Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Team Udayavani, Nov 2, 2024, 4:44 PM IST
ಮಣಿಪಾಲ: ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಚೇತನ್ ಮುಂಡಾಡಿ (Chethan Mundadi) ಇದೀಗ ಮತ್ತೊಂದು ಚಿತ್ರದೊಂದಿಗೆ ಸಿನಿ ಪ್ರಿಯರ ಮುಂದೆ ಬಂದಿದ್ದಾರೆ. ಅದುವೇ ʼದಿಗಿಲ್ʼ (Digil)
ಈ ಬಾರಿ ಚೇತನ್ ಮುಂಡಾಡಿ ಅವರು ತುಳುನಾಡಿನಲ್ಲಿ ಆರಾಧಿಸುವ ಜುಮಾದಿ ಬಂಟ ದೈವದ ಕಥೆಯನ್ನು ತೆರೆಯ ಮೇಲೆ ತರುತ್ತಿದ್ದಾರೆ. ಜುಮಾದಿ ಬಂಟ ದೈವ ಮತ್ತು ಮಂಗಳಮುಖಿಯ ನಡುವಿನ ಕಥಾನಕವನ್ನು ಹೇಳಲು ಹೊರಟಿದ್ದಾರೆ.
ʼದಿಗಿಲ್ʼ ಎಂದರೆ ಭಯ ಎಂದರ್ಥ. ಈ ಬಗ್ಗೆ ಮಾತನಾಡುವ ಅವರು, “ʼದಿಗಿಲ್ʼ ಹೊಸತನದ ಕಥೆ. ಸತ್ಯ ಘಟನೆಯೊಂದರ ಕಥೆಯನ್ನು ಇಲ್ಲಿ ಹೇಳಲು ಹೊರಟಿದ್ದೇವೆ. ಇದು ಈ ಮಣ್ಣಿನ ಕಥೆ. ಆದರೆ ಹಿಂದೆಂದೂ ಕೇಳಿರದ ಕಥೆ ಇಲ್ಲಿದೆ” ಎನ್ನುತ್ತಾರೆ.
ಚಿತ್ರವು ತುಳು, ಕನ್ನಡ ಮತ್ತು ಮಲಯಾಳಂ ಹೀಗೆ ಮೂರು ಭಾಷೆಯಲ್ಲಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಳಂಜ, ಪುಂಜಾಲಕಟ್ಟೆ, ಮಡಂತ್ಯಾರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಶೂಟಿಂಗ್ ಮುಗಿಸಿರುವ ದಿಗಿಲ್ ಚಿತ್ರತಂಡ ಡಬ್ಬಿಂಗ್ ನಲ್ಲಿ ನಿರತವಾಗಿದೆ. ಜನವರಿ ವೇಳೆಗೆ ರಿಲೀಸ್ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.
ರಾಮ್ ಮೂವೀಸ್ ಮತ್ತು ಎಂ.ಆರ್.ಪಿ ಎಂಟರ್ಟೈನ್ ಮೆಂಟ್ ಬ್ಯಾನರ್ ನಲ್ಲಿ ಮೈಸೂರು ರಮೇಶ್ ಮತ್ತು ರವಿಶಂಕರ್ ಪೈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚೇತನ್ ರೈ ಮಾಣಿ, ಶೋಭಾ ಶೆಟ್ಟಿ, ಅಗ್ನಿಸಾಕ್ಷಿ ಖ್ಯಾತಿ ಅಮಿತ್ ರಾವ್, ರಮೇಶ್ ರೈ ಕುಕ್ಕುವಳ್ಳಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಚೇತನ್ ಮುಂಡಾಡಿ ಅವರೊಂದಿಗೆ ಎಚ್ ಕೆ ನೈನಾಡ್ ಅವರು ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿದ್ದು, ಪದ್ಮನಾಭನ್ ಮಣಿ ಕ್ಯಾಮರಾ ಕೈಚಳಕವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tulu Cinema: ವಿನೀತ್ ಕುಮಾರ್ ನಟನೆಯ “90 ಎಮ್ ಎಲ್” ಸಿನಿಮಾ ಮುಹೂರ್ತ
Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ
Vineeth Kumar: ನ.1 ರಂದು “90 ಎಮ್ ಎಲ್” ತುಳು ಸಿನಿಮಾಕ್ಕೆ ಮುಹೂರ್ತ
Coastalwood; ತುಳುಚಿತ್ರ ನಿರ್ಮಾಣದತ್ತ ಶಿಲ್ಪಾಗಣೇಶ್; ನಾಯಕನಾಗಿ ನಿತ್ಯಪ್ರಕಾಶ್ ಬಂಟ್ವಾಳ
Middle Class Family: ಮತ್ತೆ ರಂಜಿಸಲು ಬರುತ್ತಿದ್ದಾರೆ ಸೌಂಡ್ ಲೈಟ್ಸ್ ಹುಡುಗರು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.