Dentistry: ನಿಮ್ಮ ಆತ್ಮವಿಶ್ವಾಸದ ನಗುಮುಖಕ್ಕೆ ಡೆಂಟಲ್‌ ಇಂಪ್ಲಾಂಟ್‌


Team Udayavani, Nov 4, 2024, 2:16 PM IST

1

‘ಬಾಯಿಯು ದೇಹದ ಕನ್ನಡಿ’, ಅದರಲ್ಲಿ ಹಲ್ಲುಗಳು ಮಹತ್ವದ ಸ್ಥಾನವನ್ನು ಪಡೆದಿವೆ. ಹಲ್ಲುಗಳು ಬಿದ್ದುಹೋದಂತೆ ನಮ್ಮ ಬಾಯಿಯಲ್ಲಿ ಸಣ್ಣದಾಗಿ ತೋರಿದ ಬದಲಾವಣೆಗಳು ನಮ್ಮ ದೇಹಕ್ಕೆ ವಯಸ್ಸಾದಂತೆ ದೊಡ್ಡದಾಗಿ ಕಾಡುವ ಸಾಧ್ಯತೆ ಇದೆ. ಹಲ್ಲುಗಳು ಬಿದ್ದುಹೋದರೆ ಅಥವಾ ಹಲವು ಕಾರಣದಿಂದ ಅವುಗಳನ್ನು ನಾವು ಕಳೆದುಕೊಂಡರೆ ಸಾಮಾನ್ಯವಾಗಿ ದಂತ ವೈದ್ಯರು ಶಾಶ್ವತ ಅಥವಾ ತೆಗೆದಿಡುವಂತ ಕೃತಕ ಹಲ್ಲುಗಳಿಂದ ಆ ಜಾಗವನ್ನು ತುಂಬುತ್ತಾರೆ. ಈ ಎರಡು ವಿಧದ ಕೃತಕ ಹಲ್ಲುಗಳ ಆಯ್ಕೆಯನ್ನು ಕಳೆದುಹೋದ ಹಲ್ಲುಗಳ ಸಂಖ್ಯೆಯ ಮೇಲೆ ನಿರ್ಧಾರ ಮಾಡುತ್ತಾರೆ. ಇವು ದವಡೆಯ ಮೃದು ವಸಡಿನ ಅಥವಾ ಪಕ್ಕದ ನೈಸರ್ಗಿಕ ಹಲ್ಲುಗಳ ಆಧಾರದಿಂದ ಕಾಲಿ ಜಾಗವನ್ನು ತುಂಬುತ್ತವೆ. ನಮ್ಮ ನೈಸರ್ಗಿಕ ಹಲ್ಲುಗಳ ಅನುಗುಣವಾಗಿ ಈ ಜಾಗವನ್ನು ಶಾಶ್ವತವಾಗಿ ತುಂಬಿಸಬೇಕಾದರೆ ಡೆಂಟಲ್‌ ಇಂಪ್ಲಾಂಟ್‌ ಚಿಕಿತ್ಸೆಯು ಇನ್ನೊಂದು ವಿಧದ ಪರಿಹಾರವಾಗಿದೆ.

ಡೆಂಟಲ್‌ ಇಂಪ್ಲಾಂಟ್‌ ಎಂದರೇನು?
ಡೆಂಟಲ್‌ ಇಂಪ್ಲಾಂಟ್‌ಗಳು ಕೃತಕ ಹಲ್ಲಿನ ಬೇರುಗಳಾಗಿವೆ. ಸಾಮಾನ್ಯವಾಗಿ ಟೈಟಾನಿಯಂನಿಂದ ಮಾಡಲ್ಪಟ್ಟಿದ್ದು, ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ದವಡೆಯೊಳಗೆ ಇರಿಸಲಾಗುತ್ತದೆ. ನಿಮ್ಮ ನೈಸರ್ಗಿಕ ಹಲ್ಲುಗಳಿಗೆ ಹೊಂದಿಸಲು ವಿನ್ಯಾಸಗೊಳಿಸಲಾದ ಸ್ಥಿರ ಅಥವಾ ತೆಗೆಯಬಹುದಾದ ಬದಲಿ ಹಲ್ಲುಗಳಿಗೆ ದೃಢವಾದ ಅಡಿಪಾಯವನ್ನು ಒದಗಿಸುತ್ತದೆ. ಇಂಪ್ಲಾಂಟ್‌ಗಳು ನೈಸರ್ಗಿಕ ಹಲ್ಲುಗಳ ನೋಟ ಮತ್ತು ಕಾರ್ಯವನ್ನು ಅನುಕರಿಸುತ್ತವೆ ಹಾಗೂ ವಸಡಿನ ಸಾಮಾನ್ಯ ಸ್ಥಿತಿಯನ್ನು ಕಾಪಾಡಿ, ಅದರ ಕಾರ್ಯವನ್ನು ಪುನಃಸ್ಥಾಪಿಸುತ್ತವೆ. ಮಾತನಾಡುವಾಗ ಉಚ್ಚಾರಣೆಯನ್ನು ಸುಧಾರಿಸುತ್ತವೆ. ತಿಂದ ಆಹಾರವನ್ನು ಚೆನ್ನಾಗಿ ಜಗಿಯಲು ಸಹಾಯ ಮಾಡಿ ಆರೋಗ್ಯವಂತವಾಗಿರಲು, ಪರೋಕ್ಷವಾಗಿ ನಮ್ಮ ಬಾಯಿಯ ಮುಖ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತವೆ.

