ಹುಬ್ಬಳ್ಳಿ: ಹಬ್ಬದ ಬೆನ್ನಲ್ಲೇ ರಸ್ತೆಗಳಲ್ಲಿ ಕಸದ ರಾಶಿ
Team Udayavani, Nov 4, 2024, 1:28 PM IST
ಉದಯವಾಣಿ ಸಮಾಚಾರ
ಹುಬ್ಬಳ್ಳಿ: ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿ ಮಂಗಲವಾಗಿದ್ದು, ಇನ್ನೇನಿದ್ದರೂ ಸುರಿದಿರುವ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಸಂಭ್ರಮದಿಂದ ಜನರು ದೀಪಾವಳಿ ಹಬ್ಬ ಆಚರಣೆ ಮಾಡಿದ್ದು, ಅಲಂಕಾರಕ್ಕೆ ತೆಗೆದುಕೊಂಡು ಬಂದ ಬಾಳೆಕಂಬ, ತೆಂಗಿನ ಗರಿ, ಮಾವಿನ ತಳಿರು, ಕಬ್ಬು, ವಿವಿಧ ಬಗೆಯ ಹೂವುಗಳು ಹಬ್ಬ ಮುಗಿದ ನಂತರ ಬರುವುದು ನೇರವಾಗಿ ರಸ್ತೆಗಳಿಗೆ. ನಗರದ ಹಲವು ರಸ್ತೆಗಳಲ್ಲಿ ರವಿವಾರ ತ್ಯಾಜ್ಯ ರಾಶಿಯೇ ಕಂಡುಬಂತು.
ದುರ್ಗದ ಬಯಲು, ಹಿರೇಪೇಟೆ, ಶಿಂಪಿಗಲ್ಲಿ, ಬಾಬಾಸಾನ ಗಲ್ಲಿ, ಸಿಬಿಟಿ, ಮರಾಠಾ ಗಲ್ಲಿ, ನ್ಯೂ ಮೇದಾರ ಓಣಿ, ಅಕ್ಕಿಹೊಂಡ, ಕೊಪ್ಪಿಕರ ರಸ್ತೆ, ಕಮರಿಪೇಟೆ, ದಾಜೀಬಾನ ಪೇಟೆ, ಜನತಾ ಬಜಾರ, ಸ್ಟೇಶನ್ ರಸ್ತೆ, ಜೆ.ಸಿ.ನಗರ, ಕೊಯಿನ್ ರಸ್ತೆ, ಕೊಪ್ಪಿಕರ ರಸ್ತೆ, ಗೋಕುಲ ರಸ್ತೆ, ರವಿ ನಗರ, ಅಕ್ಷಯ ಪಾರ್ಕ್, ವಿದ್ಯಾನಗರ, ಶಿರೂರ ಪಾರ್ಕ್, ಲಿಂಗರಾಜನಗರ, ಲೋಕ ಪ್ಪನ ಹಕ್ಕಲ, ಕಿಮ್ಸ್ ಹತ್ತಿರ, ಹೊಸೂರ, ಆನಂದನಗರ, ನೇಕಾರ ನಗರ, ಹಳೇ ಹುಬ್ಬಳ್ಳಿ ದುರ್ಗದ ಬಯಲು, ಜಂಗ್ಲಿ ಪೇಟೆ, ಸಿದ್ಧಾರೂಢಸ್ವಾಮಿ ಮಠದ ರಸ್ತೆ, ಹಳೇ ಹುಬ್ಬಳ್ಳಿ ಚನ್ನಪೇಟೆ, ಕೇಶ್ವಾಪುರ ಮುಖ್ಯ ರಸ್ತೆ, ರಮೇಶ ಭವನ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ತ್ಯಾಜ್ಯ ಸುರಿಯಲಾಗಿದೆ.
ಬೆಳ್ಳಂಬೆಳಗ್ಗೆ ತೆರವು: ರವಿವಾರ ಬೆಳ್ಳಂಬೆಳಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳಿಗೆ, ವಾಹನ ಗಳಿಗೆ ಮುಂದೆ ಅಲಂಕಾರ ಮಾಡಿದ ಬಾಳೆಕಂಬ, ತೆಂಗಿನ ಗರಿ, ಕಬ್ಬು, ಮಾವಿನ ತಳಿರು, ಹೂಗಳ ಸರ ಸೇರಿದಂತೆ ವಿವಿಧ ಬಗೆಯಿಂದ ವಸ್ತುಗಳನ್ನು ಪೌರ ಕಾರ್ಮಿಕರು ತೆರವು ಮಾಡಿ ತಮ್ಮ ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದು ಕಂಡುಬಂತು.
