ಗದಗ: ಭೀಷ್ಮ ಕೆರೆಗೆ ಸಚಿವ ಎಚ್.ಕೆ. ಪಾಟೀಲ ಬಾಗಿನ ಅರ್ಪಣೆ
ಮನಶಾಂತಿ ದೃಷ್ಟಿಯಿಂದ ಈ ಪ್ರದೇಶದ ಮಹತ್ವ ಹೆಚ್ಚಾಗಿದೆ
Team Udayavani, Nov 4, 2024, 2:40 PM IST
■ ಉದಯವಾಣ ಸಮಾಚಾರ
ಗದಗ: ನಗರದ ಭೀಷ್ಮ ಕೆರೆಯಿಂದ ನಗರದ ಸೌಂದರ್ಯ ಜತೆಗೆ ನಗರದ ಅಂತರ್ಜಲ ಹೆಚ್ಚಾಗಿ ಜನರಿಗೆ ನೆಮ್ಮದಿ ತಂದಿದೆ ಎಂದು
ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲಾಡಳಿತ, ನಗರಸಭೆ ಸಂಯುಕ್ತ ಆಶ್ರಯದಲ್ಲಿ ರವಿವಾರ ನಗರದ ಭೀಷ್ಮ ಕೆರೆ ದಂಡೆಯ ಮೇಲೆ ಏರ್ಪಡಿಸಿದ್ದ ಭೀಷ್ಮ ಕೆರೆಯ
ಗಂಗಾ ಪೂಜೆ ನೆರವೇರಿಸಿ ಹಾಗೂ ಬಾಗಿನ ಅರ್ಪಿಸಿ ಮಾತನಾಡಿದ ಅವರು,ಭೀಷ್ಮ ಕೆರೆಯ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ
ಕಾರ್ಯಕ್ರಮದಲ್ಲಿ ಸರ್ವಧರ್ಮ ಪೂಜ್ಯರು ಪಾಲ್ಗೊಂಡಿದ್ದರಿಂದ ಪೂಜೆಯ ವಿಶೇಷತೆ ಹೆಚ್ಚಾಗಿದೆ. ಗದಗಿನ ಅಂತರ್ಜಲ ಹೆಚ್ಚಿಸಿರುವ ಜಲ ಸಂಗ್ರಹ ಎಲ್ಲರಿಗೂ ಸಮಾಧಾನ, ನೆಮ್ಮದಿ, ಅನುಕೂಲ ಒದಗಿಸಿದೆ ಎಂದರು.
70 ಕಿಲೋ ಮೀಟರ್ ದೂರದ ತುಂಗಭದ್ರ ನದಿಯಿಂದ ನೀರನ್ನು ತಂದು ಭೀಷ್ಮ ಕೆರೆ ತುಂಬಿಸಿ ಈ ಪ್ರದೇಶದ ಜನರಿಗೆ ಅನುಕೂಲ
ಕಲ್ಪಿಸಲಾಗಿದೆ. ಹೀಗಾಗಿ ಬಾಗಿನ ಅರ್ಪಿಸಿದ್ದೇವೆ. ಹೀಗೆ ಸದಾಕಾಲ ಭೀಷ್ಮ ಕೆರೆ ತುಂಬಿ ನಗರದ ಜನರಿಗೆ ಆಶೀರ್ವಾದ ನೀಡಲಿ ಎಂದು ಪಾರ್ಥಿಸಿದರು.
ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪುತ್ಥಳಿ ಉಪಸ್ಥಿತಿ ಮೂಲಕ ಈ ಭೀಷ್ಮ ಕೆರೆ ಸೌಂದರ್ಯದಿಂದ, ಆಧ್ಯಾತ್ಮ ದಿಂದ, ಮನಶಾಂತಿ ದೃಷ್ಟಿಯಿಂದ ಈ ಪ್ರದೇಶದ ಮಹತ್ವ ಹೆಚ್ಚಾಗಿದೆ ಎಂದರು.
ಡಾ|ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನೀರು ಮನುಷ್ಯ ನಿಗೆ ಅತ್ಯಂತ ಮುಖ್ಯ. ಪಂಚಭೂತಗಳಾದ ಅಗ್ನಿ, ಭೂಮಿ, ವಾಯು, ಆಕಾಶ, ನೀರಿನಿಂದ ಮಾನವ ಶರೀರ ನಿರ್ಮಿತವಾಗಿದ್ದನ್ನು ನಮ್ಮ ಹಿರಿಯರು ಗಮನಿಸಿ ಪಂಚಭೂತಗಳಿಗೆ ಪ್ರಾರಂಭದಿಂದಲೂ ಗೌರವ ನೀಡಿದ್ದಾರೆ ಎಂದರು.
ವಿವಿಧ ಧರ್ಮ ಗುರುಗಳು, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ,ಕೆಡಿಪಿ ಸದಸ್ಯ ಡಿ.ಆರ್. ಪಾಟೀಲ, ಜಿಲ್ಲಾ ಗ್ಯಾರಂಟಿ
ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಎಸ್. ಎನ್. ಬಳ್ಳಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿದಂತೆ ಹಲವರು ಹಾಜರಿದ್ದರು. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೊತದಾರ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.