Director Guru: ಗುರುಪ್ರಸಾದ್ ಬೆಳವಣಿಗೆಗೆ ಆ ಎರಡು ವಿಚಾರಗಳು ತಡೆಯಾದವು…: ನಟ ಜಗ್ಗೇಶ್
'ಮಠ’ ಸಿನಿಮಾ ಮಾಡಬೇಕಾದರೆ ಕೈಯಲ್ಲಿ ನಾಲ್ಕಾದರೂ ಪುಸ್ತಕ ಇರ್ತಿತ್ತು, ಆಮೇಲೆ ಆ ಕಾಲ ಬದಲಾಯಿತು...
Team Udayavani, Nov 3, 2024, 7:46 PM IST
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಕೆಲವು ಜನಪ್ರಿಯ ಸಿನಿಮಾಗಳ ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆಯೂ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಅವರ ನಿರ್ದೇಶನದ ಪ್ರಮುಖ ಚಿತ್ರಗಳಾದ ‘ಮಠ’, ‘ಎದ್ದೇಳು ಮಂಜುನಾಥ’ ಅಭಿನಯಿಸಿದ ನವರಸ ನಾಯಕ ಜಗ್ಗೇಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಗುರುಪ್ರಸಾದ್ ನಿರ್ದೇಶಕನಾಗಿ ಅವಕಾಶ ಪಡೆದ ಮೊದಲ ಸಿನಿಮಾ ಜಗ್ಗೇಶ್ ಅಭಿನಯದ ‘ಮಠʼ ಚಿತ್ರ ಮೂಲಕ. ಗುರುಪ್ರಸಾದ್ ನಿರ್ದೇಶಿಸಿದ ಕೊನೆಯ ಸಿನಿಮಾ ‘ರಂಗನಾಯಕ ಕೂಡ ಜಗ್ಗೇಶ್ ಗಾಗಿ ನಿರ್ದೇಶಿಸಿದ ಸಿನಿಮಾ. ಗುರುಪ್ರಸಾದ್ ಚಿತ್ರರಂಗಕ್ಕೆ ಬಂದಾಗಿನಿಂದಲೂ ಜಗ್ಗೇಶ್ ಗುರುಪ್ರಸಾದ್ ರನ್ನು ಹತ್ತಿರದಿಂದ ಕಂಡ ಬಗ್ಗೆ ವಿವರಿಸಿದ್ದಾರೆ.
ಎರಡು ವಿಷಯಗಳಿಂದ ಬೆಳವಣಿಗೆಗೆ ತಡೆ:
ಗುರುಪ್ರಸಾದ್ ಬಹಳ ಒಳ್ಳೆಯ ನಿರ್ದೇಶಕ, ಪ್ರತಿಭಾಶಾಲಿ, ಬರವಣಿಗೆ ಶೈಲಿ ಬಹಳ ಭಿನ್ನವಾಗಿತ್ತು. ಅವರು ಮನಸ್ಸು ಮಾಡಿದ್ದರೆ ಏನೋ ಸಾಧಿಸಬಹುದಾಗಿತ್ತು. ಆದರೆ ಎರಡು ವಿಷಯಗಳು ಅವರ ಬೆಳವಣಿಗೆಯ ತಡೆದವು. ಒಂದು ಮದ್ಯ ಮತ್ತು ಇನ್ನೊಂದು ಅಹಂ. ಅವೆರಡು ಇಲ್ಲದಿದ್ದರೆ ಗುರುಪ್ರಸಾದ್ ರಾಜ್ಯದ ನಂಬರ್ 1 ನಿರ್ದೇಶಕ ಆಗಿರುತ್ತಿದ್ದರು ಎಂದು ಜಗ್ಗೇಶ್ ಹೇಳಿದರು.
ಯಾರ ಮಾತು ಕೇಳುತ್ತಿರಲಿಲ್ಲ:
‘ಮಠ’ ಸಿನಿಮಾ ಮಾಡಬೇಕಾದರೆ ಇದ್ದ ಗುರುಪ್ರಸಾದ್ ನನಗೆ ಈಗಲೂ ನೆನಪಿನಲ್ಲಿದೆ. ಆಗ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಕೈಯಲ್ಲಿ ನಾಲ್ಕಾದರೂ ಪುಸ್ತಕ ಇರುತ್ತಿತ್ತು, ಅದೇ ಕೊನೆ ಕೊನೆಗೆ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಬ್ಯಾಗಿನಲ್ಲಿ ನಾಲ್ಕು ಬಾಟಲಿ ಇರುತ್ತಿದ್ದವು. ಬೆಳಿಗ್ಗೆಯಿಂದ ಸಂಜೆವರೆಗೂ ಅವರಿಂದ ಮದ್ಯದ ವಾಸನೆ ಹೋಗುತ್ತಲೇ ಇರಲಿಲ್ಲ. ಇದರ ಜೊತೆಗೆ ಅಹಂ, ಸಿಟ್ಟು ಕೂಡ ಹೆಚ್ಚಿಗೆ ಇತ್ತು. ನನಗೆ ಸರಿ ಅನಿಸಿದ್ದನ್ನಷ್ಟೆ ಮಾಡುವೆ, ಯಾರ ಮಾತು ಕೇಳುವುದಿಲ್ಲ ಎಂಬ ಅಹಂ ಅವರಲ್ಲಿ ಹೆಚ್ಚಿಗೆ ಇತ್ತುʼ ಎಂದಿದ್ದಾರೆ ಜಗ್ಗೇಶ್.
