GST; ಅಕ್ಟೋಬರಲ್ಲಿ 1.87 ಲಕ್ಷ ಕೋಟಿ ಸಂಗ್ರಹ: 2ನೇ ಗರಿಷ್ಠ!
ದೇಶೀಯ ಸರಕು, ಸೇವೆಗಳ ಹೆಚ್ಚಳದಿಂದ ಜಿಎಸ್ಟಿ ಸಂಗ್ರಹದಲ್ಲಿ ಏರಿಕೆ
Team Udayavani, Nov 2, 2024, 12:17 AM IST
ಹೊಸದಿಲ್ಲಿ: ಅಕ್ಟೋಬರ್ನಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದ್ದು, ಇದು 2ನೇ ಅತೀ ಹೆಚ್ಚು ಜಿಎಸ್ಟಿ ಸಂಗ್ರಹ ಎಂದು ಕೇಂದ್ರ ಸರಕಾರ ತಿಳಿಸಿದೆ. ದೇಶಿಯವಾಗಿ ಸರಕು ಮತ್ತು ಸೇವೆಗಳ ಮಾರಾಟ ಹೆಚ್ಚಳವಾದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್ಟಿ ಸಂಗ್ರಹ ವಾಗಿದೆ ಎನ್ನಲಾಗಿದೆ.
ಇದರಲ್ಲಿ ಕೇಂದ್ರದ ಪಾಲು 33,821 ಕೋಟಿ ರೂ., ರಾಜ್ಯದ ಪಾಲು 41,864 ಕೋಟಿ ರೂ., ಐಜಿಎಸ್ಟಿ 99,111 ಕೋಟಿ ರೂ. ಮತ್ತು ಸೆಸ್ 12,550 ಕೋಟಿ ರೂ. ಆಗಿದೆ. ಕಳೆದ ವರ್ಷದ ಅಕ್ಟೋಬರ್ಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹದಲ್ಲಿ ಶೇ.8.9ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 1.72 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷ ಎಪ್ರಿಲ್ನಲ್ಲಿ 2.1 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಈವರೆಗಿನ ಗರಿಷ್ಠ ಸಂಗ್ರಹವಾಗಿದೆ.
ತಿಂಗಳಿನಲ್ಲಿ ದೇಶಿಯ ವ್ಯವಹಾರ ಶೇ.10.6ರಷ್ಟು ಏರಿಕೆ ಕಂಡಿದ್ದು, ಜಿಎಸ್ಟಿ ಸಂಗ್ರಹ 1.42 ಲಕ್ಷ ಕೋಟಿ ರೂ.ಗೆ ಏರಿದೆ. ಅದೇ ರೀತಿ ಆಮದು ಸುಂಕವು ಸಹ ಶೇ.4ರಷ್ಟು ಏರಿಕೆ ಕಂಡಿದ್ದು, 45096 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ತಿಂಗಳು 19306 ಕೋಟಿ ರೂ. ಮರು ಪಾವತಿ ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.18ರಷ್ಟು ಏರಿಕೆ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.