UV Fusion: ಮುಖವಾಡದೊಳಗಿನ ಮುಖವನ್ನು ನಗಿಸೋಣ


Team Udayavani, Nov 3, 2024, 2:00 PM IST

15

ಜಾತ್ರೆ, ಮೆರವಣಿಗೆಗಳಲ್ಲಿ ಗೊಂಬೆ ನೃತ್ಯ ಮಾಡುವವರು, ಕೀಲುಕುದುರೆ ಪ್ರದರ್ಶನ ನೀಡುವವರನ್ನು ಕಂಡಿರುತ್ತೇವೆ. ಅವರು ಮಾಡುವ ಚೇಷ್ಟೆಗಳನ್ನು ನೋಡಿ ಎಷ್ಟೋ ಮಂದಿ ಮನಸಾರೆ ನಕ್ಕಿರುತ್ತಾರೆ. ನಮ್ಮ ನಗುವೇ ಅವರಿಗೆ ಮನತೃಪ್ತಿಯನ್ನು ನೀಡುತ್ತದೆ. ಆದರೆ ಮುಖವಾಡದಲ್ಲಿರುವ ನಗುವೇ ಅವರ ಮುಖದಲ್ಲೂ ಇರುತ್ತವೆ ಎನ್ನುವುದು ನಮ್ಮ ತಪ್ಪು ಕಲ್ಪನೆ ಅನ್ನಬಹುದು.

ಇಂದಿನ ಮನುಕುಲದಲ್ಲಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಒಳಗೊಂಡವನಿಗೆ ಮಾತ್ರ ಮನುಷ್ಯ ಎನ್ನಬಹುದು. ಆದರೆ ಮನುಷ್ಯ ತನ್ನ ಮೋಜಿಗಾಗಿ ಈ ಜೋಕರ್‌ಗಳಿಗೆ ಅದೆಷ್ಟೋ ಬಾರಿ ಘಾಸಿಯನ್ನುಂಟುಮಾಡುತ್ತಾನೆ. ಅವರ ಮುಖವಾಡಗಳಿಗೆ ಹೊಡೆಯುವುದಾಗಿರಬಹುದು ಅಥವಾ ಚೇಷ್ಟೆಗಾಗಿ ನೋವನ್ನುಂಟು ಮಾಡುವುದಾಗಿರಬಹುದು ಹೀಗೆ. ನಮ್ಮ ಮುಖದಲ್ಲಿ ನಗು ಕಾಣಲು ಪರಿಶ್ರಮ ಪಡುವವರಿಗೆ ನೋವುಂಟು ಮಾಡುವುದು ಅದೆಷ್ಟು ಸರಿ. ಅವರೂ ಮನುಷ್ಯರೆ ತಾನೆ.

ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಮಯ ಪ್ರಜ್ಞೆ ಎನ್ನುವುದು ಅಗತ್ಯ. ಅದರಲ್ಲೂ ಈ ಕ್ಷೇತ್ರದಲ್ಲಂತು ತುಂಬಾನೆ ಅತ್ಯಗತ್ಯ. ಒಂದು ನಿಮಿಷ ತಡವಾದರೂ ಅವರಿಗೆ ಸಿಗುವ ಸಂಬಳದಲ್ಲಿ ಕಡಿತ ಮಾಡಲಾಗುತ್ತದೆ. ಹಿಂದೆ ಈ ಜೋಕರ್‌ಗಳ ಮುಖವಾಡಗಳನ್ನು ಮಣ್ಣಿನಲ್ಲಿ ಮುಖವಾಡದ ಅಚ್ಚು ಮಾಡಿ ಬಳಿಕ ಪೇಪರ್‌ ಮೋಡಲ್‌ಗ‌ಳ ಮೂಲಕ ರಚಿಸಲಾಗುತ್ತಿತ್ತು. ಆದರೆ ಈಗ ಫೈಬರ್‌ ಮುಖವಾಡಗಳದ್ದೇ ರಾಜ್ಯಭಾರ. ಸುಮಾರು 4ರಿಂದ 5 ಅಡಿ ಎತ್ತರದ ರಾಜ- ರಾಣಿ, ಮಹಿಷಾಸುರ, ನರಸಿಂಹ, ಜೋಕರ್‌ ಆಕಾರಗಳನ್ನು ರಚಿಸಲಾಗುತ್ತದೆ. ಆದರೆ ಇವರನ್ನು ಒಬ್ಬ ಸಾಮಾನ್ಯ ಮನುಷ್ಯರಂತೆ ಕಾಣಲಾಗುತ್ತಿಲ್ಲ. ಈ ಕೆಲಸಕ್ಕೂ ಬೆಲೆ ಸಿಗುತ್ತಿಲ್ಲ. ಒಬ್ಬ ವ್ಯಕ್ತಿ ಮಾಡುವುದು ಚಿಕ್ಕ ಕೆಲಸವಾದರೂ ಅದು ಕೂಡ ಕಾಯಕವೇ ತಾನೆ.

ಎಲ್ಲ ಜನರು ಮೂರು ಹೊತ್ತಿನ ಊಟಕ್ಕಾಗಿಯೇ ದುಡಿತವನ್ನು ಅವಲಂಬಿಸಿ ಬದುಕುತ್ತಾರೆ. ಇನ್ನಾದರೂ ನಮ್ಮನ್ನು ನಗಿಸಲು ಇರುವ ಜೋಕರ್‌ಗಳ ತಂಡಕ್ಕೆ ನೋವುಂಟು ಮಾಡದಿರೋಣ. ಎಲ್ಲ ಕಾಯಕಗಳಿಗೂ ಸಮಾನ ಗೌರವವನ್ನು ನೀಡೋಣ. ಇಂದಿನ ಯುವ ಪೀಳಿಗೆ ಮಾನವೀಯತೆಯನ್ನು ಮೆರೆದು ಬದುಕನ್ನು ಸಾಗಿಸಬೇಕು.

– ತೃಪ್ತಿ ಗುಡಿಗಾರ್‌

ಎಂ.ಪಿ.ಎಂ. ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

14-uv-fusion

Mother: ಅಮ್ಮನ ಜೀವನವೇ ಆದರ್ಶ

13-uv-fusion

Childhood Days: ಮರಳಿ ಬಾರದ ಬಾಲ್ಯ ಜೀವನ

12-uv-fusion

UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್‌

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.