County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Team Udayavani, Nov 5, 2024, 5:15 PM IST
ಲಂಡನ್: ಈ ಋತುವಿನ ಕೌಂಟಿ ಚಾಂಪಿಯನ್‌ಶಿಪ್ ನಲ್ಲಿ ಸರ್ರೆ ಪರ ಕಾಣಿಸಿಕೊಂಡಿದ್ದ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರ ಶಂಕಿತ ಬೌಲಿಂಗ್ ಕ್ರಮದ ಬಗ್ಗೆ ಅಂಪೈರ್‌ಗಳು ವರದಿ ಮಾಡಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಶಕೀಬ್ ಅವರ ಬೌಲಿಂಗ್ ಕ್ರಮದ ವಿಶ್ಲೇಷಣೆಗೆ ಒಳಗಾಗುವಂತೆ ಕೇಳಿದೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ ನಲ್ಲಿ ಟೌಂಟನ್‌ನಲ್ಲಿ ಸೋಮರ್‌ಸೆಟ್ ವಿರುದ್ಧ ನಡೆದ ರೋಮಾಂಚಕ ಚಾಂಪಿಯನ್‌ಶಿಪ್ ಘರ್ಷಣೆಯಲ್ಲಿ ಸರ್ರೆ ಪರ ಶಾಕಿಬ್ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲಿ ಆಲ್‌ರೌಂಡರ್ 63 ಓವರ್‌ಗ ಳಿಗಿಂತ ಹೆಚ್ಚು ಬೌಲ್ ಮಾಡಿ ಒಂಬತ್ತು ವಿಕೆಟ್‌ಗಳನ್ನು ಪಡೆದರು. ಆದರೆ ಆನ್-ಫೀಲ್ಡ್ ಅಂಪೈರ್‌ಗಳಾದ ಸ್ಟೀವ್ ಓ’ಶೌಗ್ನೆಸ್ಸಿ ಮತ್ತು ಡೇವಿಡ್ ಮಿಲ್ಸ್, ತರುವಾಯ ಅವರ ಬೌಲಿಂಗ್ ಕ್ರಮವನ್ನು ಅನುಮಾನಾಸ್ಪದವೆಂದು ಪರಿಗಣಿಸಿದ್ದಾರೆ ಎಂದು ಈಗ ತಿಳಿದು ಬಂದಿದೆ.
ಶಕೀಬ್ ಅವರನ್ನು ಆಟದಿಂದ ಅಮಾನತುಗೊಳಿಸಲಾಗಿಲ್ಲ ಆದರೆ ಮುಂದಿನ ಎರಡು ವಾರಗಳಲ್ಲಿ ಅವರು ಅನುಮೋದಿತ ಸ್ಥಳದಲ್ಲಿ ಹೆಚ್ಚಿನ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ ಎಂದು ತಿಳಿದುಬಂದಿದೆ. 447 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 712 ವಿಕೆಟ್‌ಗಳನ್ನು ಪಡೆದ ಶಕೀಬ್ ಅವರ 17 ವರ್ಷಗಳ ವೃತ್ತಿಜೀವನದಲ್ಲಿ ಅವರ ಬೌಲಿಂಗ್ ಕ್ರಮವು ಎಂದಿಗೂ ಪರಿಶೀಲನೆಗೆ ಒಳಪಡಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.