ISRO;ಲೇಹ್‌ನಲ್ಲಿ’ಅನಲಾಗ್‌ ಸ್ಪೇಸ್‌ ಮಿಷನ್‌’: ಭವಿಷ್ಯದ ಯೋಜನೆಗಳಿಗೆ ಸಹಕಾರಿ

ಭೂಮಿಯಾಚೆಗಿನ ಪರಿಸರ ಹೋಲುವ ಆವಾಸದ ಮಾದರಿ 

Team Udayavani, Nov 2, 2024, 6:35 AM IST

1-a-isrro

ಹೊಸದಿಲ್ಲಿ: ಗಗನಯಾನ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಮತ್ತಿತರ ಭವಿಷ್ಯದ ಯೋಜನೆಗಳತ್ತ ಗಮನ ನೆಟ್ಟಿರುವ ಇಸ್ರೋ, ಈಗ ಅದಕ್ಕೆ ಅಗತ್ಯವಾಗಿರುವ ಸಾದೃಶ ಬಾಹ್ಯಾಕಾಶ ಯೋಜನೆಗೆ(ಅನಲಾಗ್‌ ಸ್ಪೇಸ್‌ ಮಿಷನ್‌) ಲಡಾಖ್‌ನ ಲೇಹ್‌ನಲ್ಲಿ ಚಾಲನೆ ನೀಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಇಸ್ರೋ, ಇದು ಭಾರತದ ಮೊತ್ತಮೊದಲ ಅನಲಾಗ್‌ ಸ್ಪೇಸ್‌ ಮಿಷನ್‌ ಎಂದಿದೆ. ಇಲ್ಲಿ ಚಂದ್ರ ಮತ್ತು ಮಂಗಳ ಗ್ರಹದ ಪರಿಸರವನ್ನೇ ಸಂಪೂರ್ಣ ಹೋಲುವಂಥ ಆವಾಸದ ಮಾದರಿಯೊಂದನ್ನು ನಿರ್ಮಿಸಲಾಗುತ್ತದೆ. ಇದರೊಳಗಿರುವ ಅನಲಾಗ್‌ ಗಗನಯಾತ್ರಿಗಳು ಬೇರೊಂದು ಗೃಹದಲ್ಲೇ ಇರುವಂತೆ ಇಲ್ಲಿ ವಾಸಿಸುತ್ತಾರೆ ಮತ್ತು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಭೂಮಿಯಾಚೆಗಿನ ಪರಿಸರದಲ್ಲಿ ಜೀವನ ಹೇಗಿರುತ್ತದೆ ಎಂಬುದನ್ನು ಅನುಕರಿಸುವುದು ಮತ್ತು ತೀವ್ರತರವಾದ ಹವಾಗುಣ ಹಾಗೂ ಏಕಾಂಗಿತನವು ಗಗನಯಾತ್ರಿಗಳ ಆರೋಗ್ಯ ಮತ್ತು ಕಾರ್ಯಕ್ಷಮತೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅಧ್ಯಯನ ಮಾಡುವುದು ಇದರ ಉದ್ದೇಶ. ಇದು ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಯ ವೇಳೆ ಅವರು ಎದುರಿಸಬೇಕಾದ ಮಾನಸಿಕ ಹಾಗೂ ಶಾರೀರಿಕ ಸವಾಲುಗಳ ಬಗ್ಗೆ ಬೆಳಕು ಚೆಲ್ಲಲಿದೆ.

ಏನಿದು ಯೋಜನೆ?
ಲಡಾಖ್‌ನಲ್ಲಿ ಚಂದ್ರ, ಮಂಗಳ ಗ್ರಹದ ಪರಿಸರದ ಮಾದರಿ ನಿರ್ಮಾಣ
ಎಲ್ಲ ರೀತಿಯ ಹವಾಗುಣಕ್ಕೆ ಹೊಂದುವ ವಾತಾವರಣ ಇರುವಂತೆ ಮಾದರಿ
ಅದರೊಳಗೆ ಸಾದೃಶ್ಯ ಗಗನಯಾತ್ರಿ
(ಅನಲಾಗ್‌ ಆಸ್ಟ್ರೋನಾಟ್‌) ಇರಲಿದೆ.
ಪ್ರತೀದಿನ ಅಲ್ಲಿ ಇರುವವರ ಹೃದಯಬಡಿತ ಸೇರಿ ಎಲ್ಲ ಅಂಶಗಳ ದಾಖಲು
ಏಕಾಂಗಿತನ, ಗಂಭೀರತರವಾದ ಪರಿಸರಕ್ಕೆ ಮನುಷ್ಯ ಹೊಂದಿಕೊಳ್ಳುವ ಬಗ್ಗೆ ಅಧ್ಯಯನ

