Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…

ಈ ಚಾಕಲೇಟ್ ಗಳು ಭಾವನೆಯನ್ನು ಹಂಚಿಕೊಳ್ಳುವ ಒಂದು ಸಾಧನವಾಗಿ ಕೂಡ ಕೆಲಸ ಮಾಡುತ್ತದೆ

Team Udayavani, Nov 4, 2024, 8:25 PM IST

5

ಚಾಕಲೇಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ? ದೊಡ್ಡವರು ಸಣ್ಣವರು ಎಂಬ ಬೇಧವಿಲ್ಲದೇ ಎಲ್ಲರ ಬಾಯಲ್ಲು ನೀರೂರಿಸೋ ಶಕ್ತಿ ಚಾಕಲೇಟ್ ಗೆ ಇದೆ. ಹೆಚ್ಚಿನವರಿಗೆ ಯಾವೆಲ್ಲಾ ರೀತಿಯ ಚಾಕಲೇಟ್ ಇದಿಯೋ ಅದೆಲ್ಲಾನೂ ಇಷ್ಟ. ದಾರಿಯಲ್ಲಿ ಹೋಗುವಾಗ ಅಂಗಡಿಯ ಮುಂದೆ ಇರಿಸಿದ ಚಾಕಲೇಟ್ ನ್ನು ನೋಡಿದರೇ ‘ನಂಗೆ ಬೇಕೇ ಬೇಕು’ ಎಂದು ಹಠ ಮಾಡೋ ಮಕ್ಕಳು, ಅವರನ್ನು ಹಾಗೋ ಹೇಗೋ ಸಂಬಾಳಿಸುವ ಹೆತ್ತವರು, ಆದರೂ ಪಟ್ಟು ಬಿಡದೆ ಕಂಡ ಚಾಕಲೇಟನ್ನು ತನ್ನದಾಗಿಸಿ ನಗುವ ಮಕ್ಕಳನ್ನು ನೋಡುವುದೇ ಚಂದ. ಒಟ್ಟಾರೆ ಮಗುವಿನಿಂದ ಹಿಡಿದು ಹಣ್ಣುಹಣ್ಣು ಮುದುಕರಿಗೂ ಚಾಕಲೇಟ್ ಅಂದರೆ ಇಷ್ಟ.

ಈ ಚಾಕಲೇಟ್ ಗಳು ಭಾವನೆಯನ್ನು ಹಂಚಿಕೊಳ್ಳುವ ಒಂದು ಸಾಧನವಾಗಿ ಕೂಡ ಕೆಲಸ ಮಾಡುತ್ತದೆ. ಪ್ರೀತಿ, ಮಮತೆ, ಸ್ನೇಹ ಎಲ್ಲಾ ರೀತಿಯ ಬಂಧಗಳಲ್ಲಿ ಇದು ತನ್ನ ಸಿಹಿಯನ್ನು ಹಂಚಿಕೊಳ್ಳುತ್ತದೆ.

ಚಾಕಲೇಟ್ ಖರೀದಿಸುವವರಲ್ಲಿ ಸಸ್ಯಾಹಾರಿಗಳು ಹಾಗೂ ಮಾಂಸಾಹಾರಿಗಳು ಎಂಬ ಯಾವುದೇ ಬೇಧವಿಲ್ಲದೆ ಎಲ್ಲರೂ ಇದನ್ನು ಖರೀದಿಸುತ್ತಾರೆ. ಜನರೂ ಕೂಡ ಇದರಲ್ಲಿ ಯಾವೆಲ್ಲಾ ಪದಾರ್ಥಗಳು ಸೇರಿವೆ ಎಂದು ತಿಳಿಯುವ ಸಾಹಸ ಮಾಡುವುದು ಕೂಡ ಕಡಿಮೆಯೇ.  ನಾವು ಅಷ್ಟು ಇಷ್ಟ ಪಟ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುವ ಚಾಕಲೇಟ್ ನ್ನು ಮಾಂಸಹಾರಿ ಹಾಗೂ ಸಸ್ಯಾಹಾರಿ ಎಂದು ವಿಂಗಡಿಸಲಾಗುತ್ತದೆ ಎಂಬ ವಿಷಯ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಈ ಪ್ರಶ್ನೆಯನ್ನು ಕೇಳಿದರೆ ಅಲ್ಲೊಂದು ಇಲ್ಲೊಂದು ಉತ್ತರ ಬರಬಹುದಷ್ಟೇ. ಇದರ ಬಗ್ಗೆ ತಿಳಿದಿರುವವರು ತುಂಬಾ ವಿರಳ.

ಹೌದು, ಚಾಕಲೇಟನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಕೆಲವು ಚಾಕಲೇಟ್‌ ಗಳನ್ನು ತಯಾರಿಸುವಾಗ ಮಾಂಸಾಹಾರಿ ಅಂಶಗಳನ್ನು ಸೇರಿಸಲಾಗುತ್ತದೆ.

