Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

ಸಾಲ, ಸಂಸಾರದ ಸಂಕಟಕ್ಕೆ ಬೇಸತ್ತು ನೇಣಿಗೆ ಶರಣಾದ್ರಾ ʼಮಠʼದ ಗುರು

ಸುಹಾನ್ ಶೇಕ್, Nov 3, 2024, 2:29 PM IST

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

ಬೆಂಗಳೂರು: ಆತ ತಲೆಗೊಂದು ಟೋಪಿ, ಕಣ್ಣಿಗೊಂದು ಕನ್ನಡಕ, ಗಡ್ಡ ಬಿಟ್ಟು ಥೇಟು ಚಿಂತಕನಂತೆ ಕಾಣುತ್ತಿದ್ದ ಹುಡುಗ. ಬಣ್ಣದ ಲೋಕದಲ್ಲಿ ಅತೀವ ಕನಸು ಕಟ್ಟಿಕೊಂಡು ಬೆಂಗಳೂರು ನಗರಕ್ಕೆ ಬಂದಿದ್ದ. ಮುಂದೊಂದು ದಿನ ಈ ಹುಡುಗ ಸ್ಯಾಂಡಲ್‌ವುಡ್‌ನಲ್ಲಿ ʼಮಠʼ ಕಟ್ಟಿ ಪ್ರೇಕ್ಷಕರಿಗೆ ಮನರಂಜನೆಯ ಜತೆ ಸಂದೇಶವನ್ನು ನೀಡಿದ್ದ.

ಗುರುಪ್ರಸಾದ್ ಜನನ- ಬಾಲ್ಯ.. 1972ರ ನವೆಂಬರ್‌ 2ರಂದು ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್‌ (Director Guruprasad)  ಬಡತನದ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದವರು. ಸಾಹಿತ್ಯ, ಓದಿನಲ್ಲಿ ಆಸಕ್ತಿ ಹೊಂದಿದ್ದ ಗುರುಪ್ರಸಾದ್‌ ಆರಂಭದಲ್ಲಿ ಅಪ್ಪ- ಅಮ್ಮನ ಮಾರ್ಗದರ್ಶನದಲ್ಲೇ ಬೆಳೆದರು.

ಹೈಸ್ಕೂಲ್‌ನಲ್ಲೇ ಹಾಡು, ಕವನಗಳನ್ನು ಬರೆಯುತ್ತಿದ್ದರು. ಆ ಸಮಯದಲ್ಲೇ ಗುರುಪ್ರಸಾದ್‌ ಅವರು ಬರಹಗಾರರಾಗಿ ಗುರುತಿಸಿಕೊಂಡಿದ್ದರು.

ಬಾಲ್ಯದಲ್ಲೇ ನಿರ್ದೇಶಕನಾಗುವ ಕನಸು..

14ನೇ ವರ್ಷದಲ್ಲೇ ನಿರ್ದೇಶಕನಾಗುವ ಕನಸು ಕಂಡಿದ್ದ ಅವರು, ಸಿನಿಮಾ ಮ್ಯಾಗ್‌ಜಿನ್‌ ವೊಂದರಲ್ಲಿ ರಾಜ್‌ ಕುಮಾರ್‌ – ಶಂಕರ್‌ ನಾಗ್‌ ಅವರ ಫೋಟೋವನ್ನು ನೋಡಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಗುರುಪ್ರಸಾದ್‌ ಅವರೇ ಹೇಳಿದ್ದಾರೆ.

“ನನಗೆ 14ನೇ ವಯಸ್ಸಿನಲ್ಲಿ ನಿರ್ದೇಶಕನಾಗುವ ಆಸೆ ಆಯಿತು. ಒಂದು ಸಿನಿಮಾ ಮ್ಯಾಗ್‌ಜಿನ್‌ ನಲ್ಲಿ ರಾಜ್‌ ಕುಮಾರ್‌ – ಶಂಕರ್‌ ನಾಗ್‌ ಅವರ ಫೋಟೋವನ್ನು ನೋಡಿದ್ದೆ. ಶಂಕರ್‌ ನಾಗ್‌ ಅವರು ನಿರ್ದೇಶಕನಾಗಿ ರಾಜ್‌ ಕುಮಾರ್‌ ಅವರಿಗೆ ಹೇಳಿಕೊಡುತ್ತಿದ್ದರು. ಆಗ ನನಗೆ ನಿರ್ದೇಶಕ ನಟನಿಗಿಂತ ದೊಡ್ಡವನಾ ಅಂಥ ಅನ್ನಿಸೋಕೆ ಶುರುವಾಯಿತು. ಆ ಕಾರಣದಿಂದ ನನಗೆ ನಿರ್ದೇಶಕನಾಗಬೇಕೆನ್ನುವ ಆಸೆ ಹುಟ್ಟಿತು. ಆಗ ನಾನು ಹೈಸ್ಕೂಲ್‌ನಲ್ಲಿದ್ದೆ ಎಂದು ಗುರುಪ್ರಸಾದ್‌ ʼನನ್ನ ಕಥೆʼ ಸಂದರ್ಶನದಲ್ಲಿ ಹೇಳಿದ್ದರು.

