Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

ಬೆಳೆ ಕನ್ನಡ ವಿಶೇಷ ಲೇಖನ-೪, ಆರ್ಥಿಕತೆಗೆ, ಉದ್ಯೋಗ ನೀಡಿಕೆಗೆ ಗಣನೀಯ ಕೊಡುಗೆ ನೀಡುತ್ತಿರುವ ಪ್ರಕಾಶನ, ಸರಕಾರಿ ಪೂರೈಕೆಗಾಗಿಯೇ ಹುಟ್ಟಿಕೊಂಡಿರುವ ಕೆಲ ಪ್ರಕಾಶಕ, ಲೇಖಕರು

Team Udayavani, Nov 5, 2024, 7:20 AM IST

books-colomn
ಕನ್ನಡ ಪುಸ್ತಕ ಪ್ರಕಾಶನದ ಇತಿಹಾಸ ಬಲು ದೊಡ್ಡದು. ಕನ್ನಡ ಪುಸ್ತಕಗಳನ್ನು ಮುದ್ರಿಸಿ ಮನೆ ಮನೆಗೆ ತಲೆ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ ಕಾಲದಿಂದ ಹಿಡಿದು ಈಗ ಮೊಬೈಲ್‌ನಲ್ಲಿ ಇ -ಪುಸ್ತಕ ಸಿದ್ಧಪಡಿಸುವವರೆಗಿನ ಕಾಲಘಟ್ಟದವರೆಗೆ ಪುಸ್ತಕ ಪ್ರಕಾಶನ ಹಲವು ಸವಾಲುಗಳನ್ನು ಎದುರಿಸಿಕೊಂಡೇ ಬಂದಿದೆ. ಅದರಲ್ಲೂ ಕಳೆದ 50 ವರ್ಷಗಳಲ್ಲಿ  ಓದುಗರ ಬದಲಾದ ಅಭಿರುಚಿಯಿಂದ ಪ್ರಕಾಶನಗಳ
ಹೆಜ್ಜೆಗಳ ಕುರಿತು ಇಲ್ಲಿ ವಿಶ್ಲೇಷಣೆ ಇದೆ.
ಕನ್ನಡ ಪುಸ್ತಕಗಳ ಪ್ರಕಟನೆ ಮತ್ತು ಮಾರಾಟದ ಕುರಿತು ನಿರಾಶೆ, ಅಸಹಾಯಕತೆ, ದೂರುಗಳು – ಹೀಗೆ ಮುಂತಾದ ನಕಾರಾತ್ಮಕ ಅಂಶಗಳೇ ತುಂಬಿರುವ ಲೇಖನಗಳು- ವರದಿಗಳು ಪತ್ರಿಕೆಗಳಲ್ಲಿ ಬರುತ್ತಲೇಯಿರುತ್ತವೆ.

ಕನ್ನಡ ಪುಸ್ತಕ ಪ್ರಕಾಶನ ವ್ಯವಸಾಯದ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ- ಅದು ಸುಸಂಸ್ಕೃತರೂ ಸುಶಿಕ್ಷಿತರೂ ತೊಡಗಿಕೊಂಡ ವ್ಯವಸಾಯವಾಗಿಯೇ ಕಾಣಬರುತ್ತದೆ. ಜನಸಾಮಾನ್ಯರಿಗೆ ಅಗತ್ಯವಿರುವ ಸಾಹಿತ್ಯ ಮಾತ್ರ ಪ್ರಕಟವಾಗುತ್ತಿದ್ದ ಕಾಲದಲ್ಲಿ ಹುಟ್ಟಿಕೊಂಡ ಹಲವು ಪ್ರಕಾಶನ ಸಂಸ್ಥೆಗಳು ಇನ್ನೂವರೆಗೂ ತುಂಬ ಯಶಸ್ವಿಯಾಗಿಯೇ ಮುನ್ನಡೆದಿವೆ. ಮಾತ್ರವಲ್ಲ, ಸಮಾಜದ ಆರ್ಥಿಕತೆಗೆ, ಉದ್ಯೋಗ ನೀಡಿಕೆಗೆ ಗಣನೀ ಯ ಕೊಡುಗೆಯನ್ನೂ ನೀಡಿವೆ.

