Rabkavi Banhatti: ಮೊಬೈಲ್ ಕಳ್ಳತನ ಪತ್ತೆ: ವಾರಸುದಾರರಿಗೆ ಹಸ್ತಾಂತರ
Team Udayavani, Nov 5, 2024, 9:04 PM IST
ರಬಕವಿ-ಬನಹಟ್ಟಿ: ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು, ನಾಪತ್ತೆಯಾಗಿದ್ದ 30 ಮೊಬೈಲ್‌ಗಳನ್ನು ಪತ್ತೆ ಹೆಚ್ಚಿ ಜಮಖಂಡಿ ಡಿವೈಎಸ್ಪಿ ಶಾಂತವೀರ ಈ. ಸಿಪಿಐ ಸಂಜು ಬಳಗಾರ, ಪಿಎಸ್‌ಐ ಶಾಂತಾ ಹಳ್ಳಿ, ವಿಜಯ ಕಾಂಬಳೆ ಅವರ ಸಮ್ಮುಖದಲ್ಲಿ ವಾರಸುದಾರರಿಗೆ ನ.5ರ ಮಂಗಳವಾರ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.
ಕಳವು ಮಾಡಲಾದ ಹಾಗೂ ನಾಪತ್ತೆಯಾಗಿದ್ದ 8 ಮೊಬೈಲ್ ಫೋನ್ ಗಳನ್ನು ಸಿಇಐಆರ್(ಕೇಂದ್ರ ಉಪಕರಣ ಗುರುತು ನೋಂದಣಿ) ಪೋರ್ಟಲ್ ಮೂಲಕ ಪತ್ತೆ ಹಚ್ಚಲಾಗಿದೆ.
ಡಿವೈಎಸ್ಪಿ ಈ. ಶಾಂತವೀರ ಮಾತನಾಡಿ, ಮೊಬೈಲ್ ಪತ್ತೆಗೆ ಪೊಲೀಸರ ನಿರೀಕ್ಷೆಗೆ ಸಿಇಐಆರ್ ಪೋರ್ಟಲ್ ಬಲ ತುಂಬಿದೆ. ಸ್ವಯಂಪ್ರೇರಿತ ಆನ್‌ಲೈನ್ ನಲ್ಲಿಯೂ ಪೋರ್ಟಲ್ ಭರ್ತಿ ಮಾಡಿ ಮಾಹಿತಿ ಒದಗಿಸಿ ನೊಂದಣಿ ಮಾಡಬಹುದಾಗಿದ್ದು, ಇದರಿಂದ ಮೊಬೈಲ್ ಪತ್ತೆಗೆ ಸಾಕಷ್ಟು ಸಹಾಯ ಮಾಡಲಿದೆ. ಈ ಕಾರಣ ಈ ಆ್ಯಪ್‌ನ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಸನ್ಮಾನ: ಇದೇ ಸಂದರ್ಭ ಮೊಬೈಲ್‌ಗಳ ಪತ್ತೆಗೆ ಶ್ರಮವಹಿಸಿದ ಪೊಲೀಸ್ ಸಿಬ್ಬಂದಿಗಳಾದ ಧರೆಪ್ಪ ಕುಂಬಾರ, ವಿಠ್ಠಲ ಅಜ್ಜನಗೌಡರ, ಸಂತೋಷ ಕೌಜಲಗಿ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.