ಕಾಲೇಜು ದಿನಗಳಲ್ಲಿ ಹರಿದ ಬಟ್ಟೆ, ಖರ್ಚಿಗೆ ಲಾಟರಿ ಮಾರಾಟ: ಕಾಲೇಜು ದಿನಗಳಲ್ಲಿ ನನಗೆ ಹಾಕಿಕೊಳ್ಳಲು ಸರಿಯಾಗಿ ಬಟ್ಟೆ ಇರಲಿಲ್ಲ. ಹರಿದ ಬಟ್ಟೆಯನ್ನು ಹಾಕಿಕೊಂಡು ಹೋಗುತ್ತಿದೆ. ನನ್ನ ಸೋದರ ಮಾವ ರಮೇಶ್‌ ಎನ್ನುವವರು ನನಗೆ ನನ್ನ ಅಣ್ಣ, ತಂಗಿಗೆ ಬಟ್ಟೆ ಕೊಡುತ್ತಿದ್ದರು ಎಂದು ಗುರುಪ್ರಸಾದ್‌ ಸಂದರ್ಶನವೊಂದರಲ್ಲಿ ಹೇಳಿದ್ದರು.

ಕನಕಪುರದಲ್ಲಿ ನನಗೆ ಮಾರುತಿ ಎನ್ನುವ ಸ್ನೇಹಿತನಿದ್ದ ಆತ ಲಾಟರಿ ಮಾರುತ್ತಿದ್ದ. ಅವರ ಬಳಿ ಹೋಗಿ ನಾನು ಸ್ವಲ್ಪ ಲಾಟರಿ ಕೇಳಿ ಮಾರಾಟ ಮಾಡುತ್ತಿದ್ದೆ. ನನ್ನ ತಂದೆ – ತಾಯಿಗೆ ಗೊತ್ತಿಲ್ಲದೆ ನನ್ನ ಹೈಸ್ಕೂಲ್‌ ಡೇಸ್‌ನಲ್ಲಿ ಕನಕಪುರ ರಸ್ತೆಯಲ್ಲಿ ಮೂರು ವರ್ಷ ಲಾಟರಿ ಟಿಕೆಟ್‌ ಮಾರಾಟ ಮಾಡುತ್ತಿದ್ದೆ. ನಾನು ಮಾರಾಟ ಮಾಡಿದ ಒಂದು ಟಿಕೆಟ್‌ಗೆ 5 ಲಕ್ಷ ರೂ. ಬಂಪರ್‌ ಬಂದಿತ್ತು. ಆಗ ನನಗೆ 50 ಸಾವಿರ ರೂ ಕಮೀಷನ್‌ ಸಿಕ್ಕಿತ್ತು. ಅದನ್ನು ಅಪ್ಪನ ಬಳಿ ಹೇಳಿದ್ದೆ ಎಂದು ಸಂದರ್ಶನವೊಂದರಲ್ಲಿ ಅವರು ನೆನಪು ಮಾಡಿಕೊಂಡಿದ್ದರು.

