Retirement: ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಭಾರತದ ವಿಕೆಟ್ ಕೀಪರ್
Team Udayavani, Nov 4, 2024, 10:58 AM IST
ಕೋಲ್ಕತ್ತಾ: ಭಾರತದ ಟೆಸ್ಟ್ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದ, ಹಲವು ಐಪಿಎಲ್ ತಂಡಗಳಲ್ಲಿ ಆಡಿರುವ ವೃದ್ದಿಮಾನ್ ಸಹಾ (Wriddhiman Saha) ಅವರು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ಕೂಟದಲ್ಲಿ ಕೊನೆಯ ಬಾರಿಗೆ ಬೆಂಗಾಲ್ ತಂಡವನ್ನು ಪ್ರತಿನಿಧಿಸುವುದಾಗಿ ಸಹಾ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತ ಹೊಂದಿರುವ ಅತ್ಯುತ್ತಮ ವಿಕೆಟ್-ಕೀಪರ್ ಆಗಿರುವ ಸಹಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಋತುವಿನಲ್ಲಿ ಸಹ ಕಾಣಿಸಿಕೊಳ್ಳಲು ಬಯಸುತ್ತಿದಿಲ್ಲ ಎಂದು ವರದಿಯಾಗಿದೆ.
“ಉತ್ತಮ ಕ್ರಿಕೆಟ್ ಜೀವನದ ಬಳಿಕ ಈ ಸೀಸನ್ ನನ್ನ ಕೊನೆಯದಾಗಿದೆ. ಬೆಂಗಾಲ್ ತಂಡವನ್ನು ಅಂತಿಮವಾಗಿ ಪ್ರತಿನಿಧಿಸಲಿದ್ದೇನೆ. ವಿದಾಯಕ್ಕಿಂತ ಮೊದಲು ಕೊನೆಯ ಬಾರಿಗೆ ರಣಜಿ ಟ್ರೋಫಿ ಪಂದ್ಯವನ್ನು ಆಡಲಿದ್ದೇನೆ” ಎಂದು ವೃದ್ದಿಮಾನ್ ಸಹಾ ಹೇಳಿದರು.
ಸಹಾ ಅವರು ಭಾರತದ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದರು. ಅತ್ಯುತ್ತಮ ವಿಕೆಟ್ ಕೀಪರ್ ಆಗಿರುವ ಸಹಾ ಧೋನಿ ನಿವೃತ್ತಿಯ ಬಳಿಕ ಟೆಸ್ಟ್ ಕೀಪರ್ ಆಗಿದ್ದರು. ಆದರೆ ರಿಷಭ್ ಪಂತ್ ತಂಡಕ್ಕೆ ಬಂದ ಬಳಿಕ ಸಹಾಗೆ ಅವಕಾಶ ಕಡಿಮೆಯಾಗಿತ್ತು. ಆದರೆ 2023ರ ಬಿಸಿಸಿಐ ಕೇಂದ್ರಿಯ ಗುತ್ತಿಗೆಯಿಂದ ಅವರನ್ನು ಕೈಬಿಡಲಾಗಿತ್ತು.
40 ಟೆಸ್ಟ್ ಪಂದ್ಯವಾಡಿರುವ ವೃದ್ದಿಮಾನ್ ಸಹಾ 29.41ರ ಸರಾಸರಿಯಲ್ಲಿ 1353 ರನ್ ಗಳಿಸಿದ್ದಾರೆ. ಮೂರು ಶತಕ ಮತ್ತು ಆರು ಅರ್ಧಶತಕ ಬಾರಿಸಿದ್ದಾರೆ. ವಿಕೆಟ್ ಕೀಪರ್ ಆಗಿ 92 ಕ್ಯಾಚ್ ಪಡೆದಿರುವ ಅವರು 12 ಸ್ಟಂಪೌಟ್ ಗಳಿಗೆ ಕಾರಣರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.