Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Team Udayavani, Nov 5, 2024, 4:28 PM IST
ಮಹಾನಗರ: ವಾಹನ ದಟ್ಟಣೆ ಯಿರುವ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ಅನುವಾಗುವಂತೆ ರಸ್ತೆಯ ಮಧ್ಯೆ ಡಿವೈಡರ್ ಅಳವಡಿಸುವ ಕಾರ್ಯ ನಗರದ ವಿವಿಧೆಡೆ ಆರಂಭಗೊಂಡಿದ್ದು, ಬಂಟ್ಸ್‌ಹಾಸ್ಟೆಲ್ ಬಳಿ ಕಾಮಗಾರಿ ನಡೆಯುತ್ತಿದೆ.
ಬಂಟ್ಸ್‌ಹಾಸ್ಟೆಲ್‌ನಿಂದ ಪಿವಿಎಸ್‌ನತ್ತ ತೆರಳುವ ಕರಂಗಲ್ಪಾಡಿ ಜಂಕ್ಷನ್‌ನಲ್ಲಿ ರಸ್ತೆ ಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ಉಂಟಾ ಗುತ್ತಿತ್ತು. ಅನೇಕ ವಾಹನಗಳು ಮನಸೋ ಇಚ್ಛೆ ಸಂಚರಿಸುವ ಕಾರಣದಿಂದ ಸಮಸ್ಯೆ ಯಾಗುತ್ತಿತ್ತು. ಒಂದು ರಸ್ತೆಯಿಂದ ಮತ್ತೂಂದು ರಸ್ತೆಗೆ ಮುನ್ನುಗುವ ಕಾರಣ ದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕರಂಗಲ್ಪಾಡಿ ಜಂಕ್ಷನ್ ಹಾಗೂ ಬಂಟ್ಸ್ ಹಾಸ್ಟೆಲ್ ಸಮೀಪ ಡಿವೈಡರ್ ನಿರ್ಮಿಸಲಾಗುತ್ತಿದೆ.
ಈ ಹಿಂದೆ ನಗರದಲ್ಲಿ 18 ಸ್ಥಳಗಳನ್ನು ಗುರುತಿಸಿ ಪೊಲೀಸ್ ಇಲಾಖೆ ವತಿಯಿಂದ ಮಹಾನಗರ ಪಾಲಿಕೆಗೆ ಪಟ್ಟಿ ನೀಡಿತ್ತು. ನಗರ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವಾಗ ಕೆಲವು ಕಡೆಗಳಲ್ಲಿ ವಾಹನ ಗಳು ತಿರುವು ಪಡೆಯಲು ಅನುಕೂಲ ವಾಗುವಂತೆ ಡಿವೈಡರ್ ನಿರ್ಮಿಸದೆ ಹಾಗೇ ಬಿಡಲಾಗಿತ್ತು. ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ, ಅಂತಹ ಸ್ಥಳಗಳಲ್ಲಿ ವಾಹನಗಳು ತಿರುವು ಪಡೆದುಕೊಳ್ಳುವಾಗ ದಟ್ಟಣೆ ಉಂಟಾಗುತ್ತದೆ ಎಂದು ಪೊಲೀಸ್ ಇಲಾಖೆ ಬ್ಯಾರಿಕೇಡ್, ಟ್ರಾಫಿಕ್ ಕೋನ್‌ಗಳನ್ನು ಅಳವಡಿಸಿತ್ತು. ಕೆಲವು ದ್ವಿಚಕ್ರವಾಹನ ಸವಾರರು ಇವುಗಳ ನಡುವೆಯೂ ವಾಹನ ನುಗ್ಗಿಸಿ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ತಿರುವು ಪಡೆದುಕೊಳ್ಳುತ್ತಿದ್ದರು. ಇದು ಅಪಘಾತಕ್ಕೆ ದಾರಿಯಾಗಿತ್ತು. ಆದ್ದರಿಂದ ಇಂತಹ ಸ್ಥಳಗಳಲ್ಲಿ ಶಾಶ್ವತ ಡಿವೈಡರ್‌ಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.