ಡೆಂಟಲ್‌ ಇಂಪ್ಲಾಂಟ್‌ನ ಇತಿಹಾಸ
ಡೆಂಟಲ್‌ ಇಂಪ್ಲಾಂಟ್‌‍ಗಳ ವಿಕಾಸದ ಇತಿಹಾಸವು ಸಮೃದ್ಧವಾದ ಮತ್ತು ಆಕರ್ಷಕವಾದ ಪ್ರವಾಸ ಕಥನವಾಗಿದೆ. ಮಾನವಕುಲದ ಆರಂಭದಿಂದಲೂ ಹಲ್ಲಿಲ್ಲದ ಜಾಗವನ್ನು ತುಂಬಿಸಲು ಮರದ ತುಂಡು, ಚಿಪ್ಪು, ಕಲ್ಲು ಹೀಗೆ ಹಲವಾರು ವಸ್ತುಗಳನ್ನು ಕೃತಕ ಹಲ್ಲಾಗಿ ಒಂದಲ್ಲ ಒಂದು ರೂಪದಲ್ಲಿ ಬಳಸುತ್ತಿದ್ದರು. ಪ್ರಾಚೀನ ಕಾಲದಲ್ಲಿ ಸುಮಾರು 7,000 ವರ್ಷಗಳ ಹಿಂದಿನಿಂದಲೂ ಹಲ್ಲಿನ ಕಸಿಗಳನ್ನು ಉಪಯೋಗಿಸುವ ತಂತ್ರಜ್ಞಾನವಿತ್ತು ಎಂಬುದರ ಪುರಾವೆಗಳು ದೊರೆತಿವೆ. 4,000 ವರ್ಷಗಳ ಹಿಂದೆ ಚೀನಿಯರು ಬಿದ್ದು ಹೋದ ಹಲ್ಲುಗಳ ಜಾಗದಲ್ಲಿ ಕೆತ್ತಿದ ಬಿದಿರಿನ ಗೂಟಗಳನ್ನು ಇಟ್ಟು, ಕಟ್ಟಿ ಅವುಗಳನ್ನು ಮೂಳೆಗೆ ಜೋಡಿಸುತ್ತಿದ್ದರು. ಸುಮಾರು 2,000 ವರ್ಷಗಳ ಅನಂತರ ಈಜಿಪ್ಟಿನವರು ಇದೇ ರೀತಿಯ ಕಸಿಗಳನ್ನು ರಚಿಸಲು ಚಿನ್ನದಂತಹ ಅಮೂಲ್ಯ ಲೋಹಗಳನ್ನು ಬಳಸಿದರು.

ಸುಮಾರು 1,300 ವರುಷಗಳ ಹಿಂದೆ ಮಾಯ ನಾಗರಿಕತೆಯಲ್ಲಿ ಹಲ್ಲುಗಳಿಲ್ಲದ ಜಾಗದಲ್ಲಿ ಸಮುದ್ರದಲ್ಲಿ ಸಿಕ್ಕಿದ ಚಿಪ್ಪಿನ ತುಂಡುಗಳನ್ನು ಕಸಿಗಳಾಗಿ ಬಳಸಿದರು. ಇದರ ಪುರಾವೆಗಳು 1970ರ ದಶಕದಲ್ಲಿ ಪುರಾತತ್ವಶಾಸ್ತ್ರಜ್ಞರಿಗೆ ಮಾಯ ನಾಗರಿಕತೆಯ ಜನರ ತಲೆಬುರುಡೆಗಳಲ್ಲಿ ಸಿಕ್ಕಿವೆ. ಈ ಬುರುಡೆಗಳ ಕ್ಷ-ಕಿರಣವನ್ನು ತೆಗೆದಾಗ ಚಿಪ್ಪಿನ ತುಂಡುಗಳ ಸುತ್ತಲೂ ಮೂಳೆ ರಚನೆಯನ್ನು ಕಂಡು ಆಶ್ಚರ್ಯಪಟ್ಟರು. ಇದು ಕೆಲವು ಮಟ್ಟದಲ್ಲಿ ಮೂಳೆ ಮತ್ತು ಚಿಪ್ಪಿನಲ್ಲಿರುವ ನೈಸರ್ಗಿಕ ಸಂಬಂಧವನ್ನು ಸೂಚಿಸುತ್ತದೆ.

ಭಾರತದಲ್ಲಿ ಆರಂಭಿಕ ಡೆಂಟಲ್‌ ಇಂಪ್ಲಾಂಟ್‌ ಪದ್ಧತಿಗಳ ಉಲ್ಲೇಖಗಳು ಸುಮಾರು 7,000 ವರುಷಗಳಷ್ಟು ಹಿಂದಿನದು. ಭಾರತದಲ್ಲಿ ಬರೆದ ಗ್ರಂಥಗಳಲ್ಲಿ ಹಾಗೂ ಸಂಹಿತೆಯಲ್ಲಿ ಹಾಳಾದ/ಅಲ್ಲಾಡುವಂತಹ ಹಲ್ಲುಗಳನ್ನು ಬೇರೆ ಹಲ್ಲಿನೊಂದಿಗೆ ಬದಲಾಯಿಸುವ ಬಗ್ಗೆ ಉಲ್ಲೇಖವಿದೆ.