ಚಾಕಲೇಟನ್ನು ಕೋಕೋ ಹಣ್ಣಿಂದ ತಯಾರಿಸಲಾಗುತ್ತದೆ. ಇದು ಶುದ್ದ ಸಸ್ಯಾಹಾರವಾಗಿದೆ. ಆದರೆ ನಂತರದ ತಯಾರಿಕಾ ವಿಧಾನದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಲಾಗುತ್ತದೆ. ಚಾಕಲೇಟ್ ತಯಾರಿಕೆಯ ಸಮಯದಲ್ಲಿ ಪ್ರಾಥಮಿಕವಾಗಿ ಚಾಕಲೇಟ್ ನಲ್ಲಿ ಕೋಕೋ, ಸಕ್ಕರೆ, ಕೋಕೋ ಬಟರ್‌ ಗಳನ್ನು ಬಳಸಲಾಗುತ್ತದೆ. ಎಗ್ ವೈಟ್‌ ಅಥವಾ ಅಲ್ಬುಮೆನ್, ಮೊಟ್ಟೆ ಲೆಸಿಥಿನ್, ಶೆಲಾಕ್, ಕ್ಯಾಫ್ ರೆನೆಟ್ ಮತ್ತು ಜೆಲಾಟಿನ್ ಗಳನ್ನು ಸೇರಿಸಿದಾಗ ಅದು ಮಾಂಸಹಾರಿ ರೂಪ ತಾಳುತ್ತದೆ.

ಸಾಮಾನ್ಯವಾಗಿ ಡಾರ್ಕ್‌ ಚಾಕಲೇಟ್ ಗಳು ಸಸ್ಯಾಹಾರ ವಾಗಿರುತ್ತದೆ. ಇದಕ್ಕೆ ಮಾಂಸಹಾರ ಅಂಶಗಳು ಸೇರ್ಪಡೆಯಾಗುವುದು ತುಂಬಾ ಕಡಿಮೆ. ಆದರೆ ಮಿಲ್ಕ್‌ ಚಾಕಲೇಟ್ ಗಳನ್ನು ತಯಾರಿಸುವಾಗ ಅದಕ್ಕೆ  ಮಾಂಸಾಹಾರಿ ಅಂಶಗಳನ್ನು ಸೇರಿಸಲಾಗುತ್ತದೆ.

ಚಾಕಲೇಟ್ ಸಿಂಬಲ್

ಹಾಗಾದರೆ ಚಾಕಲೇಟ್ ನಲ್ಲಿ ಈ ರೀತಿಯ ಅಂಶ ಸೇರ್ಪಡೆಯಾಗಿದೆ ಎಂದು ತಿಳಿಯುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.

ಸಾಮಾನ್ಯವಾಗಿ ಅಂಗಡಿಯಲ್ಲಿ ಲಭಿಸುವ ಪ್ಯಾಕ್‌ ಆದ ತಿಂಡಿಗಳ ಪ್ಲಾಸ್ಟಿಕ್‌ ಕವರಲ್ಲಿ ಅದು ಸಸ್ಯಾಹಾರವೋ, ಮಾಂಸಾಹಾರವೋ ಎಂದು ಒಂದು ಸಣ್ಣ ಗುರುತಿನ ಮೂಲಕ ತಿಳಿಸಿರುತ್ತಾರೆ. ಹಾಗೆಯೇ ಅಂತಹದ್ದೇ ಗುರುತನ್ನು ಚಾಕಲೇಟ್ ನ ಕವರ್‌ ನಲ್ಲಿ ನಮೂದಿಸಲಾಗುತ್ತದೆ.

ಸಾಮಾನ್ಯವಾಗಿ ಸಸ್ಯಾಹಾರಿ ಚಾಕೊಲೇಟ್ ಕವರ್‌ ನಲ್ಲಿ ಹಸಿರು ಬಣ್ಣದ ಚಿಹ್ನೆಯನ್ನು ನಮೂದಿಸಲಾಗಿರುತ್ತದೆ.

ಹಾಗೆಯೇ ಮಾಂಸಾಹಾರಿ ಚಾಕಲೇಟ್ ನಲ್ಲಿ ಕಂದು ಬಣ್ಣದ ಚಿಹ್ನೆಯನ್ನು ನಮೂದಿಸಲಾಗಿರುತ್ತದೆ.

ಈ ಮೂಲಕ ಸಸ್ಯಾಹಾರಿ ಹಾಗೂ ಮಾಂಸಾಹಾರಿ ವ್ಯಕ್ತಿಗಳು ಚಾಕಲೇಟನ್ನು ಖರೀದಿಸಬಹುದು.  ಆಹಾರ ಪದಾರ್ಥಗಳಲ್ಲಾದರೆ ಕೆಂಪು ಬಣ್ಣದ ಚಿಹ್ನೆಯು ಚಾಲ್ತಿಯಲ್ಲಿದೆ. ಅದು ಆ ಆಹಾರದಲ್ಲಿ ಪೂರ್ತಿ ಮಾಂಸಾಹಾರ ಅಂಶವನ್ನು ಸೇರಿಸಲಾಗಿರುತ್ತದೆ ಎಂದು ತಿಳಿಸುತ್ತದೆ.

-ಪೂರ್ಣಶ್ರೀ .ಕೆ

ಟಾಪ್ ನ್ಯೂಸ್

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

3

UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

prashanth-Kishore

Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.