![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 5, 2024, 7:54 AM IST
ಮೇಷ: ಧ್ಯಾನ, ಲಘು ವ್ಯಾಯಾಮದಿಂದ ಆರೋಗ್ಯ ವೃದ್ಧಿ. ಉದ್ಯೋಗಸ್ಥರ ಪ್ರತಿಭೆಗೆ ಗೌರವ. ಉದ್ಯಮಗಳ ಬೆಳವಣಿಗೆಯ ವೇಗವರ್ಧನೆ. ಆಪ್ತವರ್ಗದಿಂದ ಸಕಾಲಿಕ ನೆರವು. ತಾಯಿಯ ಆರೋಗ್ಯದ ಕಡೆಗೆ ಲಕ್ಷ್ಯ ಇರಲಿ.
ವೃಷಭ: ಉದ್ಯೋಗದಲ್ಲಿ ಪದೋನ್ನತಿಗೆ ಪ್ರಯತ್ನ. ಸರಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಖಾಸಗಿ ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಶೇರು ವ್ಯವಹಾರದಲ್ಲಿ ಮಧ್ಯಮ ಲಾಭ. ದೇವತಾ ಸಾನ್ನಿಧ್ಯಕ್ಕೆ ಭೇಟಿ.
ಮಿಥುನ: ಕ್ಷುದ್ರರ ಹಾವಳಿಗೆ ಅಂಜದಿರಿ. ಉದ್ಯೋಗ ಸ್ಥಾನದಲ್ಲಿ ಭರವಸೆಯ ಸನ್ನಿವೇಶ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಪಾಲನೆಗೆ ಪ್ರಾಶಸ್ತ್ಯ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ. ಎಲ್ಲ ಮನೆಮಂದಿಗೂ ಉಲ್ಲಾಸದ ಅನುಭವ.
ಸಿಂಹ: ನಿಧಾನವಾದರೂ ನಿಲ್ಲದೆ ಮುಂದುವರಿಯುವ ಪ್ರಗತಿ. ಉದ್ಯೋಗಸ್ಥ ರಿಗೆ ಹೆಚ್ಚು ದುಡಿಮೆಗೆ ಪ್ರೋತ್ಸಾಹ. ಬಾಯ್ದೆರೆ ಪ್ರಚಾರದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿಗಳ ವೇಗ ವರ್ಧನೆ.
ಕನ್ಯಾ: ಬಹುಪಾಲು ನೆಮ್ಮದಿಯ ದಿನ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ. ಉದ್ಯಮದಲ್ಲಿ ಶೀಘ್ರ ಪ್ರಗತಿ. ಉದ್ಯೋಗಾಸಕ್ತರನ್ನು ಅರಸಿ ಬರುವ ಅವಕಾಶಗಳು. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.
ತುಲಾ: ಉದ್ಯೋಗದಲ್ಲಿ ಯೋಗ್ಯತೆಗೆ ಸರಿಯಾದ ಗೌರವ. ವಿತ್ತ ಸಂಸ್ಥೆಯ ನೆರವಿನಿಂದ ವ್ಯವಹಾರ ವಿಸ್ತರಣೆ. ಅವಿವಾಹಿತರಿಗೆ ವಿವಾಹ ಯೋಗ. ಕುಶಲಕರ್ಮಿಗಳಿಗೆ ಉದ್ಯೋಗಾ ವಕಾಶ. ಕೀರ್ತನೆ, ಭಜನೆ, ಸತ್ಸಂಗಗಳಲ್ಲಿ ಆಸಕ್ತಿ.
ವೃಶ್ಚಿಕ: ಉತ್ಪನ್ನಗಳ ಗುಣಮಟ್ಟಕ್ಕೆ ಸರ್ವತ್ರ ಶ್ಲಾಘನೆ. ಉದ್ಯೋಗಸ್ಥರಿಗೆ ಸ್ವಯಂ ಯೋಗ್ಯತೆಯಿಂದ ಗೌರವ. ಉದ್ಯಮ ಭರದಲ್ಲಿ ಮುನ್ನಡೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.
ಧನು: ವಾತಾವರಣದಲ್ಲಿ ಸ್ವಲ್ಪ ಏರುಪೇರು. ಆತ್ಮೀಯರಿಂದ ಸಕಾಲದಲ್ಲಿ ಸಹಾಯ. ಉದ್ಯೋಗ ಸ್ಥಾನದಲ್ಲಿ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯಕ್ಕೆ ಅವಕಾಶ.
ಮಕರ: ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.
ಕುಂಭ: ಹಲವು ಮೂಲಗಳಿಂದ ಆದಾಯ ವೃದ್ಧಿ. ಸರಕಾರಿ ನೌಕರರಿಗೆ ಕೆಲಸದ ಹೊರೆ. ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಮನೆಯಲ್ಲಿ ನೆಮ್ಮದಿಯ ವಾತಾವರಣ.
ಮೀನ: ಗುರುಕೃಪೆಯಿಂದ ಕಡಿಮೆಯಾದ ಶನಿಮಹಾತ್ಮನ ಕಾಟ. ಉದ್ಯೋಗ ಸ್ಥಾನದಲ್ಲಿ ಅನುಕೂಲ. ಸರಕಾರಿ ಅಧಿಕಾರಿಗಳಿಗೆ ಜನಗೌರವ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಿದ್ಧತೆ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.