1930ರ ದಶಕದಲ್ಲಿ ಡಾ| ಆಲ್ವಿನ್‌ ಮತ್ತು ಮೋಸೆಸ್‌ ಸ್ಟಾಕ್‌, ವಿಟಾಲಿಯಂ (ಕ್ರೋಮಿಯಂ-ಕೋಬಾಲ್ಟ್ ಮಿಶ್ರಲೋಹ) ಇಂಪ್ಲಾಂಟ್‌ ಬಳಸುತ್ತಿದ್ದರು. 1938ರಲ್ಲಿ ಡಾ| ಪಿ.ಬಿ. ಆಡಮ್ಸ್‌ ಎಂಬವರು ಎಲುಬಿನ ಒಳಗಡೆ ಹಾಕುವಂತ (ಎನ್ಡೊಶಿಯಸ್‌) ಇಂಪ್ಲಾಂಟನ್ನು ಪೇಟೆಂಟ್‌ ಮಾಡಿದರು. 1940ರಿಂದ 1960ರ ದಶಕದಲ್ಲಿ ಅನೇಕ ರೀತಿಯ ಇಂಪ್ಲಾಂಟ್‌ಗಳನ್ನು ಬಳಸಲಾಯಿತು, ಡಾ| ಲಿಂಖ್ಕೋವ್‌, ಡಾ| ಸ್ಮಾಲ್‌ ಅವರಂತಹ ಹಲವು ನುರಿತ ದಂತ ತಜ್ಞರು ಇದರಲ್ಲಿ ಪ್ರಾಮುಖ್ಯ ಪಡೆದರು.

ಡೆಂಟಲ್‌ ಇಂಪ್ಲಾಂಟ್‌ನ ಆಧುನಿಕ ಯುಗವು 1978ರ ದಶಕದಲ್ಲಿ ಡಾ| ಪರ್‌ ಇಂಗ್ವಾರ್‌ ಬ್ರೊನೆಮಾರ್ಕ್‌ ಎಂಬ ಸ್ವೀಡನ್ನಿನ ವಿಜ್ಞಾನಿಯಿಂದ ಟೈಟಾನಿಯಂ ಲೋಹದ ಉಪಯೋಗದಿಂದ ಆರಂಭವಾಯಿತು. ದೇಹದಿಂದ ತಿರಸ್ಕರಿಸಲ್ಪಡದೆ ಮೂಳೆಯೊಂದಿಗೆ ಸಂಯೋಜಿಸಬಹುದು ಎಂದು ಕಂಡುಹಿಡಿದ ಸ್ವೀಡನ್ನಿನ ಪ್ರಾಧ್ಯಾಪಕ ಬ್ರೊನೆಮಾರ್ಕ್‌, ಓಸ್ಸೆಯೊ ಇಂಟೆಗ್ರೇಷನ್‌ ಎಂದು ಈ ಪ್ರಕ್ರಿಯೆಯನ್ನು ಕರೆದು ಇಂಪ್ಲಾಂಟ್‌‍ಗಳ ಆಧುನಿಕತೆಗೆ ಮಾರ್ಗಸೂಚಿಯಾದರು. ಈ ದಶಕದಿಂದ, ಟೈಟಾನಿಯಂ ಮಿಶ್ರಲೋಹಗಳು ಮತ್ತು ವಿವಿಧ ಇಂಪ್ಲಾಂಟ್‌ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲಾಯಿತು. ಈ ಲೋಹ ಹಾಗೂ ಅದರ ಮಿಶ್ರಣವು ದವಡೆಯ ಮೂಳೆಯೊಂದಿನ ಸಂಯೋಜನೆ ಸುಧಾರಿಸುತ್ತದೆ ಮತ್ತು ಇಂಪ್ಲಾಂಟ್‌ ಸುತ್ತ ಕಾಡುವ ಪೆರಿ-ಇಂಪ್ಲಾಂಟೈಟಿಸ್‌ ರೋಗವನ್ನು ಕಡಿಮೆ ಮಾಡುತ್ತದೆ ಎಂದು ಪ್ರಚಲಿತವಾಯಿತು. ಈ ದಶಕದಲ್ಲಿ ಕಳೆದು ಹೋದ ಹಲ್ಲುಗಳನ್ನು ಇಂಪ್ಲಾಂಟ್‌‍ನಿಂದ ಬದಲಿಸುವುದು ಸಾಮಾನ್ಯ ಮತ್ತು ಊಹಿಸಬಹುದಾದ ಚಿಕಿತ್ಸೆಯಾಗಿದೆ. ಡಿಜಿಟಲ್‌ ತಂತ್ರಜ್ಞಾನ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಪ್ರಗತಿಯಿಂದ ಇಂಪ್ಲಾಂಟ್‌ಗಳ ಯಶಸ್ಸಿನ ಪ್ರಮಾಣ ಸುಧಾರಿಸುತ್ತಲೇ ಇವೆ.