ಉದಾಹರಣೆಗೆ ಗದುಗಿನ ಪ್ರಕಾಶಕರನ್ನು ಗಮನಿಸಿ. ಬಳಿಕದ ಗಳಗನಾಥರ ಕಾಲ ಮೊದಲ್ಗೊಂಡು ಆರಂಭಗೊಂಡ ಹೊಸ ಪ್ರಾಕಾರದ ಸಾಹಿತ್ಯ ಪ್ರಕಟನೆಯಲ್ಲಿ ಬಹುಪಾಲು ಹಿರಿಯ ಸಾಹಿತಿ ಗಳು ತೊಡಗಿಕೊಂಡದ್ದನ್ನು ಗಮನಿಸಬಹುದು. ಗಳಗನಾಥರೇನೋ ಬರವಣಿಗೆ, ಮುದ್ರಣ, ವಿತರಣೆ ಮುಂತಾದ ಎಲ್ಲ ಕೆಲಸಗಳನ್ನೂ ತಾವೇ ನಿರ್ವಹಿಸಿದ ಸಾಹಸಿಗಳು ಮತ್ತು ಪರಿಶ್ರಮಿಗಳು.

ಅನಂತರದ ಖ್ಯಾತ ನಾಮರೆಲ್ಲ ತಮ್ಮ ಕೃತಿಗಳನ್ನು ತಾವೇ ಪ್ರಕಟಿಸುವವರಾಗಿದ್ದರೂ ಆ ಮೂಲಕ ಆಗುತ್ತಿದ್ದ ವ್ಯಾಪಾರದ ಮೇಲೆಯೇ ತಮ್ಮ ಬದುಕನ್ನು ಅವಲಂಬಿಸದೇ ತಮ್ಮ ಸಂಸಾರ ನಿರ್ವಹಣೆಗೆ ಬೇರೆ ದಾರಿ ಕಂಡುಕೊಂಡಿದ್ದರು. ಉದಾಹ ರಣೆಗೆ ಕುವೆಂಪು, ಮಾಸ್ತಿ, ರಾಜರತ್ನಂ. ಅಂಥವರಲ್ಲಿ ಶಿವರಾಮ ಕಾರಂತರು ನಮಗೆ ಸುಧಾರಿತ ಗಳಗನಾಥರಂತೆನಿಸುತ್ತಾರೆ. ಸ್ವತಃ ಲೇಖಕರೂ ಮುದ್ರಕ ರೂ ಚಿತ್ರಕಲಾಕಾರರೂ ಆಗಿದ್ದವರಾಗಿ ಗಳಗನಾಥರಂತೆ ಊರೂರು ಸುತ್ತಾಡಿ ಮಾರಾಟ ಮಾಡುತ್ತಿರಲಿಲ್ಲವಷ್ಟೆ.

ಇತ್ತೀಚಿನ ದಶಕಗಳಲ್ಲಿ ಹೆಚ್ಚಾಗಿ ಪೇಚಿಗೆ ಸಿಲುಕಿ ಕೊಂಡಂತೆ ಭಾವಿಸುವವರು, ಪರದಾಡುತ್ತಿ­ರುವ ವರು, ಮಾಧ್ಯಮ­ಗಳಲ್ಲಿ ಓದುಗರ ಸಂಖ್ಯೆ, ವಿತ ರಣೆ ಸಮಸ್ಯೆ, ಸ‌ರಕಾರದ ನಿರ್ಲಕ್ಷ್ಯ  ಮುಂತಾಗಿ ನಿರಾಶೆ‌ಗಳನ್ನೇ ಹಂಚಿಕೊಳ್ಳುತ್ತಿರುವವರು ಸ‌ರ ಕಾರಿ ಯೋಜನೆಗಳನ್ನು ಮಾತ್ರ ಅವಲಂ ಬಿಸಿರುವ ಪ್ರಕಾಶಕರು ಮತ್ತು ಲೇಖಕರು.

