Udupi: ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ‘ಸುಲ್ತಾನ್ ಪುರ’… ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ
Team Udayavani, Nov 3, 2024, 9:42 AM IST
ಉಡುಪಿ: ಉಡುಪಿ ನಗರದಲ್ಲಿ ಇದುವರೆಗೂ ಕೇಳದೆ ಇರುವ ಊರಿನ ಹೆಸರೊಂದು ಸರ್ಕಾರದ ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ವಕ್ಫ್ ವಿವಾದ ಎದ್ದ ಹಿನ್ನೆಲೆಯಲ್ಲಿ ಸಾಕಷ್ಟು ಜನ ಭೂಮಿಯ ದಾಖಲೆಗಳನ್ನು ಪರಿಶೀಲಿಸಲು ಆರಂಭ ಮಾಡಿದ್ದಾರೆ. ಈ ವೇಳೆ ಸರ್ವೇ ನಂಬರ್ ಗಳನ್ನು ದಾಖಲಿಸುವ ರಾಜ್ಯ ಸರ್ಕಾರದ ದಿಶಾಂಕ್ ಆಪ್ ನಲ್ಲಿ, ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120 ರಲ್ಲಿ ‘ಸುಲ್ತಾನಪುರ’ ಎಂದು ನಮೂದಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆದರೆ ಇದೀಗ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಸ್ಪಷ್ಟನೆ ನೀಡಿದ ಅವರು Dishank app ನಲ್ಲಿ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120 ಮತ್ತು 85 ರಲ್ಲಿ SULTANAPURA ಎಂದು ದಾಖಲಾಗಿರುತ್ತದೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದನ್ನು ಗಮನಿಸಲಾಗಿದೆ. ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120& 85 ರ ಗ್ರಾಮ ನಕಾಶೆಯನ್ನು ಲಗತ್ತಿಸಲಾಗಿದೆ.
ಸಾರ್ವಜನಿಕರು ಸಹ ಸದರಿ ಗ್ರಾಮದ ಪೂರ್ಣ ಗ್ರಾಮ ನಕಾಶೆಯನ್ನು https://www.landrecords.karnataka.gov.in/ser…/Default.aspx
ನಲ್ಲಿ Download ಮಾಡಬಹುದಾಗಿದೆ.
ಗ್ರಾಮ ನಕಾಶೆಯಲ್ಲಿ *SULTANAPUR* ಎಂದು ದಾಖಲಾಗಿರುದಿಲ್ಲ.
ಕಂದಾಯ/ಭೂಮಾಪನ ಇಲಾಖೆ ದಾಖಲೆಗಳಲ್ಲಿ *Sultanpur* ಎಂದು ಇರುವುದಿಲ್ಲ, ಸರ್ವೇ ನಂಬರು 120ರ RTC ಯಲ್ಲೂ ಈ ರೀತಿಯ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.