ಭಾರತದಲ್ಲಿ ಡೆಂಟಲ್‌ ಇಂಪ್ಲಾಂಟ್‌
1990ರ ದಶಕದ ಆರಂಭದಿಂದ ಭಾರತದಲ್ಲಿ ಇಂಪ್ಲಾಂಟ್‌ಗಳನ್ನು ಔಪಚಾರಿಕವಾಗಿ ಪರಿಚಯಿಸಲಾಯಿತು. ಆರಂಭದಲ್ಲಿ ಹೆಚ್ಚಿನ ವೆಚ್ಚಗಳು ಮತ್ತು ಸೀಮಿತ ಅರಿವಿನಿಂದಾಗಿ ಅವುಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಿಲ್ಲ. ಜಾಗೃತಿ ಹೆಚ್ಚಾದಂತೆ ಮತ್ತು ವೆಚ್ಚಗಳು ನಿರ್ವಹಿಸಬಹುದಾದಂತೆ ಡೆಂಟಲ್‌ ಇಂಪ್ಲಾಂಟ್‌ಗಳು ಜನಪ್ರಿಯತೆ ಗಳಿಸಿದವು. ಭಾರತೀಯ ದಂತ ಚಿಕಿತ್ಸಾಲಯಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಇಂಪ್ಲಾಂಟಾಲಜಿಯಲ್ಲಿ (ಇಂಪ್ಲಾಂಟಿನ ಅಧ್ಯಯನ) ವಿಶೇಷ ತರಬೇತಿ ಕಾರ್ಯಕ್ರಮಗಳು ಮತ್ತು ಕೋರ್ಸ್‌‍ಗಳ ಸ್ಥಾಪನೆ ಭಾರತೀಯ ದಂತವೈದ್ಯರಲ್ಲಿ ಜ್ಞಾನ ಮತ್ತು ಪರಿಣತಿಯನ್ನು ಹರಡಲು ಸಹಾಯ ಮಾಡುತ್ತಿದೆ. ಭಾರತೀಯ ದಂತ ಚಿಕಿತ್ಸಾಲಯಗಳು ಆಧುನಿಕ ತಂತ್ರಜ್ಞಾನ ಹೊಂದಿದ್ದು, ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಖಾತ್ರಿಪಡಿಸುವ ಅಂತಾರಾಷ್ಟ್ರೀಯ ಶಿಷ್ಟಾಚಾರಗಳನ್ನು ಅನುಸರಿಸುತ್ತವೆ. ಅನೇಕ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಪ್ಲಾಂಟ್‌ ಗಮನಾರ್ಹವಾಗಿ ಅಗ್ಗವಾಗಿವೆ. ನಮ್ಮ ದೇಶವು ದಂತ ಪ್ರವಾಸೋದ್ಯಮದ ಕೇಂದ್ರವಾಗಿ ಮಾರ್ಪಟ್ಟಿದೆ. ಉತ್ತಮ ಗುಣಮಟ್ಟದ ಆರೈಕೆ, ವೆಚ್ಚ ಹಾಗೂ ಪರಿಣಾಮಕಾರಿ ಚಿಕಿತ್ಸೆಗಳಿಂದಾಗಿ ವಿಶ್ವದಾದ್ಯಂತ ರೋಗಿಗಳನ್ನು ಆಕರ್ಷಿಸುತ್ತಿದೆ. ಪ್ರಪಂಚಾದ್ಯಂತ ರೋಗಿಗಳು ದಂತ ಚಿಕಿತ್ಸೆಗಾಗಿ ತಮ್ಮ ವೈದ್ಯಕೀಯ ಅಗತ್ಯಗಳನ್ನು ರಜೆಯೊಂದಿಗೆ ಸಂಯೋಜಿಸಿ ಭಾರತಕ್ಕೆ ಪ್ರಯಾಣಿಸುತ್ತಾರೆ.

ಇಂಪ್ಲಾಂಟ್‌ ವಿಧಗಳು, ಯಾರು ಸೂಕ್ತ ಹಾಗೂ ಯಾರಿಗೆ ಇಂಪ್ಲಾಂಟ್‌ ಹಾಕುವಂತಿಲ್ಲ
ಇಂಪ್ಲಾಂಟ್‌‍ಗಳ ವಿಧಗಳಲ್ಲಿ ಒಂದು ಇಂಪ್ಲಾಂಟ್‌, ಇಂಪ್ಲಾಂಟ್‌ ಮತ್ತು ಬ್ರಿಡ್ಜ್, ಇಂಪ್ಲಾಂಟ್‌ ಮತ್ತು ಹಲ್ಲಿನ ಸೆಟ್‌, ಆಲ್‌-ಆನ್‌-4 ಹಾಗೂ ಆಲ್‌-ಆನ್‌-6 ಸೇರಿವೆ. ಪ್ರತ್ಯೇಕ ಹಲ್ಲುಗಳನ್ನು ಬದಲಿಸಲು ಒಂದು ಇಂಪ್ಲಾಂಟ್‌ ಸೂಕ್ತವಾಗಿವೆ. ಮೂರು ಅಥವಾ ಹೆಚ್ಚು ಹಲ್ಲುಗಳು ಕಳೆದುಹೋದರೆ ಇಂಪ್ಲಾಂಟ್‌‍ನೊಂದಿಗೆ ಬ್ರಿಡ್ಜ್ ಅಥವಾ ಹಲ್ಲಿನ ಸೆಟ್‌ ಅಳವಡಿಸಲಾಗುವುದು. ಆಲ್‌-ಆನ್‌-4 ಮತ್ತು ಆಲ್‌-ಆನ್‌-6ಗಳು ಪೂರ್ಣ ದವಡೆಯ ಹಲ್ಲುಗಳನ್ನು ನಾಲ್ಕು ಅಥವಾ ಆರು ಇಂಪ್ಲಾಂಟ್‌ಗಳನ್ನು ಉಪಯೋಗಿಸಿ ಬದಲಿಸಬಹುದು.

