Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
Team Udayavani, Nov 4, 2024, 7:15 PM IST
ಪೆರು: ದಕ್ಷಿಣ ಅಮೆರಿಕ ಖಂಡದ ಪೆರುವಿನಲ್ಲಿ ನಡೆದ ಪ್ರಾದೇಶಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ, ಮೈದಾನಕ್ಕೆ ಸಿಡಿಲು ಬಡಿದು ಓರ್ವ ಆಟಗಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಜುವೆಂಟುಡ್ ಬೆಲ್ಲವಿಸ್ಟಾ ಮತ್ತು ಫ್ಯಾಮಿಲಿಯಾ ಚೋಕ್ಕಾ ನಡುವೆ ಪಂದ್ಯ ನಡೆದಿದ್ದ ವೇಳೆ ಮೊದಲಾರ್ಧದಲ್ಲಿ ತೀವ್ರ ಗುಡುಗು ಸಹಿತ ಮಳೆ ಆರಂಭವಾಗಿದ್ದು, ಈ ವೇಳೆ ದುರ್ಘಟನೆ ನಡೆದಿದೆ. ರೆಫ್ರಿ ಪಂದ್ಯವನ್ನು ನಿಲ್ಲಿಸಿದರು. ಆಟಗಾರರು ಮೈದಾನ ತೊರೆಯುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಪರಿಣಾಮವಾಗಿ 39 ರ ಹರೆಯದ ಹ್ಯೂಗೋ ಡೇ ಲಾ ಕ್ರೂಜ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ನಾಲ್ವರು ಇತರ ಆಟಗಾರರು ಗಾಯಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಲ್ ಕೀಪರ್ ಆಗಿದ್ದ ಆಟಗಾರನಿಗೆ ಹಿಚ್ಚಿನ ಪ್ರಮಾಣದ ಸುಟ್ಟ ಗಳಾಗಿವೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.