ಮೂಗು ತೂರಿಸದಿರಲಿ
ಯಾವ ಕ್ಷೇತ್ರದಲ್ಲೇ ಆಗಲಿ, ಸರಕಾರ ಅತಿಯಾಗಿ ಮೂಗು ತೂರಿಸಿದರೆ, ಅಲ್ಲಿ ಅಪಸವ್ಯಗಳ ಉತ್ಪತ್ತಿಯೇ ಹೆಚ್ಚಾಗುತ್ತದೆ. ಸರಕಾರವು ಈ ಪುಸ್ತಕ ವ್ಯವಸಾಯದ ಎಲ್ಲ ಕ್ಷೇತ್ರಗಳನ್ನೂ ಹಾಳುಗೆಡವುತ್ತ ಬಂದಿರುವುದು ನಮ್ಮ ರಾಜ್ಯದ ಏಕೀಕರಣದ ಬಳಿಕ‌. ಆ ಹಿಂದಿನ ಹೈದರಾಬಾದ್‌ ಕರ್ನಾಟಕ, ಮದರಾಸು ಕರ್ನಾಟಕ, ಮುಂಬೈ ಕರ್ನಾ ಟಕ- ಹೀಗೆ ಕನ್ನಡ ಪ್ರದೇಶಗಳು ಯಾವ ಸರಕಾರದಲ್ಲಿ ಸೇರಿಕೊಂಡಿದ್ದವೋ ಅಲ್ಲೆಲ್ಲ ಕನ್ನಡ ಪುಸ್ತಕಗಳಿಗೆ ಆಯಾ ಸರಕಾರದ ಅಷ್ಟೋ ಇಷ್ಟೋ ನೆರವು ಸಿಕ್ಕುತ್ತಲೇ ಇತ್ತು.

ಮೈಸೂರು ಮಹಾರಾಜರ ಆಡಳಿತದಲ್ಲಂತೂ ಕನ್ನಡ ಸಾರಸ್ವತ ಲೋಕಕ್ಕೆ ಅಮೋಘ ನೆರವನ್ನು ನೀಡಿದ್ದಕ್ಕೆ ಅರಮನೆ ಪ್ರಕಟಿಸಿದ ಗ್ರಂಥಗಳೇ ಸಾಕ್ಷಿ. ಮೂಲ ಸಂಸ್ಕೃತ ಪುರಾಣ ಮತ್ತು ಮೂಲ ವೇದಸಾಹಿತ್ಯ ಗಳಿಗೆ ಕನ್ನಡ ಅನುವಾದ – ಭಾಷ್ಯ ಸಹಿತ ಬೃಹತ್‌ ಸಂಪುಟಗಳು, ಕುಮಾರ ವ್ಯಾಸ ಭಾರತ, ಈ ಮುಂತಾದುವೆಲ್ಲ ಸಾಹಿತ್ಯದ ಅರಿವುಳ್ಳ ಆ ಪ್ರಾಜ್ಞ ಜನಾ ಡಳಿತಗಾರರೇ ಮಾಡಿದ್ದರಿಂದ ಸಾಧ್ಯವಾದಂಥವು. ಮುಂದಿನ ಸರಕಾರಗಳ ಕಾಲದಲ್ಲಿ 3 ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಗಳು ಹೊಸ ಹುರುಪಿನಲ್ಲಿ ಪ್ರಾಜ್ಞರ ನಿರ್ದೇಶನದಲ್ಲಿ ಮಾಡಿದ ಸಾಧನೆಗಳು ಅಪೂರ್ವವೆನಿಸಿ ಓದು ಗರ ಆಸಕ್ತಿ ಮತ್ತು ಜ್ಞಾನತೃಷೆಯನ್ನು ತಣಿಸಿದುವು.

