Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

ಅವರು ಹಾವು ಹಿಡಿದದ್ದು ಆಕಸ್ಮಿಕವಲ್ಲ, 21 ವರ್ಷಗಳಿಂದ ನೂರಾರು ಹಾವು ರಕ್ಷಿಸಿದ ಸಾಹಸಿ ಇವರು

Team Udayavani, Nov 6, 2024, 1:03 PM IST

2

ಬೆಳ್ತಂಗಡಿ: ಮಹಿಳೆಯೊಬ್ಬರು ಹೆಬ್ಬಾವು ಹಿಡಿಯುವ ವಿಡಿಯೋ ಕಳೆದ ಎರಡು ದಿನಗಳಿಂದ ಭಾರಿ ವೈರಲ್‌ ಆಗುತ್ತಿದೆ. ಹಾವು ಹಿಡಿದ ಈ ಸಾಹಸಿ ಮಹಿಳೆ ಯಾರು ಎನ್ನುವ ಚರ್ಚೆ ಎಲ್ಲೆಡೆ ಇತ್ತು. ಘಟನೆ ನಡೆದಿರುವುದು ಅಲ್ಲಂತೆ, ಇಲ್ಲಂತೆ ಎಂಬ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಈ ಘಟನೆ ನಡೆದಿರುವುದು ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ಜಾರಿಗೆದಡಿಯಲ್ಲಿ. ಮತ್ತು ಆ ಸಾಹಸಿ ಮಹಿಳೆ ಕುಪ್ಪೆಟ್ಟಿಯ ಶೋಭಾ ಯಾನೆ ಆಶಾ.

ನೆಕ್ಕಿಲು ಜಾರಿಗೆದಡಿ ಬಾಬು ಮಾಸ್ಟರ್‌ ಎಂಬವರ ತೋಟದಲ್ಲಿ ನ. 3ರ ಸಂಜೆ 3 ಗಂಟೆ ಹೊತ್ತಿಗೆ ಹೆಬ್ಬಾವು ಕಂಡಿತ್ತು. ಈ ವಿಚಾರವನ್ನು ಸ್ಥಳೀಯ ಆಟೋ ಚಾಲಕ ಬಶೀರ್‌ ಅವರು ಶೋಭಾ ಯಾನೆ ಆಶಾ ಅವರ ಗಮನಕ್ಕೆ ತಂದರು. ಶೋಭಾ ಸ್ಥಳಕ್ಕೆ ಹೋಗಿ ಹಾವನ್ನು ಸಾಹಸಿಕವಾಗಿ ಹಿಡಿದು ಅರಣ್ಯ ಇಲಾಖೆ ಮೂಲಕ ಕೊಯ್ಯೂರು ಅರಣ್ಯಕ್ಕೆ ಬಿಟ್ಟಿದ್ದಾರೆ. ಆ ಕಾರ್ಯಾಚರಣೆಯ ವಿಡಿಯೋ ವೈರಲ್‌ ಆಗಿತ್ತು.

ಯಾರೀಕೆ ಉರಗ ಪ್ರೇಮಿ ಆಶಾ
ಶೋಭಾ ಯಾನೆ ಆಶಾ ಅವರು ಮೂಲತಃ ಮಾಣಿ ನಿವಾಸಿಯಾಗಿದ್ದು, ವೇಣೂರಿನ ಅಂಡಿಂಜೆಯ ಎಂ.ಪ್ರಶಾಂತ್‌ ಅವರೊಂದಿಗೆ ಮದುವೆಯಾಗಿದೆ. ಇವರ ತಂದೆ-ತಾಯಿ ಕುಪ್ಪೆಟ್ಟಿಯಲ್ಲಿ ನೆಲೆಸಿದ್ದು 5 ಮತ್ತು 3ನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರ ಮತ್ತು ಪುತ್ರಿಯಿದ್ದಾರೆ.

ಶೋಭಾ ಯಾನೆ ಆಶಾ ಅವರು ಕಳೆದ 21 ವರ್ಷಗಳಿಂದ ಹಾವನ್ನು ರಕ್ಷಿಸುತ್ತಿದ್ದು ಈ ವರೆಗೆ 900ಕ್ಕೂ ಅಧಿಕ ಹಾವಿನ ರಕ್ಷಣೆ ಮಾಡಿದ್ದಾರೆ. ಇವರ ಉರಗ ಪ್ರೇಮವನ್ನು ಕಂಡು ಗುರುವಾಯನಕೆರೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿ ವ್ಯಾಪ್ತಿಯ ತಣ್ಣೀರುಪಂತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿಯಾಗಿ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಾವುಗಳನ್ನು ರಕ್ಷಿಸುವ ಕಾರ್ಯದ ಜವಾಬ್ದಾರಿ ಇವರದು.

ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿ ಉದ್ಯೋಗ ನೀಡಿದ್ದಾರೆ. ಹಾವು ಕೂಡಾ ನಮ್ಮಂತೆ ಒಂದು ಜೀವಿ. ಹಾಗಾಗಿ ನಾನು ಅವುಗಳ ರಕ್ಷಣೆಗೆ ಮುಂದಾದೆ. ಇದುವರೆಗೆ 98 ಹೆಬ್ಬಾವು, 32 ನಾಗರಹಾವು, ಕನ್ನಡಿಹಾವು ಹಿಡಿದಿದ್ದೇನೆ.
-ಶೋಭಾ ಯಾನೆ ಆಶಾ, ಉರಗ ರಕ್ಷಕಿ.

ಬಾಲ್ಯದಿಂದಲೇ ಉರಗಪ್ರೇಮಿ
ಶೋಭಾ ಎಳೆಯ ವಯಸ್ಸಿನಲ್ಲೇ ಸಣ್ಣಪುಟ್ಟ ಹಾವುಗಳನ್ನು ಹಿಡಿಯುತ್ತಿದ್ದರು! ಇದನ್ನು ಗಮನಿಸಿದ ಮನೆಯವರು ಹಾವು ವಿಷಕಾರಿ, ಹಿಡಿಬಾರದು ಎಂದು ಬುದ್ದಿಮಾತು ಹೇಳಿ ಹಾವು ಹಿಡಿಯುವುದನ್ನು ನಿಲ್ಲಿಸಿದ್ದರು. 2014ರಲ್ಲಿ ವಿವಾಹವಾದ ಬಳಿಕ ಪತಿ ಪ್ರಶಾಂತ್‌ ಅವರು ಶೋಭಾರಿಗೆ ಹಾವು ಹಿಡಿಯಲು ಪ್ರೋತ್ಸಾಹ ನೀಡಿದರು ಮತ್ತು ಸಹಕಾರ ನೀಡುತ್ತಿದ್ದಾರೆ. ಪ್ರಶಾಂತ್‌ ಅವರು ಹುಲ್ಲು ಕಟಾವು ಯಂತ್ರದ ಕೆಲಸ ಮಾಡುತ್ತಾರೆ. ಶೋಭಾ ಅವರ ಉರಗ ಪ್ರೇಮ ತಿಳಿದ ಆಗಿನ ಗ್ರಾಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡರು ವಲಯ ಮೇಲ್ವಿಚಾರಕಿಯಾಗಿದ್ದ ವಿದ್ಯಾ ಬಿ.ಎಚ್‌. ಬಳಿ ತಿಳಿಸಿದರು. ಆಗ ಶೋಭಾರನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಸೇರಿಸಲಾಯಿತು. ಬಳಿಕ ಲಾೖಲದಲ್ಲಿ ನಡೆದ ಎನ್‌ಡಿಆರ್‌ಎಫ್‌ನ ತರಬೇತಿಯಲ್ಲಿ ಭಾಗವಹಿಸಿ ಸ್ನೇಕ್‌ ಜಾಯ್‌ರಿಂದ ಮಾರ್ಗದರ್ಶನವನ್ನೂ ಪಡೆದಿದ್ದಾರೆ. ಇವರಿಗೆ ಎಲ್ಲ ರಕ್ಷಣಾ ಸಾಮಗ್ರಿ ನೀಡಿದರೂ ಈಕೆ ಕೇವಲ ಕೈಯಿಂದಲೇ ಹಾವನ್ನು ಹಿಡಯುವುದು ವಿಶೇಷ.

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

lakshmi hebbalkar

Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್

10

BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್‌ ʼಛಾವಾʼ; ರಿಲೀಸ್‌ ಡೇಟ್‌ ಮುಂದೂಡಿಕೆ?

7-

ಹುಂಡಿ ಒಡೆದು ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು; ಎರಡು ಪ್ರತ್ಯೇಕ ಘಟನೆ ದಾಖಲು

1-qwwqewq

Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-bantwala

ಬಸ್- ಸ್ಕೂಟರ್ ಢಿಕ್ಕಿ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸವಾರ ಕೂಡ ಮೃತ್ಯು

1(1)

Punjalkatte: ಗುಂಡಿಗಳು ಸಾರ್‌ ಗುಂಡಿಗಳು

3-gadaga

Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

9-kollegala

Kollegala: ಕಲುಷಿತ ನೀರು ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

10

Katpadi: ಅಂಚಿಗೆ ಬ್ಯಾರಿಕೇಡ್‌ ಇರಿಸಿ ರಿಬ್ಬನ್‌ ಅಳವಡಿಕೆ

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

8-

Kalaburagi: ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.