ಬಾಯಿಯಲ್ಲಿ ಹಲ್ಲುಗಳಿಲ್ಲದೆ, ಆಹಾರವನ್ನು ಜಗಿಯಲು ತುಂಬಾ ಕಷ್ಟವನ್ನು ಅನುಭವಿಸುವವರು, ನಗಲು ಕಷ್ಟವನ್ನು ಅನುಭವಿಸುವವರು ಹಾಗೂ ಕೃತಕ ಹಲ್ಲುಗಳಿದ್ದು, ಅದನ್ನು ಬಳಸಲು ತೊಂದರೆ ಅನುಭವಿಸುವವರಿಗೆ ಇಂಪ್ಲಾಂಟ್‌ ಒಂದು ಸೂಕ್ತವಾದ ಪರಿಹಾರವಾಗಿದೆ. ಸೋಂಕುರೋಗ, ಹೃದಯದ ರೋಗ, ಡಯಬಿಟಿಸ್‌, ವಿಪರೀತ ರಕ್ತದ ಒತ್ತಡ, ಮೂಳೆಯ ರೋಗದಿಂದ ಬಳಲುತ್ತಿರುವವರು; ಬಿಸ್‌‍ಫೂಸ್‌‍ಫೂನೇಟ್‌ ಎಂಬ ಔಷಧವನ್ನು ತೆಗೆದುಕೊಳ್ಳುವವರು, ರೇಡಿಯೇಶನ್‌ ಚಿಕಿತ್ಸೆಯನ್ನು ತೆಗೆದುಕೊಂಡವರು, ಬಾಯಿಯಲ್ಲಿ ರೋಗದ ಚಿಹ್ನೆಗಳು ಕಾಣಿಸಿದರೆ ಹಾಗೂ ವಸಡಿನ ತೊಂದರೆಗಳಿದ್ದರೆ ಅಂಥವರಿಗೆ ಇಂಪ್ಲಾಂಟ್‌ ಹಾಕುವುದನ್ನು ವಿಷ್ಲೇಶಿಸಿ ಅನಂತರ ನಿರ್ಧರಿಸಲಾಗುತ್ತದೆ.

ಗುಣಮುಖವಾಗಲು ಬೇಕಾಗುವ ಸಮಯ

ಸ್ಥಳೀಯ ಅರಿವಳಿಕೆಯಿಂದಾಗಿ ಚಿಕಿತ್ಸೆಯ ಭಾಗದ (ತುಟಿ, ಕೆನ್ನೆ, ನಾಲಿಗೆ ಇತ್ಯಾದಿ) ಮರಗಟ್ಟುವಿಕೆ ಸುಮಾರು 1ರಿಂದ 2 ಗಂಟೆಗಳಷ್ಟು ಕಾಲ ಇರುತ್ತದೆ. ಒಂದು ಗಂಟೆಯ ಅನಂತರ ತಣ್ಣನೆಯ ದ್ರವ ಪದಾರ್ಥ ಅಥವ ಐಸ್‌ ಕ್ರೀಮ್‌ ತಿನ್ನಬಹುದು. ಐಸ್‌ ಪ್ಯಾಕ್‌ ಚಿಕಿತ್ಸೆ ಮಾಡಿದ ಕೂಡಲೇ ಆ ಜಾಗದ ಹೊರಕೆನ್ನೆಯ ಮೇಲೆ ಸುಮಾರು 20 ನಿಮಿಷ ಇಟ್ಟು ತೆಗೆದರೆ ಊತ ಕಡಿಮೆಯಾಗುತ್ತದೆ. ಮೃದು ಆಹಾರ ಸೇವನೆ ಹಾಗೂ ನಿಗದಿತ ಔಷಧಗಳನ್ನು (ನೋವು ನಿವಾರಕ ಮತ್ತು ಆಂಟಿಬಯೋಟಿಕ್‌) ತೆಗೆದುಕೊಳ್ಳಬೇಕು. ಬಿಸಿ, ಕಠಿನ ಅಥವಾ ಮಸಾಲೆಯುಕ್ತ ಆಹಾರವನ್ನು 24 ಗಂಟೆಗಳ ಕಾಲ ಸೇವಿಸಬಾರದು. ಪಾನೀಯಗಳನ್ನು ಸ್ಟ್ರಾ ಉಪಯೊಗಿಸಿ ಹೀರುವುದು, ಬಲೂನು ಊದುವ ಪ್ರಯತ್ನ ಮಾಡಬಾರದು. ಕೆಲವು ಸಂದರ್ಭಗಳಲ್ಲಿ ದಿನಗಳು ಅಥವಾ ವಾರಗಳವರೆಗೆ ಇಂಪ್ಲಾಂಟ್‌ ಅಳವಡಿಸಿದ ಜಾಗದಲ್ಲಿ ಹಲ್ಲುಗಳಿಲ್ಲದೆ ಇರಬೇಕಾಗಬಹುದು. ಮೂರರಿಂದ ಆರು ತಿಂಗಳುಗಳಲ್ಲಿ, ಇಂಪ್ಲಾಂಟ್‌ ದವಡೆಯೊಂದಿಗೆ ಬೆಸೆಯುತ್ತದೆ. ಒಸ್ಸಿಯೊಇಂಟಿಗ್ರೇಶನ್‌ ಎಂಬ ಒಂದು ಕಾರ್ಯವಿಧಾನದಿಂದ ಇಂಪ್ಲಾಂಟ್‌ ಗಳು ದವಡೆಯ ಮೂಳೆಯನ್ನು ಹಿಡಿದು ಹಲ್ಲಿನ ಬೇರಿನಂತಾಗುತ್ತದೆ.

