Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Team Udayavani, Nov 3, 2024, 11:57 AM IST
“ಜೀವನದ ಭಾಷೆ ಯಾವುದಾದರೇನು ಜೀವ ತುಂಬಿದ, ತುಂಬುವ ಭಾಷೆ ಕನ್ನಡವೇ’
ಕನ್ನಡ ಕೇವಲ ಭಾಷೆಯಲ್ಲ ಅದೊಂದು ವಿಶಿಷ್ಟ ಸಂಸ್ಕೃತಿ. ಕನ್ನಡ ಎಂದರೆ ಮಾತೃ ಭಾವ. ಕನ್ನಡ ನಾವಾಡುವ, ನಾವು ಉಸಿರಿಸುವ ಭಾಷೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಹಲವು ಒಳಿತು, ಶ್ರೇಷ್ಠತೆಗಳ ಸಂಗಮ ಕನ್ನಡ.
ಪ್ರತೀ ವರ್ಷ ಕರ್ನಾಟಕ ರಾಜ್ಯೋ ತ್ಸವವನ್ನು ಸಂಭ್ರಮದಿಂದ ಆಚರಿಸ ಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ದಿನದ ಆಚರಣೆಯ ಮಧ್ಯೆಯೇ ಕನ್ನಡ ಭಾಷೆಯ ಉಳಿವಿನ ಕುರಿತು ಹಾಗೂ ಕನ್ನಡ ಭಾಷೆಯ ಅಭಿಮಾನದ ಕುರಿತಂತೆ ಪ್ರಶ್ನೆಗಳು ಕೇಳಿ ಬರುತ್ತಲೆ ಇದೆ.
ಹಾಗಾದರೆ ಭಾಷೆಯ ಮೇಲಿನ ಅಭಿಮಾನವೆಂದರೆ ಏನು? ನನ್ನ ಪ್ರಕಾರ, ಕನ್ನಡ ಭಾಷೆಯ ಅಭಿಮಾನವೆಂದರೆ ಬೇರೆ ಭಾಷೆಯನ್ನು ಬಳಸದೆ ಕನ್ನಡ ಮಾತಾನಾಡುವುದಲ್ಲ ಅಥವಾ ಮೊಬೈಲ್, ಇಂಟರ್ನೆಟ್, ಇ-ಮೇಲ್ ಮುಂತಾದ ಪದಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಹೆಮ್ಮೆಪಡುವುದೂ ಅಲ್ಲ.
ಒಮ್ಮೆ ಯೋಚಿಸಿ ನೋಡಿ, ಇತ್ತೀಚಿನ ಕನ್ನಡ ಸಿನೆಮಾಗಳಲ್ಲಿ ನಟನೊಬ್ಬ ಇಂಗ್ಲಿಷ್ ಬಳಸದೆ ಪೂರ್ತಿ ಕನ್ನಡದಲ್ಲಿ ಸಂಭಾಷಣೆ ಹೇಳುವಾಗ ಅಭಿಮಾನದಿಂದ ಚಪ್ಪಾಳೆ ತಟ್ಟುವ ಜನರು ಹೆಚ್ಚೋ? ಅಥವಾ ಹಾಸ್ಯಾಸ್ಪದವಾಗಿ ನಗುವ ಮನಸ್ಸುಗಳು ಹೆಚ್ಚೋ? ಹಾಗಂತ ಇಂಗ್ಲಿಷ್ ಮಿಶ್ರಿತ ಕಂಗ್ಲಿಷ್ ಭಾಷೆಗೆ ನನ್ನ ಸಹಮತವೇನಿಲ್ಲ. ಆದರೆ ಇದೆಲ್ಲದರಲ್ಲಿಯೂ ನಮ್ಮ ಭಾಷೆ, ನಮ್ಮ ಮೂಲಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಜವಾಬ್ದಾರಿ.
ಬಹುಭಾಷೆ, ಬಹು ಸಂಸ್ಕೃತಿ ಅನಿವಾರ್ಯವಾಗಿರುವ ಈಗಿನ ಕಾಲದಲ್ಲಿ ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಎಂಬ ಮೂಲಗಳೇ ನಾಶವಾಗಬಾರದಲ್ಲವೇ?
ಜವಾಬ್ದಾರಿಯುತ ಕನ್ನಡಿಗರಾಗಿ, ಬರೀ ನವೆಂಬರ್ ಒಂದಕ್ಕೆ ಕನ್ನಡ ಅಭಿಮಾನ ತೋರದೆ, ಮಾಹಿತಿ ತಂತ್ರಜ್ಞಾನದ ಹೊಸ ಸಾಧ್ಯತೆಗಳತ್ತ ಗಮನಹರಿಸಿ ಕನ್ನಡ ಪಸರಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕು. ಕನ್ನಡದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಸಂಕಲ್ಪಿಸೋಣ.
-ಪೂರ್ಣಚಂದ್ರ ರಮೇಶ್,
ವಾರ್ಸಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.