ಸರಕಾರದ ಧನಸಹಾಯ ನೆಚ್ಚಿಕೊಂಡಿದ್ದ ಅವುಗಳ ಯೋಜನೆಗಳೂ ಉತ್ಸಾಹಗಳೂ ಕ್ರಮೇಣ ನೆಲಕ ಚ್ಚಿದವು. ಆ ಕೆಲಸಗಳು ಯಾವ ಖಾಸಗಿ ಪ್ರಕಾಶಕ ರಿಂದಲೂ ಸಾಧ್ಯವೆನಿಸದಂಥವಾಗಿದ್ದುದು ನಿಜ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟನೆಗಳು ಕೂಡ, ಹಂಪ ನಾಗರಾಜಯ್ಯನವರ ಕಾಲದವರೆಗೂ ಹಾಗೆಯೇ ಇದ್ದುದು ನಾವು ಕಾಣಬಹುದು. ಅನಂತರ ಜನ್ಮತಾಳಿದ ಸರಕಾರದ ಎಲ್ಲ ಅಕಾಡೆಮಿ, ಎಲ್ಲ ಪ್ರಾಧಿಕಾರಗಳೂ ಪುಸ್ತಕ ಪ್ರಕಾಶನಕ್ಕೂ ತೊಡಗಿ ಕೊಂಡು, ಖಾಸಗಿಯವರು ಮಾಡಬಹುದಾದ‌ ಕೃತಿಗಳ ನ್ನೇ ಪ್ರಕಟಿಸಿ, ಅರ್ಧಬೆಲೆ  ಮಾರಾಟಕ್ಕಿಳಿದು, ಪ್ರಕಾಶಕರಿ ಗೂ ಓದುಗರಿಗೂ ಅನ್ಯಾಯದ ದಾರಿ ತೋರಿಸಿದ್ದಲ್ಲದೆ, ಸರಕಾರಕ್ಕೂ ಬಿಳಿಯಾನೆಯಾಗಿರುವುದು ವಾಸ್ತವ.

ಪುಸ್ತಕ ಓದೇ ಇಲ್ಲ ಎಂದ ಮಂತ್ರಿ!
ಇನ್ನು ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕುರಿತು ಏನು ಹೇಳಬೇಕು? ಸರಕಾರದ ಯಾವ ಇಲಾಖೆ ಭೃಷ್ಟಾಚಾರರಹಿತವೂ ರಾಜಕೀ ಯ ಹಸ್ತಕ್ಷೇಪವಿಲ್ಲದೆಯೂ ಕಾರ್ಯನಿರ್ವಹಿಸುತ್ತಿದೆಯೆಂದು ಈ ಇಲಾಖೆ ಹಾಗಿರಬೇಕು? ಇದು ಸಾಹಿತ್ಯ, ಪುಸ್ತಕ, ಶಿಕ್ಷಣ, ಕಲೆ ಮುಂತಾದುವಕ್ಕೆ ಹೆಚ್ಚು ಹತ್ತಿರದ್ದೆಂದೇ? ಇದೊಳ್ಳೆ ವಾದವಾಯಿತಲ್ಲ? ಈಗ ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದೆ, ಗ್ರಂಥಾಲಯ ಇಲಾಖೆಯ ಮಂತ್ರಿಗಳೊಬ್ಬರು ಧಾರವಾಡದಲ್ಲಿ ಜರಗಿದ ನ್ಯಾಶನಲ್‌ ಬುಕ್‌ ಟ್ರಸ್ಟಿನ ಪುಸ್ತಕಮೇ ಳವನ್ನು ಉದ್ಘಾಟಿಸಿ ಆಡಿದ ಮಾತುಗಳು ಪತ್ರಿಕೆಗಳಲ್ಲಿ ವರದಿಯಾಗಿದ್ದಲ್ಲದೆ, ನಾಡಿನ ಪ್ರಾಜ್ಞರ ನೆನಪಿನಲ್ಲಿ ಇನ್ನೂ ಉಳಿದಿದೆ.