ಕೃತಕ ಹಲ್ಲಿಗೆ ಆಧಾರ

ಒಮ್ಮೆ ವಾಸಿಯಾದ ಅನಂತರ, ಹೊಸ ಹಲ್ಲನ್ನು ಹಿಡಿದಿಡಲು ಇಂಪ್ಲಾಂಟಿನ ಮೇಲೆ ಅಬಟ್‌ ಮೆಂಟ್‌ (ಕೃತಕ ಹಲ್ಲಿನ ಟೋಪಿಗೆ ಆಧಾರ) ಅನ್ನು ಇರಿಸಲಾಗುತ್ತದೆ. ಅಂತಿಮವಾಗಿ, ಟೋಪಿ/ ಕಿರೀಟವನ್ನು ಅಬಟ್‌ಮೆಂಟ್‌ಗೆ ಲಗತ್ತಿಸಲಾಗುತ್ತದೆ.

ಸಮಯ

ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭದಿಂದ ಮುಗಿಸಲು ಮೂರು ತಿಂಗಳಿಂದ ಆರು ತಿಂಗಳ ಅವಧಿಯ ಸಮಯ ತೆಗೆದುಕೊಳ್ಳಬಹುದು. ಉತ್ತಮ ಆರೋಗ್ಯ ಮತ್ತು ಸಾಕಷ್ಟು ಮೂಳೆಯ ಪರಿಮಾನ, ಸಾಂದ್ರತೆಯು ಈ ಪ್ರಕ್ರಿಯೆಯ ಯಶಸ್ಸಿಗೆ ನಿರ್ಣಾಯಕವಾಗಿದೆ.

ಚೇತರಿಕೆ ಪ್ರಕ್ರಿಯೆ

ಶಸ್ತ್ರಚಿಕಿತ್ಸೆಯ ಅನಂತರದ ಮೊದಲ ಒಂದು ತಿಂಗಳು ನಿರ್ಣಾಯಕ. ರೋಗಿಗಳು ಊತ ಮತ್ತು ಸಣ್ಣ ರಕ್ತಸ್ರಾವವನ್ನು ಅನುಭವಿಸಬಹುದು. ನೋವು ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಸೂಚಿಸಲಾದ ಔಷಧಿಗಳ ಬಳಕೆಯಿಂದ ನಿವಾರಿಸಬಹುದು. ಮೊದಲ 48 (ಎರಡು ದಿನ) ಗಂಟೆಗಳ ಕಾಲ ಮೌತ್‌ ವಾಶ್‌ ಬಳಸುವುದನ್ನು ತಪ್ಪಿಸಬೇಕಾಗಬಹುದು. ಮೃದುವಾದ ಆಹಾರ, ತಂಪಾದ ಪಾನಿಯ, ಹಣ್ಣನ್ನು ಸೇವಿಸಲು ಹಾಗೂ ಚಿಕೆತ್ಸೆಯ ಕೂಡಲೆ ಬಿಸಿ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಲು ಚಿಕಿತ್ಸೆಯ ಅಣುಗುಣವಾಗಿ ಸೂಚಿಸುತ್ತೇವೆ. ಮೃದುವಾದ ಬ್ರಿಸ್ಟಲ್‌ ಇರುವ ಟೂತ್‌ ಬ್ರಷ್‌ನಿಂದ ಶಸ್ತ್ರಚಿಕಿತ್ಸಾ ಸ್ಥಳವನ್ನು ನಿಧಾನವಾಗಿ ಹಲ್ಲುಜ್ಜುವ ಮೂಲಕ ಉತ್ತಮ ಮೌಖೀಕ ನೈರ್ಮಲ್ಯವು ಅತ್ಯಗತ್ಯ. ತೊಡಕುಗಳನ್ನು ತಡೆಗಟ್ಟಲು ಶಸ್ತ್ರಚಿಕಿತ್ಸೆಯ ಅನಂತರ ಕನಿಷ್ಠ ಒಂದು ವಾರದವರೆಗೆ ಶ್ರಮದಾಯಕ ಚಟುವಟಿಕೆಗಳನ್ನು ಮತ್ತು ಭಾರ ಎತ್ತುವಿಕೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಸೋಂಕಿನ ಚಿಹ್ನೆಗಳಾದ ನೋವು, ಊತ, ಅಥವಾ ಕೀವು ಇದ್ದಲ್ಲಿ ದಂತವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಪರಿಹಾರವನ್ನು ಪಡೆಯಬಹುದು.