ಉಳಿದಿದ್ದು ಇದ್ದಲ್ಲಿಯೇ: ಹಬ್ಬದ ಸಂಭ್ರಮಕ್ಕೆ ಬೇಕಾಗುವ ವಿವಿಧ ಸಾಮಗ್ರಿಗಳನ್ನು ನಗರಕ್ಕೆ ತಂದ ಮಾರಾಟಗಾರರು ಹಾಗೂ ರೈತರು ಖರೀದಿ ಮುಕ್ತಾಯದ ನಂತರ ಉಳಿದಿದ್ದನ್ನು ಸ್ಥಳದಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ. ಇದು ಪೌರ ಕಾರ್ಮಿಕರಿಗೆ ತಲೆನೋವಾಗಿ ಪರಿಣಮಿಸಿದೆ. ನಗರದ ದುರ್ಗದ ಬಯಲು, ರಾಧಾಕೃಷ್ಣಗಲ್ಲಿ, ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೇಶ್ವಾಪುರ ಸರ್ವೋದಯ ವೃತ್ತ, ರಮೇಶ ಭವನ, ಅಶೋಕ ನಗರ, ಹಳೇಹುಬ್ಬಳ್ಳಿ ದುರ್ಗದ ಬಯಲು, ಇಂಡಿ ಪಂಪ್, ಸ್ಟೇಶನ್ ರಸ್ತೆ, ಗೋಪನಕೊಪ್ಪ, ನ್ಯೂ ಇಂಗ್ಲಿಷ್ ಸ್ಕೂಲ್, ಸರಾಫ್ ಗಟ್ಟಿ, ಬಾರದಾನ ಸಾಲ, ಗೋಕುಲ ರಸ್ತೆ ರವಿನಗರ ಕ್ರಾಸ್, ಮಂಜುನಾಥ ನಗರ ಕ್ರಾಸ್, ಆನಂದ ನಗರ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ಮಾರಾಟಕ್ಕೆ ತರಲಾಗಿದ್ದ ಸಾಮಗ್ರಿಗಳನ್ನು ಅಲ್ಲಿ ಬಿಟ್ಟು ಹೋಗಿದ್ದಾರೆ. ಪೌರ ಕಾರ್ಮಿಕರು ಅದರ ತೆರವು ಕಾರ್ಯಾಚರಣೆ ನಡೆಸುವುದು ಬಾಕಿ ಉಳಿದಿದೆ.
ಕಳೆದ 15 ದಿನಗಳಿಂದ ಸ್ವಚ್ಛತೆ, ಬಣ್ಣ ಹಚ್ಚುವುದು ಮಾಡಿ ಇದೀಗ ಹಬ್ಬದ ಆಚರಣೆ ಮುಗಿಸಿದ್ದೇವೆ. ಅಲಂಕಾರಕ್ಕೆ ತಂದಿದ್ದ
ವಸ್ತುಗಳನ್ನು ನಾವಿನ್ನೂ ತೆಗೆದಿರಲಿಲ್ಲ. ಬೆಳಗಿನ ಜಾವವೇ ಪೌರ ಕಾರ್ಮಿಕರು ಆಗಮಿಸಿ ತೆಗೆದುಕೊಂಡು ಹೋಗಿದ್ದಾರೆ. ಇದು ಒಳ್ಳೆಯ ಕೆಲಸ. ಇದರಿಂದ ನಾವು ತೆಗೆಯುವುದು, ರಸ್ತೆಯಲ್ಲಿ ಗುಡ್ಡೆ ಹಾಕುವುದು ತಪ್ಪಿದಂತಾಗಿದೆ.
●ಶಿವಾನಂದ, ವ್ಯಾಪಾರಸ್ಥ
ಹಬ್ಬದ ಸಂಭ್ರಮಕ್ಕೆ ಬಳಸಿದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದಿದ್ದು, ಅದರ ವಿಲೇವಾರಿ ಯನ್ನು ಪೌರ ಕಾರ್ಮಿಕರು ನಿರಂತರವಾಗಿ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳಗಳಲ್ಲಿ ಆದ್ಯತೆ ಮೇರೆಗೆ ಸ್ವಚ್ಛತೆ ಮಾಡಿದ್ದು, ಇನ್ನುಳಿದ ತ್ಯಾಜ್ಯವನ್ನು ಸೋಮವಾರದೊಳಗೆ ತೆಗೆಸಲಾಗುವುದು.
●ಡಾ| ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ
■ ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
MUST WATCH
ಹೊಸ ಸೇರ್ಪಡೆ
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.