ನಿರ್ಮಾಪಕರಿಗೆ ಗೌರವ ಕೊಡಲಿಲ್ಲ:
‘ನಾನು ಅವರು ಸುಮಾರು ಹತ್ತು ವರ್ಷ ದೂರಾಗಿಬಿಟ್ಟಿದ್ದೆವು. ಆತನ ಜಗಳದ ಗುಣ ನನಗೆ ಇಷ್ಟವಾಗಿರಲಿಲ್ಲ. ಆ ನಂತರ ಕೆಲವು ಆಪ್ತರು ನಮ್ಮನ್ನು ಒಟ್ಟಿಗೆ ಕೆಲಸ ಮಾಡಲು ಸ್ಪೂರ್ತಿ ಕೊಟ್ಟರು, ನನ್ನ ಆತ್ಮೀಯರೆ ‘ರಂಗನಾಯಕʼ ಸಿನಿಮಾಕ್ಕೆ ಬಂಡವಾಳ ಹಾಕಿದರು. ನಿರ್ಮಾಪಕರು, ಗುರುಗೆ 90 ಲಕ್ಷ ಹಣ ಕೊಟ್ಟರು. ಅಷ್ಟೆಲ್ಲ ಮಾಡಿದರೂ ಗುರು ಅದಕ್ಕೆ ಗೌರವ ಕೊಡಲಿಲ್ಲ. ನನ್ನನ್ನು ಸೆಟ್ಗೆ ಎರಡು ಗಂಟೆಗೆ ಕರೆಸಿಕೊಂಡರೆ ಆತ ನಾಲ್ಕು ಗಂಟೆಗೆ ಬರುತ್ತಿದ್ದ. ಬಂದಾಗಲೂ ಮದ್ಯದ ವಾಸನೆ ಹೋಗಿರುತ್ತಿರಲಿಲ್ಲ. ಸೆಟ್ಗೆ ಬಂದು ಏನು ಶೂಟಿಂಗ್ ಮಾಡಬೇಕು ಎಂದು ಯೋಚಿಸುತ್ತಿದ್ದ, ಏನು ಡೈಲಾಗ್ ಇರಬೇಕು ಎಂದು ಬರೆಯುತ್ತಿದ್ದ. ಕೆಲವೊಮ್ಮೆ ನಾನೇ ಸೀನ್ಗಳನ್ನು ಬರೆದುಕೊಟ್ಟಿದ್ದೂ ಇದೆʼ ಎಂದಿದ್ದಾರೆ ಜಗ್ಗೇಶ್.
ಮೊದಲ ಪತ್ನಿ ಸರಿದಾರಿಗೆ ತರಲು ಯತ್ನಿಸಿದ್ದಳು:
ಗುರು ಮೊದಲ ಪತ್ನಿ ಬಂಗಾರದಂತಹಾ ಮಹಿಳೆ ಇವನನ್ನು ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸಿದಳು. ಆದರೆ ಇವನು ಹೆಂಡದ ಚಟಕ್ಕೆ ದಾಸನಾಗಿದ್ದ. ಈತನನ್ನು ಸರಿದಾರಿಗೆ ತರಲು ಆಕೆ ಸಾಕಷ್ಟು ಪ್ರಯತ್ನ ಪಟ್ಟಳು ಆದರೆ ಸಾಧ್ಯವಾಗಲಿಲ್ಲ. ಆ ನಂತರ ಎರಡನೇ ಮದುವೆಯಾದ ಆ ಮಹಿಳೆಗೆ ಮೂರು ವರ್ಷದ ಹೆಣ್ಣು ಮಗು ಇದೆ. ಆಕೆಯನ್ನೂ ಅನಾಥಳನ್ನಾಗಿ ಮಾಡಿದ. ‘ರಂಗನಾಯಕ’ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಒಮ್ಮೆ ನನ್ನನ್ನು ಅವನ ಮನೆಗೆ ಕರೆದಿದ್ದ, ಮನೆಗೆ ಹೋದರೆ ಮನೆಯ ತುಂಬದ ಎಣ್ಣೆ ಬಾಟಲಿಗಳೇ ತುಂಬಿದ್ದವು’ ಎಂದು ನೆನಪು ಮಾಡಿಕೊಂಡಿದ್ದಾರೆ ನಟ ಜಗ್ಗೇಶ್.
ನನ್ನ ಅಪಾರ ಅಭಿಮಾನಿ:
ಗುರು ಪ್ರಸಾದ್ ಜೊತೆಗೆ ಕೆಲವು ಜಾಗರಣೆಗಳ ಮಾಡಿದ್ದೇನೆ. ನನ್ನ ಒಂದು ಪ್ರಶ್ನೆಗೆ ನೂರು ಉತ್ತರಗಳ ಕೊಡುತ್ತಿದ್ದ, ಇದು ಬರವಣಿಗೆಗೆ ಬಂದ್ರೆ ಕನ್ನಡ ಚಿತ್ರರಂಗಕ್ಕೆ ಉತ್ತಮ ಸಿನಿಮಾಗಳು ಆಗುತ್ತಿದ್ದವು. ಅವನು ನನಗೆ ಅಪಾರವಾದ ಅಭಿಮಾನಿ, ಅವನು ನನಗೆ ಹೇಳುತ್ತಿದ್ದ ಗುರೂಜೀ ನೀವು ಯಂಗ್ ಪಾತ್ರಗಳನ್ನೇ ಮಾಡಿ, ಮುದುಕರು ರೀತಿ ಪಾತ್ರಗಳ ಮಾಡಬೇಡಿ ನಿಮಗೆ ಅಂತಹ ಯೌವನದ ಪಾತ್ರಗಳ ಕತೆಗಳ ಬರೆಯುತ್ತೇನೆ ಎಂದು ಹೇಳಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.