“ನಾನು ಈ ತನಕಾ ಒಂದೂ ಪುಸ್ತಕ ಓದೇಯಿಲ್ಲ. ನಮ್ಮಪ್ಪ ನಾ ಸಣ್ಣಾವಿದ್ದಾಗ ಪಂಚತಂತ್ರ ಕತಿ ಪುಸ್ತಕ ಓದಲೇ ಅಂತ ತಂದುಕೊಟ್ಟಿದ್ದ. ನಾನು ಓದಲೇಯಿಲ್ಲ. ಇನ್ನಮುಂದ ಸ್ವಲ್ಪ ಸವುಡು ಸಿಕ್ಕಾಗ ಪುಸ್ತಕ ಓದೋ ಪ್ರಯತ್ನ ಮಾಡತೇನಿ’ ಎಂದಿದ್ದರು. ಈ ಇಲಾಖೆಯ ಸ್ಥಿತಿಯನ್ನೇ ಆ ಮಂತ್ರಿಗಳ ಮಾತು ಬಿಂಬಿಸಿದ್ದು ಸುಳ್ಳೇ? ಪ್ರಕಾಶಕರಿಗೆ, ಲೇಖಕರಿಗೆ ಈ ಇಲಾಖೆ ಉತ್ತೇಜನ ನೀಡುತ್ತಿದೆ ಎಂದಾಕ್ಷಣ ಸರಕಾರೀ ಪೂರೈಕೆಗಾಗಿಯೇ ಹುಟ್ಟಿಕೊಂಡ ಪ್ರಕಾಶಕರೂ ಬರೆದುಕೊಡುವ ಲೇಖಕರೂ ಹುಟ್ಟಿಕೊಂಡದ್ದು ನಿಜ.

ಎಂಟು ಸಾವಿರ ಕೃತಿ!
ಡಿವಿಜಿ ಕಾಲದಲ್ಲಿ ಕನ್ನಡ ಪ್ರದೇಶಗಳಲ್ಲೆಲ್ಲ ಸೇರಿ ಇಪ್ಪತ್ತೋ  ಇಪ್ಪತೈದೋ ಕೃತಿಗಳು ವರ್ಷವೊಂದರಲ್ಲಿ ಪ್ರಕಟಗೊಳ್ಳುತ್ತಿದ್ದುವೆಂಬ ಸಂಗತಿಯೇ ನಗೆ ಹುಟ್ಟಿಸುತ್ತದೆಯೀಗ. ಸರಕಾರದ ಕೃತಿಸ್ವಾಮ್ಯ ವಿಭಾಗದಲ್ಲಿ  ಈಗೀಗ ನೋಂದಣಿಯಾಗುತ್ತಿರುವ ಪುಸ್ತಕಗಳ ಸಂಖ್ಯೆ ಅಂದಾಜು 8000. ಇವುಗಳಲ್ಲಿ ಹೊಸ ತಾಂತ್ರಿಕತೆ ಬಳಸಿ ಪ್ರಕಟನೆಗೊಂಡು, ಸರಕಾರದ ಬೇಡಿಕೆ ಬಂದರೆ, ಬಂದಾಗ ಮಾತ್ರ ನೂರಾರು ಪ್ರತಿ ಮುದ್ರಣಗೊಳ್ಳುವ ಕೃತಿಗಳ ಸಂಖ್ಯೆಯೂ ಗಣನೀಯ.

ಪುಸ್ತಕಗಳ ಆಯ್ಕೆ ಅರ್ಜಿಯಲ್ಲಿ ಹಲವಾರು ನಿಬಂಧನೆಗಳು, ಉನ್ನತ ಮಟ್ಟದ ಸಮಿತಿ, ಏನೆಲ್ಲ ಮುಳ್ಳುಬೇಲಿಗಳನ್ನು ದಾಟಿದರೂ ಕೆಲವು ಪುಸ್ತಕ ಗಳ ಖರೀದಿ 300, ಮತ್ತೆ ಕೆಲವು 800-1000, ಮತ್ತೆ ಕೆಲವೇ ಕೆಲವು ಸಾವಿರಾರು. ಗ್ರಂಥಾಲಯ ಇಲಾಖೆಯಲ್ಲಿ ಆಸೀನರಾಗಿರುವ ಅಧಿಕಾರಿ ಗಳು ಸುಮ್ಮನೆ ಅಂತಹ ಕುರ್ಚಿಗೆ ಬಂದಿರುತ್ತಾರೆಯೇ? ಶೇ.30-40 ಕೊಟ್ಟರೆ ಮಾತ್ರ ನಿಮ್ಮ ಪುಸ್ತಕ ಖರೀದಿಯಾಗುತ್ತವೆ ಎನ್ನದೇ ಮತ್ತೇನು? ಒಬ್ಬ ಉಪನಿರ್ದೇಶಕರಿಗೆ ನಾನು ಹೇಳಿದ್ದೆ:

ಸ್ವಾಮಿ, ನಾನು ಗ್ರಂಥಾಲಯಕ್ಕಾ ಗಿಯೇ ಪುಸ್ತಕ ಪ್ರಕಟಿಸುವ ಪ್ರಕಾಶಕನಲ್ಲ, ನಮ್ಮ ಪ್ರಕಾಶನದ ಕೃತಿಗಳು ಕನಿಷ್ಠ ಓದಿಸಿಕೊಳ್ಳುವ, ಕನಿಷ್ಠ ಮಾರಾಟದ-ಹೀಗೆ ಎರಡೂ ಯೋಗ್ಯತೆ ಗಳುಳ್ಳಂಥವು – ಲೇಖಕರ ಶ್ರಮಕ್ಕೂ ಯೋಗ್ಯ ಸಂಭಾವನೆಯನ್ನೂ ಚೊಕ್ಕ ಮುದ್ರಣದತ್ತ ತುಂಬ ಕಾಳಜಿಯನ್ನೂ ಕೊಡುವವ ನಾನು – ಎಂದರೂ ನಮ್ಮ ಪುಸ್ತಕಗಳು ಅವರ ಗ್ರಂಥಾಲಯ ಸೇರುತ್ತಲೇಯಿಲ್ಲ. ಅಲ್ಲಿ ಹೆಚ್ಚಾಗಿ ರದ್ದಿಯೇ ತುಂಬಿದೆಯೆಂದು ಬೇರೆ ಹೇಳಬೇಕಿಲ್ಲ. ಈ ಇಲಾಖೆಯ ಕುರಿತು ಯಾರಲ್ಲಿ ಏನನ್ನು ಮಾತನಾಡಬೇಕು? ಭಾಗ್ಯ ಭರಿಸಲೇ ಒದ್ದಾಡುತ್ತಿರುವ ಸರಕಾರದಿಂದಲಂತೂ ಈ ಇಲಾಖೆಗೆ ಕತ್ತಲೆಯೇ ಗತಿ!

ಆತ್ಮಗೌರವ ಬೆಳೆಸಿಕೊಳ್ಳೋಣ
ಅಂತೆಯೇ, ಸ್ವಾವಲಂಬನೆಗಾಗಿಯೂ ಆತ್ಮಗೌರವಕ್ಕಾಗಿಯೂ ಪ್ರತಿಯೊಬ್ಬ ಪ್ರಕಾಶಕರೂ ಯೋಚಿಸಲೇಬೇಕು. ಹಾಗಂತ ಗ್ರಂಥಾಲಯ ಇಲಾಖೆಯತ್ತ ಮುಖಮಾಡಲೇಬಾರದಂತಲ್ಲ. ಸಾಧ್ಯವಾದರೆ ತುಂಬ ಗೌರವಯುತವಾಗಿ ವ್ಯವಹರಿಸೋಣ. ಆ ಇಲಾಖೆಯ ಕುರಿತಾಗಿ, ಸರಕಾರದ ಧೋರಣೆಯ ಕುರಿತಾಗಿ ನಿರ್ಭಿಡೆಯಿಂದ ಇಡೀ ಕನ್ನಡ ಸಾಹಿತ್ಯ ಪ್ರಪಂಚದ ಪರವಾಗಿ ಮಾತನಾಡೋಣ. ಗ್ರಾಮಪಂಚಾಯತಿ- ಮಂಡಲ ಪಂಚಾಯತಿ ಗ್ರಂಥಾಲಯಗಳಂತೆ ವಿಕೇಂದ್ರೀಕೃತ ಪುಸ್ತಕ ಖರೀದಿಯ ಒಳಿತುಕೆಡಕುಗಳನ್ನು ಯೋಚಿಸೋಣ.

