೋಜನೆಗಳ ಸ್ಥಗಿತ ಎನ್ನುವ ಹೊಸ ಸುಳ್ಳನ್ನು ಹರಿಬಿಡಲಾಗಿದೆ.
ಅಕ್ಟೋಬರ್ ಅಂತ್ಯದ ವೇಳೆಗೆ ಶಕ್ತಿ ಯೋಜನೆಯಡಿ 318.63 ಕೋಟಿ ಉಚಿತ ಟಿಕೆಟ್ ನೀಡಿದ್ದು, ಇದಕ್ಕಾಗಿ 7,691.13 ಕೋಟಿ ರೂ. ಖರ್ಚು ಮಾಡಲಾಗಿದೆ. ಯೋಜನೆಗೆ ಮೊದಲು 84 ಲಕ್ಷದಷ್ಟಿದ್ದ ಒಟ್ಟು ಪ್ರಯಾಣಿಕರ ಸಂಖ್ಯೆ (ಮಹಿಳೆ-ಪುರುಷ ಸೇರಿ) ಯೋಜನೆ ಜಾರಿಯ ಅನಂತರ 1.08 ಕೋಟಿಗೆ ತಲುಪಿದೆ. ಈ ಪೈಕಿ ಶೇ.58 ರಷ್ಟು ಮಹಿಳಾ ಪ್ರಯಾಣಿಕರಾಗಿದ್ದಾರೆ.
ಈ ಯೋಜನೆಯನ್ನು ಮಹಿಳೆಯರು ಬಹಳ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಸೇರಿದಂತೆ ತಾವು ಇಷ್ಟ ಪಟ್ಟ ಯಾವುದೇ ಸ್ಥಳಗಳಿಗೆ ಉಚಿತವಾಗಿ ಪ್ರಯಾಣಿಸುವ ಮೂಲಕ ಪ್ರಯಾಣಕ್ಕಾಗಿ ಮಾಡುತ್ತಿದ್ದ ಖರ್ಚನ್ನು ಉಳಿಸುತ್ತಿದ್ದಾರೆ. ಹೀಗೆ ಉಳಿತಾಯವಾದ ಹಣ, ಕುಟುಂಬದ ಅಗತ್ಯಗಳಿಗೆ ಖರ್ಚಾಗಿ ಮರಳಿ ಆರ್ಥಿಕ ವ್ಯವಸ್ಥೆಯನ್ನು ಸೇರುತ್ತಿದೆ. ಇದು ಚಕ್ರದಂತೆ ನಿರಂತರ ಪ್ರಕ್ರಿಯೆಯಾಗಿದ್ದು, ಇದರಿಂದ ಆರ್ಥಿಕತೆ ಇನ್ನಷ್ಟು ಸಮೃದ್ಧವಾಗುತ್ತಿದೆ. ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಯಾವುದೇ ಯೋಜನೆ ಸ್ಥಗಿತಗೊಳ್ಳಲು ನಮ್ಮ ಪಕ್ಷ ಹಾಗೂ ಸರಕಾರಬಿಡುವುದಿಲ್ಲ.
ಇನ್ನು ರಾಜ್ಯದ ಪ್ರತೀ ಕುಟುಂಬಕ್ಕೆ 200 ಯೂನಿಟ್ ಒಳಗೆ ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎಂದು ಘೋಷಿಸಿ¨ªೆವು. ಅದರಂತೆ 1 ಕೋಟಿ 60 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸುತ್ತಿದ್ದೇವೆ. ಇದಕ್ಕೆ ಪ್ರತೀ ತಿಂಗಳು ಸುಮಾರು 800 ಕೋಟಿ ರೂಪಾಯಿ ಆಗುತ್ತದೆ. ಇಲ್ಲಿಯ ವರೆಗೆ 10,000 ಕೋಟಿ ರೂಪಾಯಿಯನ್ನು ಇದಕ್ಕಾಗಿ ವ್ಯಯಿಸಲಾಗಿದೆ.
ಅಂದಾಜು 4.5 ಕೋಟಿ ಕಾರ್ಡ್‌ಗಳಿಗೆ ತಲಾ 5 ಕೆ.ಜಿ. ಅಕ್ಕಿ, ತಲಾ 170 ರೂ.ನಂತೆ ತಿಂಗಳಿಗೆ ಸುಮಾರು 700 ಕೋಟಿ ರೂ. ಹಣವನ್ನು ರಾಜ್ಯ ಸರಕಾರಭರಿಸುತ್ತಿದೆ. 1 ಲಕ್ಷ 25 ಸಾವಿರ ಯುವನಿಧಿ ಫಲಾನುಭವಿಗಳಿಗೆ 3 ಸಾವಿರ ರೂ. ಮತ್ತು 1.5 ಸಾವಿರ ರೂ. ನಂತೆ ನಮ್ಮ ಸರಕಾರ
ನಿರಂತರವಾಗಿ ಹಣ ಕೊಡುತ್ತಿದೆ. ಇದನ್ನು ವಿರೋಧ ಪಕ್ಷದವರಿಗೆ ತಡಿಯಲು ಸಾಧ್ಯ ಇಲ್ಲ.
ಚುನಾವಣೆಗೆ ಮುನ್ನ ಗ್ಯಾರಂಟಿಗಳನ್ನು ತರಲಾಗುವುದೆಂದು ಕಾಂಗ್ರೆಸ್ ನುಡಿದಿತ್ತು. ಅದನ್ನು ಗೆದ್ದ ಬಳಿಕ ನಡೆಸಲಾಗಿದೆ. ಈ “ನುಡಿದಂತೆ ನಡೆಯುವ’ ಸಂಕಲ್ಪಕ್ಕೆ ಎಳ್ಳಷ್ಟೂ ಚ್ಯುತಿ ಬಾರದಂತೆ ನಮ್ಮ ಪಕ್ಷ ನಡೆದುಕೊಂಡಿದೆ. ಕಾಂಗ್ರೆಸ್‌ನ ಒಂದೇ ಒಂದು ಗ್ಯಾರಂಟಿ ಎಂದಿಗೂ ನಿಲ್ಲುವುದಿಲ್ಲ. ಇದು ಜನಜೀವನದಲ್ಲಿ ಸದಾ ಹರಿಯುವ ಪ್ರಗತಿ, ಇದು ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ. ಇದು ಚುನಾವಣೆಗಾಗಿ, ಮತಗಳಿಕೆಗಾಗಿ ಅಲ್ಲ. ಹಿಂದುಳಿದವರನ್ನು, ಅಲ್ಪಸಂಖ್ಯಾಕರನ್ನು ಸಮಾಜದ ಮುಖ್ಯವಾಹಿನಿಗೆ ತರುವಂಥದ್ದೆ ಕಾಂಗ್ರೆಸ್ ಪಕ್ಷದ ಮುಖ್ಯ ಧ್ಯೇಯ ಹಾಗೂ ಕಾಂಗ್ರೆಸ್ ಪಕ್ಷದ ತತ್ವ- ಸಿದ್ಧಾಂತವಾಗಿದೆ.
*- ಡಿ.ಕೆ.ಶಿವಕುಮಾರ್
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.