ಚೇತರಿಕೆಯ ಅನಂತರದ ನಿರ್ವಹಣೆ

ಭೇಟಿಗಳು

ದವಡೆಯ ಮೂಳೆಯೊಂದಿಗೆ ಇಂಪ್ಲಾಂಟ್‌ ಉತ್ತಮವಾಗಿ ಸಂಯೋಜನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಇಂಪ್ಲಾಂಟ್‌ಗಳು ಮತ್ತು ಸುತ್ತಮುತ್ತಲಿನ ಅಂಗಾಂಶಗಳು ಆರೋಗ್ಯಕರವಾಗಿರಲು ಪ್ರತೀ ಆರು ತಿಂಗಳಿಗೊಮ್ಮೆ ನಿಯಮಿತ ದಂತ ತಪಾಸಣೆ ಅಗತ್ಯ. ದಂತವೈದ್ಯ ರಿಂದ ಇಂಪ್ಲಾಂಟ್‌ಗಳ ಸುತ್ತ ದಂತಪಾಚಿ ಮತ್ತು ದಂತಕಿಟ್ಟ ಸಂಗ್ರಹವನ್ನು ಶುಚಿಗೊಳಿಸುವುದು ಸೂಕ್ತ.

ಬಾಯಿಯ ಆರೋಗ್ಯವನ್ನು ಹೆಚ್ಚಿಸಲು, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಅಗತ್ಯ.

ಅಪಾಯಗಳು ಮತ್ತು ಸಂಭಾವ್ಯ ತೊಡಕುಗಳು

ಇಂಪ್ಲಾಂಟ್‌ ಜಾಗದಲ್ಲಿ ಸೋಂಕಿನ ಅಪಾಯ, ನರ ಹಾನಿ, ಮೇಲಿನ ದವಡೆಯಲ್ಲಿ ಇಂಪ್ಲಾಂಟ್‌ ಗಳು ಸಾಂದರ್ಭಿಕವಾಗಿ ಸೈನಸ್‌ ಕುಳಿಗಳಿಗೆ ಚಾಚಿಕೊಳ್ಳಬಹುದು. ಅಪರೂಪವಾಗಿ ಪೆರಿ-ಇಂಪ್ಲಾಂಟೈಟಿಸ್‌ ಅಥವಾ ಎಲುಬಿನ ಸಾಂದ್ರತೆಯಿಂದ ಇಂಪ್ಲಾಂಟ್‌ ಸರಿಯಾಗಿ ಎಲುಬಿಗೆ ಸಂಯೋಜಿಸಲು ವಿಫಲವಾಗಬಹುದು. ಬಾಯಿಯನ್ನು ಶುಚಿಗೊಳಿಸದ್ದಿದ್ದಲ್ಲಿ ಇಂಪ್ಲಾಂಟಿನ ವೈಫಲ್ಯದ ಅಪಾಯವು ಹೆಚ್ಚಾಗಬಹುದು. ಧೂಮಪಾನ, ಮದ್ಯ ಸೇವನೆ ಮತ್ತು ಹಲ್ಲುಗಳನ್ನು ರುಬ್ಬುವಂತಹ/ ಕಡಿಯುವಂತಹ ಅಭ್ಯಾಸಗಳನ್ನು ತಪ್ಪಿಸಿದರೆ ಇಂಪ್ಲಾಂಟ್‌ಗಳ ಆಯುಷ್ಯವು ಹೆಚ್ಚುತ್ತದೆ.

ದೈನಂದಿನ ಆರೈಕೆ

ದಿನಕ್ಕೆ ಎರಡು ಬಾರಿ ನಿಮ್ಮ ಹಲ್ಲುಗಳನ್ನು ಬ್ರಷ್‌ ಮತ್ತು ಫ್ಲಾಸ್‌ ಮಾಡುವುದನ್ನು ಮುಂದುವರಿಸಿ. ಇಂಪ್ಲಾಂಟ್‌ಗೆ ಹಾನಿಯಾಗದಂತೆ ಮೃದುವಾದ ಬ್ರಿಸ್ಟಲ್‌ ಟೂತ್‌ ಬ್ರಷ್‌ ಮತ್ತು ಕಡಿಮೆ ಸವೆತದ ಟೂತ್‌ಪೇಸ್ಟನ್ನು ಬಳಸಿ. ಇಂಟರ್‌ಡೆಂಟಲ್‌ ಬ್ರಷ್‌ ಗಳು ಮತ್ತು ವಾಟರ್‌ಫ್ಲೋಸ್‌ಗಳು ತಲುಪಲು ಕಷ್ಟವಾದ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ.