ಕನ್ನಡದ ಕೃತಿಗಳಿಗಾಗಿ ಮಳಿಗೆಯೊಂದನ್ನು ಮಾಡಿಕೊಂಡು,  ಹೊಸ ಹೊಸ ವಿತರಣ ಜಾಲಗಳತ್ತ ಯೋಚಿಸಿ, ಸಣ್ಣಪುಟ್ಟ ಸಾಹಿತ್ಯಗೋಷ್ಠಿಗಳ ಆಯೋಜಕರಾಗಿ ಕಾರ್ಯಮಗ್ನರಾದಾಗ ಮಾತ್ರ ಐಷಾರಾಮಿ ಬದುಕಲ್ಲ ವಾದರೂ ನೆಮ್ಮದಿಯ ಬದುಕಿಗಂತೂ ಕೊರತೆಯೆನಿಸದು. ಕೇವಲ ಪುಸ್ತಕ ಮಾರಾಟ ಮಾಡುತ್ತಲೇ ಯಶಸ್ವಿಯಾದವರ ಉದಾಹರಣೆಗಳೂ ನಮ್ಮ ನಾಡಿನಲ್ಲಿ ಬೇಕಾದಷ್ಟಿವೆ.

ನಮ್ಮ ಮಕ್ಕಳನ್ನೂ ಕನ್ನಡ ಓದುಬರಹ ಬರುವಂತೆ ಮಾಡಿ, ಈ ವೃತ್ತಿಯ ಸೊಗಸನ್ನೂ ಘನತೆಯನ್ನೂ ತಿಳಿಯುವಂತೆ ಮಾಡಿದರೆ ಆ ವ್ಯವಸಾಯ ಮತ್ತೊಂದು ತಲೆಮಾರು ಮುಂದುವರೆದೀತು, ಕನ್ನಡಕ್ಕೆ ನ್ಯಾಯವೂ ದಕ್ಕೀತು. ನಮ್ಮ ಜನರಲ್ಲೂ ಈಗೀಗ ಶ್ರೀಮಂತಿಕೆ ಎದ್ದುಕಾಣುವಂತಾಗಿದೆ. ಹಿಂದಿನ ಕಾಲದಂತೆ ಕಡ ಪಡೆದು ಓದುವವರೂ ದುಡ್ಡು ಖರ್ಚುಮಾಡಲು ಹಿಂದೇಟುಹಾಕುವವರೂ ಕಡಿಮೆಯಾಗಿದ್ದಾರೆ. ಪುಸ್ತಕ ಓದಿನ ರುಚಿಹತ್ತಿಸುವ ಕಲೆಕೌಶಲಗಳನ್ನು ಪ್ರಕಾಶಕ, ಮಾರಾಟಗಾರ ರೂಢಿಸಿಕೊಳ್ಳಬೇಕು. ಓದುಗರ ಬದಲಾಗುವ ಆದ್ಯತೆ ಅಭಿರುಚಿಗಳ ಕುರಿತು ಅರಿವಿರಬೇಕು. ನೆನಪಿರಲಿ ಇದು ವ್ಯವಸಾಯವೇ ಆಗಿರಲಿ, ಉದ್ಯಮವಾಗುವುದು ಬೇಡ!

ಆಗಬೇಕಾದ್ದೇನು?
1. ಇಂದಿನ ಯುವ ಪೀಳಿಗೆಯವರಿಗೆ ಪುಸ್ತಕ ಓದಿನ ರುಚಿ ಹತ್ತಿಸುವ ಕೆಲಸ ಆಗಬೇಕು

2. ಬದಲಾಗುವ ಓದುಗರ ಆದ್ಯತೆ ಕುರಿತು ಅರಿವಿಟ್ಟುಕೊಂಡು ಪ್ರಯತ್ನಗಳು ಸಾಗಬೇಕು

3. ಒಳ್ಳೆಯ ಕೃತಿಗಳನ್ನು ನೀಡಿದಾಗ ಮಾತ್ರ ಪ್ರಕಾಶನ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಕೆಲಸಗಳು ಸಾಗಲಿ

4. ಸರಕಾರದ ಧನಸಹಾಯಕ್ಕಾಗಿ ಪುಸ್ತಕಗಳ ಮುದ್ರಣ ಮಾಡುವ ಪರಿಪಾಠ ಬೇಡವೇ ಬೇಡ

5. ಸರಕಾರಿ ಅಕಾಡೆಮಿಗಳು ಪುಸ್ತಕ  ಪ್ರಕಾಶನದ ಸ್ಪರ್ಧೆಗೆ ಇಳಿಯಬಾರದು

ಎಂ. ಎ. ಸುಬ್ರಹ್ಮಣ್ಯ,  ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.