ಸಿನಿಮಾ ಹುಚ್ಚು ಶುರುವಾದದ್ದು ಯಾವಾಗ?: ಒಳ್ಳೆಯ ಸಿನಿಮಾಗಳನ್ನು ನೋಡಿಕೊಂಡು ನೋಟ್ಸ್‌ ಮಾಡಿಕೊಳ್ಳುವ ಹುಚ್ಚು ನನಗೆ ಹೈಸ್ಕೂಲ್‌ ದಿನದಲ್ಲೇ ಶುರುವಾಗಿತ್ತು. ನನ್ನ ಮನೆ ಪಕ್ಕದಲ್ಲಿ ಒಬ್ಬರು ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ದೇಸಾಯಿ ಅವರ ʼಉತ್ಕರ್ಷʼ ಸಿನಿಮಾ ಬಂದಿತ್ತು. ಅದು ʼಎʼ ಸರ್ಟಿಫಿಕೇಟ್‌ ಸಿನಿಮಾವಾಗಿತ್ತು. ನಾನು ಸಿನಿಮಾ ನೋಡಲು ಹೋಗಿದ್ದಾಗ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಮ್ಮ ಮನೆಗೆ ಬಂದು ಹೇಳಿದ್ದ. ಈ ವಿಚಾರ ತಿಳಿದು ನಮ್ಮ ಮನೆಯಲ್ಲಿ ಅಪ್ಪ – ಅಮ್ಮ ಜೋರು ಮಾಡಿ ಹೊಡೆದಿದ್ದರು. ಸೀತಾರಾಮ್ ಅವರ ʼಸ್ಪೋಟʼ ಧಾರಾವಾಹಿಯನ್ನು ನಾನು ತುಂಬಾ ಇಷ್ಟಪಡುತ್ತಿದ್ದೆ. ನಾನು ನನ್ನ ಜೀವನದಲ್ಲಿ ಕೆಲಸ ಮಾಡಿದ್ದು ಇಬ್ಬರು ಗುರುಗಳ ಬಳಿ ಅದು ಸೀತಾರಾಮ್‌ ಮತ್ತು ದೇಸಾಯಿ ಎಂದು ಗುರುಪ್ರಸಾದ್‌ ಸ್ಮರಿಸಿದ್ದರು.

ಸಿನಿಮಾ ಮಾಡುವ ಹುಚ್ಚು, ಹಣಕ್ಕಾಗಿ ಖಾಸಗಿ ಸಂಸ್ಥೆಯಲ್ಲಿ ಕೆಲಸ..: ಸಿನಿಮಾ ಮಾಡುವ ಆಸಕ್ತಿ ಹೊಂದಿದ್ದ ಗುರುಪ್ರಸಾದ್‌ ಅವರು ಸಿನಿಮಾ ಮಾಡಬೇಕೆನ್ನುವ ಕನಸಿನೊಂದಿಗೆ ಅದಕ್ಕೆ ಬೇಕಾದ ಹಣಕ್ಕಾಗಿ ಹಿಂದೂಸ್ತಾನ್‌ ಲಿಮಿಟೆಡ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. 5 ವರ್ಷ ಅಲ್ಲಿ ಕೆಲಸ ಮಾಡಿ ಸಿನಿಮಾ ಲೋಕದತ್ತ ಮಾಡಿದರು.‌ ಇದಕ್ಕೂ ಮುನ್ನ ಅವರು ಮದ್ರಾಸ್ (ಚೆನ್ನೈ)ನಲ್ಲಿ ಕೆಲಸ ಮಾಡುತ್ತಿದ್ದರು ಅಲ್ಲಿ ಪ್ರತಿದಿನ ರಾತ್ರಿ ಮಿಸ್‌ ಮಾಡದೆ ಒಂದು ಸಿನಿಮಾವನ್ನು ನೋಡುತ್ತಿದ್ದರು. ಕೆಲಸದ ನಡುವೆಯೇ ತಮ್ಮ ಸಿನಿಮಾ ಹುಚ್ಚನ್ನು ಅವರು ಎಂದಿಗೂ ಬಿಟ್ಟುಕೊಟ್ಟಿರಲಿಲ್ಲ.

ಸಂಭಾಷಣೆಕಾರನಾಗಿ ಬಣ್ಣದ ಲೋಕಕ್ಕೆ ಎಂಟ್ರಿ..  ಸೀತಾರಾಮ್‌ ಅವರ ಧಾರಾವಾಹಿ ನೋಡುತ್ತಿದ್ದೆ. ಒಂದು ಅವರ ಬಳಿ ಹೋಗಿ ನಾನು ಸಂಭಾಷಣೆ ಬರೆಯುತ್ತೇನೆ ನಿಮ್ಮ ಜತೆ ಕೆಲಸ ಮಾಡಬೇಕೆಂದು ಹೇಳಿಕೊಂಡೆ. ಬರವಣಿಗೆಯಿಂದ ಕೆಲಸ ಗಿಟ್ಟಿಸಿಕೊಂಡೆ. ಒಂದೂವರೆ ವರ್ಷ ಅವರ ಜತೆ ಕೆಲಸ ಮಾಡಿದೆ. ಆ ಬಳಿಕ ದೇಸಾಯಿ ಅವರ ಜತೆಗಿನ ʼಮರ್ಮʼ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದೆ.

