Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

ಉಡುಜಿ, ದಕ್ಷಿಣ ಕನ್ನಡ ,ಕರ್ನಾಟಕ ಜಾನಪದ ಅಕಾಡೆಮಿ,Udupi, Dakshina Kannada, Karnataka Folk Academy

Team Udayavani, Nov 5, 2024, 1:12 AM IST

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

ಮಂಗಳೂರು/ಉಡುಪಿ/ ಪುತ್ತೂರು: ಕರ್ನಾಟಕ ಜಾನಪದ ಅಕಾಡೆಮಿಯ 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿಯನ್ನು ಪ್ರಕಟಿಸಿದೆ.

ಉಡುಜಿ ಜಿಲ್ಲೆಯ ಅಪ್ಪಿ ಪಾಣಾರ, ದಕ್ಷಿಣ ಕನ್ನಡ ಜಿಲ್ಲೆಯ ನಾಟಿವೈದ್ಯೆ ಲೀಲಾವತಿ ಅವರು ಗೌರವ ಪ್ರಶಸ್ತಿ ಘೋಷಿಸಲಾಗಿದೆ. 2023ನೇ ಸಾಲಿನ ತಜ್ಞ ಪ್ರಶಸ್ತಿಯನ್ನು ಡಾ| ಕೆ. ಚಿನ್ನಪ್ಪ ಗೌಡ ಅವರಿಗೆ ಘೋಷಿಸಲಾಗಿದೆ.

ಡಾ| ಚಿನ್ನಪ್ಪ ಗೌಡರಿಗೆ ಡಾ| ಜಿ.ಶಂ.ಪ ತಜ್ಞ ಪ್ರಶಸ್ತಿ
ಜನಪದ ಆರಾಧನೆಯ “ಮಧ್ಯಂತರ ಜಗತ್ತು’ ಮತ್ತು ಅದರ “ಸಂಕೀರ್ಣ ಪಠ್ಯ’, ಜಾನಪದದ ಅರ್ಥ ಮತ್ತು ಕಾರ್ಯಗಳ ವಿವೇಚನೆ, ಜಾನಪದ ಪ್ರಕಾರವೊಂದರ ಪ್ರದರ್ಶನ ಸಂದರ್ಭದ ಆಚೆಗಿರುವ ವಿವರಗಳ ಪರಿಕಲ್ಪನೆಗಳನ್ನು ವಿವರಿಸಿ ಜಾನಪದ ಅಧ್ಯಯನದಲ್ಲಿ ವಿಶೇಷವಾಗಿ ತೊಡಗಿಸಿಕೊಂಡವರು ಡಾ| ಕೆ.ಚಿನ್ನಪ್ಪ ಗೌಡ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಿನ್ನಪ್ಪ ಗೌಡ ಅವರು ಭೂತಾರಾಧನೆಯ ಅತ್ಯಂತ ಪ್ರಾಚೀನವೂ ವಿಶಿಷ್ಟವೂ ಆದ “ಜಾಲಾಟ’ದ ವೈಶಿಷ್ಟ್ಯಗಳನ್ನು ಮೊದಲು ವಿವರಿಸಿದವರು. ಸಿರಿ ಮಹಾಕಾವ್ಯದ ನಿರ್ಮಾಣ ಮತ್ತು ಮರುಕಟ್ಟುವಿಕೆ, ಕಲಿಕೆ ಮತ್ತು ಪ್ರಸಾರದ ವಿವಿಧ ನೆಲೆಗಳ ಬಗ್ಗೆ ತೌಲನಿಕ ಅಧ್ಯಯನವನ್ನು ನಡೆಸಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ 17 ಪುಸ್ತಕಗಳು ಮತ್ತು 75ಕ್ಕಿಂತ ಹೆಚ್ಚು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಕನ್ನಡ, ತುಳು ಸಾಹಿತ್ಯ, ಸಂಶೋಧನೆ, ಯಕ್ಷಗಾನ ಸೇರಿದಂತೆ 75 ಕೃತಿಗಳನ್ನು ಸಂಪಾದಿಸಿದ್ದಾರೆ.

ತುಳು ಭಾಷೆಯಲ್ಲಿರುವ ಅರುವತ್ತು ಜನಪದ ಕತೆಗಳನ್ನು ಮತ್ತು ಕೆಲಸದ ಹಾಗೂ ಕುಣಿತದ ಐವತ್ತು ಹಾಡುಗಳನ್ನು ಇಂಗ್ಲೀಷ್‌ಗೆ ಅನುವಾದಿಸಿ ಕೊಡುವುದರ ಮೂಲಕ ಜಾಗತಿಕ ಜಾನಪದ ಅಧ್ಯಯನಕಾರರಿಗೆ ತುಳುವಿನ ಎರಡು ಮಹತ್ವದ ಜನಪದ ಪ್ರಕಾರಗಳನ್ನು ಪರಿಚಯಿಸಿದ್ದಾರೆ. “ಕರಾವಳಿ ಕಥನಗಳು’ ಸಂಶೋಧನ ಲೇಖನಗಳ ಸಂಪುಟವಾಗಿದೆ. ಇದರಲ್ಲಿ ತುಳು ಜಾನಪದ, ತುಳು ಸಾಹಿತ್ಯ, ಯಕ್ಷಗಾನ, ಅನುವಾದ ಈ ವಿಷಯಗಳಿಗೆ ಸಂಬಂಧಿಸಿದ ಎಂಟು ಸವಿಸ್ತಾರವಾದ ಲೇಖನಗಳಿವೆ. ಸಾಂಸ್ಕೃತಿಕ ಅಧ್ಯಯನದ ಇತ್ತೀಚಿನ ಪ್ರವೃತ್ತಿಗಳನ್ನು ಅಳವಡಿಸಿಕೊಂಡು ಇವರು ತುಳು ಜಾನಪದ ಅಧ್ಯಯನವನ್ನು ನಡೆಸಿದ್ದಾರೆ.

