BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್ ಸುರೇಶ್; ಬಿಗ್‌ಬಾಸ್ ಆಟದಲ್ಲಿ ರಾದ್ಧಾಂತ
Team Udayavani, Nov 6, 2024, 4:11 PM IST
ಬೆಂಗಳೂರು: ಬಿಗ್‌ಬಾಸ್ (Bigg Boss Kannada-11) ಮನೆಯಲ್ಲಿ ನೀರಿಗಾಗಿ ಹೊಡೆದಾಟ ಶುರುವಾಗಿದೆ. ನೀರಿನ ಟಾಸ್ಕ್ ನಲ್ಲಿ ಸ್ಪರ್ಧಿಗಳು ಒಬ್ಬರ ಮೇಲೊಬ್ಬರು ರೇಗಾಡಿಕೊಂಡಿದ್ದಾರೆ.
ತಮಗೆ ಬೇಕಾದ ಊಟ, ಬೇಕಾದ ಬೆಡ್, ನಾಮಿನೇಟ್ ನಿಂದ ಪಾರಾಗಲು, ಕ್ಯಾಪ್ಟನ್ಸಿ ಓಟ ಹೀಗೆ ನಾನಾ ರೀತಿಯ ಅಧಿಕಾರವನ್ನು ಪಡೆಯಲು ಬಿಗ್ ಬಾಸ್ ಈ ವಾರದ ಟಾಸ್ಕ್ ನೀಡಿದ್ದಾರೆ.
ಮಂಜು, ಶಿಶಿರ್, ಚೈತ್ರಾ ಹಾಗೂ ಗೌತಮಿ ಅವರ ತಂಡಗಳು ನಾನಾ ರೀತಿಯ ಟಾಸ್ಕ್‌ನಲ್ಲಿ ಭಾಗಿಯಾಗಿ ತಮಗೆ ಸಿಗುವ ಅಧಿಕಾರವನ್ನು ಬಳಸಲಿದ್ದಾರೆ.
ʼನಿಲ್ಲೇ ನಿಲ್ಲೇ ಕಾವೇರಿʼ ಎನ್ನುವ ಟಾಸ್ಕ್ ನೀಡಲಾಗಿದೆ. ತಂಡದ ಕೆಲ ಸದಸ್ಯರು ಡ್ರಮ್ ನಲ್ಲಿರುವ ನೀರು ಹೊರ ಹರಿಯದಂತೆ ಕಾಪಾಡಿಕೊಳ್ಳಬೇಕು. ಎದುರಾಳಿ ತಂಡದ ಸದಸ್ಯರು ನೀರನ್ನು ಹೊರಗೆ ಹರಿಸುವ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಒಂದು ಕಡೆ ಚೈತ್ರಾ ಅವರನ್ನು ಭವ್ಯ, ಅನುಷಾ ಹಿಡಿದಿಟ್ಟುಕೊಂಡಿದ್ದು, ನೀವು ಮ್ಯಾನ್ ಹ್ಯಾಂಡಲಿಂಗ್ ಮಾಡಿದರೆ ನಾನೂ ಮಾಡುತ್ತೀನಿ ಎಂದು ಚೈತ್ರಾ ಇಬ್ಬರನ್ನು ಹಿಂದಕ್ಕೆ ದೂಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ನೀರಿಗಾಗಿ ಹರಿಯುತ್ತಾ ರಕ್ತ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/es8GKVI1Tf
— Colors Kannada (@ColorsKannada) November 6, 2024
ತಳ್ಳಬೇಕು ಅಂಥ ತಳ್ಳೋದಲ್ಲ ಅಲ್ಲಿ, ಆಮೇಲೆ ರಾಕ್ಷಸರಂತೆ ನಾವು ಆಡುತ್ತೀವಿ ಎಂದು ಮಂಜು ಅನುಷಾ ಮೇಲೆ ಗರಂ ಆಗಿದ್ದಾರೆ. ಇನ್ನೊಂದೆಡೆ ನೀರು ಹರಿಯುವುದನ್ನು ತಡೆಯುತ್ತಿದ್ದ ಗೋಲ್ಡ್ ಸುರೇಶ್ ಅವರನ್ನುಅನುಷಾ ಎಳೆಯಲು ಯತ್ನಿಸಿದಾಗ ಗೋಲ್ಡ್ ಸುರೇಶ್ ಕಾಲಿನಲ್ಲಿ ಒದ್ದಿದ್ದಾರೆ.
ಇದಕ್ಕೆ ಅನುಷಾ ಒಂದು ಕಾಮನ್ ಸೆನ್ಸ್ ಇಲ್ಲ ಹೇಗೆ ವರ್ತಿಸಬೇಕಂಥ. ಹಿಂಗೆನಾ ಮನೆಯಲ್ಲಿ ಬೆಳೆಸಿರುವುದು. ಕೈಯಲ್ಲಿ ಎಳೆಯೋಕೆ ಬಂದರೆ ಕಾಲಿನಲ್ಲಿ ಒದ್ದಿತ್ತೀರಿ. ನೀನು ನನ್ನನ್ನು ಒದ್ದಿದ್ದೀಯಾ ಆ ಪಾಪ ನಿನ್ನ ಸುಮ್ಮನೆ ಬಿಡಲ್ಲ ಎಂದು ಅನುಷಾ ಸುರೇಶ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾತ್ರಿ (ನ.6ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
BBK11: ಮಂಜು ಮ್ಯಾಚ್ ಫಿಕ್ಸಿಂಗ್ ಗೇಮ್: ಮೋಕ್ಷಿತಾ ,ಗೌತಮಿ ಜತೆ ಫ್ರೆಂಡ್ಸ್ ಶಿಪ್ ಬ್ರೇಕ್
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…
BBK11: ಬೆನ್ನ ಹಿಂದೆ ನಡೆದ ಮಾತಿನ ಬಂಡವಾಳ ಬಹಿರಂಗ.. ಮೋಕ್ಷಿತಾ – ತ್ರಿವಿಕ್ರಮ್ ಟಾಕ್ ವಾರ್
MUST WATCH
ಹೊಸ ಸೇರ್ಪಡೆ
Niveus Mangaluru Marathon 2024: ನ.10ರಂದು ಬೆಳಗ್ಗೆ ವಾಹನ ಸಂಚಾರದಲ್ಲಿ ಬದಲಾವಣೆ
Waqf: ಮಠದ ಜಾಗದ ಪಹಣಿಯಲ್ಲಿ ವಕ್ಫ್ ನಮೂದು; ಸ್ವಾಮೀಜಿ ಪಾದಯಾತ್ರೆ ಬಳಿಕ ಹೆಸರು ಮಾಯ!
Mangaluru: ಮಾತೃ ಭಾಷಿಕರ ಕೊಡುಗೆಯಿಂದ ಕೊಂಕಣಿ ಸಮೃದ್ಧ: ಅವಧೂತ್ ತಿಂಬ್ಲೊ
Mangaluru: ಮೂಡುಶೆಡ್ಡೆ; ಸರಕಾರಿ ಜಾಗದಲ್ಲಿ ಮರಗಳ ಮಾರಣ ಹೋಮ
Kasaragod: ಶ್ರೀಗಂಧ ಕೊರಡು ಸಹಿತ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.