ʼಮಠʼ ಶುರುವಾದ ಘಳಿಗೆ.. 

ಒಂದು ಕಥೆಯನ್ನಿಟ್ಟುಕೊಂಡು ಸಿನಿಮಾರಂಗಕ್ಕೆ ಬಂದಿದ್ದ ಗುರುಪ್ರಸಾದ್‌ ಅಭಿಮಾನಿಯಂತೆ ಉಪೇಂದ್ರ ಅವರನ್ನು ಭೇಟಿಯಾಗಿ ಮೊದಲು ಒಂದು ಕಥೆಯನ್ನು ಹೇಳುತ್ತಾರೆ. ಈ ಕಥೆಗೆ ಒಪ್ಪಿದ ಉಪೇಂದ್ರ ಸಿನಿಮಾದ ಫೋಟೋ ಸೆಷನ್ ನಲ್ಲಿ ಉಂಟಾದ ಒಂದು ಗೊಂದಲದಿಂದ ಸಿನಿಮಾದಿಂದ ಹೊರಬರುತ್ತಾರೆ. ಸ್ವತಃ ನಿರ್ದೇಶಕ ಗುರುಪ್ರಸಾದ್‌ ಅವರೇ ನಾನು ಈ ಸಿನಿಮಾ ಮಾಡುತ್ತಿಲ್ಲವೆಂದು ಉಪೇಂದ್ರ ಅವರಿಗೆ ಹೇಳುತ್ತಾರೆ. ಆ ಸಮಯದಲ್ಲಿ ಜಗ್ಗೇಶ್‌ ಅವರನ್ನು ಭೇಟಿ ಆಗಿದ್ದ ಗುರುಪ್ರಸಾದ್‌ ʼಮಠʼ ಕಥೆಯನ್ನು ಹೇಳುತ್ತಾರೆ. ಅಲ್ಲಿಂದಲೇ ಗುರುಪ್ರಸಾದ್‌ ಅವರ ಸಿನಿಮಾ ಪಯಣ ಶುರುವಾಗಿತ್ತು. ಈ ಸಿನಿಮಾ ರಿಲೀಸ್‌ ಆಗಿ ಸೂಪರ್‌ ಹಿಟ್‌ ಆಗಿತ್ತು.

ಇದಾದ ಬಳಿಕ ಅವರೊಂದಿಗೆ ʼಎದ್ದೇಳು ಮಂಜುನಾಥʼ ಸಿನಿಮಾ ಮಾಡಿದೆ. 6 ತಿಂಗಳು ಜಗ್ಗೇಶ್‌ ಅವರನ್ನು ಸ್ಟಡಿ ಮಾಡಿದ ಬಳಿಕ ಸಿನಿಮಾದ ಸ್ಕ್ರಿಪ್ಟ್‌ ಮಾಡಿದ್ದರು. ಈ ಸಿನಿಮಾ ಹಿಟ್‌ ಆಗುವುದರ ಜತೆ ಅತ್ಯುತ್ತಮ ಚಿತ್ರಕಥೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಗುತ್ತದೆ.

ಗಡ್ಡ ಬಿಟ್ಟಿರುವುದು ಯಾಕೆ..: ಗುರುಪ್ರಸಾದ್‌ ಗಡ್ಡ ಬಿಟ್ಟಿರುವುದರ ಹಿಂದೆ ಒಂದು ಕಹಾನಿಯಿದೆ. ರಾಜ್‌ಕುಮಾರ್‌ ಅವರನ್ನು ಭೇಟಿ ಆಗಿದ್ದಾಗ ಅವರು ನನ್ನ ಕೈಕುಲುಕಿದರು. ನಂತ್ರ ನನ್ನ ಗಡ್ಡ ಮುಟ್ಟಿ ನಿನ್ನ ಮುಖಕ್ಕೆ ಒಂದೊಳ್ಳೆ ಫ್ರೇಮ್‌ ಇದೆ ಅಂತ ಹೇಳಿದ್ರು. ಅಣ್ಣಾವ್ರು ಮುಟ್ಟಿದ ಗಡ್ಡ ಅನ್ನೋ ಸೆಂಟಿಮೆಂಟ್‌ನಲ್ಲೇ ನಾನು ಗಡ್ಡ ಬಿಟ್ಟಿದ್ದೇನೆ ಎಂದು ಗುರುಪ್ರಸಾದ್‌ ಹೇಳಿದ್ದರು.