ಅಪ್ಪಿ ಪಾಣಾರ
ದೈವಾರಾಧನೆ/ಭೂತಾರಾಧನೆಯ ಅನೇಕ ಪಾಡªನ ಕಾವ್ಯಗಳನ್ನು ನಿರರ್ಗಳವಾಗಿ ಹಾಡುವ ಮೌಖಿಕ ಸಂಪತ್ತು ಹೊಂದಿರುವ ಹಿರಿಯ ಜನಪದ ಕಲಾವಿದೆ ಅಪ್ಪಿ ಮೂಡುಬೆಳ್ಳೆ (ಅಪ್ಪಿ ಪಾಣಾರ). ವಾಂಶಿಕವಾಗಿ ಬಂದ ಕುಲಕಸುಬು-ಭೂತಾರಾಧನೆ. ತನ್ನ 8ನೇ ವಯಸ್ಸಿನಲ್ಲಿ ಮಾದಿರ ಕುಣಿತದ ಮೂಲಕ ಹಾಗೂ ಪಾಡ್ದನಗಳನ್ನು ಗ್ರಹಿಸಿ ಹಾಡುವ ಕಲಾಕಾರ್ತಿಯಾಗಿ ಗಂಡನ ಜತೆಯಲ್ಲಿ ತೆಂಬರೆ (ಚರ್ಮವಾದ್ಯ) ಹಿಡಿದು ನಿರರ್ಗಳವಾಗಿ ಪಾಡ್ದನಗಳನ್ನು ಹಾಡಿದ ಇವರು ಪ್ರಸ್ತುತ ಕುಟುಂಬದ ಹಿರಿಯರ ಜತೆಯಲ್ಲಿ ದೈವಾರಾಧನೆಯ ಕೈಂಕರ್ಯ ನಡೆಸುತ್ತಿದ್ದಾರೆ. ಪಂಜುರ್ಲಿ ಸಂಧಿಯನ್ನು ಇಡೀ ರಾತ್ರಿ ಹಾಡಬಲ್ಲರು. ಕುಬೆಕೋಟಿ ಪಾಡ್ದನ, ಮೈಸಂದಾಯ, ಸಿರಿ ಕಾವ್ಯದ ಅಬ್ಬಗ-ದಾರಗ ಅವಳಿ ಸಹೋದರಿಯರ ಪಾಡ್ದನ, ಗಿಡಿರಾವುತ ದೈವದ ಸಂಧಿ, ಜುಮಾದಿ ಪಾಡ್ದನ ಸಹಿತ ಅನೇಕ ಪಾಡ್ದನಗಳನ್ನು ಇಡೀ ರಾತ್ರಿ ಹಾಡಬಲ್ಲರು. ಒಟ್ಟಾರೆಯಾಗಿ ಜನಪದ ಕಲೆಯ ನಿಧಿ ಇವರು.

ಲೀಲಾವತಿ ಬೈದ್ಯೆತಿ
ಕೋಟಿ-ಚೆನ್ನಯ, ದೇಯಿಬೈದೇತಿ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತಿಲು ನಿವಾಸಿಯಾಗಿರುವ ನಾಟಿವೈದ್ಯೆ ಲೀಲಾವತಿ ಬೈದೇತಿ (77) ಅವರು ಸಾವಿರಾರು ಮಂದಿಯ ಬದುಕಿನಲ್ಲಿ ಅಶಾ ಕಿರಣ ಮೂಡಿಸಿದವರು. ಮುಖ್ಯವಾಗಿ ಸರ್ಪಸುತ್ತು, ಕೆಂಪು, ದೃಷ್ಟಿ, ಬೆಸುರುಪು, ಸೊರಿಯಾಸಿಸ್‌-ಚರ್ಮ ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ನಿಷ್ಠಾತರು. ಮಕ್ಕಳ ಚಿಕಿತ್ಸೆ, ಸಂಧಿವಾತ, ನೋವಿನ ತೈಲ ಅಲ್ಲದೆ ಇವರು ತಯಾರಿಸಿ ಕೊಡುವ ದೇಸೀ ಔಷಧಗಳಿಗೆ ಮತ್ತು ಕೇಶಕಾಂತಿ ತೈಲ, ದೇಯಿ-ಬೈದ್ಯೆತಿ ತೈಲಕ್ಕೆ ಹಲವಾರು ರಾಜ್ಯದಿಂದ ಬೇಡಿಕೆಗಳಿವೆ. ದೇಯಿಬೈದ್ಯೆತಿ ಬಳಸುತ್ತಿದ್ದ ಮದ್ದಿನಗಿಂಡಿಯಲ್ಲಿ ಔಷಧ ನೀಡುವ ಇವರು ಇಂದಿಗೂ ಸರ್ಪರೋಗಗಳಿಗೆ ಮದ್ದನ್ನು ಮಾಡುವ ಇವರ ಕೈಗುಣದ ಬಗ್ಗೆ ಜನರಿಗೆ ಅಪಾರ ಭಕ್ತಿ, ಶ್ರದ್ಧೆ ಮತ್ತು ವಿಶ್ವಾಸ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.