Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Team Udayavani, Nov 6, 2024, 10:32 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada-11) ಕಾರ್ಯಕ್ರಮದ ಮೂಲಕ ಮನೆಮನದ ಮಾತಾಗಿರುವ ಲಾಯರ್ ಜಗದೀಶ್ (Lawyer Jagadish) ದೊಡ್ಮನೆಯಿಂದ ಆಚೆ ಬಂದ ಬಳಿಕ ಮತ್ತೆ ತನ್ನ ಹಳೆ ಸ್ಟೈಲ್ ಗೆ ಮರಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂದ ಆರೋಪಿ ದರ್ಶನ್ (Darshan) ಬಗ್ಗೆ ಜಗದೀಶ್ ಅನೇಕ ಬಾರಿ ಮಾತನಾಡಿದ್ದಾರೆ. ದರ್ಶನ್ ಅವರ ಅಭಿಮಾನಿಗಳಿಗೆ ನಾವು ಹೆದರಲ್ಲ ನಮ್ಮ ತಂಡಕ್ಕೆ ಕೇಸ್ ಕೊಡಿ ಅವರನ್ನು ಬಿಡಿಸಿಕೊಂಡು ಬರುತ್ತೇವೆ ಹಲವು ಬಾರಿ ಜಗದೀಶ್ ನಾನಾ ಕಡೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಇದೀಗ ದರ್ಶನ್ ವೈದ್ಯಕೀಯ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ದರ್ಶನ್ ಅಭಿಮಾನಿಗಳು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜಗದೀಶ್ ದರ್ಶನ್ ಹಾಗೂ ಅವರ ಅಭಿಮಾನಿಯೊಬ್ಬರ ಮೇಲೆ ದೂರು ದಾಖಲಿಸಿದ್ದಾರೆ.
ಜಗದೀಶ್ ಹೇಳಿದ್ದೇನು?:
ರಿಷಿ ಎನ್ನುವವನು ದರ್ಶನ್ ಬಗ್ಗೆ ಮರ್ಯಾದೆ ಕೊಟ್ಟು ಮಾತನಾಡು ತುಂಬಾ ಜಾಸ್ತಿ ಆಯಿತು ಎಂದೇಳಿ ಕೊಲೆ ಬೆದರಿಕೆ ಹಾಕಿದ್ದಾನೆ. ನಿನ್ನೆಯಿಂದ ನಿರಂತರವಾಗಿ 10 ಸಾವಿರ ಕಾಲ್ ಬಂದಿದೆ. ನಾವೇನು ಕೇರ್ ಮಾಡೋಕೆ ಹೋಗಿಲ್ಲ. ದರ್ಶನ್ ಹಾಗೂ ರಿಷಿ ಮೇಲೆ ದೂರು ದಾಖಲಿಸುತ್ತಿದ್ದೇನೆ. ಕಾಲ್ ಮಾಡಿ ನಮ್ಮನ್ನು ಬೆದರಿಸುತ್ತಿದ್ದೀರಾ ಅಂದ್ರೆ ನಿಮ್ಮಂಥ ದಡ್ಡರು ಯಾರೂ ಇಲ್ಲ. ದರ್ಶನ್ ಬಗ್ಗೆ ಈ ರೀತಿ ಮಾತನಾಡುತ್ತೀಯ, ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಹೇಗೆ ಕಾಲಿಡುತ್ತೀಯ. ರಚಿತಾ ರಾಮ್ ಬಗ್ಗೆ ಆ ರೀತಿ ಮಾತನಾಡ್ತೀಯ ಅಂಥ ಪ್ರತಿಯೊಬ್ಬರು ಹೇಳ್ತಾರೆ. ಕನ್ನಡ ಇಂಡಸ್ಟ್ರಿ ಬಾಸ್ ದರ್ಶನ್ ಅಂತೆ. ಅವನು ಮೆಡಿಕಲ್ ಬೇಲ್ ಮೇಲೆ ಆಚೆ ಇದ್ದಾನೆ. ಇದನ್ನು ಅವನೇ ಮಾಡಿಸುತ್ತಿದ್ದಾನಾ ಅಥವಾ ಅವನ ಹೆಸರಿನಲ್ಲಿ ಬೇರೆ ಅವರು ಮಾಡುತ್ತಿದ್ದಾರೋ. ಒಟ್ಟಿನಲ್ಲಿ ನಾನು ಬಿಗ್ಬಾಸ್ ಅಲ್ಲಿ ಹೆಸರು ಮಾಡಿರುವುದು ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಕಾಲಿಡುತ್ತಿರುವುದು ದರ್ಶನ್ ಮತ್ತೆ ಅವನ ಪಟಾಲಂಗೆ ಇಷ್ಟ ಇಲ್ಲ ಅನ್ನಿಸುತ್ತದೆ ಎಂದಿದ್ದಾರೆ.
ಈ ಬಗ್ಗೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.