ಅಪ್ಪ – ಅಮ್ಮನಿಗೆ ಮದುವೆಗೆ ಬರಬೇಡಿ ಎಂದಿದ್ದೆ:  ನನ್ನ ತಂದೆ ಸಂಪ್ರದಾಯ ಬ್ರಾಹ್ಮಣ ಕುಟುಂಬದವರು. 6 ಸಾವಿರ ಮದುವೆಗಳನ್ನು ಮಾಡಿಸಿದ್ದಾರೆ. ನಾನು ಅಂತರ್‌ ಜಾತಿ ಮದುವೆ ಆಗಿದ್ದೆ. ನಾನು ಅವರಿಗೆ ನಮಸ್ಕಾರ ಮಾಡಿ ನನ್ನ ಮದುವೆ ಕಾರ್ಡ್‌ ಕೊಟ್ಟು, ದಯವಿಟ್ಟು ಮದುವೆಗೆ ಬರಬೇಡಿ ಎಂದಿದ್ದೆ. ನೀವು ಮದುವೆಗೆ ಬಂದರೆ ನಿಮಗೆ ನೋವು ಆಗುತ್ತದೆ ಎಂದಿದ್ದೆ. ಹಾಗಾಗಿ ಅವರು ನನ್ನ ಮದುವೆಗೆ ಬಂದಿರಲಿಲ್ಲ ಎಂದು ಹಳೆಯ ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.

ಸಿನಿಮಾ ಜರ್ನಿ.. 

ಗುರುಪ್ರಸಾದ್‌ ಅವರು 2006ರಲ್ಲಿ ʼಮಠʼ, ʼಎದ್ದೇಳು ಮಂಜುನಾಥʼ `ಡೈರೆಕ್ಟರ್ ಸ್ಪೇಷಲ್’,`ಎರಡನೇ ಸಲ’, ʼರಂಗನಾಯಕʼ ಚಿತ್ರಗಳನ್ನು ನಿರ್ದೇಶಿಸಿದ್ದರು. ಗುರುಪ್ರಸಾದ್‌ ನಿರ್ದೇಶಕ ಮಾತ್ರವಲ್ಲದೇ ನಟನಾಗಿ `ಮಠ’,`ಎದ್ದೇಳು ಮಂಜುನಾಥ’,`ಮೈಲಾರಿ’, `ಹುಡುಗರು’,`ಅನಂತು v/s ನುಸ್ರತ್’, ʼಕುಷ್ಕಾʼ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ʼಮಠʼ ಜಗ್ಗೇಶ್‌ ಅವರ ನೂರನೇ ಸಿನಿಮಾವಾಗಿತ್ತು. ʼಡೈರೆಕ್ಟರ್ ಸ್ಪೇಷಲ್ʼ ಡಾಲಿ ಧನಜಯ್‌ ಅವರಿಗೆ ಚಂದನವನದಲ್ಲಿ ಇಮೇಜ್‌ ತಂದುಕೊಟ್ಟ ಸಿನಿಮಾವಾಗಿತ್ತು.

ರಿಯಾಲಿಟಿ ಶೋ..

ಕನ್ನಡದ ಜನಪ್ರಿಯ ಶೋ ʼಬಿಗ್‌ ಬಾಸ್‌ ಕನ್ನಡ-2ʼ ನಲ್ಲಿ ಅವರು ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಪುಟಾಣಿ ಪಂಟ್ರು ಸೀಸನ್ 2, ಥಾಕಾ ಧಿಮಿ ತಾ ಡ್ಯಾನ್ಸಿಂಗ್ ಸ್ಟಾರ್, ಭರ್ಜರಿ ಕಾಮಿಡಿ, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋನಲ್ಲಿ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಕುಡಿತದ ಚಟ, ಕೌಟುಂಬಿಕ ಸಮಸ್ಯೆ.. ವ್ಯಕ್ತಿ ಬೆಳೆಯುತ್ತಾ ಹೋದಂತೆ ಆತನ ಜೀವನದಲ್ಲಿ ಒಂದಲ್ಲ ಒಂದು ಸಂಕಷ್ಟು- ಸವಾಲುಗಳು ಎದುರಾಗುತ್ತವೆ. ನಿರ್ದೇಶಕ ಗುರುಪ್ರಸಾದ್‌ ಅವರ ಬದುಕಿನಲ್ಲಿ ಆಗಿದ್ದು ಕೂಡ ಇದೆ ರೀತಿ. ಮೊದಲ ಪತ್ನಿಯೊಂದಿಗೆ ಅಷ್ಟಾಗಿ ಅನೋನ್ಯವಾಗಿರದ ಗುರುಪ್ರಸಾದ್‌ ಅವರಿಂದ  ದೂರವಾದ ಬಳಿಕ, ಇತ್ತೀಚೆಗೆ ಎರಡನೇ ಮದುವೆ ಆಗಿದ್ದರು. ಈ ದಂಪತಿ ಒಂದು ಹೆಣ್ಣು ಮಗುವಿದೆ.