ಲಡಾಖ್‌ ಆಯ್ಕೆ ಏಕೆ?
ಲಡಾಖ್‌ ಕಠಿನ ಹವಾಮಾನ, ವಿಶಿಷ್ಟವಾದ ಭೌಗೋಳಿಕ ಗುಣಲಕ್ಷಣ ಹೊಂದಿದೆ.
ಗಗನಯಾತ್ರಿಗಳುಎದುರಿಸುವ ಪರಿಸರೀಯ ಸವಾಲುಗಳನ್ನು ಅನುಕರಣೆ ಮಾಡಲು ಇದು ಸೂಕ್ತ ಪ್ರದೇಶ.
ಇಲ್ಲಿನ ಶುಷ್ಕ ಹವಾಮಾನ ಮತ್ತು ಬಂಜರು ಭೂದೃಶ್ಯವು ಚಂದಿರ ಮತ್ತು ಮಂಗಳ ಗ್ರಹದ ಪರಿಸ್ಥಿತಿಗೆ ಸರಿಯಾಗಿ ಹೋಲುತ್ತದೆ.

ಏಕೆ ಮುಖ್ಯ?
ಈ ಪ್ರಕ್ರಿಯೆಯಲ್ಲಿ ಕಂಡುಕೊಳ್ಳಲಾಗುವ ಅಂಶಗಳು ಭಾರತದ ಗಗನಯಾನ ಯೋಜನೆಗೆ ನೆರವಾಗಲಿದೆ. ಪ್ರತಿಕೂಲ ಹಾಗೂ ಕಠಿನ ವಾತಾವರಣದಲ್ಲಿ ಹಲವು ಪರೀಕ್ಷೆಗಳನ್ನು ನಡೆಸುವ ಮೂಲಕ ದೀರ್ಘಾವಧಿಯ ಬಾಹ್ಯಾಕಾಶ ಯಾನದ ವೇಳೆ ಗಗನಯಾತ್ರಿಗಳ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯಕ್ಷಮತೆ ಕುರಿತ ಒಳನೋಟವನ್ನು ಈ ಸಂಶೋಧನೆ ಒದಗಿಸಲಿದೆ.

ಟಾಪ್ ನ್ಯೂಸ್

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

7-belagavi

Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

1-reee

Karnataka Rajyotsava; ಬಾಬು ಪಿಲಾರ್‌ ಬದಲು ಬಾಬು ಕಿಲಾರ್‌ಗೆ ಪ್ರಶಸ್ತಿ!!

6-dkshi

Bengaluru: ಕನ್ನಡ ಬದುಕಿನ ಭಾಷೆಯಾಗಿಸುವುದೇ ನಮ್ಮ ಗುರಿ: ಡಿ.ಕೆ. ಶಿವಕುಮಾರ್‌

5-belagavi

Belagavi: ಎಂಇಎಸ್‌ ಕಾರ್ಯಕರ್ತರ ಪುಂಡಾಟ

4-bng

Bengaluru: ಪಟಾಕಿ ಸಿಡಿದು 54 ಮಂದಿಗೆ ಗಾಯ

3-muddebihala

Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-drone

Drone; ಸ್ತ್ರೀ ಸಶಕ್ತೀಕರಣಕ್ಕೆ ನಮೋ ಡ್ರೋನ್‌ ದೀದಿಗೆ ಕೇಂದ್ರ ಸರಕಾರ ಚಾಲನೆ

congress

Election Commission ವಿರುದ್ಧ ಕಾಂಗ್ರೆಸ್‌ ಸಮರ

rape 1

High Court;ಅತ್ಯಾಚಾರದಿಂದ ಗರ್ಭ ಧರಿಸಿದ್ದ 11ರ ಬಾಲಕಿಯ ಗರ್ಭಪಾತಕ್ಕೆ ಅನುಮತಿ

1-a-mall

Maharashtra; ಶಿಂಧೆ ಶಿವಸೇನೆ ನಾಯಕಿ ಸೈನಾ ‘ಇಂಪೋರ್ಟೆಡ್‌ ಮಾಲ್‌’: ಸಂಸದ ವಿವಾದ

Train

Water, A.C. ಸರಿ ಇಲ್ಲದ್ದಕ್ಕೆ ದೂರು: ಸ್ಪಂದಿಸದ ರೈಲ್ವೇಗೆ ಕೋರ್ಟ್‌ನಿಂದ 30000 ದಂಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

8-cm

Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ

1-mlr-a

Karnataka Rajyotsava; ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಡಳಿತದಿಂದ ಕರ್ನಾಟಕ ರಾಜ್ಯೋತ್ಸವ

1-udayavani

Udayavani ರೇಷ್ಮೆ ಜತೆ ದೀಪಾವಳಿ; ಸ್ಪರ್ಧೆಗೆ ಫೋಟೋ ಕಳುಹಿಸಲು ನ.6 ಕೊನೆಯ ದಿನ

lakshmi hebbalkar

Waqf property: ಹಿಂದೂ- ಮುಸ್ಲಿಂ ತಳುಕು ಹಾಕುವುದು ಸಲ್ಲದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.