ಬಾಳಿಕೆ

ಸರಿಯಾದ ಕಾಳಜಿಯೊಂದಿಗೆ ಇಂಪ್ಲಾಂಟ್‌ಗಳು ಹಲವು ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿರುತ್ತವೆ. ರೋಗಿಯ ಆರೋಗ್ಯ, ದವಡೆಯ ಎಲುಬಿನ ಗುಣಮಟ್ಟ ಮತ್ತು ಸರಿಯಾದ ಮೌಖೀಕ ನೈರ್ಮಲ್ಯದಂತಹ ಅಂಶಗಳು ಇಂಪ್ಲಾಂಟ್‌ನ ಯಶಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ನೈಸರ್ಗಿಕ ಹಲ್ಲುಗಳೊಂದಿಗೆ ಹೊಂದಿ ಆಹಾರ ಜಗಿಯಲು ಸಹಾಯವನ್ನು ಮಾಡುತ್ತದೆ. ಇದರಿಂದಾಗಿ ನಿಮ್ಮ ಹಲ್ಲುಗಳ ಜಗಿಯುವಿಕೆಯ ಸಮತೋಲನವನ್ನು ಸುಧಾರಿಸುತ್ತದೆ.

“ನಿಮ್ಮ ಇಂಪ್ಲಾಂಟ್‌ ಬಾಳಿಕೆಗೆ – ಕಠಿನ ಆಹಾರಗಳನ್ನು ತಪ್ಪಿಸಿ, ಧೂಮಪಾನವನ್ನು ತ್ಯಜಿಸಿ ಮತ್ತು ಕೆಫಿನ್‌ ಅನ್ನು ಮಿತಗೊಳಿಸಿ’

“ಇಂಪ್ಲಾಂಟ್‌ – ದಂತಗಳ ಅಸ್ವಸ್ಥತೆಯನ್ನು ನಿವಾರಿಸಿ ನಿಮ್ಮ ಮುಗುಳುನಗೆಯನ್ನು ಮರುಸ್ಥಾಪಿಸುವ ಮೂಲಕ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ’

ಈ ಆರೈಕೆ ಸಲಹೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಹಲ್ಲಿನ ಇಂಪ್ಲಾಂಟ್‌ಗಳು ಹಲವು ವರ್ಷಗಳವರೆಗೆ ಆರೋಗ್ಯಕರ ಮತ್ತು ಕ್ರಿಯಾತ್ಮಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನೀವು ಸಹಾಯ ಮಾಡಬಹುದು. ನೀವು ಯಾವುದೇ ನಿರ್ದಿಷ್ಟ ಕಾಳಜಿ ಅಥವಾ ಪ್ರಶ್ನೆಗಳನ್ನು ಹೊಂದಿದ್ದರೆ, ನಿಮ್ಮ ದಂತವೈದ್ಯರನ್ನು ಬೇಟಿಯಾಗಿ ಸಲಹೆಯನ್ನು ಪಡೆಯಬಹುದು.

ಡೆಂಟಲ್‌ ಇಂಪ್ಲಾಂಟ್‌ಗಳನ್ನು ನಮ್ಮ ಸಂಸ್ಥೆಯಲ್ಲಿ ಪ್ರಾಧ್ಯಾಪಕರು ಹಾಗೂ ವರ್ಷಕ್ಕೆ ಎರಡು ಅಥವಾ ಮೂರು ತಿಂಗಳ ಕ್ಯಾಂಪ್‌ ಗಳಲ್ಲಿ ಹಾಕುತ್ತಾರೆ.

ಇಂಪ್ಲಾಂಟ್‌ ಹಾಕುವ ಆವಶ್ಯಕತೆಯ ಸಂದರ್ಭದಲ್ಲಿ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸ್‌ , ಮಣಿಪಾಲ ಇವರನ್ನು ಸಂಪರ್ಕಿಸಿ.

ಡಾ| ಸಂತೋಷ್‌ ಕುಮಾರ್‌, ಅಸೋಸಿಯೇಟ್‌ ಪ್ರೊಫೆಸರ್‌,.ಪೆರಿಯೋಡೋಂಟಾಲಜಿ ವಿಭಾಗ
ಡಾ| ನಯನ ಪ್ರಭು, ಅಸೋಸಿಯೇಟ್‌ ಪ್ರೊಫೆಸರ್‌, ಪ್ರೊಸ್ತೊಡಾಂಟಿಕ್ಸ್‌ ವಿಭಾಗ
ಕೋರ್ಸ್‌ ಕೊಆರ್ಡಿನೇಟರ್‌ ಓರಲ್‌ ಇಂಪ್ಲಾಂಟ್‌ ವಿಭಾಗ, ಎಂಸಿಒಡಿಎಸ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

1-qeqwe

Russia ದಿಂದ ಉಕ್ರೇನ್‌ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.