ಸಿನಿಮಾಗಳ ಸತತ ಸೋಲಿನಿಂದ ಕೆಂಗೆಟ್ಟಿದ್ದ ಗುರುಪ್ರಸಾದ್‌ ಅವರು ಕುಡಿತಕ್ಕೆ ದಾಸರಾಗಿದ್ದರು. ಇದೇ ಕಾರಣದಿಂದ ಅವರು ಅಪಾರ್ಟ್‌ಮೆಂಟ್‌ ನಲ್ಲಿ ಒಬ್ಬರಾಗಿಯೇ ಹೆಚ್ಚು ಕಾಲ ಇರುತ್ತಿದ್ದರು ಎನ್ನಲಾಗಿದೆ. ಸಾಲ ಮಾಡಿಕೊಂಡಿದ್ದ ಅವರು ಸಾಲಗಾರರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

Dense Fog… ರಸ್ತೆ ಕಾಣದೆ ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್, 10 ಮಂದಿಯ ಸ್ಥಿತಿ ಗಂಭೀರ

Dense Fog… ರಸ್ತೆ ಕಾಣದೆ ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್, 10 ಮಂದಿಯ ಸ್ಥಿತಿ ಗಂಭೀರ

Bangladesh: ಹಿಂದೂ ಸನ್ಯಾಸಿ ಚಿನ್ಮಯಿ ದಾಸ್‌ ಜಾಮೀನು ಅರ್ಜಿ ವಜಾಗೊಳಿಸಿದ ಅರ್ಜಿ!

Bangladesh: ಹಿಂದೂ ಸನ್ಯಾಸಿ ಚಿನ್ಮಯಿ ದಾಸ್‌ ಜಾಮೀನು ಅರ್ಜಿ ವಜಾಗೊಳಿಸಿದ ಅರ್ಜಿ!

Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್‌ ಲೀಕ್

Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್‌ ಲೀಕ್

Court Verdict: ಹಿಂದೂ ಸಂತ ಚಿನ್ಮಯ್‌ ದಾಸ್‌ ಜಾಮೀನು ಅರ್ಜಿ ತಿರಸ್ಕರಿಸಿದ ಬಾಂಗ್ಲಾ ಕೋರ್ಟ್

Court Verdict: ಹಿಂದೂ ಸಂತ ಚಿನ್ಮಯ್‌ ದಾಸ್‌ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಮತ್ತೆ ಬಂದ ಪ್ರಿಯಾ ಆನಂದ

Sandalwood: ಮತ್ತೆ ಬಂದ ಪ್ರಿಯಾ ಆನಂದ

Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ

Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ

KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್‌ ನಗು 

KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್‌ ನಗು 

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

2

Savanur: ಈ ಬಾರಿಯಾದರೂ ಸಿಕ್ಕೀತೇ ರೈತರಿಗೆ ನೀರು

Dense Fog… ರಸ್ತೆ ಕಾಣದೆ ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್, 10 ಮಂದಿಯ ಸ್ಥಿತಿ ಗಂಭೀರ

Dense Fog… ರಸ್ತೆ ಕಾಣದೆ ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್, 10 ಮಂದಿಯ ಸ್ಥಿತಿ ಗಂಭೀರ

1

Kadaba: ಇಲ್ಲಿ ಸಿಬಂದಿ ಜತೆ ಗದ್ದುಗೆಯೂ ಖಾಲಿ ಖಾಲಿ!

Bangladesh: ಹಿಂದೂ ಸನ್ಯಾಸಿ ಚಿನ್ಮಯಿ ದಾಸ್‌ ಜಾಮೀನು ಅರ್ಜಿ ವಜಾಗೊಳಿಸಿದ ಅರ್ಜಿ!

Bangladesh: ಹಿಂದೂ ಸನ್ಯಾಸಿ ಚಿನ್ಮಯಿ ದಾಸ್‌ ಜಾಮೀನು ಅರ್ಜಿ ವಜಾಗೊಳಿಸಿದ ಅರ್ಜಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.